Yuva Twitter Review:"ಕಾಲರ್ ಎತ್ತಿಕೊಂಡು ಓಡಾಡಿ", "ದೊಡ್ಮನೆ ಪರಂಪರೆ"; 'ಯುವ' ನೋಡಿ ಫ್ಯಾನ್ಸ್ ಏನಂದ್ರು?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ಯುವ ರಾಜ್‌ಕುಮಾರ್ ಅಲ್ಲಿ ಅಪ್ಪು ಕಾಣುವುದಕ್ಕೆ ಹೊರಟಿದ್ದಾರೆ. ಅದಕ್ಕೆ ದೊಡ್ಮನೆ ಅಭಿಮಾನಿಗಳು 'ಯುವ' ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಅವರ ನಿರೀಕ್ಷೆಯಂತೆ ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ 'ಯುವ' ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ.

ಅಪ್ಪು ಅಂದರೆ ಡ್ಯಾನ್ಸ್. ಅಪ್ಪು ಅಂದರೆ ಫೈಟ್. ಸಿನಿಮಾದಲ್ಲಿ ಏನೇ ಮಿಸ್ ಆದರೂ, ಡ್ಯಾನ್ಸ್, ಫೈಟ್ ಅಂತೂ ಮಿಸ್ ಆಗುತ್ತಿರಲಿಲ್ಲ. ಈ ಕಾರಣಕ್ಕೆ ಯುವರಾಜ್‌ಕುಮಾರ್ ಅಲ್ಲೂ ಅಪ್ಪು ಸಿನಿಮಾದಂತೆಯೇ ಡ್ಯಾನ್ಸ್, ಫೈಟ್ ಅನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಹಾಗಿದ್ದರೆ, ಯುವ ಸಿನಿಮಾ ನೋಡಿ ಪ್ರೇಕ್ಷಕರು ಏನಂತಿದ್ದಾರೆ. ಎಕ್ಸ್ (ಟ್ವಿಟರ್) ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ 'ಯುವ' ಬಗ್ಗೆ ಒಪಿನಿಯನ್ ಏನಿದೆ? ತಿಳಿಯಲು ಮುಂದೆ ಓದಿ..

Yuva Twitter Review  How Audiences Reacts to Yuva Rajkumar   s New Movie on Social Media

"ಕಾಲರ್ ಎತ್ತಿಕೊಂಡು ಹೊರಬಂದೆ"

"ಯುವ ರಾಜ್‌ಕುಮಾರ್, ಸಂತೋಷ್ ಆನಂದ್‌ರಾಮ್ ನಿಮಗೆ ಹ್ಯಾಟ್ಸ್ ಆಫ್‌. ನೀವು ಸ್ಟೇಡಿಯಂ ಹೊರಕ್ಕೆ ಹೋಮ್ ರನ್‌ ಅನ್ನು ಹೊಡೆದಿದ್ದೀರ. ಸೆಕೆಂಡ್ ಹಾಫ್‌ನಲ್ಲಿ ಸ್ಕ್ರೀನ್ ಪ್ಲೇ ಮತ್ತು ನಿರ್ದೇಶನ ಅದ್ಭುತವಾಗಿದೆ. ಯುವ ಅಣ್ಣ ಕಾಲರ್ ಎತ್ತಿಕೊಂಡು ಹೊರಗಡೆ ಬಂದೆ. ಜೈ ಅಪ್ಪು" ಎಂದು ಅಭಿಮಾನಿಯೊಬ್ಬರು ಹೇಳಿಕೊಂಡಿದ್ದಾರೆ.

"ಬೇಡದೆ ಇರೋ ಫೈಟ್‌ಗಳು"

"ಬೇಡದೇ ಇರೋ ಫೈಟ್‌ಗಳು ಹಾಗೂ ಎಳೆಯುವ ಡೈಲಾಗ್‌ಗಳು ಈ ಸಿನಿಮಾದ ನೆಗೆಟಿವ್ ಅಂಶಗಳು. ಈ ಸಿನಿಮಾ ಕರ್ನಾಟಕದಲ್ಲಿ ಫ್ಲಾಪ್ ಸಿನಿಮಾವಾಗಿ ಹೊರಹೊಮ್ಮಿದೆ. 5ಕ್ಕೆ 2 ಸ್ಟಾರ್" ಎಂದು ಮತ್ತೊಬ್ಬ ನೆಟ್ಟಿಗರು ಹೇಳಿಕೊಂಡಿದ್ದಾರೆ.

ಯುವ ಸಿನಿಮಾ ಹೇಗಿದೆ?

