ಕೀರ್ತಿ ಸುರೇಶ್ ಮದುವೆ ಆಗಲು ಬಯಸಿದ್ದ ವಿಶಾಲ್‌; ಆದರೆ ಸಮಸ್ಯೆ ಆಗಿದ್ದೆಲ್ಲಿ?

ಸಿನಿಮಾರಂಗ ಅಂದ್ಮೇಲೆ ಲವ್ ಸ್ಟೋರಿಗಳಿಗೇನು ಕಮ್ಮಿಯಿಲ್ಲ. ದಿನಕ್ಕೊಂದು ಲವ್ ಸ್ಟೋರಿ. ದಿನಕ್ಕೊಂದು ಬ್ರೇಕಪ್ ಸ್ಟೋರಿ ಹುಟ್ಟಿಕೊಳ್ಳುತ್ತವೆ. ಈ ಕಾರಣ ಯಾವುದೇ ಚಿತ್ರರಂಗದಲ್ಲಿ ಯಾರ ಜೊತೆ ಇನ್ಯಾರೋ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋದನ್ನು ಅಚ್ಚರಿಯಿಂದ ನೋಡುವ ಕಾಲ ಹೊರಟು ಹೋಗಿದೆ. ಆದರೆ, ಕೆಲವು ಸ್ಟಾರ್ ಹೀರೋಗಳ ಜೊತೆ ಹಲವು ನಟಿಯರ ಹೆಸರುಗಳು ತಳುಕು ಹಾಕಿಕೊಂಡಿವೆ. ಇಂತಹ ಕಥೆಗಳನ್ನು ತಿಳಿದುಕೊಳ್ಳುವುದು ಅವರ ಅಭಿಮಾನಿಗಳಿಗೆ ಕುತೂಹಲ.

ತಮಿಳಿನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ವಿಶಾಲ್. ಈಗ ಅವರಿಗೆ 47 ವರ್ಷ. ಆದರೂ ಇನ್ನೂ ವಿವಾಹವಾಗಿಲ್ಲ. ಒಮ್ಮೆ ನಿಶ್ಚಿತಾರ್ಥ ಮಾಡಿಕೊಂಡಿದ್ದರೂ, ಅದು ಮುರಿದುಬಿತ್ತು. ಈ ಬೆನ್ನಲ್ಲೇ ಇತ್ತೀಚೆಗೆ ಅನಾರೋಗ್ಯದ ಬಗ್ಗೆನೂ ಸುದ್ದಿಯಾಗಿತ್ತು. ವಿಶಾಲ್ ಮದುವೆ, ಲವ್ ಸ್ಟೋರಿ, ಡೇಟಿಂಗ್ ಅಂತ ಸದಾ ಸುದ್ದಿಯಲ್ಲೇ ಇದ್ದವರು.

Actor Vishal wanted to marry Keerthy Suresh what went wrong

ತಮಿಳಿನ ಜನಪ್ರಿಯ ನಿರ್ದೇಶಕರೊಬ್ಬರು ವಿಶಾಲ್ ಬಗ್ಗೆ ಇಂಟ್ರೆಸ್ಟಿಂಗ್ ಸುದ್ದಿಯೊಂದನ್ನು ರಿವೀಲ್ ಮಾಡಿದ್ದಾರೆ. ವಿಶಾಲ್ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಕೀರ್ತಿ ಸುರೇಶ್ ಅವರನ್ನು ಮದುವೆ ಆಗಲು ಬಯಸಿದ್ದ ವಿಷಯವನ್ನು ಹೇಳಿಕೊಂಡಿದ್ದಾರೆ. ವಿಶಾಲ್ ನಟಿ ಕೀರ್ತಿ ಸುರೇಶ್ ಅವರನ್ನು ಯಾಕೆ ಮುದುವೆ ಆಗಿಲ್ಲ? ವಿಶಾಲ್ ಹಾಗೂ ಕೀರ್ತಿ ಸುರೇಶ್ ಸ್ಟೋರಿ ಹೇಳಿದ ನಿರ್ದೇಶಕ ಯಾರು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಬಹುಭಾಷಾ ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ತನ್ನ ಬಹುಕಾಲದ ಗೆಳೆಯ ಆಂಥೋನಿ ಥಟ್ಟಿಲ್ ಅವರನ್ನು ವಿವಾಹವಾಗಿದ್ದಾರೆ. ಗೋವಾದಲ್ಲಿ ತಮ್ಮ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಲ್ಲಿಂದ ಈ ನಟಿ ಫ್ಯಾಮಿಲಿ ಲೈಫ್‌ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಹೊಸ ಸಿನಿಮಾ ಯಾವುದನ್ನೂ ಅನೌನ್ಸ್ ಮಾಡಿಲ್ಲ. ಕೀರ್ತಿ ಸುರೇಶ್ ಇನ್ನೂ ಮದುವೆ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ.

