Vikram Twitter Review : 'ವಿಕ್ರಂ' ಚಿತ್ರದ ಟ್ವಿಟ್ಟರ್ ವಿಮರ್ಶೆ!
ಭಾರತೀಯ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಕಮಲ್ ಹಾಸನ್ ಅವ್ರ 'ವಿಕ್ರಂ' ಸಿನಿಮಾ ಕೂಡ ಒಂದು. ಈ ಚಿತ್ರವನ್ನು ಕಮಲ್ ಹಾಸನ್ ಕಮ್‌ಬ್ಯಾಕ್ ಎಂದೇ ಹೇಳಲಾಗುತ್ತಿದೆ. ಕಮಲ್ ಹಾಸನ್ ಇತ್ತೀಚೆಗೆ ಯಾವುದೇ ದೊಡ್ಡ ಹಿಟ್ ಕೊಟ್ಟಿಲ್ಲ. ಈ ಸಿನಿಮಾ ಹಿಟ್ ಸೇರುವ ಸೂಚನೆಯಂತೂ ಕೊಟ್ಟಿದೆ.
ಕಮಲ್ ಹಾಸನ್ ಈ ಸಿನಿಮಾ ರಿಲೀಸ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದ ಅಭಿಮಾನಿಗಳು ಇಂದು ಹಬ್ಬ ಮಾಡುತ್ತಿದ್ದಾರೆ. ಚಿತ್ರಮಂದಿರದಲ್ಲಿ ಸಿನಿಮಾವನ್ನು ನೋಡಿದವರು ಸೂಪರ್ ಎನ್ನುತ್ತಿದ್ದಾರೆ. ಕಮಲ್ ಹಾಸನ್ ತೆರೆಮೇಲೆ ಮಾಡಿದ ಮೋಡಿಗೆ ಪ್ರೇಕ್ಷಕರು ಮನ ಸೋತಿದ್ದಾರೆ.
ಇನ್ನು ಟ್ವಿಟ್ಟರ್‌ನಲ್ಲಿ ಸಿನಿಮಾ ಬಗ್ಗೆ ವಿಮರ್ಶೆ ಬರೆದು ಹೇಗೆದೆ ಎನ್ನುವ ಬಗ್ಗೆ ಹೇಳುತ್ತಿದ್ದಾರೆ. ನೀರೀಕ್ಷೆಯಂತೆ 'ವಿಕ್ರಂ' ಮೊದಲ ದಿನವೇ ಬಿಗ್ ಓಪನಿಂಗ್ ಪಡೆದುಕೊಂಡಿದೆ. ಚಿತ್ರದ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆಗೆ, ವಿಜಯ್ ಸೇತುಪತಿ, ಪೃಥ್ವಿರಾಜ್, ಸೂರ್ಯ ಅಂತಹ ಘಟಾನುಘಟಿ ಕಲಾವಿದರು ಸಿನಿಮಾದಲ್ಲಿ ಇದ್ದಾರೆ.

ಸಿನಿಮಾದ ಒಂದೊಂದು ತುಣುಕು ಅದ್ಭುತ ಎನ್ನುತ್ತಿದ್ದಾರೆ ಸಿನಿಮಾ ನೋಡಿದವರು. ಇನ್ನು ಚಿತ್ರದ ಮಧ್ಯಂತರದ ಬ್ಲಾಕ್ ಮೆಚ್ಚಿಕೊಂಡಾಡುತ್ತಿದ್ದಾರೆ. ಇದಕ್ಕೆ ನಿರ್ದೇಶಕ ಲೋಕೇಶ್ ಕನಗರಾಜ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 'ವಿಕ್ರಂ' ಸಿನಿಮಾದ ಒಂದಷ್ಟು ಟ್ವಿಟ್ಟರ್ ವಿಮರ್ಶೆಗಳು ಹೀಗಿವೆ.
ಇನ್ನು 'ವಿಕ್ರಂ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡಲಿದೆ ಎನ್ನುವುದಕ್ಕೆ ಇಷ್ಟು ಮಾತ್ರ ಸಾಕು. ಸಿನಿಮಾ ರಿಲೀಸ್ ದಿನವೇ ಉತ್ತಮ ಪ್ರಶಂಸೆ ಗಿಟ್ಟಿಸಿಕೊಂಡಿದೆ. ಇನ್ನು ಚಿತ್ರಕ್ಕೆ ವಿಮರ್ಶಕರ ರೇಟಿಂಗ್ ಕೂಡ ಉತ್ತಮವಾಗಿದೆ. 5ಕ್ಕೆ 3.5, 4.5, ರೇಟಿಂಗ್ ಸಿಕ್ಕಿದೆ. ಈ ಮೂಲಕ ಮತ್ತೆ ಕಮಲ್ ಹಾಸನ್ ಬೌನ್ಸ್ ಬ್ಯಾಕ್ ಆಗಿದ್ದಾರೆ ಅಂತಲೇ ಹೇಳ ಬಹುದು.


Click it and Unblock the Notifications











