"ಜಾತಿ ಆಧರಿಸಿದ ಮರ್ಯಾದಾ ಹತ್ಯೆ ಹಿಂಸೆಯಲ್ಲ" : ವಿವಾದಾತ್ಮಕ ಹೇಳಿಕೆ ಕೊಟ್ಟ ತಮಿಳು ನಟ

ಜನರು ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದ್ದಾರೆ. ಅವರ ಯೋಚಿಸುವ ಪರಿನೂ ಅಷ್ಟೇ ವೇಗವಾಗಿ ಬದಲಾಗುತ್ತಿದೆ. ಇದೇ ಮೂವತ್ತು ನಲವತ್ತು ವರ್ಷಗಳ ಹಿಂದೆ ಇದ್ದ ಶಿಕ್ಷಣದ ಪದ್ಧತಿ ಕೂಡ ಈಗ ಬದಲಾಗಿದೆ. ಹೀಗಿದ್ದರೂ ಇನ್ನೂ ಮರ್ಯಾದಾ ಹತ್ಯೆ ಅಂತಹ ಪ್ರಕರಣಗಳು ನಡೆಯುತ್ತಲೇ ಇದ್ದಾವೆ. ಈಗ ತಮಿಳಿನ ನಟನೊಬ್ಬ ಇದನ್ನು ಸಮರ್ಥಿಸಿಕೊಂಡಿದ್ದಾನೆ.

ತಮಿಳು ನಟ ಕಮ್ ನಿರ್ದೇಶಕ ಮರ್ಯಾದಾ ಹತ್ಯೆ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಇತ್ತೀಚೆಗೆ ರಂಜಿತ್ 'ಕವುಂದಂಪಾಲಾಯಂ' ಅನ್ನುವ ಸಿನಿಮಾ ನಿರ್ದೇಶಿಸಿದ್ದಾರೆ. ಈ ಸಿನಿಮಾ ನಿನ್ನೆ (ಆಗಸ್ಟ್ 9) ಬಿಡುಗಡೆಯಾಗಿತ್ತು. ಈ ಸಿನಿಮಾ ನಟ ಕಮ್ ನಿರ್ದೇಶಕ ರಂಜಿತ್ ಮರ್ಯಾದಾ ಹತ್ಯೆ ಅಂತಹ ಪ್ರಕರಣದ ಬಗ್ಗೆ ದೃಶ್ಯಗಳನ್ನು ಇಟ್ಟಿದ್ದಾರೆ ಎನ್ನಲಾಗಿದೆ.

Actor Ranjith made a controversial statement that caste-based honour killing is not violence

ನಟ ರಂಜಿತ್‌ಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಲಾಗಿತ್ತು. ಆ ವೇಳೆ ಮರ್ಯಾದಾ ಹತ್ಯೆ ಬಗ್ಗೆ ರಂಜಿತ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. "ಜಾತಿ ಆಧರಿಸಿದ ಮರ್ಯಾದಾ ಹತ್ಯೆ ಹಿಂಸೆಯಲ್ಲ" ಎಂದು ಹೇಳಿಕೆ ಕೊಟ್ಟು ವಿವಾದಕ್ಕೆ ಸಿಲುಕಿದ್ದಾರೆ. ಮರ್ಯಾದಾ ಹತ್ಯೆ ವಿರುದ್ಧ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಈ ನಟನ ಹೇಳಿಕೆ ಮತ್ತಷ್ಟು ಕಿಡಿ ಹಚ್ಚಿದೆ.

