Saraswathi First Review: ಶಾಲೆಗೆ ಹೋದ ಮಗಳು ದಿಢೀರ್ ಕಣ್ಮರೆ; 'ಸರಸ್ವತಿ' ಬಗ್ಗೆ ಮೊದಲ ವಿಮರ್ಶೆ ಏನು ಹೇಳುತ್ತೆ?

ಈ ವಾರ ಕೆಲವು ಇಂಟ್ರೆಸ್ಟಿಂಗ್ ಸ್ಮಾಲ್ ಬಜೆಟ್‌ ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲಿ 'ಸರಸ್ವತಿ' ಸಿನಿಮಾ ಕೂಡ ಒಂದು. ಬಹುಭಾಷಾ ನಟಿ ವರಲಕ್ಷ್ಮಿ ಶರತ್‌ಕುಮಾರ್ ನಿರ್ದೇಶನ ಮಾಡಿ, ನಟಿಸಿರುವ ಈ ಸಿನಿಮಾ ಗಮನ ಸೆಳೆಯುತ್ತಿದೆ.

'ಸರಸ್ವತಿ' ಸಿನಿಮಾದಲ್ಲಿ ನಟಿ ವರಲಕ್ಷ್ಮಿ ಶರತ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮಾರ್ಚ್ 6 ರಂದು ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ದೋಶಾ ಡೈರೀಸ್, ಎಲ್‌ಎಲ್‌ಪಿ ಬ್ಯಾನರ್‌ ಅಡಿಯಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಪೂಜಾ ಶರತ್ ಕುಮಾರ್ ನಿರ್ಮಿಸಿದ್ದಾರೆ. ಅಲ್ಲದೇ ವರಲಕ್ಷ್ಮಿ ಶರತ್ ಕುಮಾರ್ ಅವರೇ ನಿರ್ದೇಶನ ಕೂಡ ಮಾಡಿರುವುದರಿಂದ ಸಿನಿಮಾ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾಗೆ ಸೆನ್ಸಾರ್ ಬೋರ್ಡ್ 'ಯುಎ' (UA 16+) ಸರ್ಟಿಫಿಕೇಟ್ ಕೊಟ್ಟಿದೆ.

Varalakshmi Sharathkumar and Priyamani starrer Saraswathi movie CBFC first review and certificate

ವರಲಕ್ಷ್ಮಿ ಶರತ್ ಕುಮಾರ್ ನಿರ್ದೇಶಿಸಿರುವ 'ಸರಸ್ವತಿ' ಸಿನಿಮಾದಲ್ಲಿ ಮತ್ತೊಬ್ಬ ಜನಪ್ರಿಯ ನಟಿ ಪ್ರಿಯಾಮಣಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಿದ್ದರೆ, ಈ ಸಿನಿಮಾದ ಬಗ್ಗೆ ಸಿಕ್ಕಿರೋ ಮೊದಲ ವಿಮರ್ಶೆ ಏನು? ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತಾ? ಸಿನಿಮಾದ ಮೊದಲ ವಿಮರ್ಶೆ ಏನು? ತಿಳಿಯುವುದಕ್ಕೆ ಮುಂದೆ ಓದಿ.

ಪ್ರಿಯಾಮಣಿ, ರಾಧಿಕಾ ಶರತ್‌ಕುಮಾರ್ ಜೊತೆಗೆ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ರಾವ್ ರಮೇಶ್, ಮುರಳಿ ಶರ್ಮಾ, ಪ್ರಕಾಶ್ ರಾಜ್, ಕಿಶೋರ್, ನಾಜರ್, ತುಳಸಿ, ಸಪ್ತಗಿರಿ, ಶ್ರೀಕಾಂತ ಅಯ್ಯಂಗಾರ್, ಮೈಮ್ ಗೋಪಿ, ಹರೀಶ್ ಪೆರಾಡಿ, ರಘುಬಾಬು, ಗೆಟಪ್ ಶ್ರೀನು, ನಿವೇಶ್‌ಕಾ ಸೇರಿದಂತೆ ಜನಪ್ರಿಯ ಕಲಾವಿದರೇ ನಟಿಸಿದ್ದಾರೆ.

'ಸರಸ್ವತಿ' ಸಿನಿಮಾಗೆ ಜನಪ್ರಿಯ ತಾಂತ್ರಿಕವರ್ಗ ಕೆಲಸ ಮಾಡಿದೆ. ಎಸ್. ಥಮನ್ ಸಂಗೀತ, ಎ.ಎಂ. ಎಡ್ವಿನ್ ಸಾಕೇ ಕ್ಯಾಮರಾ ವರ್ಕ್, ವೆಂಕಟ್ ರಾಜನ್ ಎಡಿಟಿಂಗ್, ಶ್ರೀಧರ್ ಮಾಚರ್ಲಾ ಆರ್ಟ್ ಡೈರೆಕ್ಷನ್, ಬೃಂದಾ ಮಾಸ್ಟರ್ ನೃತ್ಯ ಸಂಯೋಜನೆ ಹಾಗೂ ನಂದೂ ಮಾಸ್ಟರ್ ಆಕ್ಷನ್ ಸೀಕ್ವೆನ್ಸ್ ಅನ್ನು ಕಂಪೋಸ್ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾವನ್ನು ನೋಡಿರುವ ಸೆನ್ಸಾರ್ ಮಂಡಳಿ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನು 'ಸರಸ್ವತಿ'ದ ಕಥೆಯ ಕಡೆಗೆ ಬರೋದಾರೆ, ತನ್ನ 12 ವರ್ಷದ ಮಗಳು ಸರಸ್ವತಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ತಾಯಿಯ ಕಥೆಯಾಗಿದೆ. ಬಹಳ ಪ್ರೀತಿಯಿಂದ ಬೆಳೆಸಿದ ಮಗಳು ಶಾಲೆಗೆ ಹೋದ ಬಳಿಕ ದಿಢೀರನೆ ನಾಪತ್ತೆಯಾಗುತ್ತಾಳೆ. ಮಗಳನ್ನು ಹುಡುಕಿಕೊಡುವಂತೆ ತಾಯಿ ಪೊಲೀಸರಿಗೆ ದೂರು ನೀಡಿ, ಪೊಲೀಸರ ಸಹಾಯವನ್ನು ಕೋರುತ್ತಾಳೆ. ಇಲ್ಲಿಂದ ಸಿನಿಮಾ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತಾ ಮುಂದೆ ಸಾಗುತ್ತೆ.

Varalakshmi Sharathkumar and Priyamani starrer Saraswathi movie CBFC first review and certificate

ಮಗಳ ನಾಪತ್ತೆ ಪ್ರಕರಣದಲ್ಲಿ ಅನಿರೀಕ್ಷಿತ ತಿರುವು ಒಂದೆಡೆ ಬಹಿರಂಗಗೊಳ್ಳುತ್ತಾ ಹೋಗುತ್ತೆ. ಸರಸ್ವತಿ ಕಾಣೆಯಾದ ಪ್ರಕರಣಕ್ಕೆ ಸಿಕ್ಕಿದ ಆ ತಿರುವು ಏನು? ಮಗಳ ಕಾಣೆಯಾಗುವಿಕೆಯ ಹಿಂದೆ ಯಾರ ಕೈವಾಡವಿದೆ? ಕೊನೆಯಲ್ಲಿ ಮಗಳನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ತಾಯಿ ಯಶಸ್ವಿಯಾಗುತ್ತಾಳಾ? ಈ ಎಲ್ಲಾ ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರ ಸಿಗಲಿದೆ.

ಸೆನ್ಸಾರ್ ಮಂಡಳಿಯು 'ಸರಸ್ವತಿ' ಸಿನಿಮಾವನ್ನು ಮೆಚ್ಚಿಕೊಂಡಿದೆ. ಈ ಸಿನಿಮಾದ ಕುಟುಂಬಿ ಅಂಶಗಳು, ತಾಯಿ-ಮಗಳ ಭಾವನಾತ್ಮಕ ಅಂಶಗಳು ತೃಪ್ತಿ ವ್ಯಕ್ತಪಡಿಸಿದೆ. ಕೆಲವು ಸಣ್ಣ ಬದಲಾವಣೆಗಳನ್ನು ಸೆನ್ಸಾರ್ ಬೋರ್ಡ್ ಚಿತ್ರತಂಡಕ್ಕೆ ಸೂಚಿಸಿತ್ತು. ಅದಕ್ಕೆ ಟೀಮ್ ಸಮ್ಮತಿ ಸೂಚಿಸಿದ ಬಳಿಕ ಸೆನ್ಸಾರ್ ಬೋರ್ಡ್ 'ಯುಎ' (UA16+) ಸರ್ಟಿಫಿಕೇಟ್ ನೀಡಿದೆ. ಪೋಷಕರೊಂದಿಗೆ ಮಕ್ಕಳು ಕೂಡ ಸಿನಿಮಾವನ್ನು ನೋಡಬಹುದೆಂದು ಸೂಚನೆ ನೀಡಿದೆ. ಇನ್ನು 'ಸರಸ್ವತಿ' ಸಿನಿಮಾದ ಅವಧಿ 121 ನಿಮಿಷಗಳು ಅಂದರೆ, 2 ಗಂಟೆ 1 ನಿಮಿಷ ಎಂದು ಹೇಳಲಾಗುತ್ತಿದೆ. 'ಸರಸ್ವತಿ' ಸಿನಿಮಾಗೆ ಸೆನ್ಸಾರ್ ಮಂಡಳಿ ಧನಾತ್ಮಕ ಪ್ರತಿಕ್ರಿಯೆ ನೀಡಿದೆ. ಇನ್ನು ಪ್ರೇಕ್ಷಕರಿಂದ 'ಸರಸ್ವತಿ' ಸಿನಿಮಾ ಪ್ರೇಕ್ಷಕರಿಂದ ಯಾವ ರೀತಿಯ ಸ್ಪಂದನೆ ಸಿಗಲಿದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Varalakshmi Sharathkumar and Priyamani starrer Saraswathi movie CBFC first review and certificate.
Read more about: telugu movie review priyamani
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X