ಮೈ ಮೇಲೆ ಟ್ಯಾಟು.. ಮಿನಿ ಗೌನ್: ಖುಷ್ಬೂ ಪುತ್ರಿಯ ಲುಕ್‌ ನೋಡಿ 'ಹುಚ್ಚಾಟ' ಎಂದ ನೆಟ್ಟಿಗರು

ದಕ್ಷಿಣ ಭಾರತದ ಹಿರಿಯ ನಟಿ ಹಾಗೂ ಪೊಲಿಟಿಷಿಯನ್ ಖುಷ್ಬೂ. ನೇರ ನುಡಿ, ಖಡಕ್ ಮಾತುಗಳಿಗೆ ಹೆಸರುವಾಸಿ. 80ರ ದಶಕದಲ್ಲಿ ಖುಷ್ಬೂ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದರು. ಕನ್ನಡದಲ್ಲೂ ನಟಿಸಿ ಕನ್ನಡಿಗರ ಜನಮನ ಗೆದ್ದಿದ್ದರು.

ಖುಷ್ಬೂ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಕಾಂಬಿನೇಷನ್‌ ಸಿನಿಮಾಗಳು ಇಂದಿಗೂ ಫೇಮಸ್. 'ರಣಧೀರ', 'ಅಂಜದ ಗಂಡು' ಸಿನಿಮಾಗಳನ್ನು ಸಿನಿಪ್ರಿಯರು ಮರೆಯೋಕೆ ಸಾಧ್ಯನೇ ಇಲ್ಲ. ಸದ್ಯ 52 ವರ್ಷದ ಖುಷ್ಬೂ ಸಿನಿಮಾಗಿಂತ ಹೆಚ್ಚಾಗಿ ರಾಜಕೀಯದಲ್ಲೇ ಸಕ್ರಿಯರಾಗಿದ್ದಾರೆ.

Actress Politician Kushboo Sundar Daughter Avantika Bold Photos Goes Viral

ಖುಷ್ಬೂ ತಮಿಳಿನ ನಿರ್ದೇಶಕ ಕಮ್ ನಟ ಸುಂದರ್‌ರನ್ನು ವಿವಾಹವಾಗಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬರು ಅವಂತಿಕಾ, ಇನ್ನೊಬ್ಬರು ಆನಂದಿತಾ. ಸದ್ಯ ಅವಂತಿಕಾ ಸುಂದರ್ ವಿದೇಶದಲ್ಲಿ ವಿದ್ಯಾಬ್ಯಾಸ ಮಾಡುತ್ತಿದೆ. ಸದ್ಯ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರೋ ಈ ಗ್ಲಾಮರಸ್ ಪೋಟೊಗಳು ನೆಟ್ಟಿಗರ ನಿದ್ದೆಕೆಡಿಸುತ್ತಿವೆ.

ಮೈ ಮೇಲೆ ಟ್ಯಾಟು.. ಮಿನಿ ಗೌನ್

ಸೆಲೆಬ್ರೆಟಿಗಳು ತಮ್ಮಂತೆಯೇ ತಮ್ಮ ಮಕ್ಕಳನ್ನೂ ಸಿನಿಮಾಗೆ ಕರೆದುಕೊಂಡು ಬರೋದು ವಾಡಿಕೆ. ಈಗ ಖುಷ್ಬೂ ಕೂಡ ತಮ್ಮ ಮಗಳ ಅವಂತಿಕಾ ಸುಂದರ್‌ ಅನ್ನು ಚಿತ್ರರಂಗಕ್ಕೆ ಕರೆದುಕೊಂಡು ಮೂಡಲ್ಲಿ ಇರಬಹುದು ಅಂತ ಅನಿಸುತ್ತಿದೆ. ಅದಕ್ಕೆ ಕಾರಣ, ಪುತ್ರಿ ಅವಂತಿಕಾ ಹಂಚಿಕೊಂಡಿರೊ ಗ್ಲಾಮರಸ್ ಫೋಟೊಗಳು.

ಅವಂತಿಕಾ ಸುಂದರ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿದ್ದರು. ಈ ಫೋಟೊಗಳು ಹುಡುಗರ ನಿದ್ದೆ ಕದಿಯುತ್ತಿವೆ. ಮೈ ಮೇಲೆ ಟ್ಯಾಟಿ ಹಾಕಿಸಿಕೊಂಡು ಮಿನಿ ಸ್ಕರ್ಟ್‌ ತೊಟ್ಟು ವಿದೇಶದ ಬೀದಿಯಲ್ಲಿ ಫೋಟೊ ಶೂಟ್ ಮಾಡಿಸಿದ್ದಾರೆ. ಈ ಫೋಟೊಗಳನ್ನು ನೋಡಿ ಖುಷ್ಬೂ ಅಭಿಮಾನಿಗಳ ನಿದ್ದೆನೇ ಹಾರಿ ಹೋಗಿದೆ.

