ಸ್ಟೈಲಿಶ್ ಲುಕ್ ಕೊಟ್ಟ ಆಕ್ಷನ್ ಕಿಂಗ್; ಅಜಿತ್ 'ವಿಡಮುಯಾರ್ಚಿ'ಯಲ್ಲಿ ಅರ್ಜುನ್ ಸರ್ಜಾ ಕಿಂಗ್!

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಇತ್ತೀಚೆಗೆ ಖಳನಾಯಕನಾಗಿ ಮಿಂಚುತ್ತಿದ್ದಾರೆ. ತಮಿಳಿನ ಸೂಪರ್‌ಸ್ಟಾರ್‌ಗಳ ಎದುರು ಆಕ್ಷನ್ ಕಿಂಗ್ ಮತ್ತೆ ಮಾಸ್ ಲುಕ್ ಕೊಡುತ್ತಿದ್ದಾರೆ. ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ನಟಿಸುತ್ತಿರುವ 'ವಿಡಮುಯಾರ್ಚಿ' ಸಿನಿಮಾದಲ್ಲಿ ಅರ್ಜುನ್ ಸರ್ಜಾ ಲುಕ್ ರಿವೀಲ್ ಮಾಡಲಾಗಿದೆ. ಆಕ್ಷನ್ ಕಿಂಗ್ ಫಸ್ಟ್ ಲುಕ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಜಿತ್ ಕುಮಾರ್ ನಟಿಸುತ್ತಿರುವ 'ವಿಡಮುಯಾರ್ಚಿ' ಸಿನಿಮಾ ತಮಿಳಿನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಈ ಸಿನಿಮಾಗಾಗಿ ಅಜಿತ್ ಮಾಡಿರುವ ಡೇಂಜರಸ್ ಸ್ಟಂಟ್ಸ್‌ನ ಮೇಕಿಂಗ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Action king Arjun Sarja in tamil actor Ajith Kumar starrer Vidaamuyarchi movie

ಈ ಹಿಂದೆ ಇಳಯ ದಳಪತಿ ವಿಜಯ್ ನಟಿಸಿದ 'ಲಿಯೋ' ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಅರ್ಜುನ್ ಸರ್ಜಾ ಕಾಣಿಸಿಕೊಂಡಿದ್ದರು. ವಿಜಯ್ ಹಾಗೂ ಅರ್ಜುನ್ ಸರ್ಜಾ ಫೈಟ್ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ವಿಜಯ್ ಬಳಿಕ ಈಗ ಅಜಿತ್ ಕುಮಾರ್ ಎದುರು ಅರ್ಜುನ್ ಸರ್ಜಾ ಸೆಣೆಸಾಡಲಿದ್ದಾರೆ. ಇಬ್ಬರು ಸ್ಟಾರ್ ನಟರ ಮುಖಾ ಮುಖಿ 'ವಿಡಮುಯಾರ್ಚಿ' ಸಿನಿಮಾದಲ್ಲಿ ಹೇಗಿರುತ್ತೆ ಅನ್ನೋದು ಕುತೂಹಲ ಈಗಾಗಲೇ ಇಬ್ಬರ ಅಭಿಮಾನಿಗಳಲ್ಲಿ ಮೂಡಿದೆ.

ಅರ್ಜುನ್ ಸರ್ಜಾ ಆಕ್ಷನ್ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರ ಆದವರು. ಆರಂಭದ ದಿನಗಳಲ್ಲಿ ಅವರ ಆಕ್ಷನ್‌ಗೆ ದಕ್ಷಿಣ ಭಾರತದ ಸಿನಿಪ್ರಿಯರು ಫಿದಾ ಆಗಿದ್ದರು. ವಯಸ್ಸು 61 ಆದರೂ ಅರ್ಜುನ್ ಸರ್ಜಾ ಫಿಟ್ ಅಂಡ್ ಫೈನ್ ಆಗಿದ್ದಾರೆ. ಆಕ್ಷನ್ ಸೀನ್‌ಗಳನ್ನು ಅಷ್ಟೇ ಸಲೀಸಾಗಿ ಮಾಡುತ್ತಾರೆ. ಇದೇ ಆಗಸ್ಟ್ 15ರಂದು 62ನೇ ಬರ್ತ್‌ಡೇ ಆಚರಿಸಿಕೊಳ್ಳುವುದಕ್ಕೂ ಮುನ್ನವೇ 'ವಿಡಮುಯಾರ್ಚಿ' ತಂಡದಿಂದ ಅವರ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಸಿಕ್ಕಿದೆ.

