Ravinder-Mahalakshmi: "ನನಗೆ ಮೊದಲಿನಂತೆ ಪ್ರೀತಿಸಬೇಕು" ಪತಿ ಜೈಲಿನಿಂದ ಹೊರಬರುತ್ತಿದ್ದಂತೆ ಮಹಾಲಕ್ಷ್ಮಿ ಪತ್ರ
ಸೋಶಿಯಲ್ ಮೀಡಿಯಾ ಜೋಡಿ ತಮಿಳು ಕಿರುತೆರೆ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಯಾವಾಗಲೂ ಟ್ರೆಂಡಿಂಗ್‌ನಲ್ಲಿ ಇರುತ್ತಾರೆ. ಅವರೇ ಬೇಕಂತ ಮಾಡುತ್ತಾರೋ.. ಇಲ್ಲ ಮಾಡಿದ್ದೆಲ್ಲ ಟ್ರೋಲ್ ಆಗುತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಜೋಡಿ ಸದಾ ಸುದ್ದಿಯಲ್ಲಿ ಇರುತ್ತೆ.
ಒಂದು ವರ್ಷದ ಹಿಂದೆ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ವಿವಾಹವಾದಾಗ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ರವೀಂದ್ರ ಬಳಿ ಇರುವ ಹಣಕ್ಕಾಗಿಯೇ ಮಹಾಲಕ್ಷ್ಮಿ ಮದುವೆ ಆಗಿದ್ದಾಳೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿ ಟ್ರೋಲ್ ಮಾಡಿದ್ದರು.

ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಜೋಡಿ ಇತ್ತೀಚೆಗೆ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ರವೀಂದರ್ ಚಂದ್ರಶೇಖರನ್ ಉದ್ಯಮಿಯೊಬ್ಬರಿಗೆ ವಂಚನೆ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದರು. ಈಗ ಶರತ್ತುಬದ್ಧ ಜಾಮೀನು ಪಡೆದು ಹೊರಬಂದಿದ್ದು, ಮಹಾಲಕ್ಷ್ಮಿ ಪತಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ ಅದೂ ಕೂಡ ಟ್ರೋಲ್ ಆಗಿದೆ.
ಪತಿ ಬಂಧನದ ವೇಳೆ ಮಹಾಲಕ್ಷ್ಮಿ ಅಳಲು?
ಪತಿ ರವೀಂದರ್ ಚಂದ್ರಶೇಖರನ್ ಬಂಧನವಾಗುತ್ತಿದ್ದಂತೆ ಮಹಾಲಕ್ಷ್ಮಿ ಮೋಸ ಹೋಗಿರುವುದಾಗಿ ರೋಧಿಸುತ್ತಿದ್ದಾರೆ. ಪತಿ ರವೀಂದರ್ ನನಗೆ ಮೋಸ ಮಾಡಿದ್ದಾನೆ. ನನಗೆ ಅವನು ಮಾಡಿದ ವಂಚನೆ ತಿಳಿದಿರಲಿಲ್ಲ. ಪತಿಗೆ ವಿಚ್ಛೇದನ ನೀಡುವುದಾಗಿ ಮಹಾಲಕ್ಷ್ಮಿ ಹೇಳುತ್ತಿದ್ದಾರೆ ಎಂದು ತಮಿಳಿನ ಹಲವು ಮಾಧ್ಯಮಗಳು ವರದಿಯನ್ನು ಮಾಡಿದ್ದರು. ಆದರೆ, ಈ ಬಗ್ಗೆ ಮಹಾಲಕ್ಷ್ಮಿ ಬಹಿರಂಗವಾಗಿ ಹೇಳಿಕೆಯನ್ನು ಕೊಟ್ಟಿರಲಿಲ್ಲ. ಈಗ ಪತಿ ರಿಲೀಸ್ ಆಗುತ್ತಿದ್ದಂತೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.
"ಮೊದಲಿನಂತೆ ನನ್ನನ್ನು ಪ್ರೀತಿಸಬೇಕು"
ರವೀಂದರ್ ಚಂದ್ರಶೇಖರನ್ ಜೈಲಿನಿಂದ ಜಾಮೀನಿನ ಮೇಲೆ ಮರಳುತ್ತಿದ್ದಂತೆ ಪತ್ನಿ ಮಹಾಲಕ್ಷ್ಮಿ ಭಾವನಾತ್ಮಕ ಪತ್ರ ಬರೆದಿದ್ದಾರೆ. "ನನ್ನನ್ನು ನಗಿಸುವುದರಲ್ಲಿ ನೀವು ಎಂದಿಗೂ ವಿಫಲರಾಗುವುದಿಲ್ಲ ಎಂದು ನಂಬಿದ್ದೇನೆ. ಆ ಪ್ರೀತಿಗೆ ಕಾರಣ ನಂಬಿಕೆ. ನಾನು ನಿಮ್ಮನ್ನು ನನಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆ . ನನಗೆ ಮೊದಲಿನಂತೆಯೇ ಪ್ರೀತಿಸಬೇಕು. ಎಂದಿಗಿಂತಲೂ ಹೆಚ್ಚಾಗಿ ನನ್ನನ್ನು ಕಾಪಾಡು" ಎಂದು ಮಹಾಲಕ್ಷ್ಮಿ ಪತಿ ರವೀಂದರ್ ಜೊತೆ ಫೋಟೊ ಶೇರ್ ಮಾಡಿ ಶೀರ್ಷಿಕೆ ಬರೆದಿದ್ದಾರೆ.

