Ekka X Review:ಪೊರಕೆ ಹಿಡಿದು ರಗಡ್ ಎಂಟ್ರಿ ಕೊಟ್ಟ ಯುವ; ಟೀಸರ್ ನೋಡಿ ಏನಂದ್ರು ಫ್ಯಾನ್ಸ್ ?
ದೊಡ್ಮನೆ ಅಭಿಮಾನಿಗಳ ಭರವಸೆಯ ನಾಯಕ ಯುವ ರಾಜ್‌ಕುಮಾರ್ ನಟಿಸುತ್ತಿರುವ ಎರಡನೇ ಸಿನಿಮಾ 'ಎಕ್ಕ'ದ ಟೀಸರ್ ಹೊರಬಿದ್ದಿದೆ. ನಿನ್ನೆ (ಏಪ್ರಿಲ್ 23) ಯುವ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಅಂದೇ ಈ ಸಿನಿಮಾದ ಟೀಸರ್ ರಿಲೀಸ್‌ಗೆ ಪ್ಲ್ಯಾನ್ ಆಗಿತ್ತು. ಆದರೆ, ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಗೌರವ ಸೂಚಿಸುವ ಸಲುವಾಗಿ ಇವತ್ತಿಗೆ(ಏಪ್ರಿಲ್ 24) ಪೋಸ್ಟ್‌ಪೋನ್ ಮಾಡಲಾಗಿತ್ತು.
ಇಂದು ಡಾ.ರಾಜ್‌ಕುಮಾರ್ ಅವರ 97ನೇ ಹುಟ್ಟುಹಬ್ಬ. ಈ ವಿಶೇಷ ದಿನದಂದು ಯುವರಾಜ್‌ಕುಮಾರ್ ನಟಿಸುತ್ತಿರುವ 'ಎಕ್ಕ' ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ. 1 ನಿಮಿಷ 9 ಸೆಕೆಂಡ್‌ಗಳಷ್ಟು ಚಿಕ್ಕದಾದ ಟೀಸರ್ ಎಲ್ಲರ ಗಮನ ಸೆಳೆಯುತ್ತಿದೆ. ಯುವರಾಜ್‌ಕುಮಾರ್ ಎಂಟ್ರಿ, ಡೈಲಾಗ್ ಹಾಗೂ ಮ್ಯಾನರಿಸಂಗೆ ಅವರ ಅಭಿಮಾನಿಗಳು ಕಳೆದು ಹೋಗಿದ್ದಾರೆ.

ಮಾಸ್ ಡೈಲಾಗ್ ಹೊಡೆಯುತ್ತಾ ಪೊರಕೆಯೊಳಗೆ ಗನ್ ಇಟ್ಟು ಶೂಟ್ ಮಾಡುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಟೀಸರ್‌ನಲ್ಲಿ ಎರಡು ಡೈಲಾಗ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡುವುದಕ್ಕೆ ಶುರು ಮಾಡಿವೆ. ಮಗು-ಮೃಗದ ಡೈಲಾಗ್ ಒಂದಾದರೇ, "ಇನ್ನೊಂದ್ ವಿಷ್ಯ ಇದು ಇಲ್ಲಿಗೆ ನಿಲ್ಲೋದಿಲ್ಲ" ಅನ್ನೋ ಡೈಲಾಗ್ ದೊಡ್ಮೆನೆ ಹೀರೋ ಏನೋ ಸೂಚನೆಯನ್ನು ನೀಡಿದಂತೆ ಇದೆ. 'ರತ್ನನ್ ಪ್ರಪಂಚ' ಸಿನಿಮಾ ನಿರ್ದೇಶಿಸಿದ್ದ ರೋಹಿತ್ ಪದಕಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಟೀಸರ್ ಪುನೀತ್ ರಾಜ್‌ಕುಮಾರ್ ನಟಿಸಿದ 'ಜಾಕಿ'ಯನ್ನು ಮತ್ತೆ ನೆನಪಿಸುತ್ತಿದೆ. ಹಾಗಿದ್ದರೆ, ಈ ಟೀಸರ್ ನೋಡಿ ನೆಟ್ಟಿಗರು ಏನು ಹೇಳುತ್ತಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.
"ಮಗುನೂ ಇದ್ದಾನೆ ಮೃಗನೂ ಇದ್ದಾನೆ"
"ನಮ್ಮ ಮನೆಲಿ ಹೇಳೋರು, ನಿನ್ನೊಳಗೆ ಮಗುನು ಇದೆ ಮೃಗನು ಇದೆ ಅಂತ. ಮಗು ತರ ಇದ್ಬಿಟ್ರೆ ಬದುಕನ್ನ ಆಟಾಡ್ತಾ ಕಳಿಬೋದು. ಅದೇ ಮೃಗನ ಸಾಕ್ದೆ ಅಂತ ಇಟ್ಕೋ ಅದೇ ಆಟ ಆಡಿಸೋಕೆ ಶುರು ಮಾಡುತ್ತೆ. ನಿನ್ನನ್ನೇ ನುಂಗಿ ಬಿಡುತ್ತೆ". ಎಂದು ಎಕ್ಕ ಸಿನಿಮಾ ಟೀಸರ್ ನೋಡಿ ಡೈಲಾಗ್ ಇಷ್ಟ ಪಟ್ಟು ಪೋಸ್ಟ್ ಮಾಡಿದ್ದಾರೆ.
