ದ್ರಾವಿಡ ಸಿದ್ದಾಂತ.. ಭರವಸೆಗಳು.. ವಿವಾದಗಳು.. ಸ್ಟಾರ್ ಪವರ್; ವಿಜಯ್ ಗೆಲುವಿಗೆ 6 ಪ್ರಮುಖಗಳಿವು!
ತಮಿಳುನಾಡಿನ ಚುನಾವಣೆಯ ಫಲಿತಾಂಶ ಸಾಕಷ್ಟು ಸಂಚಲವನ್ನು ಸೃಷ್ಟಿಸಿದೆ. ಮತದಾನದ ಬಳಿಕ ಎಕ್ಸಿಕ್ ಪೋಲ್ ಫಲಿತಾಂಶ ಸಮಪೂರ್ಣವಾಗಿ ತಲೆಕೆಳಗಾಗಿದೆ. ಬಹುತೇಕ ಸರ್ವೆಗಳು ದಳಪತಿ ವಿಜಯ್ ಪಕ್ಷ ಟಿವಿಕೆ ಮೇಲೆ ಭರವಸೆಯನ್ನು ನೀಡಿರಲಿಲ್ಲ. ಆದರೆ, ಇಂದು (ಮೇ 4) ಅಲ್ಲಿನ ರಾಜಕೀಯ ಲೆಕ್ಕಾಚಾರವನ್ನೇ ತಲೆ ಕೆಳಗೆ ಮಾಡಿದೆ. ಸಿನಿಮಾ ಸ್ಟಾರ್‌ಗಳಿಗೆ ರಾಜಕೀಯ ಕ್ಷೇತ್ರದಲ್ಲಿ ಇನ್ನೂ ನೆಲೆಯಿದೆ ಅನ್ನೋದನ್ನು ಅಲ್ಲಿನ ಜನತೆ ತೋರಿಸಿಕೊಟ್ಟಂತೆ ಕಾಣುತ್ತಿದೆ.
ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ವಿಜಯಕಾಂತ್ ಅವರಂತಹ ದಿಗ್ಗಜರೇ ತಮಿಳುನಾಡು ರಾಜಕೀಯದಲ್ಲಿ ನೆಲೆ ಕಂಡು ಕೊಳ್ಳುವುದಕ್ಕೆ ಪರದಾಡಿದ್ದಾರೆ. ಇವರಲ್ಲಿ ದಿವಂಗತ ವಿಜಯಕಾಂತ್ ಪಕ್ಷ ಕಟ್ಟಿ ಸ್ವಲ್ಪ ಮಟ್ಟಿಗೆ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದರು. ಅದು ಬಿಟ್ಟರೆ, ರಜನಿಕಾಂತ್ ಕಟ್ಟಲು ಹೋಗಿ ಹಿಂದೆ ಸರಿದಿದ್ದರು. ಕಮಲ್ ಹಾಸನ್ ಪಕ್ಷ ಕಟ್ಟಿದರೂ ಅಲ್ಲಿನ ಜನತೆಯೇ ಕೈ ಹಿಡಿಯಲಿಲ್ಲ.

ಆದ್ರೀಗ ದಳಪತಿ ವಿಜಯ್‌ಗೆ ಅಲ್ಲಿಗೆ ಜನತೆ ಬೆಂಬಲ ನೀಡಿದ್ದಾರೆ. ಎರಡು ಪ್ರಮುಖ ರಾಜಕೀಯ ಪಕ್ಷಗಳನ್ನು ಎದುರಿಸಿ ಏಕಾಂಗಿಯಾಗಿ ಏದುರಿಸಿದೆ ಟಿವಿಕೆ ಪಕ್ಷ. ಸ್ವತ: ಡಿಎಂಕೆ ಹಾಗೂ ಎಐಡಿಎಂಕೆ ಪಕ್ಷದ ಮುಖಂಡರೇ ದಳಪತಿ ವಿಜಯ್‌ಗೆ ಇಷ್ಟೊಂದು ಬೆಂಬಲ ಸಿಗಬಹುದೆಂದು ನಿರೀಕ್ಷೆ ಕೂಡ ಮಾಡಿರಲಿಲ್ಲ. ಅಷ್ಟಕ್ಕೂ ತಮಿಳು ನಾಡು ಜನರು ವಿಜಯ್ ಕೈ ಹಿಡಿಯುವುದಕ್ಕೆ ಪ್ರಮುಖ ಕಾರಣಗಳೇನು? ಇಲ್ಲಿದೆ ಒಂದಿಷ್ಟು ಅಂಶಗಳು.
