ಅಪಘಾತದಲ್ಲಿ ಗಾಯಗೊಂಡ ನಟ ಅಜಿತ್: ಬೇಗ ಗುಣಮುಖರಾಗುವಂತೆ ಅಭಿಮಾನಿಗಳ ಪ್ರಾರ್ಥನೆ
Recommended Video
ತಮಿಳಿನ ಖ್ಯಾತ ನಟ ಅಜಿತ್ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ವಲಿಮೈ ಚಿತ್ರದ ಚಿತ್ರೀಕರಣ ಸಮಯದಲ್ಲಿ ಈ ಅವಘಡ ಸಂಭವಿಸಿದ್ದು ಅದೃಷ್ಟವಶಾತ್ ಅಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಜಿತ್ ಗೆ ಸ್ವಲ್ಪ ಮಟ್ಟಿನ ಗಾಯಗಳಾಗಿದ್ದು ವೈದ್ಯರು ಚಿಕಿತ್ಸೆ ನೀಡಿ, ಕೆಲವು ದಿನಗಳು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.
ಅಜಿತ್ ಸದ್ಯ ವಲಿಮೈ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಚಿತ್ರೀಕರಣ ಸದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ಚಿತ್ರದ ಪ್ರಮುಖ ದೃಶ್ಯವಾಗಿದ್ದ ಬೈಕ್ ಚೇಸಿಂಗ್ ದೃಶ್ಯವನ್ನು ಚಿತ್ರತಂಡ ಸೆರೆಹಿಡಿಯುತ್ತಿತ್ತು. ಈ ಸಮಯದಲ್ಲಿ ಅಜಿತ್ ಬೈಕ್ ಯಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ.
ಗಾಯವಾದರು ಅಜಿತ್ ಚಿತ್ರೀಕರಣ ನಿಲ್ಲಿಸದೆ ಆ ದೃಶ್ಯದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಆ ನಂತರ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲಾಗಿದೆ. ಚಿಕಿತ್ಸೆ ನೀಡಿದ ವೈದ್ಯರು ಕೆಲವು ದಿನಗಳು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಅಜಿತ್ ಗೆ ಅಪಘಾತವಾಗಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ.

ಅಜಿತ್ ಆರೋಗ್ಯವಾಗಿದ್ದಾರೆ ಎನ್ನುವ ವಿಚಾರ ಕೇಳುವವರೆಗೂ ಅಭಿಮಾನಿಗಳ ಹಾರ್ಟ್ ಬೀಟ್ ಜೋರಾಗಿ ಬಡಿದುಕೊಳ್ಳುತ್ತಿತ್ತು. ಸದ್ಯ ಯಾವುದೆ ಅಪಾಯವಿಲ್ಲ ಎಂದು ತಿಳಿಸಿದ ಅಭಿಮಾನಿಗಳು ತಲಾ ಬೇಗ ಗುಣಮುಖರಾಗಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಟ್ವಿಟ್ಟರ್ ಮೂಲಕ ಪ್ರಾರ್ಥನೆ ಸಲ್ಲಿಸುತ್ತಿರುವ ಅಭಿಮಾನಿಗಳು #GetWellSoonTHALA ಎಂದು ಟ್ರೆಂಡ್ ಮಾಡಿದ್ದಾರೆ.
ಮುಂದಿನ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯಸಲಿದ್ದು ಅಲ್ಲಿಯವರೆಗೂ ಅಜಿತ್ ವಿಶ್ರಾಂತಿಯಲ್ಲಿ ಇರಲಿದ್ದಾರೆ. ಅಂದ್ಹಾಗೆ ವಲಿಮೈ ಹೆಚ್.ವಿನೋದ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೊನೆಯ ಹಂತದ ಚಿತ್ರೀಕರಣ ಭಾಕಿಯುಳಿಸಿಕೊಂಡಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ವಲಿಮೈ ಸಧ್ಯದಲ್ಲೆ ಅಭಿಮಾನಿಗಳ ಮುಂದೆ ಬರಲಿದೆ.


Click it and Unblock the Notifications











