ಸಂಜೆ ಒಳಗೆ ಅಜಿತ್ ಸೂಪರ್‌ಬೈಕ್ ಸ್ಟಂಟ್ ಮಾಡಿದ ವಲಿಮೈ ಪೋಮೊ ರಿಲೀಸ್: ಕಾಯ್ತಾ ಇರಿ

ಅಜಿತ್ ಅಭಿಮಾನಿಗಳಿಗೆ ಖುಷಿಯೋ ಖುಷಿ. ಇಷ್ಟು ದಿನ ಸೈಲೆಂಟ್ ಆಗಿದ್ದ 'ವಲಿಮೈ' ಸಿನಿಮಾ ನಿಧಾನವಾಗಿ ಸದ್ದು ಮಾಡುವುದಕ್ಕೆ ಶುರುಮಾಡಿದೆ. ಅಜಿತ್ ಅಭಿಮಾನಿಗಳು ಇಷ್ಟ ಬೇಡಿಕೆ ಕೊನೆಗೂ ನೆರವೇರುತ್ತಿದೆ. ಕೊರೊನಾ ಎರಡನೇ ಅಲೆಗೆ 'ವಲಿಮೈ' ಶೂಟಿಂಗ್ ನಿಧಾನವಾಗಿ ಸಾಗಿತ್ತು. ಆಗ ಅಜಿತ್ ಫ್ಯಾನ್ಸ್ ಸಿನಿಮಾ ಪೋಮೊ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದರು. ಆದರೆ, ನಿರ್ಮಾಪಕ ಬೋನಿ ಕಪೂರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

'ವಲಿಮೈ' ಸಿನಿಮಾದ ಪ್ರೋಮೊಗಾಗಿ ಕಾದು ಕಾದು ಸುಸ್ತಾಗಿದ್ದ ಅಜಿತ್ ಕುಮಾರ್ ಅಭಿಮಾನಿಗಳು ಕೂಡ ಸೈಲೆಂಟ್ ಆಗಿದ್ದರು. ಸಿನಿಮಾ ಬಗ್ಗೆ ಅಪ್‌ಡೇಟ್ ಕೇಳುವುದನ್ನೇ ಕೈ ಬಿಟ್ಟಿದ್ದರು. ಕೊನೆಗೂ ಚಿತ್ರತಂಡ, ಇಂದು ಸಂಜೆಯೊಳಗೆ 'ವಲಿಮೈ' ಪ್ರೋಮೊ ರಿಲೀಸ್ ಮಾಡಲಿದೆ ಎನ್ನಲಾಗುತ್ತಿದೆ. ಈಗಾಗಲೇ ಈ ಸುದ್ದಿ ತಮಿಳುನಾಡಿನಲ್ಲಿ ಕಾಡ್ಗಿಚ್ಚಿನಂತೆ ಅಭಿಮಾನಿಗಳಿಂದ ಅಭಿಮಾನಿಗಳಿಗೆ ಹಬ್ಬಲು ಆರಂಭಿಸಿದೆ.

ಸಂಜೆ ಒಳಗೆ 'ವಲಿಮೈ' ಪ್ರೋಮೊ ರಿಲೀಸ್

ಅಜಿತ್ ಕುಮಾರ್ ಸಿನಿಮಾನೇ ಹಾಗೆ, ತಡವಾಗಿ ರಿಲೀಸ್ ಬೇಜಾನ್ ಸದ್ದು ಮಾಡುತ್ತೆ. ಅದಕ್ಕೆ ಅಜಿತ್ ಅಭಿಮಾನಿಗಳೂ ಕೂಡ ತೆರೆಮೇಲೆ ಅಜಿತ್ ಸಿನಿಮಾ ನೋಡುವುದಕ್ಕೆ ಕಾದು ಕೂರುತ್ತಾರೆ. ಈಗಲೂ ಅಷ್ಟೇ 'ವಲಿಮೈ' ಸಿನಿಮಾ ಪ್ರೋಮೊಗಾಗಿ ಸೈಲೆಂಟಾಗಿಯೇ ಕಾದು ಕೂತಿದ್ದಾರೆ. ಕಾಲಿವುಡ್ ಮೂಲಗಳ ಪ್ರಕಾರ ಇಂದು ಸಂಜೆಯೊಳಗೆ 'ವಲಿಮೈ' ಸಿನಿಮಾದ ಅದ್ಭುತ ಪ್ರೋಮೊ ರಿಲೀಸ್ ಆಗಲಿದೆ. ಯಾವುದೇ ಸದ್ದು ಮಾಡದೆ ಈ ಪ್ರೋಮೊ ರಿಲೀಸ್ ಆಗುತ್ತಿದ್ದು, ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.

