ನಟ ಅಜಿತ್ ವಿದೇಶದಲ್ಲಿ ಇರುವಾಗಲೇ ಚೆನ್ನೈನಲ್ಲಿ ತಾಯಿ ನಿಧನ; ಅಭಿಮಾನಿಗಳ ಸಾಂತ್ವನ

ತಮಿಳು ನಟ ಅಜಿತ್ ಕುಮಾರ್ ತಾಯಿ ಮೋಹಿನಿ ಮಣಿ ವಿಧಿವಶರಾಗಿದ್ದಾರೆ. ಕೆಲಸದ ನಿಮಿತ್ತ ನಟ ವಿದೇಶದಲ್ಲಿದ್ದು ವಿಷಯ ತಿಳಿದ ಕೂಡಲೇ ಚೆನ್ನೈಗೆ ಹೊರಟು ಬಂದಿದ್ದಾರೆ. ವಯೋಸಹಜ ಕಾಯಿಲೆಯಿಂದ ಮೋಹಿನಿ ಮಣಿ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಮೂರು ವರ್ಷಗಳ ಹಿಂದೆ ನಟ ಅಜಿತ್ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. 2003ರಲ್ಲಿ ಪಿ. ಸುಬ್ರಮಣ್ಯಂ ಅಗಲಿದ್ದರು. ಆ ನೋವಿನಿಂದ ಕುಟುಂಬಸ್ಥರು ಚೇತರಿಸಿಕೊಂಡಿದ್ದರು. ಅಷ್ಟರಲ್ಲೇ ಈಗ ತಾಯಿ ಮೋಹಿನಿ ಮಣಿ ನಿಧನ ಆಘಾತ ತಂದಿದೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿ ನೆಚ್ಚಿನ ನಟನಿಗೆ ಸಾಂತ್ವನ ಹೇಳುತ್ತಿದ್ದಾರೆ.

Actor Ajith Kumar s Mother Mohini Mani Passes Away in Chennai After Age-Related Illness

ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಂಡರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಅಜಿತ್ ತಾಯಿ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ತಮಿಳುನಾಡು ಮಾಜಿ ಸಿಎಂ ಎಂ. ಕೆ ಸ್ಟಾಲಿನ್ ಟ್ವೀಟ್ ಮಾಡಿ "ನನ್ನ ಪ್ರೀತಿಯ ಸಹೋದರ ಅಜಿತ್‌ಕುಮಾರ್ ಅವರ ತಾಯಿ ಶ್ರೀಮತಿ ಮೋಹಿನಿ ಮಣಿ ಅವರ ನಿಧನದ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಯಿತು. ಅಜಿತ್‌ಕುಮಾರ್ ಅವರಿಗೆ ಸಾಂತ್ವನ ಹೇಳಲು ನನ್ನಲ್ಲಿ ಪದಗಳಿಲ್ಲ. ಈ ದುಃಖದಿಂದ ಚೇತರಿಸಿಕೊಳ್ಳಲು ಕುಟುಂಬಕ್ಕೆ ಧೈರ್ಯ ಸಿಗಲಿ" ಎಂದು ಬರೆದುಕೊಂಡಿದ್ದಾರೆ.

ತಮಿಳು ನಟ, ರಾಜ್ಯಸಭಾ ಸದಸ್ಯ ಕಮಲ್ ಹಾಸನ್ ಟ್ವೀಟ್ ಮಾಡಿ "ಅಜಿತ್‌ಕುಮಾರ್ ಅವರ ತಾಯಿ ಶ್ರೀಮತಿ ಮೋಹಿನಿ ಮಣಿ ಅವರ ನಿಧನದ ಸುದ್ದಿ ತಿಳಿದು ನನಗೆ ತುಂಬಾ ದುಃಖವಾಯಿತು. ತಮ್ಮ ಪ್ರೀತಿಯ ತಾಯಿಯ ನಷ್ಟದಿಂದ ದುಃಖಿತರಾಗಿರುವ ಅಜಿತ್‌ಕುಮಾರ್ ಮತ್ತು ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ" ಎಂದಿದ್ದಾರೆ.

