Kingdom Review: ಸೋಲಿನ ಚಕ್ರವ್ಯೂಹ ಭೇದಿಸಲು ಹೋದ ದೇವರಕೊಂಡಗೆ ವಿಜಯ ಸಿಕ್ಕಿತ್ತೇ? ಹೇಗಿದೆ 'ಕಿಂಗ್‌ಡಮ್'?

Rating:
3.0/5

ವಿಜಯ್ ದೇವರಕೊಂಡ ನಟಿಸಿದ ನಾಲ್ಕೈದು ಸಿನಿಮಾಗಳು ನೆಲಕ್ಕಚಿವೆ. ಅದರಲ್ಲೂ ಪುರಿ ಜಗನ್ನಾಥ್ ನಿರ್ದೇಶಿಸಿದ್ದ 'ಲೈಗರ್‌' ವಿಜಯ್ ವೃತ್ತಿ ಬದುಕಿಗೆ ದೊಡ್ಡ ಪೆಟ್ಟನ್ನೇ ಕೊಟ್ಟಿತ್ತು. ಅಲ್ಲಿಂದ ಮತ್ತೊಂದು ಗೆಲುವಿಗಾಗಿ ವಿಜಯ್ ದೇವರಕೊಂಡ ಶತ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ, ಪ್ರತಿ ಬಾರಿ ಸಿಕ್ಕಿದ್ದು ಸೋಲು. ಈ ಬ್ಯಾಕ್‌ ಟು ಬ್ಯಾಕ್ ಸೋಲಿನಿಂದ ಹೊರ ಬರುವುದಕ್ಕೆ ವಿಜಯ್ ದೇವರಕೊಂಡ ಚಕ್ರವ್ಯೂಹ ಭೇದಿಸುವುದಕ್ಕೆ ಹೊರಟಿದ್ದಾರೆ. ಅದುವೇ 'ಕಿಂಗ್‌ಡಮ್'.

ವಿಜಯ್ ದೇವರಕೊಂಡ ವೃತ್ತಿ ಬದುಕಿನಲ್ಲಿ ಇದೊಂದು ವಿಶಿಷ್ಠವಾಗಿ ನಿಲ್ಲುವ ಸಿನಿಮಾ. ಇಂತಹದೊಂದು ಪಾತ್ರದಲ್ಲಿ ಟಾಲಿವುಡ್ ರೌಡಿ ಹಿಂದೆಂದು ಕಂಡಿರಲಿಲ್ಲ. ಮಾಸ್ ಲುಕ್‌ನಲ್ಲಿ ವಿಜಯ್ ದೇವರಕೊಂಡು ಮತ್ತೆ ಕಮ್‌ ಬ್ಯಾಕ್ ಮಾಡಿರೋದಂತೂ ಸತ್ಯ. ಆದರೆ, ವಿಜಯ್ ಪರ್ಫಾಮೆನ್ಸ್ ಬಿಟ್ಟು ಬೇರೆ ಅಂಶಗಳು ಗೆಲುವಿನ ಗುರಿಯನ್ನು ಮುಟ್ಟಿಸುತ್ತವೆಯೇ? ಮತ್ತೆ ವಿಜಯ್ ಮುಖದಲ್ಲಿ ವಿಜಯದ ನಗೆ ಬೀರಬಹುದೇ? 'ಕಿಂಗ್‌ಡಮ್' ಸಿನಿಮಾದ ಕಥೆಯೇನು? ಪ್ಲಸ್ ಏನು? ಮೈನಸ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

Vijay Deverakonda starrer Kingdom telugu movie review and rating in Kannada

'ಕಿಂಗ್‌ಡಮ್' ಕಥೆಯೇನು?

