Toby Twitter Review: 'ಟೋಬಿ' ಭಾವನಾತ್ಮಕ 'ರೋಲರ್ ಕೋಸ್ಟರ್'.. ಮುಗ್ಧತೆ Vs ಕ್ರೌರ್ಯದ ಯುದ್ಧ!
ರಾಜ್ ಬಿ ಶೆಟ್ಟಿ ಮಾಸ್ ಹೀರೊ ಆಗಿ ನಟಿಸಿರುವ ಸಿನಿಮಾ 'ಟೋಬಿ'. ಇದೇ ಮೊದಲ ಬಾರಿಗೆ ಮಾಸ್ ಕಮರ್ಷಿಯಲ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಹೀಯಾಳಿಸಿದವರಿಗೆ ತಿರುಗೇಟು ನೀಡುವುದಕ್ಕೆ ಮಾಡಿರುವ ಸಿನಿಮಾವೇ 'ಟೋಬಿ'.
'ಟೋಬಿ' ಸಿನಿಮಾ ಕಳೆದ ಕೆಲವು ದಿನಗಳಿಂದ ಟ್ರೆಂಡಿಂಗ್‌ನಲ್ಲಿತ್ತು. ರಾಜ್ ಬಿ ಶೆಟ್ಟಿಯ ಲುಕ್ ಹಾಗೂ ಮಾಸ್ ಖದರ್‌ಗೆ ಪ್ರೇಕ್ಷಕರು ಫಿದಾ ಆಗಿದ್ದರು. ಮೂರು ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು. ರಾಜ್ ಬಿ ಶೆಟ್ಟಿಗೆ ಜೊತೆ ಚೈತ್ರಾ ಆಚಾರ್ ಟಫ್ ಕಾಂಪಿಟೇಷನ್ ಕೊಟ್ಟಿದ್ದಾರೆ.

'ಟೋಬಿ' ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ಈ ಸಿನಿಮಾವನ್ನು ನೋಡಿದವರು ಟ್ವಿಟರ್‌ನಲ್ಲಿ ವಿಮರ್ಶೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಪರ್ಫಾಮೆನ್ಸ್, ಚೈತ್ರಾ ಜೆ ಆಚಾರ್ ನಟನೆ, ಕಥೆ, ಫಸ್ಟ್ ಹಾಫ್ ಹಾಗೂ ಸೆಕೆಂಡ್ ಹಾಫ್ ಹೇಗಿದೆ? ಅನ್ನೋದು ವಿಮರ್ಶೆ ಮಾಡಿದ್ದಾರೆ. ಅದರದ್ದೊಂದು ಝಲಕ್ ಇಲ್ಲಿದೆ.
ಅದ್ಭುತ ರಚನೆ ಹಾಗೂ ಪರ್ಫಾಮೆನ್ಸ್
"ಈಗತಾನೇ ಟೋಬಿ ಸಿನಿಮಾವನ್ನು ನೋಡಿದೆ. ಟೋಬಿ ರಾಜ್ ಬಿ ಶೆಟ್ಟಿಯಿಂದ ಮತ್ತೊಂದು ಅದ್ಭುತ ರಚನೆ ಹಾಗೂ ಪರ್ಫಾಮೆನ್ಸ್. ಚೈತ್ರ ಆಚಾರ್ ಅದ್ಭುತ ಅಭಿನಯದಿಂದ ಗಮನ ಸೆಳೆಯುತ್ತಾರೆ. ಛಾಯಾಗ್ರಹಣ ಮತ್ತು ಸಂಗೀತ ಸೂಪರ್. ಇಂಟರ್‌ವಲ್‌ನ ಆಕ್ಷನ್ ಸೀನ್ ಸಖತ್ ಆಗಿದೆ." ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ಇದೊಂದು ಭಾವನಾತ್ಮಕ 'ರೋಲರ್ ಕೋಸ್ಟರ್'
"ಇದೊಂದು ಭಾವನಾತ್ಮಕ ರೋಲರ್ ಕೋಸ್ಟರ್. ಮೊದಲಾರ್ಥ ತಮಾಷೆಯಾಗಿದೆ. ದ್ವಿತೀಯಾರ್ಧ ಭಾವನಾತ್ಮಕ ಸನ್ನಿವೇಶಗಳ ಜೊತೆ ಕುತೂಹಲಕಾರಿ ಕ್ಲೈಮ್ಯಾಕ್ಸ್ ಇದೆ. ರಾಜ್ ಬಿ ಶೆಟ್ಟಿ ಹಾಗೂ ಚೈತ್ರ ಆಚಾರ್ ಇಬ್ಬರೂ ಅದ್ಭುತ ಅಭಿನಯದ ನೀಡಿದ್ದಾರೆ. ಟೋಬಿ ಕಥೆಯಿಂದ ಸಿನಿಮಾ ಶುರುವಾಗಿ, ಹಾಸ್ಯ ಸನ್ನಿವೇಶಗಳಿಂದ ಮೊದಲಾರ್ಥ ಮುಗಿಯುತ್ತೆ. ಇಂಟರ್‌ವಲ್ ಆಕ್ಷನ್ ಸೀನ್ ಕ್ರಿಯೇಟಿವ್ ಆಗಿದ್ದು, ಚೆನ್ನಾಗಿ ಬ್ಲೆಂಡ್ ಮಾಡಿದ್ದಾರೆ. ದ್ವಿತೀಯಾರ್ಧ ಭಾವನಾತ್ಮಕ ಸನ್ನಿವೇಶಗಳ ಜೊತೆ ಟ್ವಿಸ್ಟ್ ಅಂಡ್ ಟರ್ನ್ ಇದೆ. ಗರುಡ ಗಮನ ಹಾಗೂ ಕಾಂತಾರವನ್ನು ತಲೆಯಲ್ಲಿಟ್ಟುಕೊಂಡು ಸಿನಿಮಾ ನೋಡಬೇಡಿ. ಇದು ಬೇರೆ ತರಹದ್ದೇ ಸಿನಿಮಾ. ನನ್ನ ರೇಟಿಂಗ್ 9/10" ಇದು ಮತ್ತೊಬ್ಬ ನೆಟ್ಟಿಗರ ವಿಮರ್ಶೆ.
"ರಾಜ್ ಬಿ ಶೆಟ್ಟಿ ಪ್ರತಿಭೆಗೆ ಮಿತಿಯಿಲ್ಲ"
ರಾಜ್ ಬಿ ಶೆಟ್ಟಿ ಪ್ರತಿಭೆಗೆ ಯಾವುದೇ ಮಿತಿಯಿಲ್ಲ. ಎಂತಹ ಅದ್ಭುತ ನಟನೆ. ಭಾರತದ ಅತ್ಯದ್ಭುತ ನಟ ಎನಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾವಾಗಲೂ ಮಿಂಚುತ್ತಿರಿ. ಹಾಗೂ ಸ್ಪೂರ್ತಿ ನೀಡುತ್ತಿರಿ." ಎಂದು ಮತ್ತೊಬ್ಬರು ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.
ಬ್ಯುಟಿಫುಲ್ 'ಟೋಬಿ'
ಟೋಬಿ ಸಿನಿಮಾ ಸುಂದರವಾಗಿದೆ. ರಾಜ್ ಬಿ ಶೆಟ್ಟಿ ಹಾಗೂ ಚೈತ್ರ ಆಚಾರ್ ತಮ್ಮ ಪರ್ಫಾಮೆನ್ಸ್‌ನಿಂದ ಗಮನ ಸೆಳೆಯುತ್ತಾರೆ. ಬರವಣಿಗೆ, ಛಾಯಾಗ್ರಹಣ ಹಾಗೂ ಸಂಗೀತ ಟಾಪ್‌ನಲ್ಲಿದೆ. ಈ ಸಿನಿಮಾವನ್ನು ಮಿಸ್ ಮಾಡಿಕೊಳ್ಳಬೇಡಿ" ಎಂದು ರಕ್ಷಿತ್ ಶೆಟ್ಟಿ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದಾರೆ.
'ಟೋಬಿ' ಸಾಧಾರಣ
ಈ ಸಿನಿಮಾದಲ್ಲಿ ಕೆಲವು ಅದ್ಭುತವಾಗಿ ಬರೆದ ದೃಶ್ಯಗಳಿವೆ. ಅಲ್ಲದೆ ರಾಜ್ ಬಿ ಶೆಟ್ಟಿ ನಟನೆ ಹಾಗೂ ಅವತಾರ ಖರಾಬ್ ಆಗಿದೆ. ಪ್ರೊಡಕ್ಷನ್ ಹಾಗೂ ದೃಶ್ಯಗಳು ಮತ್ತು ಮ್ಯೂಸಿಕ್ ಎಲ್ಲವೂ ಅದ್ಭುತವಾಗಿವೆ. ಆದರೆ, ಸ್ಕ್ರೀನ್
There are several solid, well-written scenes & @RajbShettyOMK is terrific in his massy avatar. Production values, visuals & music are all good. But the screenplay lacks impact most of the time & the much hyped climax also loses steam. Strictly average.


Click it and Unblock the Notifications











