"ಡೈರೆಕ್ಟರ್ ಶಂಕರ್‌ಗೆ ಸ್ವಿಮ್ ಸೂಟ್ ಹಾಕಿದ ಫೋಟೊ ಕಳ್ಸಿದ್ದೆ..ಆಯ್ಕೆ ಆಗಿದ್ದು ಮಾತ್ರ ಊರ್ಮಿಳಾ"-ನಟಿ ಕಸ್ತೂರಿ

ದಕ್ಷಿಣ ಭಾರತದ ನಟಿ ಕಸ್ತೂರಿ ಸಿನಿಮಾ ಹಾಗೂ ಕಿರುತೆರೆಯಲ್ಲಿ ಜನಪ್ರಿಯ ನಟಿ. ಈಕೆ ಕನ್ನಡದಲ್ಲೂ ನಟಿಸಿ ಗಮನ ಸೆಳೆದಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ 'ಜಾಣ', ರಮೇಶ್ ಅರವಿಂದ್ ಜೊತೆ 'ತುತ್ತಾ ಮುತ್ತಾ' ಕನ್ನಡದಲ್ಲಿ ನಟಿಸಿದ ಫೇಮಸ್ ಸಿನಿಮಾಗಳು.

ಇತ್ತೀಚೆಗೆ ನಟಿ ಕಸ್ತೂರಿ ಚಿತ್ರರಂಗದಲ್ಲಿ ತಮಗಾದ ಅನುಭವಗಳನ್ನು ಓಪನ್ ಆಗಿ ಮಾತಾಡುತ್ತಿದ್ದಾರೆ. ಇಂಡಸ್ಟ್ರಿಯಲ್ಲಿ ತಮಗಾದ ಕಹಿ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದಾರೆ. ನಿರ್ಭಯವಾಗಿ ಚಿತ್ರರಂಗದ ವಿರುದ್ಧ ಆಗಾಗ ಗುಡುಗುತ್ತಲೇ ಇದ್ದಾರೆ.

kasturi-shankar-urmila-indian

ತಮಿಳಿನಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಕಸ್ತೂರಿ ಸೂಪರ್‌ಸ್ಟಾರ್ ರಜನಿಕಾಂತ್ ಅನ್ನೂ ಬಿಟ್ಟಿಲ್ಲ. ತಮಿಳಿನ ಸ್ಟಾರ್ ನಟರು ಹಾಗೂ ನಿರ್ದೇಶಕರ ವಿರುದ್ಧ ಮಾತಾಡಿದ್ದಾರೆ. ಕೆಲವು ದಿನಗಳ ಹಿಂದೆ ತೆಲುಗು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಸ್ತೂರಿ ದುಬಾರಿ ನಿರ್ದೇಶಕ ಶಂಕರ್ ವಿರುದ್ಧವೂ ಗುಡುಗಿದ್ದಾರೆ. ಅಷ್ಟಕ್ಕೂ ಇಬ್ಬರ ನಡುವೆ ಅಂತಹದ್ದೇನಾಗಿತ್ತು? ತಿಳಿಯಲು ಮುಂದೆ ಓದಿ..

'ಇಂಡಿಯನ್' ಸಿನಿಮಾಗೆ ನಾಯಕಿಯಾಗ್ಬೇಕಿತ್ತು

ಕಮಲ್ ಹಾಸನ್ ಹಾಗೂ ಶಂಕರ್ ಕಾಂಬಿನೇಷನ್‌ನಲ್ಲಿ 1996ರಲ್ಲಿ ತೆರೆಕಂಡಿದ್ದ 'ಇಂಡಿಯನ್' ಮೆಗಾ ಹಿಟ್ ಆಯ್ತು. ಈ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಲು ಕಸ್ತೂರಿ ಬಯಸಿದ್ದರು. ಗ್ಲಾಮರ್ ಪಾತ್ರ ಆದರೂ ಸರಿ ಅದಕ್ಕೆ ರೆಡಿಯಿದ್ದರು. ನಿರ್ದೇಶಕ ಶಂಕರ್ ಮನವೊಲಿಸುವುದಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ, ಕಸ್ತೂರಿ ಬಯಸಿದ ಪಾತ್ರ ಸಿಗಲೇ ಇಲ್ಲ. ಬೇರೊಂದು ಪಾತ್ರಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯ್ತು.