'ವಲಿಮೈ' ಪ್ರೋಮೊದಲ್ಲಿ ಅದ್ಭುತ ಬೈಕ್ ಸ್ಟಂಟ್

'ವಲಿಮೈ' ಪ್ರೋಮೊದಲ್ಲಿ ಅದ್ಭುತ ಬೈಕ್ ಸ್ಟಂಟ್

ಅಜಿತ್ ನಟಿಸಿದ 'ವಲಿಮೈ' ಸಿನಿಮಾ ದಿನದಿಂದ ದಿನಕ್ಕೆ ಸದ್ದು ಮಾಡುತ್ತಿದೆ. ಕೆಲವು ದಿನಗಳಿಂದ 'ವಲಿಮೈ' ಸಿನಿಮಾದ ಬಗ್ಗೆ ಅಪ್‌ಡೇಟ್‌ಗಳನ್ನು ನೀಡುತ್ತಲೇ ಇದೆ. ಈಗ ಪ್ರೋಮೊ ರಿಲೀಸ್ ಮಾಡಲಿದ್ದು, ಅಜಿತ್ ಅವರ ಅದ್ಭುತ ಬೈಕ್ ಸ್ಟಂಟ್‌ಗಳನ್ನು ಅಭಿಮಾನಿಗಳ ಮುಂದೆ ಇಡುತ್ತಿದೆ. ಇದೊಂದು ರೇಸಿಂಗ್ ಸೀಕ್ವೆನ್ಸ್ ಆಗಿದ್ದು, ಇದು ಸಿನಿಮಾದ ಅತೀ ಮುಖ್ಯ ಭಾಗವಾಗಿದೆಯೆಂದು ಮೂಲಗಳು ಹೇಳುತ್ತಿವೆ. ಅಂದಹಾಗೇ, ಈ ಸಿನಿಮಾದಲ್ಲಿ ಅಜಿತ್ ಕುಮಾರ್ ಸೂಪರ್ ಕಾಪ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೂಪರ್‌ ಬೈಕ್‌ಗಳ ಮೂಲಕ ಅಜಿತ್ ಸ್ಟಂಟ್ಸ್ ಹೇಗಿರುತ್ತೆ ಅಂತ ನೋಡುವುದಕ್ಕೆ ಅಭಿಮಾನಿಗಳು ಕಾದು ಕೂತಿದ್ದಾರೆ.

ಅನೌನ್ಸ್ ಮಾಡದೆ ಪ್ರೋಮೊ ರಿಲೀಸ್ ಮಾಡುತ್ತಿರುವುದೇಕೆ?

ಅನೌನ್ಸ್ ಮಾಡದೆ ಪ್ರೋಮೊ ರಿಲೀಸ್ ಮಾಡುತ್ತಿರುವುದೇಕೆ?

ಯಾವುದೇ ಸೂಪರ್ ಸ್ಟಾರ್ ಸಿನಿಮಾ ಆಗಿದ್ದರೂ, ಪ್ರೋಮೊ, ಟೀಸರ್, ರಿಲೀಸ್ ಡೇಟ್ ಏನೇ ಅನೌನ್ಸ್ ಮಾಡುವುದಿದ್ದರೂ ಒಂದೆರಡು ದಿನ ಮುಂಚಿತವಾಗಿಯೇ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಾರೆ. ಹಿಂದಿ, ಕನ್ನಡ, ತೆಲುಗು, ತಮಿಳು ಎಲ್ಲಾ ಭಾಷೆಗಳಲ್ಲೂ ಇಂತಹದ್ದೊಂದು ಟ್ರೆಂಡಿಂಗ್ ಶುರುವಾಗಿದೆ. ಆದರೆ, ಅಜಿತ್ 'ವಲಿಮೈ' ಮಾತ್ರ ಇಂತಹ ಯಾವುದೇ ಪ್ರಚಾರ ತಂತ್ರವನ್ನು ಅನುಸರಿಸುತ್ತಿಲ್ಲ. ಬಿಡುಗಡೆ ದಿನವನ್ನು ಘೋಷಣೆ ಮಾಡದೆಯೇ ಪ್ರೋಮೊ ರಿಲೀಸ್ ಮಾಡುತ್ತಿದೆ.

ಬೋನಿ ಕಪೂರ್ ನಿರ್ಮಾಣದ ಸಿನಿಮಾ 'ವಲಿಮೈ'

ಬೋನಿ ಕಪೂರ್ ನಿರ್ಮಾಣದ ಸಿನಿಮಾ 'ವಲಿಮೈ'

'ವಲಿಮೈ' ಸಿನಿಮಾವನ್ನು ನಟಿ ದಿವಂಗತ ಶ್ರೀದೇವಿ ಪತಿ, ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಸಿನಿಮಾ ನಿರ್ಮಾಣದ ಹಂತದಲ್ಲಿದೆ. ಕೊರೊನಾ ಎರಡನೇ ಅಲೆಯಿಂದ ಚಿತ್ರೀಕರಣ ಸ್ಥಗಿತಗೊಂಡಿತ್ತು. ಇಲ್ಲದೆ ಹೋಗಿದ್ದರೆ, ಈ ಸಿನಿಮಾ 2021ರಲ್ಲೇ ಬಿಡುಗಡೆಯಾಗಬೇಕಿತ್ತು. ಈಗ ಸಿನಿಮಾದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
The Most Expected Actor AjithKumar movie Valimai promo material is expected to release sometime this evening. A video loaded with racing sequences.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X