"ಹಲವು ಹುಡುಗೀರೊಂದಿಗೆ ಡೇಟಿಂಗ್ ಮಾಡಿದ್ದ ಬಾಯ್‌ಫ್ರೆಂಡ್..10 ವರ್ಷದಿಂದ ಅವನೇ ನನ್ನ ಲವರ್" ನಟಿಯ ಅಚ್ಚರಿ ಹೇಳಿಕೆ

ಸಿನಿಮಾ ನಟ-ನಟಿಯರು ಅಂದ್ಮೇಲೆ ಪ್ರೇಮ ಸಂಬಂಧಗಳು, ವಿವಾಹಗಳು ಮತ್ತು ವಿಚ್ಛೇದನಗಳು ಸಾಮಾನ್ಯವಾಗಿ ಕೇಳೋಕೆ ಸಿಗುತ್ತಲೇ ಇರುತ್ತೆ. ಕೆಲವು ಓಪನ್ ಆಗಿ ಹೇಳಿಕೊಳ್ಳುತ್ತಾರೆ. ಮತ್ತೆ ಕೆಲವರು ತಮ್ಮೊಳಗೆ ಇಟ್ಟುಕೊಂಡು ಒದ್ದಾಡುತ್ತಾರೆ. ಹಾಗಂತ ಸೆಲೆಬ್ರೆಟಿಗಳ ಲವ್ ಮ್ಯಾಟರ್, ಬ್ರೇಕಪ್ ವಿಷಯ ಹೇಳಿದರೂ ಹೇಳದೆ ಹೋದರೂ ಗೌಪ್ಯವಾಗಿ ಉಳಿಯುವುದಿಲ್ಲ.

ಕೆಲವರು ತಮ್ಮ ಬಗ್ಗೆ ಹಬ್ಬಿದ ಸುದ್ದಿಗಳನ್ನು ತಳ್ಳಿ ಹಾಕಿದರೆ, ಮತ್ತೆ ಕೆಲವರು ಕ್ಯಾರೇ ಅನ್ನೋದಿಲ್ಲ. ಆದರೆ, ತಾವಿರುವ ಸಂಬಂಧಗಳ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೆ ಹೇಳಿಕೊಳ್ಳುವ ಕೆಲವೇ ಕೆಲವು ಸೆಲೆಬ್ರೆಟಿಗಳು ಇದ್ದಾರೆ. ಅವರಲ್ಲಿ ತಮಿಳಿನ ಈ ಜನಪ್ರಿಯರ ನಟಿ ಪ್ರಿಯಾ ಭವಾನಿ ಶಂಕರ್ ಕೂಡ ಒಬ್ಬರು.

Actress Priya Bhavani Shankar open up about her boyfriend and her relation with him

ಪ್ರಿಯಾ ಭವಾನಿ ಶಂಕರ್ ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಬೆಳೆದಿದ್ದೇ ಒಂದು ರೋಚಕ ಕಥೆ. ಇವರು ಮೊದಲು ವೃತ್ತಿ ಜೀವನ ಆರಂಭಿಸಿದ್ದು ನ್ಯೂ ರೀಡರ್ ಆಗಿ. ಬಳಿಕ ಕಿರುತೆರೆ ಕಲಾವಿದೆಯಾಗಿ ಜನಪ್ರಿಯವಾದರು. ಆ ನಂತರ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಅಲ್ಲಿಯೂ ಯಶಸ್ಸು ಗಳಿಸಿದರು. ಇದೇ ನಟಿಯೀಗ ತಮ್ಮ ಬಾಯ್‌ಫ್ರೆಂಡ್ ಹಾಗೂ ಬ್ರೇಕಪ್ ಬಗ್ಗೆ ಸಂದರ್ಶನವೊಂದರಲ್ಲಿ ಓಪನ್ ಆಗಿ ಮಾತಾಡಿದ್ದಾರೆ.

ಪ್ರಿಯಾ ಭವಾನಿ ಶಂಕರ್ ತಮಿಳು ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ಆದರೆ, ಇವರ ಸಿನಿಮಾಗಳು ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಹೀಗಾಗಿ ದಕ್ಷಿಣ ಭಾರತದಲ್ಲಿ ಚಿರಪರಿಚಿತರಾಗಿದ್ದಾರೆ. ತೆಲುಗಿನಲ್ಲಿ ಗೋಪಿಚಂದ್ ನಟನೆಯ 'ಭೀಮಾ', ಅಕ್ಕಿನೇನಿ ನಾಗಚೈತನ್ಯ ನಟನೆ 'ಧೂತ' ವೆಬ್ ಸರಣಿಯಲ್ಲಿ ನಟಿಸಿದ್ದರು. ಆದರೆ, ಟಾಲಿವುಡ್‌ನಲ್ಲಿ ಅವರಿಗೆ ನಿರೀಕ್ಷಿತ ಮಟ್ಟಿಗೆ ಯಶಸ್ಸು ಸಿಗಲಿಲ್ಲ. ಹೀಗಾಗಿ ಕಾಲಿವುಡ್‌ನಲ್ಲಿಯೇ ಉಳಿದುಕೊಂಡರು.

