ಮಾಜಿ ಪತ್ನಿ ಪೂಜೆ ಮಾಡಿದ್ದ ಬಂಗಲೆ ಪೋಷಕರಿಗೆ ನೀಡಿದ ಧನುಷ್: ₹150 ಕೋಟಿ ಮನೆಯ ವಿಶೇಷತೆಯೇನು?

ಸೂಪರ್‌ಸ್ಟಾರ್ ರಜನಿಕಾಂತ್ ಮಾಜಿ ಅಳಿಯ, ತಮಿಳಿನ ಸ್ಟಾರ್ ನಟ ಧನುಷ್ ದುಬಾರಿ ಬಂಗಲೆ ಖರೀದಿಸಿದ್ದಾರೆ. ಚೆನ್ನೈನ ದುಬಾರಿ ಏರಿಯಾ ಪೊಯಿಸ್ ಗಾರ್ಡನ್‌ನಲ್ಲಿ ಹೊಸ ಮನೆಗೆ ಕಟ್ಟಿದ್ದು, ಇತ್ತೀಚೆಗೆ ಗೃಹಪ್ರವೇಶ ಕಾರ್ಯಕ್ರಮ ಜರುಗಿದೆ.

ಧನುಷ್ ಈ ಐಶಾರಾಮಿ ಬಂಗಲೆಯ ಬಲೆ ಬರೋಬ್ಬರಿ 150 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅಲ್ಲದೆ ಈ ಬಂಗೆಯನ್ನು ಧನುಷ್ ತಮ್ಮ ಪೋಷಕರಿಗೆ ಉಡುಗೊರೆಯಾಗಿ ನೀಡಿದ್ದಾರೆಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

ಧನುಷ್ ಐಶಾರಾಮಿ ಬಂಗಲೆಯ ಗೃಹಪ್ರವೇಶದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಷ್ಟಕ್ಕೂ ಈ ಕಟ್ಟಡ ಕಟ್ಟುವ ಮುನ್ನ ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಧನುಷ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಪೂಜೆ ಮಾಡಿದ್ದರು.

ಧನುಷ್ ಬಂಗಲೆಯಲ್ಲಿ ರಜನಿ, ಐಶ್ವರ್ಯಾ ಮಿಸ್ಸಿಂಗ್

ಧನುಷ್ ಬಂಗಲೆಯಲ್ಲಿ ರಜನಿ, ಐಶ್ವರ್ಯಾ ಮಿಸ್ಸಿಂಗ್

ಎರಡು ವರ್ಷಗಳ ಹಿಂದೆ ಚೆನ್ನೈನ ದುಬಾರಿ ಏರಿಯಾ ಪೊಯಿಸ್ ಗಾರ್ಡನ್‌ನಲ್ಲಿ ಇದೇ ಮನೆಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿತ್ತು. ಆಗ ಸೂಪರ್‌ಸ್ಟಾರ್ ರಜನಿಕಾಂತ್, ಧನುಷ್ ಮಾಜಿ ಪತ್ನಿ ಐಶ್ವರ್ಯಾ ರಜನಿಕಾಂತ್ ಪೂಜೆ ಮಾಡಿದ್ದರು. ವಿಪರ್ಯಾಸ ಅಂದರೆ, ಈ ಬಂಗಲೆ ಕಟ್ಟಿ ಮುಗಿಯುವುದರೊಳಗೆ ಧನುಷ್ ಹಾಗೂ ಐಶ್ವರ್ಯಾ ವಿಚ್ಛೇದನ ನಡೆದು ಹೋಗಿದೆ. ಈಗ ಈ ಐಶಾರಾಮಿ ಬಂಗಲೆಯನ್ನು ಧನುಷ್ ಪೋಷಕರಿಗೆ ನೀಡಿದ್ದಾರೆ.

₹150 ಕೋಟಿ ಬಂಗಲೆಯ ವಿಶೇಷತೆಯೇನು?

₹150 ಕೋಟಿ ಬಂಗಲೆಯ ವಿಶೇಷತೆಯೇನು?

