"ಎ ಆರ್‌ ರೆಹಮಾನ್ ನನಗೆ ತಂದೆ ಸಮಾನ"; ವಿಚ್ಛೇದನದ ಬಳಿಕ ವಿಡಿಯೋ ಮಾಡಿದ ಆಪ್ತ ಸಹಾಯಕಿ ಮೋಹಿನಿ ಡೇ

ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್‌ ರೆಹಮಾನ್ ಹಾಗೂ ಪತ್ನಿ ಸೈರಾ ಬಾನು ವಿಚ್ಛೇದನಕ್ಕೆ ಮುಂದಾಗಿದ್ದ ಸುದ್ದಿ ಸಂಚಲ ಸೃಷ್ಟಿಸಿತ್ತು. 29 ವರ್ಷಗಳ ಕಾಲ ಒಟ್ಟಿಗೆ ಸಂಸಾರ ನಡೆಸಿದ್ದ ಈ ಜೋಡಿ ದಿಢೀರನೇ ವಿಚ್ಛೇದನ ಘೋಷಿಸಿದ್ದು ಸಿನಿಮಾರಂಗಕ್ಕೆ ಶಾಕ್ ಆಗಿತ್ತು. ಮಾಜಿ ಪತ್ನಿ ಸೈರಾ ಬಾನು ಬಳಿಕ ಎ ಆರ್‌ ರೆಹಮಾನ್ ಕೂಡ ಡಿವೋರ್ಸ್ ಸುದ್ದಿಯನ್ನು ಕನ್ಫರ್ಮ್ ಮಾಡಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದರು.

ಎಆರ್‌ ರೆಹಮಾನ್ ವಿಚ್ಛೇದನ ನೀಡಿದ ಕೆಲವೇ ಗಂಟೆಗಳಲ್ಲಿ ಎ ಆರ್ ರೆಹಮಾನ್ ಮ್ಯೂಸಿಕ್ ಗ್ರೂಪ್‌ನ ಸದಸ್ಯೆಯಾಗಿರುವ ಮೋಹಿನಿ ಡೇ ಕೂಡ ಡಿವೋರ್ಸ್ ಅನೌನ್ಸ್ ಮಾಡಿದ್ದರು. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಎ ಆರ್ ರೆಹಮಾನ್ ಹಾಗೂ ಮೋಹಿನಿ ಡೇ ವಿಚ್ಛೇದನಕ್ಕೆ ಸಂಬಂಧವನ್ನು ಕಲ್ಪಿಸುವುದಕ್ಕೆ ಶುರುವಾಗಿತ್ತು.

A R Rahman divorce link-up rumour with Mohini Dey shares video saying he is a father figure to her

ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿದ್ದಂತೆ ಖುದ್ದಾಗಿ ಸೈರಾ ಬಾನು "ತನ್ನ ಮಾಜಿ ಪತಿ ಒಳ್ಳೆಯವರು. ಅವರನ್ನು ತುಂಬಾ ಪ್ರೀತಿಸುತ್ತೇನೆ" ಹೇಳಿಕೆ ಕೊಟ್ಟಿದ್ದರು. ಈ ಬೆನ್ನಲ್ಲೇ ಮೋಹಿನಿ ಡೇ ವಿಡಿಯೋ ಒಂದನ್ನು ರಿಲೀಸ್ ಮಾಡಿ ಎ ಆರ್ ರೆಹಮಾನ್ ನನಗೆ ತಂದೆಯ ಸಮಾನ ಎಂದು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಸಂಗೀತ ನಿರ್ದೇಶಕನ ಬಗ್ಗೆ ಏನು ಹೇಳಿದ್ದಾರೆ? ತಿಳಿಯಲು ಮುಂದೆ ಓದಿ.

ಎ ಆರ್ ರೆಹಮಾನ್ 29 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದ ಸಂಗತಿಯನ್ನು ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಅಷ್ಟರಲ್ಲೇ ಮೋಹಿನಿ ಡೇ ಜೊತೆ ಲಿಂಕ್ ಮಾಡಿದ್ದು ಸಂಗೀತ ಪ್ರಿಯರ ಬೇಸರಕ್ಕೆ ಕಾರಣವಾಗಿತ್ತು. ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಎಆರ್ ರೆಹಮಾನ್ ಎಚ್ಚರಿಕೆಯನ್ನೂ ನೀಡಿದ್ದಾರೆ.