ಗೌತಮ್ ತಿನ್ನನುರಿ ನಿರ್ದೇಶಿಸಿದ 'ಕಿಂಗ್‌ಡಮ್' ವಿಜಯ್ ದೇವರಕೊಂಡಗೆ ಒಂದೊಳ್ಳೆ ಸಕ್ಸಸ್‌ಫುಲ್ ಸಿನಿಮಾ ಕೊಡುವ ಎಲ್ಲಾ ಸಾಧ್ಯತೆಯಿತ್ತು. ಅದು ಜಸ್ಟ್ ಮಿಸ್ ಆಗಿದೆ ಎನ್ನಬಹುದು. ಅದ್ಯಾಕೆ ಅಂತ ಹೇಳುವುದಕ್ಕೂ ಮುನ್ನ 'ಕಿಂಗ್‌ಡಮ್' ಕಥೆಯೇನು? ಅನ್ನೋದರ ಮೇಲೊಂದು ಕಣ್ಣಾಯಿಸಿ ಬರೋಣ. ಸೂರಿ (ವಿಜಯ್ ದೇವರಕೊಂಡ) ಅಂಕಪುರ ಎಂಬ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್. ಅನ್ಯಾಯವನ್ನು ಕಂಡರೆ ಮೈ ಉರಿಯುತ್ತೆ. ಇದನ್ನು ವಿರೋಧಿಸಿದಾಗಲೇ ತೊಂದರೆ ಸಿಕ್ಕಿಕೊಂಡು ಅಮಾನತುಗೊಳ್ಳುತ್ತಾನೆ. ಬ್ಯಾಕ್‌ಗ್ರೌಂಡ್‌ನಲ್ಲಿ ಇತನಿಗೆ ಶಿವ ಎಂಬ ಅಣ್ಣ (ಸತ್ಯದೇವ್) ಇದ್ದಾನೆ. ಅವನು ತನ್ನ ತಂದೆಯನ್ನೇ ಕೊಂಡು ಕಣ್ಮರೆಯಾಗಿರುತ್ತಾನೆ. ಅವನ್ನು ಹುಡುಕಿ ವಾಪಾಸ್ ಕರೆದುಕೊಂಡು ಬರುವುದೇ ಸೂರಿಯ ಗುರಿ. ಇತ್ತ ಅಮಾನತುಗೊಂಡ ಸೂರಿಗೆ ಅವರ ಮೇಲಾಧಿಕಾರಿ ಒಂದು ರಹಸ್ಯ ಕಾರ್ಯಾಚರಣೆಯ ಜವಾಬ್ದಾರಿಯನ್ನು ವಹಿಸುತ್ತಾರೆ. ಅದನ್ನು ಒಪ್ಪಿಕೊಂಡು ಶ್ರೀಲಂಕಾಗೆ ತೆರಳುವುದಕ್ಕೆ ಅಣ್ಣ ಶಿವನೇ ಕಾರಣ. ಅಲ್ಲಿನ ಚಕ್ರವ್ಯೂಹವನ್ನು ಭೇದಿಸಿ, ಅಣ್ಣನನ್ನು ಪತ್ತೆ ಹಚ್ಚಿ ವಿಜಯ ಸಾಧಿಸುತ್ತಾನಾ? ಶ್ರೀಲಂಕಾದಲ್ಲಿ ಏನು ನಡೆಯುತ್ತೆ? ಅನ್ನೋದೇ ಸಿನಿಮಾ.

ವಿಜಯ್ ಪರ್ಫಾಮೆನ್ಸ್ ಹೇಗಿದೆ?

