Andhra King Taluka First Review: ಉಪ್ಪಿ-ರಾಮ್ ಜೋಡಿಯ 'ಆಂಧ್ರ ಕಿಂಗ್ ತಾಲೂಕ' ಹೇಗಿದೆ?

ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಆಂಧ್ರದಲ್ಲಿ ಸದ್ದು ಮಾಡುತ್ತಿದ್ದಾರೆ. ಅವರೇ ನಿರ್ದೇಶಿಸಿದ್ದ 'UI' ತೆಲುಗು ರಾಜ್ಯಗಳಲ್ಲಿ ಧೂಳೆಬ್ಬಿಸಿದ್ದರು. ತಮ್ಮ ಆಲೋಚನೆಗಳ ಮೂಲಕ ತೆಲುಗು ಮಂದಿಯ ಗಮನ ಸೆಳೆದಿದ್ದರು. ಈ 'ಆಂಧ್ರ ಕಿಂಗ್ ತಾಲೂಕ' ತೆಲುಗು ಸಿನಿಮಾ ಮೂಲಕ ಆಂಧ್ರ-ತೆಲಂಗಾಣ ಅಷ್ಟೇ ಅಲ್ಲ, ಕರ್ನಾಟಕದ ಜನರಲ್ಲೂ ಕುತೂಹಲ ಮೂಡಿಸಿದ್ದಾರೆ.

ಉಪೇಂದ್ರ ಹಾಗೂ ತೆಲುಗಿನ ಯುವ ರಾಮ್ ಪೋತಿನೇನಿ ನಟಿಸಿರುವ 'ಆಂಧ್ರ ಕಿಂಗ್ ತಾಲೂಕ' ಹಲವು ಕಾರಣಕ್ಕೆ ಗಮನ ಸೆಳೆದಿದೆ. ಅದರಲ್ಲೂ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿರುವ ಉಪ್ಪಿ ಅಭಿಮಾನಿಗಳು ಈ ಸಿನಿಮಾವನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕೊಂದು ಪ್ರಮುಖ ಕಾರಣ ಅಂದರೆ, ಸಿನಿಮಾದಲ್ಲೂ ಸೂಪರ್‌ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Upendra and Ram Pothineni movie Andhra King Taluka movie First review and other details

'ಆಂಧ್ರ ಕಿಂಗ್ ತಾಲೂಕ' ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್ ಹಾಗೂ ಟಿ-ಸೀರೀಸ್ ಬ್ಯಾನರ್‌ನಲ್ಲಿ ನವೀನ್ ಯೆರ್ನೇನಿ ಮತ್ತು ರವಿಶಂಕರ್ ಯಲಮಂಚಿಲಿ ಜಂಟಿಯಾಗಿ ನಿರ್ಮಿಸಿದ್ದಾರೆ. ಈ ಸಿನಿಮಾ ನವೆಂಬರ್ 27 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ರಿಲೀಸ್‌ ಮುನ್ನವೇ ಫಸ್ಟ್ ರಿವ್ಯೂ ಹೊರ ಬಿದ್ದಿದೆ. ಹಾಗಿದ್ದರೆ, ಆ ರಿವ್ಯೂ ಪ್ರಕಾರ ಸಿನಿಮಾ ಹೇಗಿದೆ? ಹೈಲೈಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

ಸೂಪರ್‌ಸ್ಟಾರ್ ಪಾತ್ರದಲ್ಲಿ ಉಪೇಂದ್ರ ನಟಿಸಿದ್ದರೆ, ಅವರ ಡೈ ಹಾರ್ಡ್‌ ಫ್ಯಾನ್ ಆಗಿ ರಾಮ್ ಪೋತಿನೇನಿ ನಟಿಸಿದ್ದಾರೆ. ಅನುಷ್ಕಾ ಶೆಟ್ಟಿ ನಟಿಸಿದ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ನಿರ್ದೇಶಿಸಿದ್ದ ಮಹೇಶ್ ಬಾಬು ಪಿ ಈ ಸಿನಿಮಾಗೆ ಆಕ್ಷನ್-ಕಟ್ ಹೇಳಿದ್ದಾರೆ. ಈಗಾಗಲೇ ಸಿನಿಮಾ ಕಾನ್ಸೆಪ್ಟ್ ಹಾಗೂ ತುಣುಕುಗಳಿಂದ ಸಿನಿ ಪ್ರಿಯರ ಗಮನ ಸೆಳೆದಿದೆ.

ತೆಲುಗು ಚಿತ್ರರಂಗದ ಎನರ್ಜೆಟಿಕ್ ಸ್ಟಾರ್ ರಾಮ್ ಪೋತಿನೇನಿ, ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಉಪೇಂದ್ರ ಜೊತೆಗೆ ನಾಯಕಿಯಾಗಿ ಭಾಗ್ಯಶ್ರೀ ಭೋರ್ಸೆ, ರಾವ್ ರಮೇಶ್, ಮುರಳಿ ಶರ್ಮಾ ಮತ್ತು ರಾಹುಲ್ ರಾಮಕೃಷ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿದ್ದಾರೆ. 'ಆಂಧ್ರ ಕಿಂಗ್ ತಾಲೂಕ' ಸಿನಿಮಾದಲ್ಲಿ ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಡ್ರಾಮಾವಿದೆ. ಇತ್ತೀಚೆಗೆ ಈ ಸಿನಿಮಾದ ಸೆನ್ಸಾರ್ ಪ್ರಕ್ರಿಯೆಗಳು ಮುಕ್ತಾಯಗೊಂಡಿವೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧಿಕಾರಿಗಳು ಸಿನಿಮಾ ವೀಕ್ಷಿಸಿ, ಸರ್ಟಿಫಿಕೇಟ್ ಜೊತೆಗೆ ಅವರ ಅಭಿಪ್ರಾಯವನ್ನೂ ಸಿನಿಮಾ ತಂಡಕ್ಕೆ ನೀಡಿದ್ದಾರೆ.

