ಸುದೀಪ್ ಮುಂದಿನ ಚಿತ್ರಕ್ಕೆ ತಮಿಳು ದಿಗ್ಗಜನ ನಿರ್ದೇಶನ

ಕಿಚ್ಚ ಸುದೀಪ್ ಅವರ ಯಶಸ್ಸಿನ ನಾಗಲೋಟ ಮುಂದುವರಿದಿದೆ. ಈಗ, ಬಚ್ಚನ್ ಚಿತ್ರದ ಯಶಸ್ಸು, ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗೆ ಸಿಕ್ಕ ಅಭೂತವೂರ್ವ ಪ್ರತಿಕ್ರಿಯೆಯಿಂದ ಸುದೀಪ್ ಯಶಸ್ಸಿನ ಇನ್ನೊಂದು ಮೆಟ್ಟಲಿಗೇರಿದ್ದಾರೆ.

ಇತ್ತ ಕನ್ನಡದ ದೊಡ್ಡ ದೊಡ್ಡ ನಿರ್ದೇಶಕರು ಸುದೀಪ್ call sheet ಕಾಯುತ್ತಿದ್ದರೆ ಅತ್ತ ಇತರ ಭಾಷೆಯ ನಿರ್ದೇಶಕರೂ ತಮ್ಮ ಮುಂದಿನ ಚಿತ್ರಕ್ಕೆ ಸುದೀಪ್ ನಾಯಕರಾಗ ಬೇಕೆಂದಿದ್ದಾರೆ.

ಖ್ಯಾತ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಮತ್ತು ತೆಲುಗಿನ ಎಸ್ ಎಸ್ ರಾಜಮೌಳಿ ಜೊತೆ ಈಗಾಗಲೇ ಕೆಲಸ ಮಾಡಿರುವ ಸುದೀಪ್, ಈಗ ತಮಿಳಿನ ಹೆಸರಾಂತ ನಿರ್ದೇಶಕರ ಜೊತೆ ಸಿನಿಮಾ ಮಾಡಲಿದ್ದಾರೆ.

ಕನ್ನಡ ಮತ್ತು ತಮಿಳಿನಲ್ಲಿ ಮೂಡಿ ಬರಲಿರುವ ಈ ಚಿತ್ರವನ್ನು ತಮಿಳಿನ ಖ್ಯಾತ ನಿರ್ದೇಶಕ ಕೆ ಎಸ್ ರವಿಕುಮಾರ್ ನಿರ್ದೇಶಿಸಲಿದ್ದಾರೆಂದು ಬೆಂಗಳೂರು ಮಿರರ್ ಪತ್ರಿಕೆ ವರದಿ ಮಾಡಿದೆ.

ಈ ಪ್ರಾಜೆಕ್ಟ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸ್ಲೈಡಿನಲ್ಲಿ..

ಸೂರಪ್ಪ ಬಾಬು ನಿರ್ಮಾಣ

ಸೂರಪ್ಪ ಬಾಬು ನಿರ್ಮಾಣ

ಈ ದ್ವಿಭಾಷಾ ಚಿತ್ರವನ್ನು ಸೂರಪ್ಪ ಬಾಬು ನಿರ್ಮಿಸಲಿದ್ದಾರೆ. ನಿರ್ಮಾಪಕರು ಈ ವಿಷಯವನ್ನು ಸ್ಪಷ್ಟ ಪಡಿಸಿದ್ದು, ರವಿಕುಮಾರ್ ಜೊತೆ ಮೂರು ಸುತ್ತಿನ ಮಾತುಕತೆ ನಡೆದಿದೆ, ಮುಂದಿನ ದಿನದಲ್ಲಿ ಅಧಿಕೃತ ಘೋಷಣೆ ಮಾಡಲಿದ್ದೇನೆ ಎಂದಿದ್ದಾರೆ.