Actress Priya Bhavani Shankar open up about her boyfriend and her relation with him

ತಮ್ಮ ನೇರ ನುಡಿಗಳಿಂದ ಜನಪ್ರಿಯವಾಗಿರುವ ಪ್ರಿಯಾ ಭವಾನಿ ಶಂಕರ್ ಈ ಹಿಂದೆ "ನನ್ನ ದೇಹ ಒಂದು ವಸ್ತು ಅಲ್ಲ. ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೆಯುವುದಕ್ಕೆ ನಾನು ಗ್ಲಾಮರ್ ಪ್ರದರ್ಶನ ಮಾಡುವುದಿಲ್ಲ. ಇದರಿಂದ ಸಿನಿಮಾ ಪ್ರಚಾರ ಮಾಡಲು ಸಾಧ್ಯವಿಲ್ಲ" ಎಂದು ಹೇಳಿಕೆ ಕೊಟ್ಟಿದ್ದರು. ಇದು ಸಿನಿಮಾ ಮಂದಿಯ ಅಚ್ಚರಿಗೆ ಎಡೆ ಮಾಡಿಕೊಟ್ಟಿತ್ತು. ಈಗ ಸಂದರ್ಶನವೊಂದರಲ್ಲಿ ತನ್ನ ಬಾಯ್‌ಫ್ರೆಂಡ್‌, ಬ್ರೇಕಪ್ ಬಗ್ಗೆನೂ ಓಪನ್ ಆಗಿ ಮಾತಾಡಿದ್ದಾರೆ.

ಬಾಯ್‌ಫ್ರೆಂಡ್ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ. "ನಾನು ಯಾವ ಹೀರೋ ಜೊತೆ ನಟನೆ ಮಾಡಿದರೂ ಅವರೊಂದಿಗೆ ನನಗೆ ಸಂಬಂಧ ಕಟ್ಟುತ್ತಾರೆ. ಯಾವ ಹೀರೋಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರೂ ಸೋಶಿಯಲ್ ಮೀಡಿಯಾಗಳಲ್ಲಿ ಈ ಗಾಸಿಪ್‌ಗಳು ಹಬ್ಬುತ್ತವೆ. ಅಂತಹ ವದಂತಿಗಳಿಗೆ ತೆರೆ ಎಳೆಯುವ ಉದ್ದೇಶದಿಂದಲೇ ನಾನು ನನ್ನ ಬಾಯ್‌ಫ್ರೆಂಡ್ ರಾಜ್ ಹೆಸರನ್ನು ಬಹಿರಂಗಪಡಿಸ ಬೇಕಾಯ್ತು" ಎಂದು ಪ್ರಿಯಾ ಭವಾನಿ ಶಂಕರ್ ಹೇಳಿದ್ದಾರೆ.

ಇತ್ತೀಚೆಗೆ ಬಾಯ್‌ಫ್ರೆಂಡ್‌ ಜೊತೆಗಿನ ಬ್ರೇಕಪ್ ಬಗ್ಗೆ ರಿವೀಲ್ ಮಾಡಿದ್ದಾರೆ. "ರಾಜ್ ವೇಲ್ ನನ್ನ ಕಾಲೇಜು ಸಹಪಾಠಿ. ನಾನು ಕಳೆದ ಹತ್ತು ವರ್ಷಗಳಿಂದ ಅವನೊಂದಿಗೆ ಇದ್ದೇನೆ. ಅವನು ನನ್ನ ಮೊದಲ ಹಾಗೂ ಕೊನೆಯ ಬಾಯ್‌ಫ್ರೆಂಡ್" ಎಂದು ಪ್ರಿಯಾ ಭವಾನಿ ಶಂಕರ್ ಹೇಳಿದ್ದಾರೆ. "ನನ್ನನ್ನು ಪ್ರೀತಿಸುವುದಕ್ಕೂ ಮುನ್ನ ರಾಜ್ ಕಾಲೇಜು ದಿನಗಳಲ್ಲಿ ಹಲವು ಹುಡುಗಿಯರೊಂದಿಗೆ ಡೇಟಿಂಗ್ ಮಾಡಿದ್ದರಂತೆ. ಸಂಬಂಧದಲ್ಲಿ ಇರುವುದು ಇಷ್ಟವಿಲ್ಲದಿದ್ದರೆ, ಇಲ್ಲ ಸಂಬಂಧ ಟಾಕ್ಸಿಕ್ ಎನ್ನಿಸಿದರೆ, ತಕ್ಷಣವೇ ಬ್ರೇಕಪ್ ಹೇಳಿ ಹೊರ ಬರುವಂತೆ ಪ್ರಿಯಾ ಭವಾನಿ ಶಂಕರ್ ಯುವಕರಿಗೆ ಸಲಹೆ ಕೊಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

More from Filmibeat

English summary
Actress Priya Bhavani Shankar open up about her boyfriend and her relation with him.
Read more about: actress movies boyfriend
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X