ಗಾಯಕಿ ಜೊತೆ ಜಯಂ ರವಿ ಸುತ್ತಾಟ; "ಇಷ್ಟು ದಿನ ಮಕ್ಕಳಿಗಾಗಿ ಸುಮ್ಮನಿದ್ದೆ, ಕುಟುಂಬವನ್ನ ಬೆಚ್ಚಿಬೀಳಿಸಿದೆ" ಎಂದ ಪತ್ನಿ ಆರತಿ

ಸೆಲೆಬ್ರಿಟಿಗಳ ಬದುಕಲ್ಲಿ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಿವೆ. ಅದೂ ಬಾಲಿವುಡ್ ಹಾಗೂ ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಕೆಲವು ತಿಂಗಳ ಹಿಂದಷ್ಟೇ ತಮಿಳಿನ ಫೇಮಸ್ ನಟ ಜಯಂ ರವಿ ಕೌಟುಂಬಿಕ ಬದುಕಲ್ಲಿ ಬಿರುಕು ಬಿಟ್ಟಿದ್ದು ಬಹಿರಂಗವಾಗಿತ್ತು. ನಟ ಜಯಂ ರವಿ ಹಾಗೂ ಪತ್ನಿ ಆರತಿ ನಡುವಿನ ವೈಮನಸ್ಸು ಬೀದಿಗೆ ಬಿದ್ದಿತ್ತು. ಅಲ್ಲಿಂದ ಇಬ್ಬರೂ ಪರಸ್ಪರ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ.

ಆರತಿಯವರನ್ನು ಜಯಂ ರವಿ ವಿವಾಹವಾಗಿ 18 ವರ್ಷಗಳು ಆಗಿವೆ. ಈಗ ಪತ್ನಿಗೆ ವಿಚ್ಛೇದನ ನೀಡುವುದಕ್ಕೆ ಮುಂದಾಗಿದ್ದಾರೆ. ಅದಕ್ಕೆ ಕಾರಣ ಗಾಯಕಿ ಕೆನಿಶಾ ಫ್ರಾನ್ಸಿಸ್. ಹೌದು, ಜಯಂ ರವಿ ಹಾಗೂ ಗಾಯಕಿ ಕೆನಿಶಾ ಫ್ರಾನ್ಸಿಸ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ. ಇದು ಪತ್ನಿ ಆರತಿ ಹಾಗೂ ಮಕ್ಕಳಿಂದ ಜಯಂ ರವಿ ದೂರ ಆಗುವುದಕ್ಕೆ ಪ್ರಮುಖ ಕಾರಣ. ಆದರೆ, ಜಯಂ ರವಿ ಪತ್ನಿಯ ಮೇಲೆ ಈ ಹಿಂದೆ ಹಲವು ಆರೋಪಗಳನ್ನು ಮಾಡಿದ್ದರು. ಅದಕ್ಕೆ ಆರತಿ ತಿರುಗೇಟು ನೀಡಿದ್ದರು.

Actor Jayam Ravi wife Aarti emotional post after his public presence with kenisha francis

ಈಗ ಜಯಂ ರವಿ ತನ್ನ ಗೆಳತಿ ಕೆನಿಶಾ ಫ್ರಾನ್ಸಿಸ್ ಜೊತೆ ಇಸಾರಿ ಗಣೇಶ್ ಅವರ ಮಗಳ ವಿವಾಹದಲ್ಲಿ ಕೈ ಕೈ ಹಿಡಿದು ಬಂದಿದ್ದಾರೆ. ಇಬ್ಬರೂ ಒಟ್ಟಿಗೆ ಕೂತು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ, ಪತ್ನಿ ಆರತಿ ಭಾವನಾತ್ಮಕವಾಗಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್‌ನಲ್ಲಿ 18 ವರ್ಷಗಳ ಕಾಲ ಜೊತೆಗಿದ್ದ ವ್ಯಕ್ತಿ ಎಲ್ಲವನ್ನೂ ಒದ್ದು ಹೋದ. ಇಷ್ಟು ದಿನ ಮಕ್ಕಳಿಗಾಗಿ ಸುಮ್ಮನಿದ್ದೆ. ಈಗ ಇಡೀ ಜಗತ್ತೇ ನೋಡುತ್ತಿದೆ ಎಂದು ಸುದೀರ್ಘ ಪೋಸ್ಟ್‌ನಲ್ಲಿ ಹೇಳಿದ್ದಾರೆ.

2024 ಸೆಪ್ಟೆಂಬರ್‌ನಲ್ಲಿ ನಟ ಜಯಂ ರವಿ (ರವಿ ಮೋಹನ್) ಪತ್ನಿ ಆರತಿ ರವಿಗೆ ವಿಚ್ಛೇದನ ನೀಡುವುದಾಗಿ ಘೋಷಿಸಿದಾಗಅಭಿಮಾನಿಗಳಿಗೆ ಆಘಾತವಾಗಿತ್ತು. ಗಾಯಕಿ ಕೆನಿಶಾ ಫ್ರಾನ್ಸಿಸ್ ಜೊತೆಗಿನ ಡೇಟಿಂಗ್ ಆರೋಪವನ್ನು ಅಲ್ಲಗೆಳೆದಿದ್ದರು. ಆದ್ರೀಗ ಮದುವೆ ಸಮಾರಂಭದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಇಬ್ಬರೂ ಡೇಟಿಂಗ್‌ನಲ್ಲಿ ಇರೋದು ಜಗತ್‌ಜಾಹೀರಾಗಿದೆ. ಈ ಬೆನ್ನಲ್ಲೇ ಆರತಿ ರವಿ ಭಾವನಾತ್ಮಕವಾಗಿ ಪೋಸ್ಟ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ನನ್ನ ಪರಿಸ್ಥಿತಿ ಹೇಗಿದೆ ಎಂದು ಊಹಿಸಿ