ತಮಿಳು ಮಾಧ್ಯಮಗಳ ಪ್ರಕಾರ, ಧನುಷ್ ಐಶಾರಾಮಿ ಬಂಗಲೆಯ ಸುಮಾರು 19 ಸಾವಿರ ಚದರ ಅಡಿ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಸುಮಾರು ನಾಲ್ಕು ಅಂತಸ್ಥಿನ ಈ ಬಂಗಲೆಯಲ್ಲಿ ಹಲವು ಐಶಾರಾಮಿ ಸವಲತ್ತುಗಳು ಇವೆ. ಅಲ್ಲದೆ ರಜನಿಕಾಂತ್, ಜಯಲಲಿತಾರಂತ ಸೆಲೆಬ್ರೆಟಿ ಬಂಗಲೆಗಳು ಇದೇ ಏರಿಯಾದಲ್ಲಿದೆ. ಹೀಗಾಗಿ ಈ ಕಟ್ಟದ ಬಲೆ ಸುಮಾರು 150 ಕೋಟಿ ರೂ. ಎಂದು ವರದಿಯಾಗಿದೆ.

ಗೃಹ ಪ್ರವೇಶದ ಪೋಟೊಗಳು ವೈರಲ್

ಗೃಹ ಪ್ರವೇಶದ ಪೋಟೊಗಳು ವೈರಲ್

ಧನುಷ್ ತಮ್ಮ ಪೋಷಕರು ಹಾಗೂ ಸಂಬಂಧಿಕರೊಂದಿಗೆ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾದ ಫೋಟೊಗಳು ವೈರಲ್ ಆಗಿವೆ. ತಮಿಳು ನಿರ್ದೇಶಕ ಹಾಗೂ ಧನುಷ್ ಫ್ಯಾನ್ಸ್ ಕ್ಲಬ್‌ನ ಅಧ್ಯಕ್ಷರೂ ಆಗಿರುವ ಸುಬ್ರಮಣಿಯಂ ಶಿವ ಈ ಫೋಟೊಗಳನ್ನು ಹಂಚಿಕೊಂಡಿದ್ದಾರೆ."ನನ್ನ ಸಹೋದರ ಧನುಷ್ ಮನೆ ದೇವಸ್ಥಾನದಂತೆ ಇದೆ. ಅವರು ತಮ್ಮ ಪೋಷಕರಿಗೆ ಹಾಗೂ ಮಕ್ಕಳಿಗೆ ಸ್ವರ್ಗದಂತಹ ಮನೆಯನ್ನು ಕಟ್ಟಿದ್ದಾರೆ. ನಿಮಗೆ ಮುಂದೆನೂ ಹೀಗೆ ಬೆಳೆಯುತ್ತಿರಿ ಹಾಗೂ ಯಶಸ್ಸನ್ನು ಸಾಧಿಸಿ ಎಂದು ಬರೆದುಕೊಂಡಿದ್ದಾರೆ.

'ವಾತಿ' ಸಿನಿಮಾಗೆ ಹೇಗಿದೆ ರೆಸ್ಪಾನ್ಸ್

'ವಾತಿ' ಸಿನಿಮಾಗೆ ಹೇಗಿದೆ ರೆಸ್ಪಾನ್ಸ್

ಧನುಷ್ ವಿಭಿನ್ನ ಸಿನಿಮಾಗಳನ್ನು ಮಾಡುವುದರಲ್ಲಿ ಎಕ್ಸ್‌ಪರ್ಟ್. ಹೀಗಾಗಿ ಇವರ ಸಿನಿಮಾಗಳಿಗಾಗಿ ಕಾದು ಕೂತಿರುವ ಸಿನಿಪ್ರಿಯರಿದ್ದಾರೆ. ಇತ್ತೀಚೆಗೆ ಧನುಷ್ ಸಿನಿಮಾ ಎರಡು ಭಾಷೆಯಲ್ಲಿ ರಿಲೀಸ್ ಆಗಿದೆ. ತಮಿಳಿನಲ್ಲಿ 'ವಾತಿ' ಅಂತಲೂ, ತೆಲುಗಿನಲ್ಲಿ 'ಸರ್' ಅಂತೂ ತೆರೆಕಂಡಿದೆ. ಈ ಸಿನಿಮಾ ವಿಶ್ವದಾದ್ಯಂತ ಮೂರು ದಿನಗಳಿಗೆ 50 ಕೋಟಿ ರೂ. ಸಂಪಾದನೆ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್‌ ವರದಿ ಮಾಡಿದ್ದಾರೆ.

More from Filmibeat

English summary
Actor Dhanush Buys 150Crore Luxurious House For His Parents At Poes Garden Chennai, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X