For Quick Alerts
  ALLOW NOTIFICATIONS  
  For Daily Alerts

  ದಿ ವಿಲನ್ : ಲಾಜಿಕ್ ಬಿಟ್ಟು ನಾವೆಲ್ಲಾ ಸಿನಿಮಾ ನೋಡೋದು ಯಾವಾಗ?

  |

  ನನ್ನ ಪ್ರಕಾರ ಸಿನಿಮಾ ನೋಡುವ ವೀಕ್ಷಕರಲ್ಲಿ ಎರಡು ವಿಧವಾದ ಜನರಿರುತ್ತಾರೆ. ಒಂದು, ಒಂದೊಳ್ಳೆ ಕಥೆ, ಚಿತ್ರಕಥೆ, ಕಥೆಗೆ ಹೊಂದುಕೊಂಡು ಹೋಗುವ ಪಾತ್ರಗಳು, ತಾರ್ಕಿಕ ಕ್ಲೈಮ್ಯಾಕ್ಸ್. ಇನ್ನೊಂದು, ಇದ್ಯಾವ ಲಾಜಿಕ್ ನೋಡದೇ, ಕೊಟ್ಟ ದುಡ್ಡಿಗೆ ಮೋಸವಾಗದಂತೆ, ಎರಡೂವರೆ ಗಂಟೆ ಟೈಂಪಾಸ್ ಆಗುತ್ತಾ ಅನ್ನೋ ಇನ್ನೊಂದು ವರ್ಗ. ನಾನು, ಈ ಎರಡನೇ ವರ್ಗಕ್ಕೆ ಸೇರಿದವನು.

  ಪ್ರೇಕ್ಷಕರನ್ನು ಬಹಳಷ್ಟು ಕಾಯಿಸಿದ ಮತ್ತು ಬಹುನಿರೀಕ್ಷಿತ 'ದಿ ವಿಲನ್' ಚಿತ್ರವನ್ನು, ಬಿಡುಗಡೆಯಾದ ಎರಡನೇ ದಿನ ಬೆಂಗಳೂರು, ಗಿರಿನಗರದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಕುಟುಂಬ ಸಮೇತ ವೀಕ್ಷಿಸಿದೆ. ಹೌಸ್ ಫುಲ್ ಕೂತ ಚಿತ್ರಮಂದಿರ. ಬಹುಷಃ ಪುನೀತ್ ಅಭಿನಯದ 'ರಾಜಕುಮಾರ' ಸಿನಿಮಾದ ನಂತರ, ಈ ಮಟ್ಟಿಗೆ (ಇದುವರೆಗೆ) ಫ್ಯಾಮಿಲಿ ಕ್ರೌಡ್ ಅನ್ನು ಸೆಳೆಯುತ್ತಿರುವ ಸಿನಿಮಾ.. ಅದಕ್ಕೆ ಕಾರಣ ಏನೇ ಇರಬಹುದು..

  'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು!'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು!

  ವಿಲನ್ ಚಿತ್ರದ ಬಗ್ಗೆ ಪಾಸಿಟಿವ್ ಪ್ರತಿಕ್ರಿಯೆಗಳಿಗಿಂತ ನೆಗೆಟಿವ್ ಅಭಿಪ್ರಾಯಗಳೇ ಹೆಚ್ಚಾಗಿ ಬರುತ್ತಿದೆ. ಅದಕ್ಕೆ ಚಿತ್ರಕ್ಕಿದ್ದ ಭಾರೀ ಹೈಪ್, ನಿರ್ದೇಶಕ ಪ್ರೇಮ್ ಮಾರ್ಕೆಟಿಂಗ್, ಕಥೆ ಮತ್ತು ಚಿತ್ರಕಥೆಯಲ್ಲಿ ಲಾಜಿಕ್ ಇಲ್ಲ ಎಂದು ಚಿತ್ರ ನೋಡಿ ಬೇಸರಿಸಿಕೊಂಡವರ ಕಾರಣ ಇದ್ದಿರಬಹುದು. ಆದರೆ, ಲಾಜಿಕೇ ಇಲ್ಲದ ಪಕ್ಕದ ಊರಿನ ಸಿನಿಮಾಗಳನ್ನು ನಮ್ಮವರೇ ಗೆಲ್ಲಿಸಿದ ಉದಾಹರಣೆಗಳು ನಮ್ಮ ಮುಂದಿಲ್ಲವೇ?