Upendra and Ram Pothineni movie Andhra King Taluka movie First review and other details

ಸಿನಿಮಾದ ಕಥೆ ಕಡೆಗೆ ಬರೋದಾರೇ, ಸೂಪರ್‌ಸ್ಟಾರ್ ಸೂರ್ಯಕುಮಾರ್ (ಉಪೇಂದ್ರ) ಅಪಾರ ಅಭಿಮಾನಿ ಬಳಗವಿದೆ. ಇವರನ್ನು 'ಆಂಧ್ರ ಕಿಂಗ್' ಅಂತಲೇ ಅಭಿಮಾನಿಗಳು ಕರೆಯುತ್ತಾರೆ. ಪಾಲಿಟೆಕ್ನಿಕ್‌ ವಿದ್ಯಾರ್ಥಿ ಸಾಗರ್ (ರಾಮ್ ಪೋತಿನೇನಿ) ಈ ನಟ ಡೈ ಹಾರ್ಡ್ ಫ್ಯಾನ್. ಹೀಗಿರುವಾಗ ತನ್ನ ನೆಚ್ಚಿನ ನಟನಿಗಾಗಿ ಸಾಗರ್ ಏನೆಲ್ಲ ಮಾಡುತ್ತಾನೆ? ಈ ಅಭಿಮಾನ ಸಾಗರ್ ಬದುಕಿನಲ್ಲಿ ಏನೆಲ್ಲ ತಿರುವುಗಳನ್ನು ನೀಡುತ್ತೆ. ಮಹಾಲಕ್ಷ್ಮಿ (ಭಾಗ್ಯಶ್ರೀ) ಜೊತೆಗಿನ ಲವ್‌ಸ್ಟೋರಿ ಹೇಗೆ ಸಾಗುತ್ತೆ ಅನ್ನೋದೇ ಕಥೆ.

ಸೆನ್ಸಾರ್ ಅಧಿಕಾರಿಗಳು 'ಆಂಧ್ರ ಕಿಂಗ್ ತಾಲೂಕ' ಸಿನಿಮಾ ಗ್ರೀನ್ ಸಿಗ್ನಲ್ ಕೊಟ್ಟಿದೆ. ರಾಮ್ ಪೋತಿನೇನಿ ಹಾಗೂ ಉಪೇಂದ್ರ ನಡುವಿನ ದೃಶ್ಯಗಳು ಸಿನಿಪ್ರಿಯರಿಗೆ ಕಿಕ್ ಕೊಡುತ್ತವೆ. ಇದರೊಂದಿಗೆ ರಾಮ್ ಪೋತಿನೇನಿ ಹಾಗೂ ಭಾಗ್ಯಶ್ರೀ ಭೋರ್ಸೆ ನಡುವಿನ ಪ್ರೇಮಕಥೆ ಕೂಡ ವಿಭಿನ್ನಾಗಿದೆ ಎಂದು ತೆಲುಗಿನ ಸೆನ್ಸಾರ್ ಬೋರ್ಡ್‌ನ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆಂದು ವರದಿಯಾಗಿದೆ.

'ಆಂಧ್ರ ಕಿಂಗ್ ತಾಲೂಕ' ಸೆನ್ಸಾರ್ ಬೋರ್ಡ್ ಅಧಿಕಾರಿಗಳು ಯು/ಎ (13+) ಸರ್ಟಿಫಿಕೇಟ್ ನೀಡಿದೆ. ಇದರೊಂದಿಗೆ ಕೆಲವು ಚಿಕ್ಕ ಪುಟ್ಟ ಕಟ್‌ಗಳನ್ನು ನೀಡಿದ್ದಾರೆ. ಈ ಸಿನಿಮಾದಲ್ಲಿ ಫ್ಯಾನ್ ವಾರ್‌ಗಳು, ಫ್ಯಾಮಿಲಿ, ಲವ್ ಸ್ಟೋರಿ ಹೈಲೈಟ್ ಎನ್ನಲಾಗಿದೆ. ಸಿನಿಮಾ 2 ಗಂಟೆ 46 ನಿಮಿಷವಿದೆ. ರಾಮ್ ಪೋತಿನೇನಿ ಸಿನಿಮಾಗಳು ಇತ್ತೀಚೆಗೆ ಬಾಕ್ಸಾಫೀಸ್‌ನಲ್ಲಿ ಸೋತಿವೆ. ಹೀಗಾಗಿ 'ಆಂಧ್ರ ಕಿಂಗ್ ತಾಲೂಕ' ಗೆಲ್ಲಲೇ ಬೇಕಿದೆ. ಆಂಧ್ರ, ತೆಲಂಗಾಣ ಮಂದಿ ಈ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೆಂಬುದನ್ನು ನೋಡಬೇಕಿದೆ.

More from Filmibeat

English summary
Upendra and Ram Pothineni movie Andhra King Taluka movie First review and other details.
Read more about: upendra telugu movie tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X