'ಕಿಂಗ್‌ಡಮ್' ಸಿನಿಮಾದಲ್ಲಿ ವಿಜಯ್ ದೇವರಕೊಂಡ ಪರ್ಫಾಮೆನ್ಸ್ ಹೈಲೈಟ್. ಹಿಂದೆಂದಿಗಿಂತಲೂ ಈ ಸಿನಿಮಾದಲ್ಲಿ ಪ್ರಬುದ್ಧರಾಗಿ ಕಾಣುತ್ತಾರೆ. ಗೌತಮ್ ತಿನ್ನನುರಿ ಕಥೆಯ ನಿರೂಪಣೆಯಲ್ಲಿ ಕೊಂಚ ಎಡವಿದರೂ, ವಿಜಯ್‌ರಿಂದ ಪರ್ಫಾಮೆನ್ಸ್ ತೆಗೆಸುವಲ್ಲಿ ಮುಗ್ಗರಿಸಿಲ್ಲ ಅನ್ನೋದನ್ನು ನಿಸ್ಸಂದೇಹವಾಗಿ ಹೇಳಬಹುದು. ವಿಜಯ್ ಮಾಸ್‌ ಸೀನ್‌ಗಳಲ್ಲೂ (ಟಿಪಿಕಲ್ ಕಮರ್ಷಿಯಲ್ ಅಲ್ಲ) ಮಿಂಚಿದ್ದಾರೆ. ನಾಯಕಿ ಭಾಗ್ಯಶ್ರೀ ಬೋಸ್‌ ಜೊತೆಗಿನ ಸನ್ನಿವೇಶಗಳಲ್ಲೂ ಇಷ್ಟ ಆಗುತ್ತಾರೆ. ಹೀಗಾಗಿ ವಿಜಯ್ ದೇವರಕೊಂಡ ಮೇಲೆ ಇಡೀ ಸಿನಿಮಾ ನಿಂತಿದೆ ಎಂದು ಹೇಳಬಹುದು.

Vijay Deverakonda starrer Kingdom telugu movie review and rating in Kannada

ಸಿನಿಮಾದ ಪ್ಲಸ್ ಪಾಯಿಂಟ್ ಏನು?

'ಕಿಂಗ್‌ಡಮ್' ಸಿನಿಮಾದ ಹೈಲೈಟ್‌ ಅಂದರೆ, ಅದು ಫಸ್ಟ್‌ ಹಾಫ್. ಸಿನಿಮಾದ ಫಸ್ಟ್‌ ಹಾಫ್ ನಿಮ್ಮನ್ನು ಎಂಗೇಜಿಂಗ್ ಆಗಿ ಇಡುತ್ತೆ. ಆರಂಭದಲ್ಲಿ ಟಿಪಿಕಲ್ ಕಮರ್ಷಿಯಲ್ ಸಿನಿಮಾ ಎನಿಸದೇ ಹೋದರೂ, ಇಂಟರ್‌ವಲ್‌ಗೂ ಮುನ್ನ ಬರುವ ಬೋಟ್‌ ಸೀನ್‌ ಸಖತ್ ಥ್ರಿಲ್ಲಿಂಗ್ ಆಗಿದೆ. ಫಸ್ಟ್‌ ಹಾಫ್‌ನಲ್ಲಿ ಸಿನಿಮಾದ ಕ್ಷಣ ಕ್ಷಣಕ್ಕೂ ಪ್ರೇಕ್ಷಕನಿಗೆ ಕುತೂಹಲ ಕೆರಳಿಸುತ್ತಾ ಸಾಗುತ್ತೆ. ಹೀಗಾಗಿ ಫಸ್ಟ್ ಹಾಫ್‌ ನಿಜಕ್ಕೂ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗುತ್ತೆ. ವಿಜಯ್ ದೇವರಕೊಂಡ, ಭಾಗ್ಯಶ್ರೀ ಬೋಸ್, ವಿಪಿ ವೆಂಕಿಟೇಶ್ ಸೇರಿದಂತೆ ಸಿನಿಮಾ ಪ್ರತಿಯೊಂದು ಪಾತ್ರವೂ ಕಿಕ್ ಕೊಡುತ್ತವೆ. ವಿಜಯ್ ಜೊತೆಗೆ ಸತ್ಯದೇವ್ ಹಾಗೂ ಖಳನಾಯಕ ಪಾತ್ರದಲ್ಲಿ ವೆಂಕಟೇಶ್ ವೈಪಿ ಜನ ಮೆಚ್ಚುಗೆ ಗಳಿಸುತ್ತಾರೆ. ಈ ಸಿನಿಮಾದ ಛಾಯಾಗ್ರಹಣ ಹಾಗೂ ಹಿನ್ನೆಲೆ ಸಂಗೀತ ಈ ಸಿನಿಮಾದ ಮತ್ತೊಂದು ಹೈಲೈಟ್.