ರಿಮೇಕ್ ಚಿತ್ರವಲ್ಲ

ರಿಮೇಕ್ ಚಿತ್ರವಲ್ಲ

ಇದು ಹೊಸ ಕಥೆ ಮತ್ತು ರಿಮೇಕ್ ಚಿತ್ರವಲ್ಲ. ಇದು ಕೋಟಿಗೊಬ್ಬ ಚಿತ್ರದ ಮುಂದುವರಿದ ಭಾಗವಲ್ಲ ಎಂದಿದ್ದಾರೆ. ದಿವಂಗತ ಡಾ. ವಿಷ್ಣುವರ್ಧನ್ ಅಭಿನಯದ ಕೋಟಿಗೊಬ್ಬ ಚಿತ್ರದ ಮುಂದುವರಿದ ಭಾಗ ತೆಗೆಯುತ್ತೇನೆ ಎಂದು ಸೂರಪ್ಪ ಬಾಬು ಈ ಹಿಂದೆ ಹೇಳಿಕೆ ನೀಡಿದ್ದರು.

ರವಿಕುಮಾರ್ - ರಜನೀಕಾಂತ್

ರವಿಕುಮಾರ್ - ರಜನೀಕಾಂತ್

ನಿರ್ದೇಶಕ ರವಿಕುಮಾರ್ ಸೂಪರ್ ಸ್ಟಾರ್ ರಜನೀಕಾಂತ್ ಪ್ರಮುಖ ಭೂಮಿಕೆಯಲ್ಲಿರುವ 'ರಾಣಾ' ಚಿತ್ರ ನಿರ್ಮಿಸುತ್ತೇನೆ ಎಂದು ಹೇಳಿದ್ದರು. ಚಿತ್ರಕ್ಕೆ 2011ರಲ್ಲಿ ಮಹೂರ್ತ ಕೂಡಾ ನಡೆದಿತ್ತು. ಆದರೆ ರಜನೀಕಾಂತ್ ಆರೋಗ್ಯ ಸಮಸ್ಯೆಯಿಂದ ಚಿತ್ರ ಸೆಟ್ಟೇರಲಿಲ್ಲ.

 ಕೊಚಾಡಿಯುನ್

ಕೊಚಾಡಿಯುನ್

ರಜನೀಕಾಂತ್ ಆರೋಗ್ಯ ಸಮಸ್ಯೆಯಿಂದ ಹೊರಬಂದ ನಂತರ ರಾಣಾ ಚಿತ್ರವನ್ನು ಕೈಗೆತ್ತಿ ಕೊಳ್ಳದೇ ಕೊಚಾಡಿಯನ್ ಚಿತ್ರದಲ್ಲಿ ಬ್ಯೂಸಿಯಾಗಿದ್ದರಿಂದ ರಾಣಾ ಚಿತ್ರದ ಶೂಟಿಂಗ್ 2014ಕ್ಕೆ ಮುಂದೂಡಲ್ಪಟ್ಟಿತು.

ರವಿಕುಮಾರ್ ನಿರ್ದೇಶಕ

ರವಿಕುಮಾರ್ ನಿರ್ದೇಶಕ

ರವಿಕುಮಾರ್ ತಮಿಳಿನ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿ ಮಂಚೂಣಿಯಲ್ಲಿರುವವರು. ರಜನೀಕಾಂತ್, ಕಮಲ್ ಹಾಸನ್, ಅಜಿತ್, ಶರತ್ ಕುಮಾರ್ ಮುಂತಾದ ನಾಯಕರ ಚಿತ್ರವನ್ನು ನಿರ್ದೇಶಿಸಿದವರು. ಪಡಿಯಪ್ಪ, ಶರವಣ, ವಾಯಿಲಾರು, ದಶಾವತಾರಂ, ಮುತ್ತು ಮುಂತಾದ ಹಿಟ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

More from Filmibeat

English summary
Sudeep is all set to work with a top director from Kollywood. According to the Bangalore Mirror, Kichcha Sudeep will be joining hands with him for a bilingual movie, which will be made in Tamil and Kannada and directed by K S Ravi Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X