10 ತಿಂಗಳಿನಿಂದ ಬಂಗಲೆಯ ಇಎಂಐ ಕಟ್ಟಿಲ್ಲ; ತಮಿಳು ನಟಿ ರವಿ ಮೋಹನ್‌ಗೆ ಇನ್‌ಸ್ಟಾ ಸ್ಟೋರಿ ಹಾಕಿ ಜಡಿದ ಪತ್ನಿ
ತಮಿಳು ನಟ ರವಿ ಮೋಹನ್ (ಜಯಂ ರವಿ) ತಮ್ಮ ಪತ್ನಿ ಆರತಿಯಿಂದ ವಿಚ್ಛೇದನ ಪಡೆಯುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಈ ಘಟನೆಯ ಬಳಿಕ ಜಯಂ ರವಿ ಅವರ ಜೀವನದಲ್ಲಿ ಏನೇ ಘಟನೆಗಳು ನಡೆದರೂ ನೆಟ್ಟಿಗರು ತಕ್ಷಣ ಆರತಿ ರವಿ ಅವರ ಇನ್‌ಸ್ಟಾಗ್ರಾಮ್ ಖಾತೆಗೆ ಒಂದು ವಿಸಿಟ್ ಹಾಕುತ್ತಾರೆ. ಯಾಕಂದ್ರೆ, ಜಯಂ ರವಿ ಪತಿ ವಿರುದ್ಧ ನಿರಂತರ ಸಮರ ಸಾರುತ್ತಲೇ ಇದ್ದಾರೆ.
ಇತ್ತೀಚೆಗೆ, ತಮಿಳು ನಟ ರವಿ ಮೋಹನ್ ಅವರ ECR ಐಷಾರಾಮಿ ಬಂಗಲೆ ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆಂಬ ಸುದ್ದಿ ಹರಿದಾಡಿತ್ತು. ಇಂತಹದ್ದೊಂದು ಸುದ್ದಿ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಜಯಂ ರವಿ ಪತ್ನಿ ಆರತಿ ರವಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿಯನ್ನು ಪೋಸ್ಟ್ ಮಾಡಿದ್ದರು. ಈ ಸ್ಟೋರಿ ನೇರವಾಗಿ ಇರದೇ ಇದ್ದರೂ, ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆಂದು ಅವರ ಅಭಿಮಾನಿಗಳು ಮಾಡಿಕೊಂಡಿದ್ದರು.

ತಮಿಳು ಚಿತ್ರರಂಗದ ಜನಪ್ರಿಯ ನಟರಲ್ಲಿ ಜಯಂ ರವಿ ಅಥವಾ ರವಿ ಮೋಹನ್ ಕೂಡ ಒಬ್ಬರು. ಜಯಂ ರವಿ ಎಂದೇ ಜನಪ್ರಿಯರಾಗಿದ್ದ ಇವರು, ಕಳೆದ ವರ್ಷ ಪತ್ನಿ ಆರತಿಯಿಂದ ದೂರವಾದ ಬಳಿಕ ತಮ್ಮ ಹೆಸರನ್ನು ರವಿ ಮೋಹನ್ ಎಂದು ಬದಲಿಸಿಕೊಂಡಿದ್ದಾರೆ. ಜಯಂ ರವಿ ವಿಚ್ಚೇದನ ನೀಡುವುದಕ್ಕೆ ಮುಂದಾದ ಸುದ್ದಿ ಹೊರಬಿದ್ದಾಗ, ಕಾಲಿವುಡ್ ನಟಿಯರಾದ ಖುಷ್ಬೂ ಮತ್ತು ತ್ರಿಶಾ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಆರತಿ ರವಿ ಅವರ ಬೆಂಬಲಕ್ಕೆ ಬಂದಿದ್ದರು.
ಜಯಂ ರವಿ ಕೌಟುಂಬಿಕ ಸಮಸ್ಯೆ ಬೀದಿಗೆ ಬಿದ್ದ ದಿನದಿಂದ ಸೋಶಿಯಲ್ ಮೀಡಿಯಾಗಳಲ್ಲಿ ಅವರ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತೆ. ಈ ಸುದ್ದಿ ಹಬ್ಬುವುದಕ್ಕೂ ಮುನ್ನವೇ ಆರತಿ ರವಿ ತಮ್ಮ ಪತಿಯ ಅಫೇರ್ ಬಗ್ಗೆ ಬಹಿರಂಗ ಪಡಿಸಿದ್ದರು. ಬಳಿಕ ಈ ವಿಷಯವನ್ನು ಪ್ಯಾಚ್ ಮಾಡುವುದಕ್ಕೆ ನಟ ಪ್ರಯತ್ನ ಪಟ್ಟರೂ ಅದೂ ಸಾಧ್ಯವಾಗಿರಲಿಲ್ಲ. ವಿಷಯ ಹೊರಬಿದ್ದು ಅದು ವಿವಾದಕ್ಕೆ ಸಿಲುಕಿತ್ತು.