ಆರತಿ ರವಿ ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಈಗ ತಮ್ಮ ಪರಿಸ್ಥಿತಿ ಹೇಗಿದೆ ಎಂದು ಊಹಿಸಿ. ಈ ಘಟನೆ ಸಾಮಾನ್ಯ ಅಭಿಮಾನಿಗಳನ್ನು ಬೆಚ್ಚಿಬೀಳಿಸಿರಬೇಕಾದರೆ, 18 ವರ್ಷಗಳಿಂದ ಸಂಸಾರ ಮಾಡಿದ ತನ್ನ ಪರಿಸ್ಥಿತಿ ಹೇಗಿರಬಹುದು? ಇಷ್ಟು ದಿನ ನನ್ನ ಇಬ್ಬರು ಮಕ್ಕಳಿಗಾಗಿ ಸುಮ್ಮನಿದ್ದೆ ಎಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹತಾಶೆಯನ್ನು ಹೊರ ಹಾಕಿದ್ದಾರೆ.

ಕಾನೂನುಬದ್ಧವಾಗಿ ವಿಚ್ಛೇದನ ಆಗಿಲ್ಲ

ಈ ಪೋಸ್ಟ್‌ನಲ್ಲಿ ಆರತಿ ರವಿ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಿದ್ದಾರೆ. ಅದರಲ್ಲೊಂದು ವಿಚ್ಚೇದನ. ತಮ್ಮಿಬ್ಬರದ್ದು ಇನ್ನೂ ಕಾನೂನಾತ್ಮಕವಾಗಿ ವಿಚ್ಛೇದನ ಆಗಿಲ್ಲ ಎಂದು ಕ್ಲಾರಿಟಿ ಕೊಟ್ಟಿದ್ದಾರೆ. ಹೀಗಾಗಿ ತನ್ನನ್ನು ಜಯಂ ರವಿ (ರವಿ ಮೋಹನ್ ಅಂತ ಬದಲಾಯಿಸಿಕೊಂಡಿದ್ದಾರೆ) ಅವರ ಮಾಜಿ ಪತ್ನಿ ಎಂದು ಕರೆಯಬೇಡಿ. ಅವರು ತಮ್ಮ ಹೆಸರನ್ನು ಬದಲಾಯಿಸಬಹುದು. ರೇಷ್ಮೆ ಧೋತಿ, ರೇಷ್ಮೆ ಶರ್ಟ್ ಧರಿಸಿ, ಹೊಸಬರೊಂದಿಗೆ ತಿರುಗಾಡಬಹುದು. ಆದರೆ, ನಿಮ್ಮನ್ನು ಅಪ್ಪ ಎಂದು ಕರೆಯುವ ಇಬ್ಬರು ಮಕ್ಕಳಿದ್ದಾರೆ ಅವರಿಗಾಗಿ ಈ ಪೋಸ್ಟ್ ಮಾಡುತ್ತೇನೆ ಎಂದು ಹೇಳಿದ್ದಾರೆ.

ಗಂಡು ಮಕ್ಕಳಿಗಾಗಿ ಈ ಪೋಸ್ಟ್

ತನ್ನ ಮಕ್ಕಳಿಗೆ ಇನ್ನೂ ಕಾನೂನು ಪ್ರಕ್ರಿಯೆಗಳನ್ನ ಬಗ್ಗೆ ತಿಳಿದಿಲ್ಲ. 10 ವರ್ಷ ಹಾಗೂ 14 ವರ್ಷದ ಇಬ್ಬರು ಗಂಡು ಮಕ್ಕಳಿಗೆ ಪ್ರತಿದಿನ ಒಂದೊಂದು ಕತೆ ಹೇಳುತ್ತಿದ್ದೆ. ಆದರೆ, ಈಗ ಇಡೀ ಜಗತ್ತಿಗೆ ಗೋಚರವಾಗಿದೆ. ಇದನ್ನು ಹತಾಶೆಯಿಂದ ಪೋಸ್ಟ್ ಮಾಡುತ್ತಿಲ್ಲ. ಇಬ್ಬರು ಮಕ್ಕಳ ತಾಯಿಯಾಗಿ ಪೋಸ್ಟ್ ಮಾಡುತ್ತಿದ್ದೇನೆ. ಇದರಲ್ಲಿ ಯಾವುದೇ ಅಸೂಯೆ ಅಥವಾ ಸೇಡು ಇಲ್ಲ. ತಂದೆಯಾಗಿ ತಮ್ಮ ಕರ್ತವ್ಯವನ್ನು ತಿರಸ್ಕರಿಸಿದ್ದೀರ. ಈ ಪ್ರಪಂಚ ನಿಮ್ಮನ್ನು ಅಸಡ್ಡೆಯಿಂದ ನೋಡುತ್ತೆ ಅನ್ನೋದನ್ನು ಮರೆಯಬೇಡಿ. ನಾನು ಯಾವಾಗಲೂ ಆರತಿ ರವಿಯಾಗಿ ಇರುತ್ತೇನೆ ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

More from Filmibeat

English summary
Tamil actor Ravi wife Aarti wrote emotional post after his public presence with singer Kenisha Francis
Read more about: kollywood controversy divorce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X