'ಕವುಂದಂಪಾಲಾಯಂ' ಸಿನಿಮಾವನ್ನು ತಮಿಳುನಾಡಿನ ಸೇಲಂನಲ್ಲಿ ಪ್ರೇಕ್ಷಕರೊಂದಿಗೆ ಸಿನಿಮಾ ವೀಕ್ಷಿಸಿದ್ದರು. ಆ ಬಳಿಕ ರಂಜಿತ್ ಮರ್ಯಾದಾ ಹತ್ಯೆ ಬಗ್ಗೆ ವಿವಾದಾತ್ಮಕ ಹೇಳಿಕ ನೀಡಿ ಪೇಚಿಗೆ ಸಿಕ್ಕಿಕೊಂಡಿದ್ದಾರೆ. ಅಷ್ಟಕ್ಕೂ ಮಾಧ್ಯಮಗಳಿಗೆ ರಂಜಿತ್ ನೀಡಿದ ಹೇಳಿಕೆ ಹೀಗಿದೆ.

Actor Ranjith made a controversial statement that caste-based honour killing is not violence

" ಈ ನೋವು ಕೇವಲ ತಂದೆ ತಾಯಿಗಳಿಗೆ ಮಾತ್ರ ಗೊತ್ತಿದೆ. ಒಮ್ಮೆ ನಿಮ್ಮ ಬೈಕ್ ಅನ್ನು ಯಾರಾದರೂ ಕದ್ದರೆ, ಏನಾಯಿತು ಎಂದು ನೋಡುವುದಕ್ಕೆ ಹೋಗುತ್ತೀರ ಅಲ್ಲವೇ? ಹಾಗೇ ಪೋಷಕರು ಕೂಡ ಮಕ್ಕಳೇ ಬದುಕು ಎಂದು ಕೊಂಡಿರುತ್ತಾರೆ. ಅಂತಹವರು ಮಕ್ಕಳಿಗಾಗಿ ಕೋಪಗೊಳ್ಳುತ್ತಾರೆ. ಅದು ಹಿಂಸೆ ಅಲ್ಲ. ಅದು ಅವರು ತೋರುವ ಕಾಳಜಿ ಅಷ್ಟೇ" ಎಂದು ರಂಜಿತ್ ಹೇಳಿದ್ದರು.

ರಂಜಿತ್ ಕೊಟ್ಟಿರುವ ಈ ಹೇಳಿಕೆ ಈಗ ವಿವಾದವನ್ನು ಸೃಷ್ಟಿಸುತ್ತಿದೆ. ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ನಟನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ರಂಜಿತ್ ಸಮಾಜಕ್ಕೆ ವಿಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇವರ ಹೇಳಿಕೆ ಸರಿಯಿಲ್ಲ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದೇ ಮತ್ತೊಬ್ಬರು " ಇವನನ್ನು ಮೊದಲು ಜೈಲಿಗೆ ಕಳುಹಿಸಿ" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೊಬ್ಬರು "ಅದ್ಹೇಗೆ ಈ ವ್ಯಕ್ತಿ ಹೀಗೆಲ್ಲ ಹೇಳಿಕೆಗಳನ್ನು ಕೊಡುವುದಕ್ಕೆ ಸಾಧ್ಯ?" ಇನ್ನೊಬ್ಬರು ಕಿಡಿಕಾರಿದ್ದಾರೆ.

ಒಟ್ನಲ್ಲಿ ತಮಿಳು ನಟ ಕಮ್ ನಿರ್ದೇಶಕ ಮರ್ಯಾದಾ ಹತ್ಯೆಯನ್ನು ಬೆಂಬಲಿಸಿ ತಗಲಾಕೊಂಡಿದ್ದಾರೆ. ಇದು ಅವರ ಸಿನಿಮಾಗೆ ಪರೋಕ್ಷವಾಗಿ ಪ್ರಚಾರ ಆಗಬಹುದು ಅಂತ ಹೀಗೆ ಮಾತಾಡಿದ್ದಾರಾ? ಇಲ್ಲ ವಿವಾದವನ್ನು ಸೃಷ್ಟಿಸಬೇಕು ಅಂತ ಹೀಗೆ ಮಾತಾಡಿದರೇ? ಅನ್ನೋ ಪ್ರಶ್ನೆ ಈಗ ಜನರನ್ನು ಕಾಡುತ್ತಿದೆ.

More from Filmibeat

English summary
Tamil actor Ranjith said that caste-based honour killing is not violence
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X