ಊರ್ಮಿಳಾ ಪಾಲಾಯ್ತು ಆ ಪಾತ್ರ

ಆಗತಾನೇ ರಾಮ್‌ ಗೋಪಾಲ್ ವರ್ಮಾ ನಿರ್ದೇಶಿಸಿದ 'ರಂಗೀಲಾ' ಸಿನಿಮಾ ರಿಲೀಸ್ ಆಗಿತ್ತು. ಊರ್ಮಿಳಾ ಆಗ ಗ್ಲಾಮರಸ್ ನಟಿಯಾಗಿ ಹೊರಹೊಮ್ಮಿದ್ದರು. ಅಲ್ಲದೇ 'ರಂಗೀಲಾ' ಸಿನಿಮಾದ ತನ್ಹಾ ತನ್ಹಾ ಹಾಡಿನ ಬಗ್ಗೆ ಚರ್ಚೆಯಾಗುತ್ತಿತ್ತು. ಎಲ್ಲರ ಬಾಯಲ್ಲೂ ಅದೇ ಹಾಡು. ಹೀಗಾಗಿ ಶಂಕರ್ ಮನಸ್ಸಿನಲ್ಲಿ ಊರ್ಮಿಳಾ ಮತೊಂಡ್ಕರ್ ಇದ್ದರು ಎಂದು ಕಸ್ತೂರಿ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು.

kasturi-shankar-urmila-indian

ಸ್ವಿಮ್ ಸೂಟ್ ಫೋಟೊಗೂ ಜಗ್ಗಲಿಲ್ಲ ಶಂಕರ್

ಕಮಲ್ ಹಾಸನ್ ಸಿನಿಮಾ 'ಇಂಡಿಯನ್‌'ನಲ್ಲಿ ಊರ್ಮಿಳಾರದ್ದು ಗ್ಲಾಮರಸ್ ರೋಲ್ ಆಗಿತ್ತು. ಹೀಗಾಗಿ ಕಸ್ತೂರಿ ಸ್ವಿಮ್ ಸೂಟ್‌ನಲ್ಲಿ ಫೋಟೊ ತೆಗೆಸಿ ಶಂಕರ್‌ಗೆ ಕಳುಹಿಸಿಕೊಟ್ಟಿದ್ದರು. ಆದರೂ ಶಂಕರ್ ಈಕೆಯನ್ನು ನಾಯಕಿ ಪಾತ್ರಕ್ಕೆ ಪರಿಗಣನೆಗೆ ತೆಗೆದುಕೊಳ್ಳಲ್ಲ. ಹೀಗಾಗಿ ಕಸ್ತೂರಿಗೆ 'ಇಂಡಿಯನ್' ಸಿನಿಮಾದಲ್ಲಿ ಕಮಲ್ ಹಾಸನ್ ತಂಗಿಯಾಗಿ ನಟಿಸಬೇಕಾಯ್ತು. ಆರಂಭದಲ್ಲಿ ಈ ಪಾತ್ರದಲ್ಲಿ ನಟಿಸಲು ಹಿಂದೇಟು ಹಾಕಿದ್ದರೂ, ಬಳಿಕ ಒಪ್ಪಿಕೊಂಡಿದ್ದರು.

ಭಾರತಿರಾಜ ಶಂಕರ್ ಬಗ್ಗೆ ದೂರು

ಕಸ್ತೂರಿ ಶಂಕರ್ ಆರೋಪ ದೊಡ್ಡದಿತ್ತು. ದಕ್ಷಿಣ ಭಾರತ ಕಂಡ ಇಬ್ಬರು ಜನಪ್ರಿಯರ ನಿರ್ದೇಶಕರಲ್ಲಿ ಭಾರತಿರಾಜ ಹಾಗೂ ಶಂಕರ್ ಕೂಡ ಸೇರುತ್ತಾರೆ. ಈ ಇಬ್ಬರೂ ನಿರ್ದೇಶಕರಿಗೆ ಬೆಳ್ಳಗಿರುವ ಹುಡುಗಿಯರೇ ನಾಯಕಿಯಾಗಬೇಕು. ಅದಕ್ಕಾಗಿಯೇ ಉತ್ತರ ಭಾರತದಿಂದ ಕರೆದುಕೊಂಡು ಬರುತ್ತಾರೆ. ಶಂಕರ್ ವಿದೇಶಿ ನಟಿಯನ್ನೇ ಕರೆದುಕೊಂಡು ಬರುತ್ತಾರೆ ಎಂದು ಆರೋಪ ಮಾಡಿದ್ದರು.

More from Filmibeat

English summary
Kasturi interested to act in Urmila Matondkar role in Indian Movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X