"ರಜನಿ ಸರ್ ಇದ್ದಕ್ಕಿದ್ದಂತೆ ನನ್ನ ಕೆನ್ನೆಗೆ ಚಿವುಟಿದ್ದು ನೋಡಿ ಶಾಕ್ ಆಯ್ತು"; ಕಾಲಿವುಡ್ ಯುವ ನಟಿ

ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ನಟಿಸಬೇಕು ಅನ್ನೋದು ಹಲವು ನಟಿಯರ ಆಸೆ. ಕೆಲವರಿಗೆ ಅವರ ವೃತ್ತಿ ಬದುಕಿನ ಆರಂಭದಲ್ಲಿಯೇ ಈಡೇರಿದೆ. ಮತ್ತೆ ಕೆಲವರು ಇನ್ನೂ ಅವಕಾಶವನ್ನು ಎದುರು ನೋಡುತ್ತಲೇ ಇದ್ದಾರೆ. ಇಂದಿಗೂ ಅದೆಷ್ಟೋ ನಟಿಯರು ರಜನಿ ಪಕ್ಕದಲ್ಲಿ ನಿಲ್ಲುವ ಅವಕಾಶ ಸಿಕ್ಕರೂ ಸಾಕು ಎಂದು ಎದುರು ನೋಡುತ್ತಿದ್ದಾರೆ.

ಇಂತಹದ್ದೇ ಒಂದು ಅವಕಾಶ ಗಿಟ್ಟಿಸಿಕೊಂಡಿದ್ದ ತಮಿಳು ಚಿತ್ರರಂಗದ ಯುವ ನಟಿ ಬ್ರಾನಾ. ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ್ದ 'ಅಣ್ಣಾತ್ತೆ' ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರದಲ್ಲಿ ಯುವ ನಟಿ ಬಣ್ಣ ಹಚ್ಚಿದ್ದರು. ಈ ಸಿನಿಮಾದಲ್ಲಿ ಸೂಪರ್‌ಸ್ಟಾರ್ ಜೊತೆ ನಟಿಸಿದ ಕ್ಷಣಗಳನ್ನು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮೆಲುಕು ಹಾಕಿದ್ದಾರೆ.

Actress Brana says that while shooting Annaatthe Rajinikanth suddenly pinched her chin

'ಅಣ್ಣಾತ್ತೆ' ಸಿನಿಮಾದ ಹಾಡಿನ ಚಿತ್ರೀಕರಣದ ವೇಳೆ ರಜನಿಕಾಂತ್ ಇದ್ದಕ್ಕಿದ್ದ ಹಾಗೆ ಬಂದು ಯುವ ಬ್ರಾನಾ ಕೆನ್ನೆ ಚಿವುಟಿದ್ದರಂತೆ. ಆ ಘಟನೆಯನ್ನು ಬ್ರಾನಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಯುವ ನಟಿ ಬ್ರಾನಾ ಹೇಳಿದ ಘಟನೆಯ ಅಸಲಿ ಹಿನ್ನೆಲೆಯೇನು? ಅಂತ ತಿಳಿಯುವುದಕ್ಕೂ ಮುನ್ನ ಬ್ರಾನಾ ಯಾರು ಅನ್ನೋದನ್ನು ನೋಡೋಣ.

ತಮಿಳುನಾಡಿನ ಯುವ ನಟಿ ಬ್ರಾನಾ ಈಗಾಗಲೇ ಹಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಸಲಿಗೆ ಈ ನಟಿ ಶ್ರೀಲಂಕಾದಲ್ಲಿ ಶಿಕ್ಷಣ ಮುಗಿಸಿದ್ದಾರೆ. ಓದುತ್ತಿರುವಾಗಲೇ ಬ್ರಾನಾ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಬಳಿಕ ನಟನೆ ಮೇಲೆ ಆಸಕ್ತಿ ಮೂಡಿತ್ತು. ಹೀಗಾಗಿ ತಮಿಳುನಾಡಿಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ಸಿನಿಮಾದಲ್ಲಿ ನಟಿಸಲು ಅವಕಾಶಗಳಿಗಾಗಿ ಅಲೆದಾಡಿದ್ದರು.