A R Rahman divorce link-up rumour with Mohini Dey shares video saying he is a father figure to her

ಇದೇ ಬೆನ್ನಲ್ಲೇ ಮೋಹಿನಿ ಡೇ ಕೂಡ ಒಂದು ವಿಡಿಯೋ ರಿಲೀಸ್ ಮಾಡಿದ್ದು ತಮ್ಮ ವಿಚ್ಛೇದನದ ಬಗ್ಗೆ, ಎ ಆರ್ ರೆಹಮಾನ್ ಜೊತೆಗಿನ ಸಂಬಂಧದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸದ್ಯ ಆ ವಿಡಿಯೋ ಈಗ ಟ್ರೆಂಡಿಂಗ್‌ನಲ್ಲಿದೆ. ಅಲ್ಲದೆ ಇಬ್ಬರ ವಿಚ್ಛೇದನವನ್ನು ಒಟ್ಟಿಗೆ ಸೇರಿಸಿ ಪ್ರಚಾರ ಮಾಡುತ್ತಿರುವುದು ತಪ್ಪು ಎಂದು ತಮ್ಮ ವಿಡಿಯೋದಲ್ಲಿ ಬೇಸರ ಹೊರ ಹಾಕಿದ್ದಾರೆ.

"ಸ್ನೇಹಿತರೇ ನಾನು ಈಗಷ್ಟೇ ನನ್ನ ಟೂರ್ ಅನ್ನು ಮುಗಿಸಿ ಬಂದು ನೆಮ್ಮದಿಯಾಗಿ ಉಸಿರಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ನನ್ನ ಜೀವನದಲ್ಲಿ ಹಲವು ಮಂದಿ ತಂದೆ ಸಮಾನರು ಇದ್ದಾರೆ. ಅವರು ನನ್ನ ಬೆಳವಣಿಗೆ ತುಂಬಾನೇ ಸಹಾಯ ಮಾಡಿದ್ದಾರೆ. ಎ ಆರ್ ರೆಹಮಾನ್ ಅಂತಹವರಲ್ಲಿ ಒಬ್ಬರು. ನಾನು ಅವರನ್ನು ತುಂಬಾನೇ ಗೌರವಿಸುತ್ತೇನೆ. ಅವರು ನನ್ನ ತಂದೆಗಿಂತ ಸ್ವಲ್ಪ ಚಿಕ್ಕವರು ಅಷ್ಟೇ. ಅವರ ಮಗಳು ನನ್ನ ವಯಸ್ಸಿನವರು. ನಾವಿಬ್ಬರೂ ಒಬ್ಬರನೊಬ್ಬರು ಗೌರವದಿಂದ ನೋಡುತ್ತೇವೆ." ಎಂದು ಮೋಹಿನಿ ಡೇ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.

ಹಾಗೇ " ನಾನು ಅವರ ಬ್ಯಾಂಡ್‌ನಲ್ಲಿ ಬೆಸಿಸ್ಟ್‌ ಆಗಿ ಎಂಟೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಐದು ವರ್ಷಗಳ ಹಿಂದೆ ನಾನು ಯುಸ್‌ಗೆ ಶಿಫ್ಟ್ ಆಗಿದ್ದೇನೆ. ನಾನು ಬೇರೆ ಪಾಪ್ ಆರ್ಟಿಸ್ಟ್‌ಗಳ ಜೊತೆ ಸೇರಿ ಕಾರ್ಯಕ್ರಮವನ್ನು ನೀಡುತ್ತಿದ್ದೇನೆ. ಹಾಗೇ ನನ್ನದೇ ಒಂದು ಬ್ಯಾಂಡ್ ಕೂಡ ಇದೆ. ಕೊನೆಯದಾಗಿ ನಮ್ಮ ಖಾಸಗಿ ವಿಷಯಕ್ಕೆ ಗೌರವ ಕೊಡಿ. ಇದು ವೈಯಕ್ತಿಕ ವಿಚಾರ ಹಾಗೂ ನೋವಿನ ಪ್ರತಿಕ್ರಿಯೆ" ಎಂದು ಹೇಳಿಕೊಂಡಿದ್ದಾರೆ.

More from Filmibeat

English summary
A R Rahman divorce link-up rumour with Mohini Dey shares video saying he is a father figure to her;
Read more about: ar rahman divorce filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X