'ಎಕ್ಕ' ಅದ್ಭುತ
"ಎಕ್ಕ ಟೀಸರ್ ಅದ್ಭುತವಾಗಿದೆ ಹಾಗೂ ಯುವರಾಜ್‌ಕುಮಾರ್ ಲುಕ್ ಕೂಡ ಸಖತ್ ಆಗಿದೆ. ಜಾಕಿ ಸಿನಿಮಾದ ಸೀನ್ ಇಲ್ಲಿ ಪ್ರತಿನಿಧಿಸುತ್ತಿದೆ. ಎಕ್ಕ ಸಿನಿಮಾದ ತಂಡಕ್ಕೆ ದೊಡ್ಡ ಬ್ಲಾಕ್ ಬಸ್ಟರ್ ಆಗಲಿ ಅಂತ ಶುಭಾಶಯಗಳನ್ನು ಕೋರುತ್ತಿದ್ದೇನೆ." ಎಂದು ನೆಟ್ಟಿಗರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಯುವ ಅಣ್ಣಂದೇ ದರ್ಬಾರ್
"ಅಣ್ಣಾ.. ಹುಡುಗ್ರು ಮಾಡ್ತಾರೆ ದಿಲ್ ದಾರು, ಅಣ್ಣ... ಹುಡುಗ್ರು ಮಾಡ್ತಾರೆ ದಿಲ್ ದಾರು, ಇನ್ಮೇಲಿಂದ ಯುವ ಅಣ್ಣಂದೇ ದರ್ಬಾರು." ಎಂದು ನೆಟ್ಟಿಗರು ಎಕ್ಕ ಟೀಸರ್ ನೋಡಿದ ಮೇಲೆ ಕುಣಿದು ಕುಪ್ಪಳಿಸಿದ್ದಾರೆ.
ಯುವ ಬಾಡಿ ಲಾಂಗ್ವೇಜ್ ಸೂಪರ್
"ಎಕ್ಕ ಟೀಸರ್ ಮೆಚ್ವುವಂತಿದೆ. ಯುವರಾಜ್‌ಕುಮಾರ್ ವಿಭಿನ್ನ ಲುಕ್ ಹಾಗೂ ಬಾಡಿ ಲಾಂಗ್ವೇಜ್ ಅನ್ನು ಇಲ್ಲಿ ನೋಡಬಹುದು. ಚರಣ್ ರಾಜ್ ಚಮತ್ಕಾರವನ್ನು ಮತ್ತೆ ನೋಡಬಹುದು." ಎಂದು ಮತ್ತೊಬ್ಬ ನೆಟ್ಟಿಗರು ರಿವೀಲ್ ಮಾಡಿದ್ದಾರೆ.
ಸ್ವಚ್ಚ ಭಾರತ ಅಭಿಯಾನ
"ಪೊರಕೆ ಒಳಗಡೆ ಗನ್ ಇಡೋ ಐಡಿಯಾ ಆದ್ರು ಹೆಂಗ್ರೋ ಬಂತು ನಿಮ್ಗೆ. ಸ್ವಚ್ಚ ಭಾರತ ಅಭಿಯಾನ" ಎಂದು ಇನ್ನೊಬ್ಬ ನೆಟ್ಟಿಗರು ಯುವ ರಾಜ್‌ಕುಮಾರ್ ನಟನೆಯ ಎಕ್ಕ ಸಿನಿಮಾ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಎಕ್ಕ' ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಯುವ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರೆ, ಸಂಪದ ಹಾಗೂ ಸಂಜನಾ ಆನಂದ್ ಇಬ್ಬರು ನಾಯಕಿಯರು. ಹಾಗೇ ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ, ಶ್ರುತಿ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಈ ಸಿನಿಮಾದ ಇನ್ನೊಂದು ಹೈಲೈಟ್ ಅಂದರೆ, ಚರಣ್ ರಾಜ್ ಸಂಗೀತ ಹಾಗೂ ಸತ್ಯ ಹೆಗಡೆ ಛಾಯಾಗ್ರಹಣ.
ಇನ್ನು 'ಎಕ್ಕ' ಸಿನಿಮಾವನ್ನು ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾವ್ ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ, ಜಯಣ್ಣ ಹಾಗೂ ಭೋಗೇಂದ್ರ ಜಯಣ್ಣ ಫಿಲ್ಮ್ಸ್ ಅಡಿಯಲ್ಲಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇದೇ ವರ್ಷ ಜೂನ್ 6ಕ್ಕೆ ಈ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.


Click it and Unblock the Notifications











