Vettaiyan Twitter Review: ಮೊದಲಾರ್ಥ ಸೂಪರ್‌ಫಾಸ್ಟ್.. ಸೆಕಂಡ್ ಹಾಫ್ ಕಥೆಯೇನು?
ರಜನಿಕಾಂತ್ ನಟನೆಯ 'ವೆಟ್ಟೈಯಾನ್' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ಈಗಾಗಲೇ ಸೂಪರ್‌ಸ್ಟಾರ್ ಅಭಿಮಾನಿಗಳು ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ಕಣ್ತುಂಬಿ ಕೊಂಡಿದ್ದಾರೆ. ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ನೋಡಿದ ಬಳಿಕ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆನೂ ಅಷ್ಟೇ ವೇಗವಾಗಿ ಶುರುವಾಗಿದೆ.
ರಜನಿಕಾಂತ್ ಫ್ಯಾನ್ಸ್‌ಗಾಗಿ 'ವೆಟ್ಟೈಯಾನ್' ಸಿನಿಮಾದ ವಿಶೇಷ ಶೋಗಳನ್ನು ನೀಡಲಾಗಿತ್ತು. ಮಧ್ಯೆ ರಾತ್ರಿಯಿಂದಲೇ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಈ ವಿಶೇಷ ಶೋಗಳನ್ನು ಕಣ್ತುಂಬಿಕೊಂಡಿರುವ ನೆಟ್ಟಿಗರು ಟ್ವಿಟರ್ ( ಎಕ್ಸ್ ) ಖಾತೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ನೀಡುವುದಕ್ಕೆ ಶುರು ಮಾಡಿದ್ದಾರೆ. ಬಿಡುಗಡೆಗೂ ಮುನ್ನ ಇದೇ ಟ್ವಿಟರ್‌ನಲ್ಲಿ 'ವೆಟ್ಟೈಯಾನ್ ಡಿಸಾಸ್ಟರ್' ಅನ್ನೋ ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡಿಂಗ್‌ನಲ್ಲಿಇಟ್ಟಿದ್ದರು.

ಸೂಪರ್‌ಸ್ಟಾರ್ ರಜನಿಕಾಂತ್ ಜೊತೆಗೆ ಅಮಿತಾಭ್ ಬಚ್ಚನ್, ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್ ಸೇರಿದಂತೆ ಹಲವು ದಿಗ್ಗಜರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ 'ವೆಟ್ಟೈಯಾನ್' ನೋಡಿ ನೆಟ್ಟಿಗರು ಏನು ಹೇಳುತ್ತಿದ್ದಾರೆ? 'ಜೈಲರ್' ಬಳಿಕ 'ವೆಟ್ಟೈಯಾನ್' ಸಿನಿಮಾ ಪ್ರೇಕ್ಷಕರಿಗೆ ಹಿಡಿಸಿತೇ? ಫಸ್ಟ್ ಹಾಸ್ ಹಾಗೂ ಸೆಕೆಂಡ್ ಹಾಫ್ ಬಗ್ಗೆ ನೆಟ್ಟಿಗರ ಅಭಿಪ್ರಾಯವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಜೈ ಭೀಮ್' ಅಂತಹ ಸಿನಿಮಾವನ್ನು ನಿರ್ದೇಶಿಸಿದ್ದ ಟಿ. ಜೆ. ಜ್ಞಾನವೇಲ್ 'ವೆಟ್ಟೈಯಾನ್'ಗೆ ಆಕ್ಷನ್ ಕಟ್ ಹೇಳಿದ್ದಾರೆ. ರಜನಿಕಾಂತ್ ಹಾಗೂ ಟಿ.ಜೆ ಜ್ಞಾನವೇಲ್ ಕಾಂಬಿನೇಷನ್ ಕೆಲವರಿಗೆ ಹಿಡಿದೆ. ಅದೇ ಹಾರ್ಡ್‌ಕೋರ್ ರಜನಿ ಫ್ಯಾನ್ಸ್‌ಗೆ ಆ ಮಟ್ಟಿಗೆ ಇಷ್ಟ ಆಗಿಲ್ಲ. ಸ್ಕ್ರೀನ್ ಪ್ಲೇ ಸ್ವಲ್ಪ ನಿಧಾನ ಗತಿಯಲ್ಲಿದೆ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಫಹಾದ್ ಫಾಸಿಲ್-ರಜನಿ ಕಾಂಬೋ ಸೂಪರ್
"ಒಂದೊಳ್ಳೆ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಖಂಡಿತವಾಗಿಯೂ ಎಲ್ಲರ ನಟನೆ ಅದ್ಭುತವಾಗಿದೆ. ಅಮಿತಾಭ್ ಬಚ್ಚನ್ ಅವರದ್ದು ಅತಿಥಿ ಪಾತ್ರಕ್ಕಿಂತಲೂ ದೊಡ್ಡದು. ಫಹಾದ್ ಫಾಸಿಲ್ ಹಾಗೂ ರಜನಿಕಾಂತ್ ಕೆಮಿಸ್ಟಿ ಸಖತ್ ಆಗಿದೆ. ಸ್ಕ್ರೀನ್‌ಪ್ಲೇನಲ್ಲಿ ಸಮಸ್ಯೆಯಿದೆ. ಸಿನಿಮಾ ಸ್ವಲ್ಪ ಉದ್ದ ಆಯ್ತು ಎಂದೆನಿಸುತ್ತೆ. ಇನ್ನೂ ಚೆನ್ನಾಗಿ ಮಾಡಬಹುದಿತ್ತು. ಆದರೆ, ಒಮ್ಮೆ ಅಂತೂ ಈ ಸಿನಿಮಾವನ್ನು ನೋಡಲು ಅಡ್ಡಿಯಿಲ್ಲ. (3.25/5)" ಎಂದು ನೆಟ್ಟಿಗರೊಬ್ಬರು ರೇಟಿಂಗ್ ಕೊಟ್ಟಿದ್ದಾರೆ.