ಆದರೂ, ಜಯಂ ರವಿ ತಮಿಳು ನಿರ್ಮಾಪಕ ಇಶಾರಿ ಗಣೇಶ್ ಅವರ ಪುತ್ರಿಯ ಮದುವೆಯಲ್ಲಿ ರವಿ ಮೋಹನ್ ಸ್ನೇಹಿತೆ ಕನಿಶಾ ಜೊತೆ ಕಾಣಿಸಿಕೊಂಡಿದ್ದರು. ಜಯಂ ರವಿಯ ಈ ನಟಿ ದೊಡ್ಡ ವಿವಾದವೇ ಸೃಷ್ಟಿಸಿತ್ತು. ಅವರ ಅಭಿಮಾನಿಗಳೇ ಆರತಿ ರವಿ ಬೆಂಬಲಕ್ಕೆ ನಿಂತಿದ್ದರು. ಆ ವೇಳೆ ಆರತಿ ರವಿ ಕೂಡ ನೇರವಾಗಿ ರವಿ ಮೋಹನ್ ಅವರ ಈ ನಡೆಯನ್ನು ಟೀಕಿಸಿದ್ದರು. ಅದಕ್ಕೆ ಪ್ರತಿಯಾಗಿ, ರವಿ ಮೋಹನ್ ಕೂಡಾ ಆರತಿಯ ಹೆಸರನ್ನು ಉಲ್ಲೇಖ ಮಾಡದೆ ತಿರುಗೇಟು ನೀಡಿದ್ದರು. ಈ ವಾಗ್ವಾದ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಹೀಗೆ ನಟನ ವಿರುದ್ಧವೇ ಟೀಕೆಗಳನ್ನು ಮಾಡಿದ್ದರು.

ಈಗ ರವಿ ಮೋಹನ್ ಅವರ ಬಗ್ಗೆ ಮತ್ತೊಂದು ಸುದ್ದಿ ವೇಗವಾಗಿ ಹಬ್ಬಿದೆ. ಚೆನ್ನೈ ಇಸಿಆರ್ ರಸ್ತೆಯಲ್ಲಿ ಅವರ ಐಷಾರಾಮಿ ಬಂಗಲೆ ಇದೆ. ಅದು ಬ್ಯಾಂಕಿನಲ್ಲಿ ಸಾಲ ಪಡೆದು ಖರೀದಿಸಲಾಗಿದೆ ಎನ್ನಲಾಗಿದೆ. ಕಳೆದ 10 ತಿಂಗಳಿಂದ ರವಿ ಮೋಹನ್ ಇಎಂಐ ಅನ್ನು ಪಾವತಿ ಮಾಡಿಲ್ಲ. ಈ ಕಾರಣಕ್ಕೆ ಬ್ಯಾಂಕ್ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ನೋಟಿಸ್ ಕಳುಹಿಸಿದೆ ಎನ್ನಲಾಗಿದೆ. ಆದರೆ, ರವಿ ಮೋಹನ್ ಆ ನೋಟಿಸ್ ಅನ್ನು ಸ್ವೀಕರಿಸಿಲ್ಲ. ಬದಲಾಗಿದೆ ನೇರವಾಗಿ ಬ್ಯಾಂಕಿಗೆ ಬಂದು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆಂದು ವರದಿಯಾಗಿದೆ.
ವಿಷಯ ಹೀಗಿರುವಾಗ ಆರತಿ ರವಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿರುವ ಸ್ಟೋರಿ ಹಲವರ ಗಮನ ಸೆಳೆದಿದೆ. ಅವರು ತಮ್ಮ ಸ್ಟೋರಿಯಲ್ಲಿ, " ನೀನು ಬೇರೆಯವರಿಗೆ ಮೋಸ ಮಾಡಬಹುದು. ನಿನಗೆ ನೀನು ಮೋಸ ಮಾಡಿಕೊಳ್ಳಬಹುದು. ಆದರೆ, ದೇವರಿಗೆ ಮೋಸ ಮಾಡುವುದಕ್ಕೆ ಆಗುವುದಿಲ್ಲ." ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದು ಕೊಂಡಿದ್ದಾರೆ. ಈ ಇನ್‌ಸ್ಟಾಗ್ರಾ ಸ್ಟೋರಿಯನ್ನು ನೋಡಿದ ಬಳಿಕ ಬಹಳಷ್ಟು ಮಂದಿ ಆರತಿ ರವಿ ತಮ್ಮ ಪತಿ ರವಿ ಮೋಹನ್ ಅವರಿಗೆ ಟಾಂಗ್ ಕೊಟ್ಟಿದ್ದಾರೆಂದು ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











