ಅತ್ಯಾಚಾರದ ಬೆದರಿಕೆ ಹಾಕಿದ ವ್ಯಕ್ತಿ: ನಟಿ ಖುಷ್ಬೂ ಮಾಡಿದ್ದೇನು ಗೊತ್ತೇ?

ನಟಿ, ರಾಜಕಾರಣಿ ಖುಷ್ಬೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸದಸ್ಯೆಯಾಗಿರುವ ಅವರು, ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿರುತ್ತಾರೆ. ಬಿಜೆಪಿ ಮತ್ತು ಅದರ ಅನುಯಾಯಿಗಳನ್ನು ನಿರಂತರವಾಗಿ ಟೀಕಿಸುತ್ತಿರುತ್ತಾರೆ. ಇದರಿಂದ ಆಗಾಗ್ಗೆ ಬೆದರಿಕೆಗಳನ್ನೂ ಎದುರಿಸುತ್ತಿರುತ್ತಾರೆ. ಅದಕ್ಕೆ ತಕ್ಕ ಪ್ರತಿಕ್ರಿಯೆ ಸಹ ನೀಡುತ್ತಿರುತ್ತಾರೆ. ಆದರೆ ಅವರಿಗೆ ಅತ್ಯಾಚಾರದ ಬೆದರಿಕೆ ಬಂದಿದ್ದು, ತಮಗೆ ಬೆದರಿಕೆ ಹಾಕಿದಾತನ ಫೋನ್ ನಂಬರ್ ಅನ್ನು ಖುಷ್ಬೂ ಬಹಿರಂಗಪಡಿಸಿದ್ದಾರೆ.

Recommended Video

KGF Garuda ಖ್ಯಾತಿಯ RamChandra , Chapter 2 ಬಗ್ಗೆ ಹೇಳೋದೇನು - Part 1 | Filmibeat Kannada

ಟ್ವಿಟ್ಟರ್‌ನಲ್ಲಿ ಆ ವ್ಯಕ್ತಿಯ ವಿವರಗಳನ್ನು ಬಹಿರಂಗವಾಗಿ ಹಂಚಿಕೊಂಡಿರುವ ಖುಷ್ಬೂ, ಈ ನಂಬರ್‌ನಿಂದ ನನಗೆ ಅತ್ಯಾಚಾರದ ಬೆದರಿಕೆ ಕರೆಗಳು ಬರುತ್ತಿವೆ. ಆತನ ಹೆಸರು ಸಂಜಯ್ ಶರ್ಮಾ ಎಂದು ತೋರಿಸುತ್ತಿದೆ. ಈ ಕರೆಗಳನ್ನು ಕೋಲ್ಕತಾದಿಂದ ಮಾಡಲಾಗುತ್ತಿದೆ. ಕೋಲ್ಕತಾ ಪೊಲೀಸರು ಕೂಡಲೇ ಇದರ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಮುಂದೆ ಓದಿ...

ಮುಸ್ಲಿಮಳಾಗಿರುವ ಕಾರಣಕ್ಕೆ...

ಮುಸ್ಲಿಮಳಾಗಿರುವ ಕಾರಣಕ್ಕೆ...

ನಾನು ಮುಸ್ಲಿಮಳಾಗಿರುವ ಕಾರಣದಿಂದ ಅತ್ಯಾಚಾರಕ್ಕೆ ಅರ್ಹಳಾಗಿದ್ದೇನೆ ಎಂದು ಆ ವ್ಯಕ್ತಿ ಕರೆ ಮಾಡಿ ಹೇಳುತ್ತಿದ್ದಾನೆ. ಇದು ನಿಜವಾಗಿಯೂ ಶ್ರೀರಾಮನ ಭೂಮಿಯೇ ಎಂದು ನಮ್ಮ ಪ್ರಧಾನಿಯವರು ನನಗೆ ತಿಳಿಸುತ್ತಾರೆಯೇ? ಎಂದು ಖುಷ್ಬೂ ಪ್ರಶ್ನಿಸಿದ್ದಾರೆ.

ಬೇರೆಯವರಿಗೆ ಹೇಗೆ ಆಗಬಹುದು?

ಬೇರೆಯವರಿಗೆ ಹೇಗೆ ಆಗಬಹುದು?

ಈತನ ನಂಬರ್ ಹಾಕುವ ಮೂಲಕ ಖುಷ್ಬೂ ಸುಮ್ಮನಾಗಿಲ್ಲ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟ್ಯಾಗ್ ಮಾಡಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೀದಿ ಈ ಪ್ರಕರಣದ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡುತ್ತೇನೆ. ಇದು ನನಗೇ ಆಗುವಂತಿದ್ದರೆ ಇತರೆ ಮಹಿಳೆಯರ ಸಂಕಷ್ಟಗಳನ್ನು ಊಹಿಸಿಕೊಳ್ಳಿ ಎಂದು ಹೇಳಿದ್ದಾರೆ.

ಸಾರ್ವಜನಿಕವಾಗಿ ಅವಮಾನಿಸಬೇಕು

ಸಾರ್ವಜನಿಕವಾಗಿ ಅವಮಾನಿಸಬೇಕು

ಆ ವ್ಯಕ್ತಿಯ ಹೆಸರು ಮತ್ತು ಸಂಖ್ಯೆಯನ್ನು ಬಹಿರಂಗಗೊಳಿಸಿದ್ದು ಏಕೆ? ಇದನ್ನು ಸಾರ್ವಜನಿಕವಾಗಿ ತೋರಿಸುವುದರಿಂದ ಏನನ್ನು ಹೇಳಲು ಹೊರಟಿದ್ದೀರಿ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಖುಷ್ಬೂ, ಆ ವ್ಯಕ್ತಿಗೆ ಒಂದು ಕುಟುಂಬ ಇದೆ ಎನ್ನುವುದು ನನಗೆ ಖಾತರಿಯಿದೆ. ಇಂತಹ ಸೂ... ಮಕ್ಕಳನ್ನು ಸಾರ್ವಜನಿಕವಾಗಿ ಅವಮಾನಿಸಬೇಕು ಎಂದಿದ್ದಾರೆ.

ಮನೆಯವರಿಗೂ ಹೀಗೆಯೇ ಮಾಡುತ್ತಾರೆಯೇ?

ಮನೆಯವರಿಗೂ ಹೀಗೆಯೇ ಮಾಡುತ್ತಾರೆಯೇ?

ಇದಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ಗಮನಿಸಿದ ಖುಷ್ಬೂ, ನನಗೆ ಬಂದ ಅತ್ಯಾಚಾರ ಬೆದರಿಕೆಗೆ ಮಾಡಿದಂತೆಯೇ ಎಲ್ಲ ಭಕ್ತರೂ ತಮ್ಮ ಕುಟುಂಬಗಳ ಮಹಿಳೆಯರಿಗೆ ಬೆದರಿಕೆ ಬಂದಾಗ ಇದೇ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ನನಗೆ ಗೊತ್ತು. ಅಥವಾ ಹೇಡಿಗಳು ತಮ್ಮ ನಿಲುವನ್ನು ಬದಲಿಸಿಕೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

More from Filmibeat

English summary
Actress, politician Khushbu Sunder has shared a contact number of the person who is giving her rape threats.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X