Actor Vishal wanted to marry Keerthy Suresh what went wrong

ಈ ಮಧ್ಯೆ ತಮಿಳಿನ ಜನಪ್ರಿಯ ನಿರ್ದೇಶಕ ಎನ್.ಲಿಂಗುಸ್ವಾಮಿ ಸಂದರ್ಶನವೊಂದನ್ನು ನೀಡಿದ್ದರು. ಅದರಲ್ಲಿ ಕೀರ್ತಿ ಸುರೇಶ್ ಹಾಗೂ ವಿಶಾಲ್ ಬಗ್ಗೆ ಗೊತ್ತಿರದ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ. ವಿಶಾಲ್ 'ಮಹಾನಟಿ' ಕೀರ್ತಿ ಸುರೇಶ್ ಅವರನ್ನು ವಿವಾಹವಾಗುವುದಕ್ಕೆ ಮನಸ್ಸು ಮಾಡಿದ್ದರಂತೆ. ಈ ಮದುವೆಗೆ ಕೀರ್ತಿ ಸುರೇಶ್ ಅನ್ನು ಒಪ್ಪಿಸುವುದಕ್ಕೆ ಸ್ವತ: ಎನ್.ಲಿಂಗುಸ್ವಾಮಿಯೇ ಸಾರಥ್ಯ ವಹಿಸಿದ್ದರು. ಈ ಮಾತನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇದೇ ಬಹಳ ಹಿಂದೆ ನಡೆದ ಘಟನೆಯಲ್ಲ. 2018ರಲ್ಲಿ ಕೀರ್ತಿ ಸುರೇಶ್ ಹಾಗೂ ವಿಶಾಲ್ 'ಸಂಡಕೋಳಿ 2' ಸಿನಿಮಾದಲ್ಲಿ ನಟಿಸಿದ್ದರು. ಇಬ್ಬರೂ ಹೀರೋ ಹೀರೋಯಿನ್ ಆಗಿ ನಟಿಸಿ ಜನರ ಮನಸ್ಸು ಗೆದ್ದಿದ್ದರು. ಈ ವೇಳೆ ವಿಶಾಲ್‌ಗೆ ಕೀರ್ತಿ ಸುರೇಶ್ ಮೇಲೆ ಮನಸಾಗಿತ್ತು. ಅವರನ್ನು ಮದುವೆ ಆಗುವುದಕ್ಕೆ ಬಯಸಿದ್ದರು. ಹೀಗಾಗಿ ವಿಶಾಲ್ ತಂದೆ ನಿರ್ಮಾಪಕ ಜಿಕೆ ರೆಡ್ಡಿ ಇಬ್ಬರ ಮದುವೆ ಮಾಡಿಸುವುದಕ್ಕೆ ಮುಂದಾಗಿದ್ದರು. ಆಗ 'ಸಂಡಕೋಳಿ 2' ನಿರ್ದೇಶಿಸುತ್ತಿದ್ದ ಲಿಂಗುಸ್ವಾಮಿಯನ್ನೇ ಮುಂದೆ ಬಿಟ್ಟಿದ್ದರು.

ವಿಶಾಲ್ ತಂದೆ ಮನವಿಯಂತೆ ನಿರ್ದೇಶಕ ಲಿಂಗುಸ್ವಾಮಿ ಹೋಗಿ ಕೀರ್ತಿ ಸುರೇಶ್ ಬಳಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದರು. ಆದರೆ, ಕೀರ್ತಿ ಸುರೇಶ್ ಈ ಪ್ರಪೋಸಲ್ ಅನ್ನು ನಿರಾಕರಿಸಿದ್ದರು. ವಿಶಾಲ್ ಜೊತೆ ಮದುವೆ ಆಗುವುದಿಲ್ಲ ಅಂತ ಕಟ್ಟಿ ಮುರಿದಂತೆ ಹೇಳಿದ್ದರು. ಅದಕ್ಕೆ ಕಾರಣ ಅದಾಗಲೇ ಕೀರ್ತಿ ಈಗ ಮದುವೆ ಆಗಿರುವ ಆಂಥೋನಿ ಥಟ್ಟಿಲ್ ಅವರನ್ನು ಪ್ರೀತಿಸುತ್ತಿದ್ದರು. 12ನೇ ತರಗತಿಯಿಂದಲೇ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದರು. ಹೀಗಾಗಿ ಈ ಮದುವೆ ನಡೆಯಲಿಲ್ಲ ಎಂದು ನಿರ್ದೇಶಕ ಲಿಂಗುಸ್ವಾಮಿ ಹೇಳಿಕೊಂಡಿದ್ದಾರೆ. ಇನ್ನು ವಿಶಾಲ್ ಜೊತೆ ತಮಿಳಿನ ಹಲವು ನಟಿಯರು ಹೆಸರು ತಳುಕು ಹಾಕಿಕೊಂಡಿದೆ.

More from Filmibeat

English summary
Actor Vishal wanted to marry Keerthy Suresh say director N Linguswamy. What went wrong?
Read more about: vishal keerthy suresh marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X