25 ವರ್ಷಗಳ ಬಳಿಕ ಒಂದಾದ ಪ್ರಭುದೇವ ಎಆರ್‌ ರೆಹಮಾನ್: ಯಾವುದು ಆ ಸಿನಿಮಾ?

"ಮುಕ್ಕಾಲ.. ಮುಕ್ಕಾಬುಲ್ಲಾ.." ಆಲ್‌ ಟೈಮ್ ಫೇವರಿಟ್ ಸಾಂಗ್. 90 ದಶಕದಲ್ಲಿ ಈ ಹಾಡು ಸಂಚಲನ ಸೃಷ್ಟಿಸಿತ್ತು. ಪ್ರಭುದೇವ ಡ್ಯಾನ್ಸ್.. ಎ ಆರ್ ರೆಹಮಾನ್ ಟ್ಯೂನ್ ಸಿನಿಮಾ ಪ್ರಿಯರನ್ನು ಹೆಚ್ಚೆದ್ದು ಕುಣಿಯುವಂತೆ ಮಾಡಿತ್ತು. ಇಂತಹ ಸೂಪರ್‌ ಹಿಟ್ ಹಾಡು ಹಾಗೂ ಸಿನಿಮಾವನ್ನು ಕೊಟ್ಟ ಜೋಡಿ ಬರೋಬ್ಬರಿ 25 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದೆ.

ಪ್ರಭುದೇವ ಭಾರತದ ಸುಪ್ರಸಿದ್ಧ ಕೊರಿಯೋಗ್ರಾಫರ್. ಇತ್ತ ಎಆರ್ ರೆಹಮಾನ್ ಆಸ್ಕರ್ ಪ್ರಶಸ್ತಿ ಗೆದ್ದ ಜನಪ್ರಿಯ ಸಂಗೀತ ನಿರ್ದೇಶಕ. ಇವರಿಬ್ಬರೂ ಒಟ್ಟಿಗೆ ಸೇರಿದರೆ ಆ ಸಿನಿಮಾದ ಹಾಡುಗಳು ಹೇಗಿರುತ್ತೆ ಊಹಿಸಿಕೊಳ್ಳುವುದಕ್ಕೂ ಅಸಾಧ್ಯ. ಸೂಪರ್‌ ಹಿಟ್ ಸಿನಿಮಾಗಳನ್ನು ಕೊಟ್ಟಿರೋ ಈ ಜೋಡಿ ಈಗ ಮತ್ತೆ ಒಂದಾಗಿದೆ. ಹೀಗಾಗಿ ಪ್ರಭುದೇವ ಹಾಗೂ ರೆಹಮಾನ್ ಇಬ್ಬರೂ ತಮಿಳು ಚಿತ್ರರಂಗದಲ್ಲಿ ಮತ್ತೆ ಸೌಂಡ್ ಮಾಡುತ್ತಿದೆ.

A R Rehman and Prabhudeva coming together after 25 years for a film

ಸದ್ಯ ಪ್ರಭುದೇವ ತಮಿಳು ಚಿತ್ರರಂಗದ ದಳಪತಿ ವಿಜಯ್ 'GOAT'ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ವೇಳೆ ಪ್ರಭುದೇವ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. ಪ್ರಭುದೇವ ಕೊರಿಯೋಗ್ರಾಫಿ ಜೊತೆಗೆ ನಟನೆಯಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಕನ್ನಡದಲ್ಲಿ ನಟಿಸಿದ ಸಿನಿಮಾ ಕೂಡ ರಿಲೀಸ್ ಆಗಿತ್ತು.

ಶಿವಣ್ಣ ಜೊತೆ ಪ್ರಭುದೇವ ನಟಿಸಿ, ಯೋಗರಾಜ್‌ ನಿರ್ದೇಶಿಸಿದ ಸಿನಿಮಾ 'ಕರಟಕ ದಮನಕ' ಇತ್ತೀಚೆಗೆ ರಿಲೀಸ್ ಆಗಿತ್ತು. ಪ್ರಭುದೇವ ಕಾಮಿಡಿ ಟೈಮಿಂಗ್ ಬಗ್ಗೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಮೆಗಾ ಕಾಂಬಿನೇಷನ್‌ನಲ್ಲಿ ಸಿನಿಮಾದಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಒಂದಾಗಿದ್ದಾರೆ.

ತಮಿಳಿನ ನಿರ್ದೇಶಕ ಮನೋಜ್ ಎನ್.ಎಸ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ಈ ಜೋಡಿ ಒಂದಾಗಿದೆ. ಸದ್ಯ ಈ ಸಿನಿಮಾ ಬಗ್ಗೆ ತಮಿಳು ಸಿನಿ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಪ್ರಭುದೇವ ಬಹುಮುಖ ಪ್ರತಿಭೆ. ಕೊರಿಯೋಗ್ರಫಿ, ನಟನೆ ಹಾಗೂ ನಿರ್ದೇಶನದಲ್ಲಿ ಗೆದ್ದಿರೋ ಪ್ರಭುದೇವ ತಮಿಳು, ತೆಲುಗು, ಕನ್ನಡ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ಕೆಲಸ ಮಾಡಿ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.

ಡ್ಯಾನ್ಸ್ ಕಿಂಗ್ ಪ್ರಭುದೇವ ಹೊಸ ಸಿನಿಮಾದಲ್ಲಿ ಜನಪ್ರಿಯರ ಕಲಾವಿದರು ನಟಿಸುತ್ತಿದ್ದಾರೆ. ಮನೋಜ್ ಎನ್ ಎಸ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಯೋಗಿ ಬಾಬು, ಅಜು ವರ್ಗೀಸ್, ಅರ್ಜುನ್ ಅಶೋಕನ್ ಸೇರಿದಂತೆ ತಮಿಳಿನ ಕಲಾವಿದರು ನಟಿಸುತ್ತಿದ್ದಾರೆ. ಈ ತಂಡ ಹೊಸ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿಕೊಂಡಿದೆ.

ಪ್ರಭುದೇವ ಡ್ಯಾನ್ಸ್‌ಗೆ ಒಂದು ಫ್ಯಾನ್ ಬೇಸ್ ಇದ್ದರೆ, ನಟನೆಗೆ ಇನ್ನೊಂದು ಫ್ಯಾನ್ ಬೇಸ್ ಇದೆ. ಹೀಗಾಗಿಯೇ ಸದ್ಯ ದಳಪತಿ ವಿಜಯ್ ನಟಿಸುತ್ತಿರುವ 'ಗೋಟ್' ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಅನುಷ್ಕಾ ನಟನೆಯ ಮಲಯಾಳಂ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈಗ ಎ ಆರ್ ರೆಹಮಾನ್ ಸಂಗೀತ ನೀಡುತ್ತಿರುವ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಅಂದ್ಹಾಗೆ ಇದು ಪ್ರಭುದೇವ ಹಾಗೂ ಎ ಆರ್ ರೆಹಮಾನ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ 6ನೇ ಸಿನಿಮಾ.

More from Filmibeat

English summary
A R Rehman and Prabhudeva reunited after 25 years
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X