ತಾಯಿಯ ಅಗಲಿಕೆ ಬಗ್ಗೆ ಅಜಿತ್ ಸಹೋದರ ಅನಿಲ್ ಕುಮಾರ್ ವಿವರವಾಗಿ ಟ್ವೀಟ್ ಮಾಡಿದ್ದಾರೆ. "ನಮ್ಮ ತಾಯಿ ಮೋಹಿನಿ ಮಣಿ ಅವರ ಆರೋಗ್ಯ ಕ್ಷೀಣಿಸುತ್ತಾ ಬಂದಿತ್ತು. ಇಂದು(ಮೇ 30) ಬೆಳಿಗ್ಗೆ ನಿದ್ರೆಯಲ್ಲಿಯೇ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಅವರಿಗೆ ಚಿಕಿತ್ಸೆ ನೀಡಲು ಸಹಕರಿಸಿದ ವೈದ್ಯರಿಗೆ ಕೃತಜ್ಞತೆ. ನಮ್ಮ ತಾಯಿ ಬಹಳ ಸುದೀರ್ಘವಾದ ಜೀವನ ನಡೆಸಿದರು. ಪ್ರೀತಿಪಾತ್ರರ ಶಾಶ್ವತ ಪ್ರೀತಿ ಮತ್ತು ಕಾಳಜಿ ಮತ್ತು ಅವರ ದಯೆ, ನಿಸ್ವಾರ್ಥ ಮನೋಭಾವ ಮತ್ತು ಶಾಂತ ದಯೆ ಗಳಿಸಿದ ಅದೃಷ್ಟವಂತೆ" ಎಂದು ಬರೆದುಕೊಂಡಿದ್ದಾರೆ.

ದೇಶ ವಿಭಜನೆಯ ಸಮಯದಲ್ಲಿ ಸ್ವತಂತ್ರ ಭಾರತಕ್ಕೆ ವಲಸೆ ಬಂದ ಸಿಂಧಿಗಳಲ್ಲಿ ಅವ್ರು ಒಬ್ಬರು. ತಮ್ಮ ಸಂತತಿಯು ಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ನೋಡಿ ಅಪಾರ ತೃಪ್ತಿ ಮತ್ತು ಹೆಮ್ಮೆ ಪಡೆದರು. ನಿಜಕ್ಕೂ, ನಮ್ಮ ಜೀವನದಲ್ಲಿ ನಾವು ಸಾಧಿಸಿದ ಎಲ್ಲದಕ್ಕೂ ಅವರ ಆತ್ಮೀಯ ಅಪ್ಪುಗೆ, ಅಚಲ ಭಕ್ತಿ ಮತ್ತು ಬುದ್ಧಿವಂತ ಸಲಹೆಗೆ ಹೆಚ್ಚಿನ ಮನ್ನಣೆ ಸಲ್ಲುತ್ತದೆ. ತಂದೆಯೊಂದಿಗೆ ಸುಮಾರು 6 ದಶಕಗಳ ಯಶಸ್ವಿ ದಾಂಪತ್ಯವನ್ನು ಅನುಭವಿಸಲು ಅವರು ಧನ್ಯರು, ಅವರ ಪ್ರೀತಿಯ ನೆನಪುಗಳು ನಮಗೆ ಶಕ್ತಿ ಮತ್ತು ಸಾಂತ್ವನ ನೀಡುತ್ತಲೇ ಇರುತ್ತವೆ. ಹರಿದು ಬರುತ್ತಿರುವ ನಿಮ್ಮೆಲ್ಲರ ಹೃತ್ಪೂರ್ವಕ ಸಂದೇಶಗಳು, ಸಂತಾಪಗಳು ಮತ್ತು ನೆನಪುಗಳಿಂದ ನಾವು ಭಾವುಕರಾಗಿದ್ದೇವೆ" ಎಂದು ಅನಿಲ್ ಬರೆದುಕೊಂಡಿದ್ದಾರೆ.

ತಾಯಿ ಅಗಲಿಕೆಯ ಕೊನೆ ಕ್ಷಣಗಳಲ್ಲಿ ನಟ ಅಜಿತ್ ತಾಯಿ ಜೊತೆ ಇರಲು ಸಾಧ್ಯವಾಗಿಲ್ಲ. ಚೆನ್ನೈನ ಪಾಲವಾಕ್ಕಂನಲ್ಲಿರುವ ಅಜಿತ್ ಅವರ ನಿವಾಸದಲ್ಲಿ ಮೋಹಿನಿ ಮಣಿ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ನಾಳೆ ಅಂತ್ಯಕ್ರಿಯೆ ನಡೆಯಲಿದೆ. ಅಜಿತ್ ಕುಮಾರ್ ತಮ್ಮ ಚಾರಿಟೇಬಲ್ ಫೌಂಡೇಶನ್‌ಗೆ ಮೋಹಿನಿ ಮಣಿ ಫೌಂಡೇಶನ್ ಎಂದು ಹೆಸರಿಟ್ಟಿದ್ದಾರೆ.

Read more about: ajith kollywood kamal haasan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X