"ಧನುಷ್ ಅಂತ ನಂಬಿ ಮೋಸ ಹೋಗಿದ್ದೆ, ಆ ನಿರ್ಮಾಪಕ ಮೋಸ ಮಾಡಿದ್ದ"; 'ನೀಲಕಂಠ' ನಟಿ ನಮಿತಾ

ದಕ್ಷಿಣ ಭಾರತದ ಗ್ಲಾಮರ್ ಡಾಲ್ ನಮಿತಾ ಈಗ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಮದುವೆ, ಮಗು, ಸಂಸಾರ ಬ್ಯುಸಿಯಾಗಿರುವ ನಟಿ ಸಿನಿಮಾದಿಂದ ಅಷ್ಟೇ ದೂರ ಉಳಿದಿದ್ದಾರೆ. ಆದರೆ, ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಎಷ್ಟು ಬೋಲ್ಡ್ ಪಾತ್ರಗಳಲ್ಲಿ ನಟಿಸುತ್ತಿದ್ದರೋ, ಅಷ್ಟೇ ಬೋಲ್ಡ್ ಮಾತಾಡುವ ನಟಿಯೀಕೆ. ಸದ್ಯ ತಮಿಳುನಾಡಿನ ಬಿಜೆಪಿ ಸದಸ್ಯೆಯಾಗಿ ನಮಿತಾ ಗುರುತಿಸಿಕೊಂಡಿದ್ದಾರೆ.

ದಕ್ಷಿಣ ಭಾರತದ ನಟಿ ನಮಿತಾ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದರು. ಅದರಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಮರೆಯಲಾಗದ ಕೆಲವು ಘಟನೆಗಳನ್ನು ಹಂಚಿಕೊಂಡಿದ್ದಾರೆ. ಕನ್ನಡದಲ್ಲಿಯೂ ನಟಿ ನಮಿತಾ ಸಿಕ್ಕಾಪಟ್ಟೆ ಚಿರಪರಿಚಿತ. ಕ್ರೇಜಿಸ್ಟಾರ್ ಜೊತೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಗ್ಲಾಮರ್ ಗೊಂಬೆಯಾಗಿ ಗುರುತಿಸಿಕೊಂಡಿದ್ದಾರೆ.

Actress Namitha Claims Producer Used Dhanush s Name to Cheat Her

ಕ್ರೇಜಿಸ್ಟಾರ್‌ ರವಿಚಂದ್ರನ್‌ಗೆ ನಾಯಕಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಕನ್ನಡದ ಮೊದಲ ಸಿನಿಮಾ 'ನೀಲಕಂಠ'ಗೆ ಪ್ರೇಕ್ಷಕರಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿದ್ದವು. ಬಳಿಕ ದರ್ಶನ್ ಅಭಿನಯದ 'ಇಂದ್ರ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. 'ಹೂ', 'ನಮಿತಾ ಐ ಲವ್ ಯೂ' ಹಾಗೂ 2013ರಲ್ಲಿ ತೆರೆಕಂಡ 'ಬೆಂಕಿ ಬಿರುಗಾಳಿ' ಕನ್ನಡದಲ್ಲಿ ನಟಿಸಿದ ಕೊನೆಯ ಸಿನಿಮಾ. ಈ ನಟಿ ಸಂದರ್ಶನದಲ್ಲಿ ನಿರ್ಮಾಪಕರೊಬ್ಬರು ತಮಗೆ ಮೋಸ ಮಾಡಿದ ಘಟನೆಯನ್ನು ಹೇಳಿಕೊಂಡಿದ್ದಾರೆ.

ನಮಿತಾಗೆ ತಮಿಳುನಾಡಿನಲ್ಲಿ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. ಹುಚ್ಚು ಅಭಿಮಾನಿಗಳು ನಮಿತಾಗಾಗಿ ಗುಡಿಯನ್ನೇ ಕಟ್ಟಿ ಪೂಜಿಸುತ್ತಿದ್ದಾರೆ. ಇಷ್ಟೊಂದು ಅಭಿಮಾನಿಗಳನ್ನು ಸಂಪಾದಿಸಿರುವ ನಟಿಗೆ ತಮಿಳಿನ ನಿರ್ಮಾಪಕ ಮೋಸ ಮಾಡಿದ್ದರು. ಅದನ್ನು ಇಂದಿಗೂ ನೆನಪಿಸಿಕೊಳ್ಳುವ ನಟಿ ಹೇಗೆ ಮೋಸ ಹೋದರು? ಮುಂದೆ ಏನಾಯ್ತು? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

