'ಒಂದು ಸರಳ ಪ್ರೇಮಕಥೆ' ಟ್ವಿಟರ್ ವಿಮರ್ಶೆ; ಮೊದಲಾರ್ಧ ಮನರಂಜನೆ.. ದ್ವಿತೀಯಾರ್ಧ..?

ವಿನಯ್ ರಾಜ್‌ಕುಮಾರ್ ಅಭಿನಯದ 'ಒಂದು ಸರಳ ಪ್ರೇಮಕಥೆ' ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ. ಮತ್ತೊಂದು ಸರಳ ಪ್ರೇಮಕಥೆಯನ್ನು ಸಿಂಪಲ್ ಸುನಿ ತೆರೆಮೇಲೆ ತಂದಿದ್ದಾರೆ. ವಿನಯ್ ರಾಜ್‌ಕುಮಾರ್, ಸ್ವಾತಿಷ್ಠ ಕೃಷ್ಣನ್, ಮಲ್ಲಿಕಾ ಸಿಂಗ್ ಕಾಂಬಿನೇಷನ್ ಸಿನಿಮಾ ಈಗಾಗಲೇ ಟ್ರೈಲರ್ ಹಾಗೂ ಹಾಡುಗಳಿಂದ ಗಮನ ಸೆಳೆದಿದೆ.

ಮೊದಲಿಗೆ ಸಿಂಪಲ್ ಸುನಿ ಟೈಟಲ್‌ನಿಂದಲೇ ಗಮನ ಸೆಳೆದಿದ್ದರು. ಇದೊಂದು ಅಪ್ಪಟ ಸಂಗೀತ ಮಯ ಸಿನಿಮಾ. ಜೊತೆಗೆ ರೊಮ್ಯಾಂಟಿಕ್ ಲವ್‌ಸ್ಟೋರಿ ಕೂಡ ಇದೆ. ಇದೂವರೆಗೂ ವಿನಯ್‌ ರಾಜ್‌ಕುಮಾರ್‌ಗೆ ದೊಡ್ಡ ಹಿಟ್ ಸಿನಿಮಾ ಸಿಕ್ಕಿಲ್ಲ. ಸಾಕಷ್ಟು ಪ್ರಯೋಗಾತ್ಮಕ ಸಿನಿಮಾಗಳ ಮೂಲಕವೇ ಜನರಿಗೆ ಹತ್ತಿರವಾಗಿದ್ದರೂ, ಕರಿಯರ್‌ಗೆ ಹಿಟ್‌ ಸಿನಿಮಾ ಅನ್ನೋದು ಮಾತ್ರ ಸಿಕ್ಕಿಲ್ಲ.

Vinay Rajkumar Simple Suni Movie Ondu Sarala Prema Kathe twitter review

ಆದ್ರೀಗ ಒಂದು ಸರಳ ಪ್ರೇಮಕಥೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದವರು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಕ್ಕೆ ಶುರುಮಾಡಿದ್ದಾರೆ. ವಿನಯ್ ರಾಜ್‌ಕುಮಾರ್ ನಟನೆ, ಸಿಂಪಲ್ ಸುನಿ ನಿರ್ದೇಶನದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ. ಹಾಗಿದ್ದರೆ, ನೆಟ್ಟಿಗರು ಸಿನಿಮಾ ನೋಡಿ ಏನಂದ್ರು? ತಿಳಿಯುವುದಕ್ಕೆ ಮುಂದೆ ಓದಿ..

ಸರಳ, ಸುಂದರ ಸಿನಿಮಾ

ಒಂದು ಸರಳ ಪ್ರೇಮಕಥೆ ಹಿತಾನುಭವ ನೀಡುವ, ಸರಳ, ಸುಂದರ ಚಿತ್ರ. ಚುರುಕಾದ ಸಂಭಾಷಣೆ, ಸರಾಗವಾಗಿ ಹರಿಯುವ ಚಿತ್ರಕಥೆ, ಸುಶ್ರಾವ್ಯ ಸoಗೀತ ಚಿತ್ರದ ಗುಣಾತ್ಮಕ ಅಂಶಗಳು. ಅತಿಶಯ್ ಪಾತ್ರಕ್ಕೆ ತಮ್ಮ ಸೂಕ್ಷ್ಮ ಅಭಿನಯದ ಮೂಲಕ ಪೂರ್ಣ ನ್ಯಾಯ ಒದಗಿಸಿದ್ದಾರೆ ವಿನಯ್. ಸಿಂಪಲ್ ಸುನಿಯವರ ಮತ್ತೊಂದು ಗಮನಾರ್ಹ ಸಿನಿಮಾ. ಚಿತ್ರದ ಕ್ಲೈಮ್ಯಾಕ್ಸ್ ಅದ್ಬುತ" ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.


ಮೊದಲಾರ್ಧ ಮನರಂಜನೆ.. ದ್ವಿತೀಯಾರ್ಧ..?