27 ವರ್ಷದ ಈ ಯುವ ನಟಿಗೆ ಆರಂಭದಲ್ಲಿ ನಾಚಿಕೆ ಸ್ವಭಾವ ಇತ್ತು. ಹೀಗಾಗಿ ಅವರಿಗೆ ಆರಂಭದ ದಿನಗಳಲ್ಲಿ ಹೆಚ್ಚು ಅವಕಾಶಗಳಿ ಸಿಕ್ಕಿರಲಿಲ್ಲ. ಸಿನಿಮಾಗಳಿಗೆ ಅವಕಾಶವನ್ನು ಹುಡುಕುವ ಸಂದರ್ಭದಲ್ಲಿ ನಟಿಯರಿಗೆ ದೇಹ ಸೌಂದರ್ಯ ಕೂಡ ಮುಖ್ಯ ಅನ್ನೋದನ್ನು ಅರಿತುಕೊಂಡಿದ್ದರು. ಆ ದಿನದಿಂದ ತನ್ನ ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ಯತ್ನಸಿದ್ದರು. ಬಳಿಕ ಒಂದೊಂದೇ ಅವಕಾಶಗಳು ಇವರನ್ನು ಅರಸಿ ಬಂದಿದ್ದವು.

Actress Brana says that while shooting Annaatthe Rajinikanth suddenly pinched her chin

ದಳಪತಿ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾ ಮೂಲಕ ನಟಿ ಬ್ರಾನಾ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇಲ್ಲಿಂದ ನಟಿ ಬ್ರಾನಾ ಸಿನಿಮಾ ಜರ್ನಿ ಆರಂಭ ಆಗಿತ್ತು. ಬಳಿಕ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಅಣ್ಣಾತ್ತೆ' ಸಿನಿಮಾದಲ್ಲೂ ನಟಿಸಿದ್ದರು. ಈ ವೇಳೆ ಹಾಡಿನ ಚಿತ್ರೀಕರಣದ ವೇಳೆ ರಜನಿಕಾಂತ್ ದಿಢೀರನೇ ಬಂದು ಕೆನ್ನೆ ಚಿವುಟಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

'ಅಣ್ಣಾತ್ತೆ' ಸಿನಿಮಾದ ಒಂದು ಹಾಡಿನಲ್ಲಿ ನಟಿಸಲು ಮಾತ್ರ ಅವಕಾಶ ಸಿಕ್ಕಿತ್ತು. ಆ ವೇಳೆ ರಜನಿಕಾಂತ್ ಕೂಡ ಹಾಡಿನಲ್ಲಿ ಭಾಗವಹಿಸಿದ್ದರು. ಹಾಡಿನ ಚಿತ್ರೀಕರಣ ನಡೆಯುತ್ತಿರುವಾಗಲೇ ಸೂಪರ್‌ಸ್ಟಾರ್ ರಜನಿಕಾಂತ್ ಬಂದು ಈ ಯುವ ನಟಿಯ ಕೆನ್ನೆ ಚಿವುಟಿದ್ದರು. ಇದನ್ನು ನೋಡಿ ನನಗೆ ಶಾಕ್ ಆಯ್ತು. ಇದು ಸೀನ್ ಇರಲೇ ಇಲ್ಲ. ಆದರೆ, ರಜನಿ ಸರ್ ಸ್ಪಾಟ್‌ನಲ್ಲಿ ಮಾಡಿದ್ದರೆಂದು ಯುವ ನಟಿ ಹೇಳಿಕೊಂಡಿದ್ದಾರೆ.

ಬಳಿಕ ನಿರ್ದೇಶಕರು ಈ ದೃಶ್ಯವನ್ನು ನೋಡಿ, ಚೆನ್ನಾಗಿದೆ ಎಂದು ಮತ್ತೆ ಮಿಡ್ ಶಾಟ್‌ಗಳನ್ನು ಇಟ್ಟು ಶೂಟ್ ಮಾಡಿದ್ದರು. ಆ ಹಾಡಿನ ಬಳಿಕ ರಜನಿ ಗಲ್ಲಕ್ಕೆ ಮುತ್ತಿಕ್ಕುವ ಹುಡುಗಿಯಾಗಿ ಸಿನಿಮಾ ವಲಯದಲ್ಲಿ ಫೇಮಸ್ ಆಗಿದ್ದಾಗಿ ಯುವ ನಟಿ ಬ್ರಾನಾ ಹೇಳಿಕೊಂಡಿದ್ದಾರೆ.

More from Filmibeat

English summary
Actress Brana about Rajinikanth story while shooting Annaatthe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X