2002ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಮಿತಾ ಬಹುಬೇಗನೆ ಸ್ಟಾರ್ ಪಟ್ಟಕ್ಕೆ ಏರಿದ್ದರು. ವಿಜಯ್, ಅಜಿತ್, ಶರತ್‌ ಕುಮಾರ್, ವಿಜಯಕಾಂತ್, ಸತ್ಯರಾಜ್, ಪಾರ್ತಿಬನ್, ಎಸ್. ಜೆ. ಸೂರ್ಯ ಸೇರಿದಂತೆ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಇವೆಲ್ಲರ ಸಿನಿಮಾದಲ್ಲಿ ಈಕೆ ಗ್ಲಾಮರಸ್ ನಟಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. 2002 ರಿಂದ 2006ರವರೆಗೆ ನಮಿತಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. 2006ರ ಸುಮಾರಿಗೆ ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆ ಸಿನಿಮಾದಲ್ಲಿ ನಾನು ನಟಿಸಬಾರದಿತ್ತು ಎಂದು ಇಂದಿಗೂ ಪಶ್ಚತ್ತಾಪ ಪಡುತ್ತಾರೆ.

Actress Namitha Claims Producer Used Dhanush s Name to Cheat Her

2006ರಲ್ಲಿ ನಮಿತಾ ಸಿನಿಮಾವೊಂದರಲ್ಲಿ ನಟಿಸಿದ್ದೆ. ಆ ಸಿನಿಮಾ ಹೆಸರು ಹೇಳಲು ಬಯಸುವುದಿಲ್ಲ. ನಿಮ್ಮ ಸಿನಿಮಾಗೆ ಧನುಷ್ ನಾಯಕ ಎಂದು ಹೇಳಿ ನನ್ನ ಬಳಿ ನಿರ್ಮಾಪಕರು ಕಾಲ್ ಶೀಟ್ ಪಡೆದಿದ್ದರು. ಆದರೆ, ಆ ಸಿನಿಮಾದಲ್ಲಿ ನಾಯಕನಾಗಿ ನಿರ್ಮಾಪಕರ ಸೋದರ ಸಂಬಂಧಿಯೇ ನಟಿಸುತ್ತಿದ್ದರು. ಈ ವಿಷಯವನ್ನು ತಿಳಿದು ನಾನು ಸಿನಿಮಾವನ್ನು ಅರ್ಧಕ್ಕೆ ಬಿಟ್ಟು ಬಂದಿದ್ದೆ. ಆ ಬಳಿಕ ಹೇಗೋ ಏನೋ ಮಾಡಿ ಸಿನಿಮಾ ಶೂಟಿಂಗ್ ಮಾಡಿ ಚಿತ್ರೀಕರಣ ನಡೆಸಿ ಬಿಡುಗಡೆ ಮಾಡಿದರು" ಎಂದು ನಮಿತಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಆ ಸಿನಿಮಾದಲ್ಲಿ ಧನುಷ್ ಇದ್ದಾರೆಂದು ನಂಬಿ ಮೋಸ ಹೋಗಿದ್ದನ್ನು ಹೇಳಿಕೊಂಡಿದ್ದಾರೆ. ಈ ಸಂಬಂಧ ನಿರ್ಮಾಪಕರು ಹಾಗೂ ಕಲಾವಿದರ ಸಂಘಕ್ಕೆ ದೂರನ್ನು ನೀಡಿದ್ದಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈಗ ನಮಿತಾ ಅಭಿಮಾನಿಗಳು ಆ ಸಿನಿಮಾ ಯಾವುದಿರಬಹುದು ಎಂದು ಗೆಸ್ ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ನಮಿತಾ ಮೋಸ ಮಾಡಿದ ಆ ನಿರ್ಮಾಪಕ ಯಾರು ಎಂದು ಹುಡುಕುತ್ತಿದ್ದಾರೆ.

More from Filmibeat

English summary
Namitha alleges a producer cheated her by falsely using actor Dhanush's name for a movie project. Know more about her claims
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X