"ಮೊದಲಾರ್ಧ ಪೂರ್ಣ ಮನರಂಜನೆಯ ಜೊತೆಗೆ ಅದ್ದೂರಿಯಾಗಿತ್ತು. ತುಂಬಾನೇ ಪಾಸಿಟಿವ್ ಅಂತ ಅನಿಸಿದ್ದು, ಒನ್‌ ಲೈನರ್‌ಗಳು. ದ್ವಿತೀಯಾರ್ಧ ಟ್ವಿಸ್ಟ್‌ಗಳೊಂದಿಗೆ ಭಾವನಾತ್ಮಕ ಹಾದಿ. ಕ್ಲೈಮ್ಯಾಕ್ಸ್ ಪರ್ಫೆಕ್ಟ್ ಅಂತ ಅನಿಸುತ್ತೆ. ಸಿನಿಮಾ ಸುಂದರವಾಗಿ ಎಂಡ್ ಆಗಿತ್ತು. ವಿನಯ್ ನಟನೆ ಟಾಪ್‌ನಲ್ಲಿದೆ. ಅವರು ಒಬ್ಬ ಕಂಪ್ಲೀಟ್ ನಟ. ರೇಟಿಂಗ್- 4/5" ಎಂದು ಮತ್ತೊಬ್ಬ ನೆಟ್ಟಿಗರು ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.


ಸುನಿ ಸಿಗ್ನೇಚರ್ ಫೀಲ್-ಗುಡ್ ಸಿನಿಮಾ

"ಒಂದು ಸರಳ ಪ್ರೇಮ ಕಥೆ, ಸಿಂಪಲ್ ಸುನಿ ಸಿಗ್ನೇಚರ್ ಫೀಲ್-ಗುಡ್ ಸಿನಿಮಾ. ವೀರ್ ಸಮರ್ಥ್ ಅವರ ಹಾಡುಗಳು ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ. ವಿನಯ್ ರಾಜ್‌ಕುಮಾರ್, ಸ್ವಾದಿಷ್ಟ ಮತ್ತು ಮಲ್ಲಿಕಾ ಅಭಿನಯ ಬೊಂಬಾಟ್. ಮೊದಲಾರ್ಧವು ಸಂಪೂರ್ಣ ಮೋಜಿನ ಪ್ರಯಾಣ ದ್ವಿತೀಯಾರ್ಧವು ಸಾಕಷ್ಟು ಟ್ವಿಸ್ಟ್‌ಗಳೊಂದಿಗೆ ಸಂಪೂರ್ಣ ಭಾವನಾತ್ಮಕ ಸಂಗತಿಗಳು, ಸಂಪೂರ್ಣವಾಗಿ ಪೈಸಾ ವಸೂಲ್ ಚಿತ್ರ. ರೇಟಿಂಗ್- 3.75/5" ಎಂದು ಇನ್ನೊಬ್ಬ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.


ಇದೊಂದು ಸುಂದರವಾದ ಮ್ಯೂಸಿಕಲ್ ಸಿನಿಮಾ

"ಇದೊಂದು ಸುಂದರವಾದ ಮ್ಯೂಸಿಕಲ್ ಸಿನಿಮಾ. ಮೊದಲಾರ್ಧ ಹಾಸ್ಯವಿದೆ. ಇಂಟರ್‌ವಲ್‌ಗೂ ಮುನ್ನ ಮಕ್ಕಳಂತೆ ನಕ್ಕುಬಿಟ್ಟೆ. ಸೆಕೆಂಡ್ ಹಾಸ್ ಟ್ವಿಟ್‌ಗಳೊಂದಿಗೆ ಸಂಪೂರ್ಣವಾಗಿ ಭಾವನಾತ್ಮಕ ಜರ್ನಿ. ಇದು ಸಂಪೂರ್ಣವಾಗಿ ಪೈಸಾ ವಸೂಲ್ ಸಿನಿಮಾ. ವಿನಯ್ ನಟನೆ ಅದ್ಭುತ. ಸಿಂಪಲ್ ಸುನಿ ನಿರ್ದೇಶನನೂ ಸೂಪರ್. ರೇಟಿಂಗ್-4.8/5" ಎಂದು ಸಿನಿಮಾ ನೋಡಿದ ಬಳಿಕ ಮತ್ತೊಬ್ಬ ನೆಟ್ಟಿಗರು ರೆಸ್ಪಾನ್ಸ್ ಮಾಡಿದ್ದಾರೆ." ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಇದೊಂದು ರೋಮ್ ಕಾಮ್ ಸಿನಿಮಾ

"ಒಂದು ಸರಳ ಪ್ರೇಮಕಥೆ ಸಿನಿಮಾ ಕರಿಯರ್ ಹಾಗೂ ಪ್ರೀತಿಯನ್ನು ಚೇಸ್ ಮಾಡಿಕೊಂಡು ಹೋಗುವ ಕಥೆ. ಇದೊಂದು ಫೀಲ್ ಗುಡ್ ರೋಮ್ ಕಾಮ್ ಸಿನಿಮಾ. ಸಿನಿಮಾಗೆ ವ ಪಾತ್ರಗಳನ್ನು ಕೂಡ ನೀಟ್ ಆಗಿ ಆಯ್ಕೆ ಮಾಡಲಾಗಿದೆ. ಹಾಡುಗಳು ಕೇಳುವಂತಿವೆ. ಚಿತ್ರಕಥೆ ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತೆ. ಸಿನಿಮಾ ನೋಡಲು ಯೋಗ್ಯ ಎಂದು ಹೇಳುತ್ತೇನೆ." ಎಂದು ಮತ್ತೊಬ್ಬರು ವಿಮರ್ಶೆ ಮಾಡಿದ್ದಾರೆ.

More from Filmibeat

English summary
Ondu Sarala Prema Kathe Twitter Review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X