Action king Arjun Sarja in tamil actor Ajith Kumar starrer Vidaamuyarchi movie

ಆಕ್ಷನ್ ಕಿಂಗ್ ರಸ್ತೆಯ ಮೇಲೆ ಸ್ಟೈಲಿಶ್ ಆಗಿ ನಿಂತಿರುವ ಫಸ್ಟ್ ಲುಕ್ ಸದ್ಯ ಹಲ್‌ಚಲ್ ಎಬ್ಬಿಸುತ್ತಿದೆ. ಅಂದ್ಹಾಗೆ, ಅಜಿತ್ ಕುಮಾರ್ ಹಾಗೂ ಅರ್ಜುನ್ ಸರ್ಜಾ ಇದೇ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿಲ್ಲ. ಈ ಹಿಂದೆ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಜಿತ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾ 'ಮಂಗತ' ಸಿನಿಮಾದಲ್ಲಿ ಅಜಿತ್ ಕುಮಾರ್, ತ್ರಿಶಾ ಮತ್ತು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಒಟ್ಟಿಗೆ ನಟಿಸಿದ್ದರು. ಈಗ ಮತ್ತೆ ಅದೇ ಕಾಂಬಿನೇಷನ್ 'ವಿಡಮುಯಾರ್ಚಿ' ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದೆ.

ಈ ಸಿನಿಮಾದಲ್ಲಿ ಅಜಿತ್, ತ್ರಿಶಾ, ಅರ್ಜುನ್ ಸರ್ಜಾ ಜೊತೆಗೆ ಆರವ್, ರೆಜಿನಾ ಕಸ್ಸಂದ್ರ, ನಿಖಿಲ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಸಿನಿಮಾವನ್ನು ಮಾಗಿಲ್ ತಿರುಮೇನಿ ನಿರ್ದೇಶನ ಮಾಡುತ್ತಿದ್ದಾರೆ. ಹಾಗೇ ಕಾಲಿವುಡ್ ಮ್ಯೂಸಿಕಲ್ ರಾಕ್ ಸ್ಟಾರ್ ಅನಿರುದ್ಧ್ ಸಖತ್ ಟ್ಯೂನ್‌ಗಳನ್ನು ಕಂಪೋಸ್ ಮಾಡುತ್ತಿದ್ದಾರೆ.

'ವಿಡಮುಯಾರ್ಚಿ' ಸಿನಿಮಾದ ಆಕ್ಷನ್ ಸೀನ್‌ಗಳ ಮೇಕಿಂಗ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾಗೆ ಸುಂದರ್ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ. ಅನು ವರ್ಧನ್ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಜಿತ್ ಕುಮಾರ್ ನಟನೆಯ 'ವಿಡಮುಯಾರ್ಚಿ' ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಈಗಾಗಲೇ ಸನ್ ಟಿವಿ ಪಡೆದುಕೊಂಡಿದೆ. ಸಿನಿಮಾದ OTT ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಈ ಸಿನಿಮಾ ಅಕ್ಟೋಬರ್ 31 ರಂದು ರಿಲೀಸ್ ಮಾಡುವ ಚಿಂತನೆ ನಡೆಸಲಾಗುತ್ತಿದೆ.

More from Filmibeat

English summary
Arjun Sarja in tamil actor Ajith Kumar movie Vidaamuyarchi
Read more about: arjun sarja ajith filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X