ಮುಂಬೈನಲ್ಲಿರೋ ತಮಿಳು ನಟ ಸೂರ್ಯ; ಚೆನ್ನೈ ನಿವಾಸಕ್ಕೆ ಪೊಲೀಸ್ ಭದ್ರತೆ

ತಮಿಳಿನ ಸ್ಟಾರ್ ಸೂರ್ಯ ಚೆನ್ನೈನಿಂದ ವಲಸೆ ಹೋದ ಸುದ್ದಿ ಕಳೆದ ಕೆಲವು ದಿನಗಳಿಂದ ಸುದ್ದಿಯಾಗಿತ್ತು. ಪತ್ನಿ ಜ್ಯೋತಿಗೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಹೆಚ್ಚು ಆಫರ್ ಬರುತ್ತಿದೆ. ಈ ಕಾರಣಕ್ಕೆ ಜ್ಯೋತಿಕಾ ಮಕ್ಕಳೊಂದಿಗೆ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಹೀಗಾಗಿ ಸೂರ್ಯ ಕೂಡ ಚೆನ್ನೈನಲ್ಲಿ ಇರೋದು ವಿರಳ ಎನ್ನಲಾಗುತ್ತಿದೆ.

ಸೂರ್ಯ ಕೂಡ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಹೀಗಾಗಿ ಶೂಟಿಂಗ್ ನಿಮಿತ್ತ ಮನೆಯಲ್ಲಿ ಇರುತ್ತಿಲ್ಲ. ಬಿಡುವು ಸಿಕ್ಕಾಗ ಮುಂಬೈಗೆ ಹೊರಟು ಹೋಗುತ್ತಾರೆ ಎನ್ನಲಾಗಿದೆ. ಹೀಗಾಗಿ ಚೆನ್ನೈನಲ್ಲಿರುವ ಬಂಗಲೆ ಖಾಲಿ ಬಿದ್ದಿದ್ದು, ಇತ್ತೀಚೆಗೆ ಪೊಲೀಸ್ ರಕ್ಷಣೆ ಕೊಟ್ಟಿರುವ ಫೋಟೊಗಳು ತಮಿಳು ನಾಡಿನಲ್ಲಿ ಸಂಚಲನ ಸೃಷ್ಟಿಸುತ್ತಿವೆ.

Actor Suriya s Chennai Home Granted Police Protection on Ministerial Advice

ತಮಿಳು ನಟ ಸೂರ್ಯ ಸದ್ಯ 'ಗಂಗುವ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೊಂದು ಕಡೆ ಅವರ ಮಗಳು ದಿಯಾ ಮತ್ತು ಮಗ ದೇವ್ ಮುಂಬೈನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಪತ್ನಿ ಜ್ಯೋತಿಕಾ ಕೂಡ ಅಲ್ಲೇ ಇರುವುದರಿಂದ ಸೂರ್ಯ ಮನೆ ಖಾಲಿ ಇತ್ತು ಎನ್ನಲಾಗಿದೆ. ಈಗ ಮಂತ್ರಿಗಳ ಶಿಫಾರಸಿನ ಮೇರೆಗೆ ಚೆನ್ನೈ ಮನೆಗೆ ಭದ್ರತೆ ಒದಗಿಸಲಾಗಿದೆ ಎಂಬ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ.

ಸೂರ್ಯ-ಜ್ಯೋತಿಕಾ ಎವರ್‌ಗ್ರೀನ್ ಜೋಡಿ

ಕಾಲಿವುಡ್‌ನ ಎವರ್‌ಗ್ರೀನ್ ಜೋಡಿ ಸೂರ್ಯ ಮತ್ತು ಜ್ಯೋತಿಕಾ. ವಿವಾದಗಳೇ ಇಲ್ಲದೆ ನೆಮ್ಮದಿಯಾಗಿ ಬದುಕು ನಡೆಸುತ್ತಿರುವ ಜೋಡಿ ಇದು. ತಮಿಳಿನಲ್ಲಿ ಇಬ್ಬರೂ ಸ್ಟಾರ್ ಪಟ್ಟಕ್ಕೇರಿರುವಾಗಲೇ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. 2006ರಲ್ಲಿ ತಮಿಳು ನಟ ಸೂರ್ಯ ಹಾಗೂ ಜ್ಯೋತಿಕಾ ಎರಡೂ ಕುಟುಂಬ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದೆ.

