ಮಗಳು ಅಪ್ಪನಿಗೆ.. ಅಳಿಯ ಅತ್ತೆಗೆ ಮುತ್ತಿಟ್ಟ; ನೆಟ್ಟಿಗರ ಕಣ್ಣು ಕೆಂಪಾಗುತ್ತಿದ್ದಂತೆ ಹಾಸ್ಯ ನಟ ಪುತ್ರಿಯ ಉತ್ತರವೇನು ಗೊತ್ತೇ?

ತಮಿಳು ರೋಬೊ ಶಂಕರ್ ಇತ್ತೀಚೆಗೆ ತಮ್ಮ ಮಗಳ ಮದುವೆ ಮಾಡಿದ್ದರು. ಇಡೀ ತಮಿಳು ಚಿತ್ರರಂಗವೇ ಕಣ್ಬಿಟ್ಟು ನೋಡುವಂತೆ ಮಗಳ ಮದುವೆ ಮಾಡಿದ್ದರು. ಕಾಲಿವುಡ್‌ನಲ್ಲಿ ಸ್ಟಾರ್ ನಟರೆಲ್ಲರೂ ಈ ಜೋಡಿಯ ಮದುವೆ ಬಂದು ಶುಭ ಹಾರೈಸಿದ್ದರು. ಆದರೆ, ಇದೇ ವೇಳೆ ಮಧು ಮಗಳು ಹಾಗೂ ಮಧು ಮಗ ನಡೆದುಕೊಂಡ ರೀತಿ ನೆಟ್ಟಿಗರು ನಿದ್ದೆ ಕೆಡಿಸಿತ್ತು.

ಅಂದ್ಹಾಗೆ ಇದೊಂದು ಮುತ್ತಿನ ವಿವಾದ. ತಮಿಳು ನಟನ ಮಗಳು ತಂದೆಯ ತುಟಿಗೆ ಚುಂಬಿಸಿದ್ದರು. ಇನ್ನೊಂದು ಕಡೆ ಅಳಿಯ ಅತ್ತೆ ತುಟಿಯನ್ನು ಚುಂಬಿಸಿದ್ದರು. ಎರಡು ವಿಭಿನ್ನ ಸಂದರ್ಭಗಳಲ್ಲಿ ಜರುಗಿವೆ. ಆ ಫೋಟೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಣ್ಣುಗಳು ಕೆಂಪಾಗಿದ್ದವು. ಅಸಲಿಗೆ ಈ ಎರಡು ಘಟನೆಗಳು ಏನು? ಅದಕ್ಕೆ ತಮಿಳು ನಟನ ಮಗಳು ಕೊಟ್ಟ ಉತ್ತರವೇನು ಅನ್ನೋದನ್ನು ತಿಳಿಯಲು ಮುಂದೆ ಓದಿ..

Actor robo shankar daughter indraja gave reason for liplock controvery in wedding reception

ರೋಬೋ ಶಂಕರ್ ತಮಿಳಿನ ಜನಪ್ರಿಯ ಹಾಸ್ಯ ನಟ. ತಮಿಳಿನ ಸೂಪರ್‌ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರ ಪುತ್ರಿ ಇಂದ್ರಜಾ ಮದುವೆಯನ್ನು ಅದ್ಧೂರಿಯಾಗಿ ನಡೆಸಿಕೊಟ್ಟಿದ್ದಾರೆ. ಕಾಲಿವುಡ್‌ನ ತಾರೆಯರು ಇಂದ್ರಜಾ ಮದುವೆ ಆಗಮಿಸಿದ್ದು, ದೊಡ್ಡ ಸುದ್ದಿಯಾಗಿತ್ತು. ಆದರೆ, ಈ ಮದುವೆಗಿಂತ ದೊಡ್ಡ ಸುದ್ದಿಯಾಗಿದ್ದು, ಎರಡು ಮುತ್ತುಗಳು.