ವಿಜಯ್ ದ್ರಾವಿಡ ಸಿದ್ದಾಂತ
ದ್ರಾವಿಡ ಸಿದ್ಧಾಂತಗಳ ಅಡಿಯಲ್ಲಿ ರಾಜಕೀಯ ಪಕ್ಷ ಕಟ್ಟಿರುವುದನ್ನು ತಮಿಳುನಾಡಿನ ಜನತೆಗೆ ವಿಜಯ್ ಮನವರಿಕೆ ಮಾಡಿಕೊಟ್ಟಿದ್ದರು. ಇತ್ತೀಚೆಗೆ ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷಗಳು ದ್ರಾವಿಡ ಸಿದ್ಧಾಂತವನ್ನು ಕಡೆಗಣಿಸಿರುವ ಆರೋಪವನ್ನು ವಿಜಯ್ ಅವರೇ ಮಾಡಿದ್ದರು. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಜಾತಿ ವಿರೋಧಿ ತತ್ವಗಳ ಮೇಲೆ ನಿಂತಿರುವ ಈ ಸಿದ್ಧಾಂತಕ್ಕೆ ಮರುಜನ್ಮ ನೀಡುವ ಶಪತ ಮಾಡಿದ್ದರು. ಅಲ್ಲೇ ದ್ರಾವಿಡ ಭಾಷೆಗಳ ಪುನರುಜ್ಜೀವನ ಮತ್ತು ಮಹಿಳೆಯರ ಸಮಾನತೆಗೆ ಶ್ರಮಿಸುವ ಬಗ್ಗೆ ವಿಜಯ್ ಆಡಿದ ಮಾತುಗಳು ಕೆಲಸ ಮಾಡಿವೆ ಎನ್ನಲಾಗುತ್ತಿದೆ.
ತಮಿಳಿಗರಿಗೆ ವಿಜಯ್ ಭರವಸೆ
ತಮಿಳುನಾಡು ಜನರಿಗೆ ವಿಜಯ್ ನೀಡಿದ ಭರವಸೆಗಳು ಕೆಲಸ ಮಾಡಿವೆ ಎನ್ನಲಾಗುತ್ತಿದೆ. ಮದುವೆ ಆಗುವ ಹೆಣ್ಣು ಮಕ್ಕಳಿಗೆ 8 ಗ್ರಾಂ ಚಿನ್ನ, ರೇಷ್ಮೇ ಸೀರೆ, ಮನೆಯಲ್ಲಿ ಹೆಣ್ಣು ಮಕ್ಕಳು ಜನಿಸಿದರೆ, 3 ಗ್ರಾಂ ಚಿನ್ನ, ಮಹಿಳೆಯರಿಗೆ ಪ್ರತಿ ತಿಂಗಳು 2500 ಸಾವಿರ ರೂ., ಕುಟುಂಬ ಆರೋಗ್ಯ ವಿಮೆ, ಉಚಿತ ಎಲ್‌ಪಿಜಿ ಸಿಲಿಂಡರ್, ಉಚಿತ ಬಸ್ ಪ್ರಯಾಣ, ಬಡವರಿಗೆ ಉಚಿತ ಶಿಕ್ಷಣ, ಲ್ಯಾಪ್‌ಟಾಪ್ ನೀಡುವುದಾಗಿ ಘೋಷಿಸಿದ್ದಾರೆ. ಇವೆಲ್ಲವೂ ಮಹಿಳೆಯರ ವೋಟುಗಳನ್ನು ಗಮನದಲ್ಲಿ ಇಟ್ಟುಕೊಂಡೇ ಪ್ರಣಾಳಿಕೆಯನ್ನು ಸಿದ್ದಪಡಿಸಿದ್ದರು. ಅದು ಕೆಲಸ ಮಾಡಿದಂತೆ ತೋರುತ್ತಿದೆ.