ಸಿನಿಮಾ ಮೈನಸ್ ಪಾಯಿಂಟ್ ಏನು?

'ಕಿಂಗ್‌ಡಮ್' ಫಸ್ಟ್ ಹಾಫ್ ನೋಡುತ್ತಿದ್ದ ಪ್ರೇಕ್ಷಕರಿಗೆ ವಿಜಯ್ ದೇವರಕೊಂಡ ಗೆದ್ದುಬಿಟ್ಟರು ನಿರ್ಧಾರಕ್ಕೆ ಬರುತ್ತಾರೆ. ಆದರೆ, ಸೆಕೆಂಡ್ ಹಾಫ್‌ ಆರಂಭ ಆಗುತ್ತಿದ್ದಂತೆ ಈ ಅಭಿಪ್ರಾಯ ಬದಲಾಗುತ್ತಾ ಹೋಗುತ್ತೆ. ಅದಾಗಲೇ ಕಥೆಯಲ್ಲಿ ರಹಸ್ಯವಾಗಿ ಸಾಗುತ್ತಿದ್ದಂತೆ ಪಾತ್ರಗಳ ಅಸಲಿ ಬಂಡವಾಳ ಬದಲಾಗುತ್ತೆ. ಅಲ್ಲಿಂದ ಹೆಚ್ಚೇನು ಕಿಕ್ ಕೊಡುವುದಿಲ್ಲ. ಹೀಗಾಗಿ ಸೆಕೆಂಡ್‌ ಹಾಫ್‌ನಲ್ಲಿ ಸಿನಿಮಾ ಎನರ್ಜಿಯನ್ನು ಕಳೆದುಕೊಳ್ಳುತ್ತಾ ಮುಂದೆ ಸಾಗುತ್ತೆ.

ಕೊನೆಯಲ್ಲಿ..

ಆಗಲೇ ಹೇಳಿದ ಹಾಗೆ ಸೋಲಿನ ಸುಳಿಗೆ ಸಿಲುಕಿ ಹೊರಬರಲು ಪರದಾಡುತ್ತಿದ್ದ ವಿಜಯ್ ದೇವರಕೊಂಡಗೆ 'ಕಿಂಗ್‌ಡಮ್' ಕಮ್‌ಬ್ಯಾಕ್ ಆಗುತ್ತಿತ್ತು. ಆದರೆ, ನಿರ್ದೇಶಕ ಗೌತಮ್ ತಿನ್ನನುರಿ ಸೆಕೆಂಡ್‌ ಹಾಫ್‌ನಲ್ಲಿ ಎಡವಿದ್ದಾರೆ. ನೀವು ತೆಲುಗು ಸಿನಿಮಾ ಹಾಗೂ ವಿಜಯ್ ದೇವರಕೊಂಡ ಫ್ಯಾನ್ಸ್ ಆಗಿದ್ದರೆ, ಒಮ್ಮೆ ನೋಡಿ ಬರಲಿ ಅಡ್ಡಿಯಿಲ್ಲ. ಉಳಿದಂತೆ ಸೋಲಿನ ಚಕ್ರವ್ಯೂಹ ಭೇದಿಸಿದರೇ? ಅಂತೇನಾದರೂ ಕೇಳಿದರೆ ಉತ್ತರ ಪ್ರೇಕ್ಷಕರೇ ಕೊಡಬೇಕಿದೆ.

More from Filmibeat

English summary
Vijay Deverakonda starrer Kingdom telugu movie review and rating in Kannada;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X