ಕೀರ್ತಿ ಸುರೇಶ್ ಪ್ರತಿಕ್ರಿಯೆಗಾಗಿ 234 ದಿನ ಕಾದಿದ್ದ ಅಭಿಮಾನಿ; ಕೊನೆಗೂ ಸಿಕ್ಕ ರಿಪ್ಲೈನಲ್ಲಿ ನಟಿ ಹೇಳಿದ್ದೇನು?
ದಕ್ಷಿಣ ಭಾರತದ ಜನಪ್ರಿಯ ನಟಿ ಕೀರ್ತಿ ಸುರೇಶ್. ಈ ನಟಿಗೆ ವಿಶ್ವದ ಮೂಲೆ ಮೂಲೆಯಲ್ಲಿ ಕ್ರೇಜಿ ಅಭಿಮಾನಿಗಳಿದ್ದಾರೆ. ತಮ್ಮ ಅಭಿಮಾನವನ್ನು ಚಿತ್ರ-ವಿಚಿತ್ರವಾಗಿ ತೋರಿಸುತ್ತಲೇ ಇರುತ್ತಾರೆ. ಇಂತಹ ಸಾಕಷ್ಟು ಉದಾಹರಣೆಗಳು ಪ್ರತಿ ದಿನ ಏನಾದರೂ ಒಂದು ಸಿಗುತ್ತಲೇ ಇರುತ್ತೆ. ಇಲ್ಲೊಬ್ಬ ಕೀರ್ತಿ ಸುರೇಶ್ ಹುಚ್ಚು ಅಭಿಮಾನಿ ಕಥೆ ಕೂಡ ಇದ್ಯಾವುದಕ್ಕೂ ಕಮ್ಮಿಯಿಲ್ಲ.
ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಕೇವಲ ತಮಿಳು ಸಿನಿಮಾಗಳಷ್ಟೇ ಅಲ್ಲ. ಹಲವು ತೆಲುಗು ಸಿನಿಮಾಗಳಲ್ಲೂ ನಟಿಸಿ ಗೆದ್ದಿದ್ದಾರೆ. ಹಾಗೇ ಬೆರಳೆಣಿಕೆಯಷ್ಟು ಮಲಯಾಳಂ ಸಿನಿಮಾಗಳಲ್ಲೂ ನಟಿಸಿ ಮನಗೆದ್ದಿದ್ದಾರೆ. ಈ ಮೂರು ಭಾಷೆಯಲ್ಲಿ ಯಶಸ್ಸು ಗಳಿಸಿದ ಬಳಿಕ ಬಾಲಿವುಡ್‌ಗೂ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಹೀಗಾಗಿ ದಕ್ಷಿಣ ಭಾರತದಲ್ಲಿ ಕೀರ್ತಿ ಸುರೇಶ್‌ಗೆ ಹೆಚ್ಚು ಅಭಿಮಾನಿಗಳಿದ್ದಾರೆ. ಸಿನಿಮಾಗಳಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾಗಳಲ್ಲೂ ಈ ನಟಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಕೀರ್ತಿ ಸುರೇಶ್ ಇನ್‌ಸ್ಟಾಗ್ರಾಂನಲ್ಲಿ ಸುಮಾರು 17.3 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅದೇ ಎಕ್ಸ್ ಖಾತೆಯಲ್ಲಿ (ಟ್ವಿಟರ್) ಸುಮಾರು 5.7 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಇಷ್ಟು ದೊಡ್ಡ ಬೆಂಬಲಿಗರೋ ಅಭಿಮಾನಿಗಳ ಪೋಸ್ಟ್‌ಗೆ ತಾರೆಯರು ಸಾಮಾನ್ಯವಾಗಿ ಪ್ರತಿಕ್ರಿಯೆ ನೀಡೋದು ವಿರಳ. ಕೀರ್ತಿ ಸುರೇಶ್ ಅಪ್ಪ ಅಭಿಮಾನಿಯೊಬ್ಬ ಕಳೆದ ಒಂದು ವರ್ಷದಿಂದ ತನ್ನ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಬೇಕು ಎಂದು ಬಯಸಿದ್ದ. ಹೀಗಾಗಿ ಕೀರ್ತಿ ಸುರೇಶ್ ಪ್ರತಿಕ್ರಿಯೆ ನೀಡುವವರೆಗೂ ಪ್ರತಿ ದಿನವೂ ಟ್ವೀಟ್ (ಎಕ್ಸ್) ಮಾಡುತ್ತಿದ್ದ. ಕೊನೆಗೂ ಹೆಚ್ಚು ಕಡಿಮೆ ಒಂದು ವರ್ಷದ ಬಳಿಕ ಕೀರ್ತಿ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು, ಕೃಷ್ಣ ಅನ್ನುವ ಅಭಿಮಾನಿಯೊಬ್ಬ ಕೀರ್ತಿ ಸುರೇಶ್‌ಗೆ ಕಳೆದ ವರ್ಷ ಟ್ವೀಟ್ ಮಾಡಿ ಕೀರ್ತಿ ಸುರೇಶ್ ಪ್ರತಿಕ್ರಿಯಿಸುವಂತೆ ಟ್ಯಾಗ್ ಮಾಡಿದ್ದ. ಆದರೆ, ಕೀರ್ತಿ ಸುರೇಶ್ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಅಲ್ಲಿಂದ ಪ್ರತಿ ದಿನ ಕೀರ್ತಿ ಸುರೇಶ್ ರಿಪ್ಲೈ ಮಾಡುವವರೆಗೂ ಟ್ವೀಟ್ ಮಾಡುತ್ತಲೇ ಇದೆ. ನಿನ್ನೆವರೆಗೂ (ಜನವರಿ 23) ಅಭಿಮಾನಿ ಕೃಷ್ಣ ದಿನಕ್ಕೊಂದರಂತೆ 234 ಟ್ವೀಟ್‌ಗಳನ್ನು ಮಾಡಿದ್ದ. ಕೊನೆಗೆ 234ನೇ ಟ್ವೀಟ್‌ಗೆ ಕೀರ್ತಿ ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ಪ್ರತಿ ದಿನದಂತೆ ಅಭಿಮಾನಿ ಕೃಷ್ಣ "ಕೀರ್ತಿ ಸುರೇಶ್ ರಿಪ್ಲೈ ಮಾಡುವವರೆಗೂ ಕೀರ್ತಿಸುರೇಶ್ ಟ್ವೀಟ್ ಮಾಡುತ್ತಿರುತ್ತೇನೆ" ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ. ಅದಕ್ಕೆ ಕೀರ್ತಿ ಸುರೇಶ್ ಪ್ರತಿಕ್ರಿಯಿಸಿದ್ದು, " ಓಹೋ.. 234 ಇದು ಫ್ಯಾನ್ಸಿ ನಂಬರ್! ಇಷ್ಟು ದಿನ ನೀವು ಕಾದಿದ್ದಕ್ಕೆ ಕ್ಷಮೆಯಿರಲಿ. ಪ್ರೀತಿ ಇರಲಿ" ಎಂದು ನಟಿ ಕೀರ್ತಿ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರೋದಾರೆ, ಕೀರ್ತಿ ಸುರೇಶ್ ಕೈ ತುಂಬಾ ಸಿನಿಮಾಗಳಿವೆ. ತಮಿಳಿನಲ್ಲಿ 'ರಘು ತಾತ', 'ರಿವಾಲ್ವರ್ ರಾಣಿ', 'ಕನ್ನಿವೇಡಿ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗೇ ಬಾಲಿವುಡ್ ಸಿನಿಮಾ ಕೂಡ ಒಪ್ಪಿಕೊಂಡಿದ್ದು, ವರಣ್ ಧವನ್ 18ನೇ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು 2016ರಲ್ಲಿ ತೆರೆಕಂಡಿದ್ದ ದಳಪತಿ ವಿಜಯ್ ನಟನೆಯ 'ತೇರಿ' ಸಿನಿಮಾದ ರಿಮೇಕ್. ಈ ಸಿನಿಮಾವನ್ನು ತಮಿಳು ನಿರ್ದೇಶಕ ಅಟ್ಲಿ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