  ಒಟ್ಟಾರೆ 155 ನಿಮಿಷದ ಸಿನಿಮಾದ ಪೂರ್ವಾರ್ಥ ಮತ್ತು ಉತ್ತರಾರ್ಧದಲ್ಲಿ ಕೆಲವು ಬೋರಿಂಗ್ ಸನ್ನಿವೇಶಗಳಿಗೆ, ಇಂಟರ್ವಲ್ ನಂತರ ನಾಲ್ಕು ಜನ ಹೀರೋಯಿನ್ ಗಳ ಜೊತೆ ಶಿವಣ್ಣನ ಡ್ಯುಯಟ್ ಖಂಡಿತ ಚಿತ್ರಕ್ಕೆ ಬೇಕಾಗಿರಲಿಲ್ಲ. ಇಂಗ್ಲಿಷ್ ಗೊಂಬೆ ಆಮಿ ಜಾಕ್ಸನ್ ಅವಶ್ಯಕತೆ ಇರಲಿಲ್ಲ, ಅಲ್ಲಲ್ಲಿ ಪಾತ್ರಗಳ ಕನೆಕ್ಟಿವಿಟಿ ಮಿಸ್ ಆಗಿರೋದು ಹೌದು... ಹಾಗಂತ ಸಿನಿಮಾದಲ್ಲಿನ ತಪ್ಪುಗಳನ್ನೇ ನೋಡಲು ಚಿತ್ರ ವೀಕ್ಷಿಸುತ್ತಿದ್ದೇವೋ ಅಥವಾ ಮನೋರಂಜನೆಗಾಗಿಯೋ ಎನ್ನುವುದಿಲ್ಲಿ ಪ್ರಶ್ನೆ..

  ಟ್ವಿಟ್ಟರ್ ವಿಮರ್ಶೆ: ಶಿವಣ್ಣ-ಸುದೀಪ್ ಅಭಿಮಾನಿಗಳಿಗೆ ನಿರಾಸೆ ಆಗಲ್ಲ.! ಟ್ವಿಟ್ಟರ್ ವಿಮರ್ಶೆ: ಶಿವಣ್ಣ-ಸುದೀಪ್ ಅಭಿಮಾನಿಗಳಿಗೆ ನಿರಾಸೆ ಆಗಲ್ಲ.!

  ವಿಲನ್ ಚಿತ್ರದ ಬಗ್ಗೆ ಸಾಮಾಜಿಕ ತಾಣದಲ್ಲಿ ಭಾರೀ ಪರವಿರೋಧ ಚರ್ಚೆಗಳು ನಡೆಯುತ್ತಿವೆ.. ಹಿಂದಿನ ದೃಶ್ಯದಲ್ಲಿ ಲಂಡನ್ ನಲ್ಲಿದ್ದ ಸುದೀಪ್, ಮುಂದಿನ ಸೀನ್ ನಲ್ಲಿ ಕರ್ನಾಟಕಕ್ಕೆ ಹೇಗೆ ಬಂದ ಎಂದೆಲ್ಲಾ ಅಣಕವಾಡಲಾಗುತ್ತಿದೆ. ವಿಮಾನದಲ್ಲಿ ಹತ್ತಿಳಿಯುವುದನ್ನೆಲ್ಲಾ ತೋರಿಸಲು ಸಾಧ್ಯನಾ? ಈ ರೀತಿಯ ಲಾಜಿಕ್ ಅನ್ನು ಇಟ್ಟುಕೊಂಡು ಸಿನಿಮಾ ನೋಡಲು ಹೋದರೆ, ಯಾವ ನಿರ್ದೇಶಕ ತಾನೆ ಸಿನಿಮಾ ಮಾಡಲು ಸಾಧ್ಯ? ಮುಂದೆ ಓದಿ..

   'ಹೆಬ್ಬುಲಿ' ಚಿತ್ರವನ್ನು ಲಾಜಿಕ್ ಬಯಸುವವರು ಗೆಲ್ಲಿಸಿದ್ದಾರಾ?

  'ಹೆಬ್ಬುಲಿ' ಚಿತ್ರವನ್ನು ಲಾಜಿಕ್ ಬಯಸುವವರು ಗೆಲ್ಲಿಸಿದ್ದಾರಾ?