ಸಿನಿಮಾಗಳಲ್ಲಿ ಜ್ಯೋತಿಕಾ ಬ್ಯುಸಿ

ಸೂರ್ಯಾ ಹಾಗೂ ಜ್ಯೋತಿಕಾ ಇಬ್ಬರೂ ಮದುವೆ ಆಗಿ ಸುಮಾರು 18 ವರ್ಷಗಳಾಗಿವೆ. ಕೆಲವು ವರ್ಷಗಳ ಹಿಂದಷ್ಟೇ ಜ್ಯೋತಿಕಾ ಮತ್ತೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ್ದರು. ಒಳ್ಳೆಯ ಸಿನಿಮಾಗಳು ಇವರನ್ನು ಹುಡುಕಿಕೊಂಡು ಬರುತ್ತಿವೆ. ಸದ್ಯ ಜ್ಯೋತಿಕಾ ಈಗ ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಹಾಗೇ ತಮ್ಮ ಪತಿ ಸೂರ್ಯ ಜೊತೆ ಸೇರಿ ಸಿನಿಮಾವನ್ನೂ ನಿರ್ಮಿಸುತ್ತಿದ್ದಾರೆ.

Actor Suriya s Chennai Home Granted Police Protection on Ministerial Advice

ಸೂರ್ಯ ಮನೆಗೆ ಪೊಲೀಸ್ ಭದ್ರತೆ

ನಟಿ ಜ್ಯೋತಿಕಾ ಬಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಕೆಲವು ತಿಂಗಳ ಹಿಂದೆನೇ ಕುಟುಂಬ ಸಮೇತ ಮುಂಬೈಗೆ ಶಿಫ್ಟ್ ಆಗಿದ್ದರು. ಮಗ ಹಾಗೂ ಮಗಳು ಓದುತ್ತಿರುವುದರಿಂದ ಆಗಾಗ ಮುಂಬೈಗೆ ಹೋಗಿ ಬರುತ್ತೇನೆ. ಇಲ್ಲದಿದ್ದ ಪಕ್ಷದಲ್ಲಿ ಚೆನ್ನೈನಲ್ಲಿ ಇರುತ್ತೇನೆ ಎಂದು ಹೇಳಿದ್ದರು. ಆದ್ರೀಗ ಚೆನ್ನೈನಲ್ಲಿರುವ ಸೂರ್ಯ ಮನೆಯಲ್ಲಿ ಯಾರೊಬ್ಬರೂ ಇಲ್ಲದ ಕಾರಣ ಸಚಿವರೊಬ್ಬರ ಸಲಹೆ ಮೇರೆಗೆ ಪೊಲೀಸ್ ಭದ್ರತೆ ನೀಡಲಾಗಿದೆಯಂತೆ. ಮನೆ ಮುಂದೆ ಪೊಲೀಸರಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸೂರ್ಯಾ ಫುಲ್ ಬ್ಯುಸಿ

ತಮಿಳು ನಟ ಸೂರ್ಯ ಸದ್ಯ 'ಗಂಗುವ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ದಿಶಾ ಪಟಾನಿ, ಬಾಬಿ ಡಿಯೋಲ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಇದು ತಮಿಳು ಸೇರಿದಂತೆ ಸುಮಾರು 10 ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ. ಬಳಿಕ ಸುಧಾ ಕೊಂಗರ ನಿರ್ದೇಶನದ ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಎನ್ನಲಾಗಿದೆ.

More from Filmibeat

English summary
Actor Suriya's Chennai residence receives police protection following a ministerial recommendation, amidst his move to Mumbai for family reasons:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X