Actress Politician Kushboo Sundar Daughter Avantika Bold Photos Goes Viral

ಸಿನಿಮಾ ಎಂಟ್ರಿ ಕೊಡ್ತಾರಾ?

ಖುಷ್ಬೂ ಪುತ್ರಿ ಅವಂತಿಕಾ ಸುಂದರ್ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಗ್ಲಾಮರಸ್ ಫೋಟೊಗಳು ಅಲ್ಲಿನದ್ದೇ. ಮಿನಿ ಗೌನು, ಬ್ಲ್ಯಾಕ್ ಶೂ, ಟ್ಯಾಟುನಲ್ಲಿ ಪಕ್ಕಾ ಮಾಡರ್ನ್ ಹುಡುಗಿಯಾಗಿ ಪೋಸ್ ಕೊಟ್ಟಿದ್ದಾರೆ. ಈ ಹಾಟ್ ಗ್ಲಾಮರ್ಸ್ ಫೋಟೊ ಶೂಟ್ ನೋಡಿದ ಮೇಲೆ ನೆಟ್ಟಿಗರಿಗೆ ಅವಂತಿಕಾ ಸುಂದರ್ ಚಿತ್ರರಂಗಕ್ಕೆ ಎಂಟ್ರಿ ಕೊಡಬಹುದು ಅನ್ನೋ ಅನುಮಾನ ಮೂಡಿದೆ.

ಅದೇ ಇನ್ನೊಂದು ಕಡೆ ವಿದೇಶದ ಸಂಸ್ಕೃತಿಗೆ ಹೊಂದಿಕೊಂಡಿರೋ ಆಗಿದೆ. ಹಾಗಾಗಿ ಶಿಕ್ಷಣ ಮುಗಿದ ಬಳಿಕ ಅಲ್ಲಿಯೇ ಸೆಟಲ್ ಆಗಬಹುದು ಅನ್ನೋ ಅನುಮಾನವಿದೆ. ಯಾಕಂದ್ರೆ, ಇದೂವರೆಗೂ ಖೂಷ್ಬೂ ತಮ್ಮ ಮಕ್ಕಳನ್ನು ಸಿನಿಮಾಗೆ ಕರೆದುಕೊಂಡು ಬರೋ ಬಗ್ಗೆ ಎಲ್ಲೂ ಮಾತಾಡಿದಂತಿಲ್ಲ. ಹೀಗಾಗಿ ಚಿತ್ರರಂಗಕ್ಕೆ ಬರುತ್ತಾರಾ? ಇಲ್ವಾ ಅನ್ನೋ ಪ್ರಶ್ನೆಯಂತೂ ಎದ್ದಿದೆ.

ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಕಮ್ಮಿಯೇನಿಲ್ಲ

ಖುಷ್ಬೂ ಪುತ್ರಿ ಅವಂತಿಕಾ ಸುಂದರ್ ಸೋಶಿಯಲ್ ಮೀಡಿಯಾದಲ್ಲಿ ಅಮ್ಮನಂತೆಯೇ ಫೇಮಸ್. ಇನ್‌ಸ್ಟಾಗ್ರಾಂನಲ್ಲಿ ಸುಮಾರು ಈಕೆಗೆ 56 ಸಾವಿರಕ್ಕೂ ಅಧಿಕ ಮಂದಿ ಫಾಲೋವರ್ಸ್ ಇದ್ದಾರೆ. ಆಗಾಗ ಗ್ಲಾಮರಸ್ ಫೋಟೊಗಳನ್ನು ಅವಂತಿಕಾ ಸುಂದರ್ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಖುಷ್ಬೂ ಕೂಡ ಅದೆಷ್ಟೇ ಬ್ಯುಸಿಯಾಗಿದ್ದರೂ, ಮಗಳ ಜೊತೆ ಆಗಾಗ ಕಾಲ ಕಳೆಯುತ್ತಾರೆ. ಈ ಫೋಟೊಗಳನ್ನೂ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಬಿಜೆಪಿ ಸೇರ್ಪಡೆಯಾಗಿರೋ ಖುಷ್ಬೂ ತನ್ನ ವೃತ್ತಿ ಬದುಕಿನ ಆರಂಭದಲ್ಲಿ ಗ್ಲಾಮರ್ ರೋಲ್‌ಗಳಿಂದಲೇ ಜನಪ್ರಿಯರಾಗಿದ್ದರು. ಈಗ ಮಗಳು ಕೂಡ ಹಾಗೇ ಗ್ಲಾಮರಸ್‌ ರೋಲ್‌ಗಳಿಂದ ಚಿತ್ರರಂಗಕ್ಕೆ ಬರಬಹುದಾ? ಅಂತ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.

More from Filmibeat

English summary
Actress Politician kushboo Sundar Daughter Avantika Bold Photos Goes Viral, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X