  ಕಥೆ, ಚಿತ್ರಕಥೆ ಇಟ್ಟುಕೊಂಡು ತೆರೆಗೆ ಬಂದ 'ಹೆಬ್ಬುಲಿ' ಚಿತ್ರವನ್ನು ಲಾಜಿಕ್ ಬಯಸುವವರು ಗೆಲ್ಲಿಸಿದ್ದಾರಾ? ಅದೇ ಪಕ್ಕಾ ಮನೋರಂಜನಾತ್ಮಕ ವಿಲನ್ ಚಿತ್ರದ ಮೂರು ದಿನದ ಗಳಿಕೆಯನ್ನು ನೋಡಿ.. ಸ್ಯಾಂಡಲ್ ವುಡ್ ಇತಿಹಾಸದಲ್ಲೇ ಚಿತ್ರವೊಂದು ನಾಲ್ಕು ದಿನಗಳ ವಾರಾಂತ್ಯದಲ್ಲಿ ಐವತ್ತು ಕೋಟಿ ಕಲೆಕ್ಷನ್ ದಾಟುವಲ್ಲಿ ದಾಪುಗಾಲು ಹಾಕುತ್ತಿದೆ.

   ಶಿವಣ್ಣ ಅಭಿಮಾನಿಗಳ ಆರೋಪ

  ಶಿವಣ್ಣ ಅಭಿಮಾನಿಗಳ ಆರೋಪ

  ಶಿವಣ್ಣನನ್ನು ಸರಿಯಾಗಿ ತೋರಿಸಲಿಲ್ಲ, ಸುದೀಪ್ ನನ್ನು ಸ್ಟೈಲಿಶ್ ಆಗಿ ತೋರಿಸಲಾಗಿದೆ ಎನ್ನುವುದು ಶಿವಣ್ಣ ಅಭಿಮಾನಿಗಳ ಆರೋಪ. ಹೌದು, ನಿರ್ದೇಶಕರು ಶಿವಣ್ಣನ ಕೆಲವೊಂದು ಕ್ಲೋಸ್ ಅಪ್ ಶಾಟ್ ಗಗಳನ್ನು ತಪ್ಪಿಸಬಹುದಾಗಿತ್ತು. ತಾಯಿ ಮಗನನ್ನು ಒಂದು ಮಾಡುವ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಶಿವಣ್ಣನ ಪಾತ್ರದ ತೂಕವನ್ನು ಹೆಚ್ಚಿಸಬಹುದಿತ್ತು. ಹಾಗಂತ, ಚಿತ್ರದಲ್ಲಿ ಶಿವಣ್ಣನಗೆ ಪ್ರಾಮುಖ್ಯತೆ ಕೊಡಲಾಗಲಿಲ್ಲ, ಎನ್ನುವ ಆರೋಪ ಎಷ್ಟು ಸರಿ?

  'ದಿ ವಿಲನ್' ಬಾಯಲ್ಲಿ ಬರುವ ಹೈಲೈಟ್ ಡೈಲಾಗ್ ಗಳಿವು 'ದಿ ವಿಲನ್' ಬಾಯಲ್ಲಿ ಬರುವ ಹೈಲೈಟ್ ಡೈಲಾಗ್ ಗಳಿವು

   ಹಳ್ಳಿಸೊಗಡಿನ ಪಾತ್ರದಲ್ಲಿ ಶಿವಣ್ಣ

  ಹಳ್ಳಿಸೊಗಡಿನ ಪಾತ್ರದಲ್ಲಿ ಶಿವಣ್ಣ

  ಎರಡು ದೊಡ್ಡ ನಟರ ಸಿನಿಮಾವನ್ನು ನಿರ್ದೇಶನ ಮಾಡಬೇಕಾದರೆ, ಎರಡೂ ಪಾತ್ರಕ್ಕೆ ಪ್ರಾಮುಖ್ಯತೆ ಕೊಡಬೇಕು ಎನ್ನುವುದು ಪ್ರೇಮ್ ಗೆ ಗೊತ್ತಿಲ್ಲದ ವಿಚಾರವೇ? ಹಳ್ಳಿಸೊಗಡಿನ ಪಾತ್ರವನ್ನು ಶಿವಣ್ಣ ನಿಭಾಯಿಸಿದಾಗ, ಅದಕ್ಕೆ ತಕ್ಕನಾದ ಉಡುಗೆತೊಡುಗೆ, ಡೈಲಾಗುಗಳನ್ನು ನೀಡಬೇಕಲ್ಲವೇ? ಎರಡು ಪಾತ್ರಗಳಿಗೆ ಒಂದಕ್ಕೊಂದು ತುಲನೆ ಮಾಡುವುದು ತಪ್ಪು ಎನ್ನುವುದು ನನ್ನ ಅಭಿಪ್ರಾಯ. ಅಭಿಮಾನಿಗಳ ಕೋಪದಲ್ಲಿ ಅರ್ಥವೂ ಇದೆ, ಆದರೆ ಅದು ಅನರ್ಥವಾಗಬಾರದು.