ಇಂದಿನ ನಿರ್ದೇಶಕರಿಗಿದು ಪಠ್ಯ ಪುಸ್ತಕ
" ಇಂದಿನ ಜನರೇಷನ್‌ನ ನಿರ್ದೇಶಕರಿಗೆ ಇದೊಂದು ಪಠ್ಯ ಪುಸ್ತಕವಿದ್ದಂತೆ. ಕಂಟೆಂಟ್ ಹಾಗೂ ಕಮರ್ಷಿಯಲ್ ಎರಡೂ ಸೀನ್‌ಗಳನ್ನು ಹೇಗೆ ಒಟ್ಟಿಗೆ ತೋರಿಸಬಹುದು ಅನ್ನೋದು ಗೊತ್ತಾಗುತ್ತೆ. ಇಂಟ್ರೋ ಸೀನ್ ಸಖತ್ ಆಗಿದೆ. ಅದರಲ್ಲೂ ತೆರೆಮೇಲೆ ತಲೈವರ್ ಬೆಂಕಿ. ಫಹಾದ್ ಫಾಸಿಲ್ ಹಾಗೂ ರಜನಿಕಾಂತ್ ಕಾಂಬಿನೇಷನ್ ಸಖತ್ ಆಗಿಯೇ ವರ್ಕ್ ಆಗಿದೆ." ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
ಫಸ್ಟ್ ಹಾಸ್ ಅದ್ಭುತ.. ಸೆಕೆಂಡ್ ಹಾಫ್.. ??
"ವೆಟ್ಟೈಯಾನ್ ಮೊದಲಾರ್ಧ ಅದ್ಭುತ. ಅದೇ ದ್ವಿತಿಯಾರ್ಧ ಅವರೇಜ್. ಸೆಕೆಂಡ್ ಹಾಫ್‌ನಲ್ಲಿ ಕೆಲವು ಲೋಪ ದೋಷಗಳು ಇದ್ದರೂ, ಒಂದೊಳ್ಳೆ ಕಂಟೆಂಟ್ ಇರುವ ಸಿನಿಮಾವನ್ನು ಇಲ್ಲಿ ನೋಡಬಹುದು. ಈ ಸಿನಿಮಾ ಗೆದ್ದಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಎಂದಿನಂತೆ ರಜನಿಕಾಂತ್ ಚಿಂದಿ ಉಡಾಯಿಸಿದ್ದಾರೆ." ಎಂದು ಮತ್ತೊಬ್ಬರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಇಂಟರ್‌ವಲ್ ಟ್ವಿಸ್ಟ್ ಬೆಂಕಿ
"ವೆಟ್ಟೈಯಾನ್ ಫಸ್ಟ್ ಹಾಫ್ ಇಂಟರ್‌ವಲ್‌ನಲ್ಲಿ ಸಿಗುವ ಟ್ವಿಸ್ಟ್‌ಗೆ ಥಿಯೇಟರ್‌ನಲ್ಲಿ ಜನರು ನಿಂತು 3 ರಿಂದ 4 ನಿಮಿಷ ಚಪ್ಪಾಳೆ ತಟ್ಟುತ್ತಾರೆ. ಇದೆಲ್ಲವೂ ನಿರ್ದೇಶಕ ಟಿಜೆ ಜ್ಞಾನವೇಲ್‌ಗೆ ಸಲ್ಲಬೇಕು. ಕಥೆಯನ್ನು ಅದ್ಭುತವಾಗಿ ಹೆಣೆದಿದ್ದಾರೆ. ಅಲ್ಲದೆ ಬಿಲ್ಡಪ್ ಅನ್ನುಅದ್ಭುತವಾಗಿ ಕೊಟ್ಟಿದ್ದಾರೆ. ಜೊತೆಗೆ ಕುತೂಹಲ ಹಾಗೂ ಟೆನ್ಷನ್ ಅನ್ನು ಹಾಗೆಯೇ ಇಟ್ಟಿದ್ದಾರೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











