ನಾಲ್ಕನೇ ಬಾರಿ ಭೀಕರ ಅಪಘಾತಕ್ಕೀಡಾದ ಅಜಿತ್ ಕಾರು, ಅಭಿಮಾನಿಗಳಲ್ಲಿ ಆತಂಕ

ತಮಿಳು ಚಿತ್ರರಂಗದ ಅಭಿಮಾನಿಗಳಿಂದ ತಲಾ ಮತ್ತು ತಲೈ ಎಂದು ಕರೆಸಿಕೊಳ್ಳುವವರು ಅಜಿತ್. ಒಬ್ಬ ಸೂಪರ್ ಸ್ಟಾರ್ ಹೀಗೆ ಇರಬೇಕು, ಹೀಗೆ ನಡೆದುಕೊಳ್ಳಬೇಕು, ಅಭಿಮಾನಿಗಳ ಜೊತೆ ಹೀಗೆ ಬೆರೆಯಬೇಕು ಎಂಬ ಅಲಿಖಿತ ನಿಯಮಗಳನ್ನ ಗಾಳಿಗೆ ತೂರಿರುವ ಅಜಿತ್ ಯಾರೊಂದಿಗೂ ಬೆರೆಯದ, ಯಾವ ಅಭಿಮಾನಿ ಸಂಘಗಳೂ ಸೃಷ್ಟಿಯಾಗದಂತೆ ನೋಡಿಕೊಂಡಿರುವ ಭಾರತೀಯ ಚಿತ್ರರಂಗದ ಅತ್ಯಂತ ವಿಕ್ಷಿಪ್ತ ಹಾಗೂ ವಿಚಿತ್ರ ನಟ.

ತಾನು ಒಪ್ಪಿಕೊಂಡ ಸಿನಿಮಾದ ಕೆಲಸಗಳೆಲ್ಲ ಮುಗಿದ ಮೇಲೆ, ಆ ಕಡೆ ತಿರುಗಿಯೂ ನೋಡದ ಅಜಿತ್ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕಾರ್ ರೇಸಿಂಗ್ ನಲ್ಲಿ ಪಾಲ್ಗೊಳ್ಳುವುದು, ಶೂಟಿಂಗ್ ಚಾಂಪಿಯನ್ ಶಿಪ್ಪಿನಲ್ಲಿ ಭಾಗವಹಿಸುವುದು ಹೀಗೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಬದುಕುವ ಶೈಲಿಯನ್ನ ರೂಡಿಸಿಕೊಂಡಿದ್ದಾರೆ.

Actor Ajith Kumar involved in another car crash in Belgium escapes with minor injuries

ಇಂಥಾ ಅಜಿತ್ ಕುಮಾರ್ ಸದ್ಯ ಚಿತ್ರರಂಗದಿಂದ ದೂರವಾಗಿ ತಮ್ಮ ಸಂಪೂರ್ಣ ಗಮನವನ್ನು ತಮ್ಮ ನೆಚ್ಚಿನ ಕಾರ್ ರೇಸ್‌ ಮೇಲೆ ಹರಿಸಿದ್ದಾರೆ. ಸ್ಪೇನ್, ದುಬೈ, ಇಟಲಿಯ ನಂತರ ಈಗ ಬೆಲ್ಜಿಯಂನಲ್ಲಿ ನಡೆಯುತ್ತಿರುವ ಕಾರ್‌ ರೇಸ್‌ನಲ್ಲಿ ಭಾಗವಹಿಸಿದ್ದಾರೆ.

ಆದರೆ ಅಜಿತ್ ಅವರ ಕಾರು ಓಡಿಸುವ ಈ ಹುಚ್ಚು ಸಾಹಸ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದೆ. ಆತಂಕಕ್ಕೂ ಕೂಡ ಕಾರಣವಾಗಿದೆ. ಯಾಕೆಂದರೆ ಒಂದಲ್ಲ, ಎರಡಲ್ಲ, ಮೂರು ಬಾರಿ ಅಜಿತ್ ಕಾರು ಈಗಾಗಲೇ ಅಪಘಾತಕ್ಕೀಡಾಗಿದೆ. ಪ್ರತಿ ಬಾರಿಯೂ ಕೂಡ ಅಜಿತ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಹೀಗಿರುವಾಗ ಇದೀಗ ಅಜಿತ್ ಕಾರು ನಾಲ್ಕನೇ ಬಾರಿ ಅಪಘಾತಕ್ಕೀಡಾಗಿದೆ.

ಹೌದು,ಬೆಲ್ಜಿಯಂನಲ್ಲಿ ಕಾರ್ ರೇಸ್‌ನಲ್ಲಿ ಭಾಗವಹಿಸುವ ಮುನ್ನ,ಅಜಿತ್ ಪ್ರ್ಯಾಕ್ಟಿಸ್ ಮಾಡುತ್ತಿದ್ದರು. ಈ ಸಮಯದಲ್ಲಿ ಮಳೆ ಬಂದ ಕಾರಣಕ್ಕೆ ಟ್ರ್ಯಾಕ್ ಒದ್ದೆಯಾಗಿತ್ತು. ಹೀಗಾಗಿ ಅತೀ ವೇಗದಲ್ಲಿ ಬರುತ್ತಿದ್ದ ಅಜಿತ್ ಅವರ ಕಾರು ನಿಯಂತ್ರಣ ಕಳೆದುಕೊಂಡಿದೆ. ತಡೆಗೋಡೆಗೆ ಗುದ್ದಿದೆ.

ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಅಜಿತ್‌ಗೆ ಚಿಕ್ಕ-ಪುಟ್ಟ ಗಾಯಗಳಾಗಿವೆ. ಇದೇ ಸಮಯದಲ್ಲಿ ನೋವಿಂದ ಒದ್ದಾಡಿರುವ ಅಜಿತ್ ಆ ನೋವಲ್ಲಿಯೇ ಓಡಾಡಿದ್ದಾರೆ. ತಮ್ಮ ತಂಡಕ್ಕೆ ತಮಗೇನು ಆಗಿಲ್ಲ ಎನುತ್ತಾ ಮುಂದೆ ಸಾಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ಆದ ವಿಡಿಯೋ ಅಭಿಮಾನಿಗಳ ಆತಂಕವನ್ನು ಹೆಚ್ಚಿಸಿದೆ. ಅನೇಕರು ಕಾರ್ ರೇಸ್ ಸಹವಾಸ ಬೇಡ ನಿಮ್ಮ ಪಾಡಿಗೆ ನೀವು ನಿಮಗೆ ಇಷ್ಟ ಬಂದಾಗ ಚಿತ್ರಗಳನ್ನು ಮಾಡಿಕೊಂಡು ನಮ್ಮೆಲ್ಲರನ್ನು ಮನರಂಜಿಸಿ ಅಷ್ಟೇ ಸಾಕು ಎನ್ನುತ್ತಿದ್ದಾರೆ. ಅಂದ್ಹಾಗೇ ಅಜಿತ್ ಕಾರು ಅಪಘಾತಕ್ಕೀಡಾಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಕೂಡ ಅಜಿತ್ ಕಾರು ಅಪಘಾತಕ್ಕೀಡಾಗಿತ್ತು.

ದುಬೈನಲ್ಲಿ 24 ಗಂಟೆಗಳ ಕಾಲ ನಡೆಯಲಿರುವ 24H 2025 ಕಾರ್‌ ರೇಸ್‌ನಲ್ಲಿ ಭಾಗವಹಿಸಲು ರೇಸ್ ಟ್ರ್ಯಾಕ್‌ನಲ್ಲಿ ಅಭ್ಯಾಸವನ್ನು ಮಾಡುತ್ತಿದ್ದ ಸಮಯದಲ್ಲಿ ನಿಯಂತ್ರಣ ತಪ್ಪಿ ಅಜಿತ್ ಕುಮಾರ್ ಅವರ ಕಾರು ರಣಭೀಕರ ಅಪಘಾತಕ್ಕೀಡಾಗಿತ್ತು. ಈ ಘಟನೆ ನಡೆದಾಗ ಅವರು 180 ಕಿ.ಮೀ ವೇಗದಲ್ಲಿ ಅಜಿತ್ ಕಾರು ಚಾಲನೆ ಮಾಡುತ್ತಿದ್ದರು.

ಆ ನಂತರ ಫೋರ್ಚುಗಲ್‌ನಲ್ಲಿ ಕಾರ್ ರೇಸ್‌ನಲ್ಲಿ ಭಾಗವಹಿಸಿದಾಗ ಕೂಡ ಅಜಿತ್ ಕಾರಿನ ಬ್ರೇಕ್ ಫೇಲ್ ಆಗಿ ಆಕ್ಸಿಡೆಂಟ್‌ ಆಗಿತ್ತು. ಆ ನಂತರ ಮಾತನಾಡಿದ್ದ ಅಜಿತ್ ಚಿಕ್ಕ ಆಕ್ಸಿಡೆಂಟ್ ನಮಗೇನು ಆಗಿಲ್ಲ ಕಾರ್ ರೇಸ್‌ನಲ್ಲಿ ಗೆಲ್ಲುತ್ತೇವೆ, ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದರು.

ಸ್ಪೇನ್‌ನಲ್ಲಿ ಕೂಡ ಸ್ಪಿಂಟ್ ಚಾಲೆಂಜ್‌ನಲ್ಲಿ ಅಜಿತ್ ಭಾಗವಹಿಸಿದ್ದ ಸಮಯದಲ್ಲಿ ಅಜಿತ್ ಅವರ ಕಾರು ರಣಭೀಕರ ಅಪಘಾತಕ್ಕೀಡಾಗಿತ್ತು. ಎರಡು ಮೂರು ಬಾರಿ ಪಲ್ಟಿ ಹೊಡೆದಿತ್ತು. ಹೀಗೆ ಮೂರು ಬಾರಿ ಅಪಘಾತಕ್ಕೀಡಾಗಿದ್ದ ಅಜಿತ್ ಕಾರು ಈಗ ಇನ್ನೊಮ್ಮೆ ಅಪಘಾತಕ್ಕೀಡಾದ್ದಾರೆ. ಅಭಿಮಾನಿಗಳ ಆತಂಕವನ್ನು ಹೆಚ್ಚಿಸಿದ್ದಾರೆ.

More from Filmibeat

Read more about: ajith accident kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X