   ಥಿಯೇಟರ್ ಗೆ ಬಂದ ವೇಗದಲ್ಲೇ ಹಿಂದಿರುಗಿದ ಕನ್ನಡ ಸಿನಿಮಾಗಳು

  ಥಿಯೇಟರ್ ಗೆ ಬಂದ ವೇಗದಲ್ಲೇ ಹಿಂದಿರುಗಿದ ಕನ್ನಡ ಸಿನಿಮಾಗಳು

  ಎಷ್ಟೆಷ್ಟೋ ಒಳ್ಳೆ ಕಥೆಗಳು, ಕಾದಂಬರಿಯಾಧಾರಿತ ಚಿತ್ರಗಳು, ಥಿಯೇಟರ್ ಗೆ ಬಂದ ವೇಗದಲ್ಲೇ ಹಿಂದಿರುಗಿದ ಉದಾಹರಣೆ ಕನ್ನಡ ಸಿನಿಮಾಗಳಲ್ಲಿ ಒಂದಾ, ಎರಡಾ..ಹೀಗಿರುವಾಗ, ರಿಮೇಕ್ ಅಲ್ಲದ ಮತ್ತು ಕಮರ್ಷಿಯಲ್ ದೃಷ್ಟಿಕೋನದಲ್ಲಿ ಬಂದ ಚಿತ್ರವನ್ನು ಒಪ್ಪಿಕೊಳ್ಳಲು ಅಡ್ಡಿಯಾಗಿರುವ ಅಂಶ ಏನು ಎನ್ನುವುದು ಅರ್ಥವಾಗದ ಪ್ರಶ್ನೆ.

  ಪ್ರೇಮ್ ವಿರುದ್ಧ ಪ್ರತಿಭಟನೆ : ಶಿವಣ್ಣನ ಅಭಿಮಾನಿಗಳ ಆರೋಪಗಳು ಏನು ? ಪ್ರೇಮ್ ವಿರುದ್ಧ ಪ್ರತಿಭಟನೆ : ಶಿವಣ್ಣನ ಅಭಿಮಾನಿಗಳ ಆರೋಪಗಳು ಏನು ?

   ವಿಲನ್ ಚಿತ್ರಕ್ಕೆ ಕೊಡುವ ರೇಟಿಂಗ್ 3.5/5

  ವಿಲನ್ ಚಿತ್ರಕ್ಕೆ ಕೊಡುವ ರೇಟಿಂಗ್ 3.5/5

  ದಿ ವಿಲನ್ ಚಿತ್ರದಲ್ಲಿ ಎರಡು ವರ್ಷದ ಚಿತ್ರತಂಡದ ಪರಿಶ್ರಮವಿದೆ. ನಿರ್ಮಾಪಕರು ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿದ್ದಾರೆ. ಡಿಸ್ಟ್ರಿಬ್ಯೂಟರ್ ಕೋಟಿ ಲೆಕ್ಕದಲ್ಲಿ ಹಣವನ್ನು ಕೊಟ್ಟು ಚಿತ್ರವನ್ನು ಖರೀದಿಸಿದ್ದಾರೆ. ಶಿವಣ್ಣ-ಸುದೀಪ್ ನಡುವಿನ ಸಂಬಂಧದ ಬಗ್ಗೆ ಗುಸುಗುಸು ಸುದ್ದಿ ಹರಿದಾಡುತ್ತಿದ್ದಾಗ, ನಿರ್ದೇಶಕ ಪ್ರೇಮ್ ಇಬ್ಬರನ್ನೂ ಒಗ್ಗೂಡಿಸಿ ಒಂದು ಚಿತ್ರದಡಿಯಲ್ಲಿ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಿರುವಾಗ, ಕನ್ನಡದ ಅದ್ದೂರಿ ಚಿತ್ರವೊಂದನ್ನು ಲಾಜಿಕ್ ಇಲ್ಲ ಎಂದು ಚಿತ್ರದ ಬಗ್ಗೆ ಬ್ಯಾಡ್ ಮೌತಿಂಗ್ ಮಾಡೋದು ಎಷ್ಟು ಸರಿ? ಚಿತ್ರ ನೋಡದೆನೇ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡುವವರ ಸಂಖ್ಯೆ ಅದೆಷ್ಟು ಇರಬಹುದೇನೋ? ನಾನಂತೂ ವಿಲನ್ ಚಿತ್ರಕ್ಕೆ ಕೊಡುವ ರೇಟಿಂಗ್ 3.5/5.

  English summary
  Shivaraj Kumar, Sudeep starer and Prem directed, Kannada movie The Villain. Go for pure entertainment and please don't try to find out logic.
  Sunday, October 21, 2018, 14:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X