ನಿಶ್ಚಿತಾರ್ಥದ ಸಮಯದಲ್ಲಿ ಇಂದ್ರಜಾ ತಂದೆ ರೋಬೊ ಶಂಕರ್ ತುಟಿಗೆ ಮುತ್ತಿಕ್ಕಿದ್ದರು. ಈ ಫೋಟೊಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಣ್ಣು ಕೆಂಪು ಮಾಡಿಕೊಂಡಿದ್ದರು. ಇದು ನಮ್ಮ ಸಂಸ್ಕೃತಿಯಲ್ಲ. ಈ ರೀತಿ ಮುತ್ತಿಕ್ಕುವುದು ಅಸಹ್ಯವಾಗಿದೆ ಎಂದೆಲ್ಲ ಕಾಮೆಂಟ್‌ಗಳನ್ನು ಮಾಡಿದ್ದರು. ಮಗಳು ತಂದೆ ಇಟ್ಟ ಮುತ್ತು ವಿವಾದವನ್ನೇ ಸೃಷ್ಟಿಸಿತ್ತು.

ಇನ್ನು ಮದುವೆ ಬಳಿಕ ರೋಬೊ ಶಂಕರ್ ಅದ್ಧೂರಿ ಆರತಕ್ಷತೆಯನ್ನು ಆಯೋಜನೆ ಮಾಡಿದ್ದರು. ಈ ವೇಳೆ ಅಳಿಯ ಕಾರ್ತಿಕ್ ಜೋಷ್‌ನಲ್ಲಿ ಡ್ಯಾನ್ಸ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ರೋಬೊ ಶಂಕರ್ ಪತ್ನಿ ಪ್ರಿಯಾಂಕಾ ಕೂಡ ಹೆಜ್ಜೆ ಹಾಕುತ್ತಿದ್ದರು. ಆಗ ಕಾರ್ತಿಕ್ ಅತ್ತೆ ಪ್ರಿಯಾಂಕಾ ಶಂಕರ್ ಲಿಪ್ ಕಿಸ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮತ್ತೆ ಉರಿದು ಬಿದ್ದಿದ್ದರು.

Actor robo shankar daughter indraja gave reason for liplock controvery in wedding reception

ಈ ಎರಡೂ ಮುತ್ತುಗಳು ನೆಟ್ಟಿಗರ ಅಸಮಧಾನಕ್ಕೆ ಕಾರಣವಾಗಿತ್ತು. ಈಗ ರೋಬೊ ಶಂಕರ್ ಮಗಳು ಇಂದ್ರಜಾ ತಂದೆಗೆ ಮುತ್ತು ಕೊಟ್ಟಿದ್ದರ ಬಗ್ಗೆ ಕಾರಣ ಕೊಟ್ಟಿದ್ದಾರೆ. ಅಪ್ಪನಿಗೆ ಹೀಗೆಲ್ಲ ಮುತ್ತು ಕೊಡಬೇಕಾ ಎಂದು ಟೀಕಿಸಿದ್ದರು. ಅದಕ್ಕೀಗ ಇಂದ್ರಜಾ ಉತ್ತರ ಕೊಟ್ಟಿದ್ದಾರೆ. ಅವರು ನನ್ನ ತಂದೆ. ನಾನು ಹುಟ್ಟಿದಾಗಿನಿಂದ ಅವರೊಂದಿಗೆ ನಾನು ಹೀಗೆ ಚುಂಬಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಬೆಳೆದ ಕೂಡಲೇ ನಾನು ಮಗಳಾಗುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಮುತ್ತುಕೊಟ್ಟಿದ್ದು ಖಂಡಿತಾ ತಪ್ಪಲ್ಲ. ಆದರೆ, ತಪ್ಪು ನೋಡುವವರ ದೃಷ್ಟಿಯಲ್ಲಿ ಇದೆ. ನಿಮ್ಮ ತಾಯಿ ನಿಮ್ಮನ್ನು ತಪ್ಪಾಗಿ ಬೆಳೆಸಿದ್ದಾರೆ. ತನ್ನ ಅಪ್ಪ ಸರಿಯಾಗಿಯೇ ಬೆಳೆಸಿದ್ದಾರೆಂದು ಟೀಕೆ ಮಾಡುವವರಿಗೆ ಉತ್ತರ ಕೊಟ್ಟಿದ್ದಾರೆ. ಇಬ್ಬರು ಮುತ್ತಿನ ವಿವಾದಕ್ಕೆ ಮಗಳು ಉತ್ತರ ಕೊಟ್ಟ ವಿಡಿಯೋವನ್ನೂ ಟ್ರೆಂಡ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

More from Filmibeat

English summary
Actor robo shankar daughter indraja gave reason for liplock controvery in wedding reception
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X