"ಯುವ ಆಕ್ಟಿವ್ ಪಾಸಿಟಿವ್ ಆಗಿದೆ. ಹಾಡುಗಳು ಅವರೇಜ್‌ಗಿಂತ ಸ್ವಲ್ಪ ಉತ್ತಮ. ಡೈಲಾಗ್ ತುಂಬಾನೇ ಚೆನ್ನಾಗಿದೆ. ಛಾಯಾಗ್ರಹಣ ಚೆನ್ನಾಗಿದೆ. ಡ್ಯಾನ್ಸ್ ಉತ್ತಮವಾಗಿದೆ. ಸ್ಕ್ರೀನ್‌ಪ್ಕೇ ಹಾಗೂ ನಿರ್ದೇಶನ ಚೆನ್ನಾಗಿದೆ. ಬಿಜಿಎಂ ಮಾತ್ರ ಬೆಂಕಿ. ಇನ್ನು ಸೆಕೆಂಡ್ ಹಾಫ್ ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತಿದೆ. ಒಟ್ಟಾರೆ, 5ಕ್ಕೆ 4.5" ಎಂದು ಮತ್ತೊಬ್ಬ ನೆಟ್ಟಿಗರು ಹೇಳಿಕೊಂಡಿದ್ದಾರೆ.

"ಇನ್ಮೇಲೆ ಕೊಡ್ತಾ ಇರ್ತೀವಿ"

"ಎಲ್ಲಾ ಅಪ್ಪು ಬಾಸ್ ಅಭಿಮಾನಿಗಳು ಹಾಗೂ ರಾಜವಂಶದ ಅಭಿಮಾನಿಗಳು ಕಾಲರ್ ಎತ್ತಿಕೊಂಡು ತಿರುಗಾಡಿ. ಮಾಸ್ ಲುಕ್‌ನಲ್ಲಿ ಮೆಗಾ ಪವರ್‌ಸ್ಟಾರ್ ಎಂಟ್ರಿ ಕೊಟ್ಟಿದ್ದಕ್ಕೆ ಥ್ಯಾಂಕ್ಯೂ. ಮಾಸ್ಟರ್ ಪೀಸ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಕ್ಕೆ ಹೊಂಬಾಳೆ ಫಿಲ್ಮ್ಸ್‌ಗೆ ಧನ್ಯವಾದಗಳು. ಇನ್ಮೇಲೆ ಏನಿದ್ರೂ ನಾವು ಕೂಡುತ್ತಾ ಇರುತ್ತೇವೆ ಅಷ್ಟೆ." ಎಂದು ಇನ್ನೊಬ್ಬ ನೆಟ್ಟಿಗರು ಹೇಳಿಕೊಂಡಿದ್ದಾರೆ.

ಮೇಜರ್ ಹೈಲೈಟ್ ಆಕ್ಷನ್

"ಯುವ ಕ್ಲೈಮ್ಯಾಕ್ಸ್ ತಂದೆ ಮಗನ ಗೆಲುವನ್ನು ಸಂಭ್ರಮಿಸುತ್ತಾನೆ. ಮೇಜರ್ ಹೈಲೈಟ್ ಅಂದರೆ, ಟ್ರೈನಿಂಗ್ ಸೀನ್‌ನಲ್ಲಿ ಆಕ್ಷನ್ ಬ್ಲಾಕ್ ಅನ್ನು ನೋಡಿದಾಗ, ತೆರೆಮೇಲೆ ಅಪ್ಪು ಕಾಣುತ್ತಾರೆ. ಇಡೀ ತಂಡಕ್ಕೆ ಧನ್ಯವಾದಗಳು. ಯುವ ಬ್ಲಾಕ್‌ ಬಸ್ಟರ್ ಸಿನಿಮಾ" ಎಂದಿದ್ದಾರೆ.

"ದೊಡ್ಮನೆಯ ಪರಂಪರೆ ತಪ್ಪುದಾರಿಗೆಳೆಯುತ್ತಿದ್ದಾರೆ"

"ಅಪ್ಪು ಪರಂಪರೆಯನ್ನು ಮುಂದುವರೆಸುವುದಕ್ಕಾಗಿ ಯುವ ಸಿನಿಮಾ ನೋಡಿದೆ. ಆದರೆ, ಆ ವೈಬ್ಸ್‌ಗೆ ಕನೆಕ್ಟ್ ಆಗುವಲ್ಲಿ ಫೇಲ್ ಆಗಿದ್ದೇವೆ. ಈ ಹಿಂದೆ ಹೇಳಿದಂತೆ ಯುವಗಿಂತ ವಿನಯ್‌ಗೆ ನಟನೆಯ ಕೌಶಲ್ಯ ಚೆನ್ನಾಗಿದೆ. ನಿರ್ದೇಶಕ ಸಂತೋಷ್ ಆನಂದ್‌ರಾಮ್ ದೊಡ್ಮನೆಯ ಪರಂಪರೆಯನ್ನು ತಪ್ಪುದಾರಿಗೆ ಎಳೆಯುತ್ತಿದೆ. ಕೌಂಟರ್ ಡೈಲಾಗ್ ಸ್ಟಾರ್‌ಗಳಿಗೆ ಮಾತ್ರ ಹೊಸಬರಿಗೆ ಅಲ್ಲ. 5ಕ್ಕೆ 2 ಅಂಕ" ಮತ್ತೊಬ್ಬರು ಬರೆದುಕೊಂಡಿದ್ದಾರೆ.

More from Filmibeat

English summary
Explore How Kannada Audience Responses To Yuva Movie On Twitter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X