ಮತ್ತೆ ಮಹಾಲಕ್ಷ್ಮಿ ಟ್ರೋಲ್
ಪತಿ ರವೀಂದರ್‌ಗೆ ಭಾವನಾತ್ಮಕ ಪತ್ರ ಬರೆಯುತ್ತಿದ್ದಂತೆ ಮಹಾಲಕ್ಷ್ಮಿಯನ್ನು ನೆಟ್ಟಿಗರು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. " ರವೀಂದರ್‌ಗೆ ಜಾಮೀನು ಸಿಕ್ಕಿದೆಯೇ.." ಒಬ್ಬರು ಕಮೆಂಟ್ ಮಾಡಿದ್ದಾರೆ. ಅದೇ ಮತ್ತೊಬ್ಬರು " ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಶಕ್ತಿ ತುಂಬುವ ಮಹಾಲಕ್ಷ್ಮಿಯಂತಹ ಪತ್ನಿ ಸಿಕ್ಕಿರುವುದು ರವೀಂದರ್ ಭಾಗ್ಯ" ಇನ್ನೊಬ್ಬರು ಹೇಳಿದ್ದಾರೆ. ಮತ್ತೆ ಕೆಲವರು " ಅವನನ್ನು ಕೈ ಬಿಟ್ಟು ಹೊಸ ಜೀವನ ಕಟ್ಟಿಕೊಂಡು ಸಂತೋಷವಾಗಿರು" ಎಂದು ಸಲಹೆಯನ್ನು ನೀಡುತ್ತಿದ್ದಾರೆ.
ರವೀಂದರ್‌ಗೆ ಶರತ್ತುಬದ್ಧ ಜಾಮೀನು
ಉದ್ಯಮಿ ಬಾಲಾಜಿ ಎಂಬುವವರಿಗೆ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಬರುತ್ತೆ ಎಂದು ಹೇಳಿ ರವೀಂದರ್ 15.83 ಕೋಟಿ ವಂಚನೆ ಮಾಡಿದ್ದರೆಂದು ಆರೋಪ ಮಾಡಿ, ದೂರನ್ನು ದಾಖಲು ಮಾಡಲಾಗಿತ್ತು. ಈ ಸಂಬಂಧ ರವೀಂದರ್ ಚಂದ್ರಶೇಖರನ್‌ರನ್ನು ಪೊಲೀಸರು ಬಂಧಿಸಿ ಜೈಲಿನಲ್ಲಿರಿಸಿದ್ದರು. ಎರಡು ಬಾರಿ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ರಿಜೆಕ್ಟ್ ಆದ ಬಳಿಕ 5 ಕೋಟಿ ಶ್ಯೂರಿಟಿ ನೀಡಿ ಜಾಮೀನ ಮೇಲೆ ಹೊರಬಂದಿದ್ದಾರೆ.


Click it and Unblock the Notifications