ಮುಳ್ಳಾಗಲಿಲ್ಲ ವಿವಾದಗಳು
ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ದಿನದಿಂದಲೂ ಒಂದಲ್ಲ ಒಂದು ವಿವಾದಗಳು ಇವರನ್ನು ಸುತ್ತಿಕೊಂಡಿದ್ದವು. ಕರೂರ್ ಕಾಲ್ತುಳಿತದಿಂದ ಆರಂಭ ಆಗಿದ್ದು ವಿಜಯ್ ವಿಚ್ಛೇದನದವರೆಗೂ ಬಂದು ನಿಂತಿತ್ತು. ಇವೆಲ್ಲವೂ ವಿಜಯ್ ರಾಜಕೀಯ ಕ್ಷೇತ್ರಕ್ಕೆ ಮುಳುವಾಗುತ್ತೆ ಎಂದು ನಂಬಲಾಗಿತ್ತು. ಆದರೆ, ವಿಜಯ್ ವಿವಾದಗಳು ಪಾಸಿಟಿವ್ ಆಗಿ ಕನ್ವರ್ಟ್ ಆಗಿವೆ.

ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಇಲ್ಲ
ಬಿಜೆಪಿ ಜೊತೆ ಎಐಡಿಎಂ ಹಾಗೂ ಕಾಂಗ್ರೆಸ್ ಜೊತೆ ಡಿಎಂಕೆ ಮೈತ್ರಿ ಮಾಡಿಕೊಂಡಿತ್ತು. ಚುನಾವಣೆಗೂ ಮುನ್ನ ವಿಜಯ್‌ಗೆ ಮೈತ್ರಿ ಮಾಡಿಕೊಳ್ಳುವಂತೆ ಬಿಜೆಪಿ ಆಹ್ವಾನ ನೀಡಿತ್ತು ಎನ್ನಲಾಗಿದೆ. ಆ ವೇಳೆ ವಿಜಯ್ ಏಕಾಂಗಿ ಹೋರಾಟ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದು ವರ್ಕ್‌ಔಟ್ ಆಗಿದೆ.
ಸ್ಟಾರ್ ಪವರ್
ವಿಜಯ್ ರಾಜಕೀಯಕ್ಕೆ ಎಂಟ್ರಿ ಸಾಕಷ್ಟು ಮಂದಿ ಟೀಕೆ ಮಾಡಿದ್ದರು. ವಿಜಯ್ ರಾಜಕೀಯ ಸಮಾವೇಶಕ್ಕೆ ಲಕ್ಷಾಂತರ ಮಂದಿ ಸೇರಿದ್ದನ್ನು ಟೀಕಿಸಿದ್ದರು. ಇವು ವೋಟ್‌ಗಳಾಗಿ ಬದಲಾಗುವುದಿಲ್ಲ ಎಂದಿದ್ದರು. ಸ್ಟಾರ್ ಇಮೇಜ್‌ಗೆ ಜನರು ಸೇರಿದ್ದಾರೆ. ಆದರೆ, ರಾಜಕೀಯವೇ ಬೇರೆ ಎಂದಿದ್ದರು. ಆದರೆ, ತಮಿಳು ನಾಡಿನ ಜನತೆ ಮತ್ತೆ ಸ್ಟಾರ್ ಪವರ್ ಅನ್ನು ಎತ್ತಿ ಹಿಡಿದಿದ್ದಾರೆ.
ಬದಲಾವಣೆಯ ಮಂತ್ರ
ವಿಜಯ್ ರಾಜಕೀಯ ಪಕ್ಷ ಕಟ್ಟಿದ ದಿನದಿಂದ ಆಡಳಿತ ಪಕ್ಷ ಡಿಎಂಕೆಯನ್ನು ಟೀಕೆ ಮಾಡುತ್ತಲೇ ಇದ್ದರು. ಅದರಲ್ಲೂ ಸಿಎಂ ಎಂಕೆ ಸ್ಟಾಲಿನ್ ಅವರ ಆಡಳಿತ ವೈಖರಿಯನ್ನು ಖಂಡಿಸಿದ್ದರು. ತಮಿಳುನಾಡಿನಲ್ಲಿ ಹೊಸ ಪಾರದರ್ಶಕ ಆಡಳಿತವನ್ನು ನೀಡುವ ಭರವಸೆಯನ್ನು ಜನರಲ್ಲಿ ಮೂಡಿಸಿದ್ದರು. ಅದು ಕೆಲಸ ಮಾಡಿದೆ.


Click it and Unblock the Notifications