ಸಿಎಂ ವಿಜಯ್ ಭೇಟಿಯಾದ ನಟಿ ಸ್ಯಾಮ್; "ವಿಜಯ್ ಸರ್ ಕೇವಲ ಬೆಳ್ಳಿತೆರೆಯ ಮೇಲಷ್ಟೇ ಹೀರೊ ಅಲ್ಲ"-ಸಮಂತಾ
ಬಹುಭಾಷಾ ನಟಿ ಸಮಂತಾ ತಮ್ಮ ಹೊಚ್ಚ ಸಿನಿಮಾದ 'ಮಾ ಇಂಟಿ ಬಂಗಾರಂ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಿನಿಮಾ ತಮಿಳಿಗೆ 'ಎಂಗಳ್ ತಂಗಂ' ಹೆಸರಿನಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಹೀಗಾಗಿ ಈ ಸಿನಿಮಾದ ಪ್ರಚಾರಕ್ಕಾಗಿ ಚೆನ್ನೈಗೆ ಆಗಮಿಸಿದ್ದರು. ಈ ವೇಳೆ ತಮ್ಮ ಕೋ ಸ್ಟಾರ್ ಆಗಿದ್ದ ಪ್ರಸ್ತುತ ತಮಿಳುನಾಡಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು ಭೇಟಿ ಮಾಡಿದ್ದಾರೆ.
ಚೆನ್ನೈನಲ್ಲಿ ವಿಜಯ್ ಅವರನ್ನು ಭೇಟಿ ಮಾಡಿ ಕೆಲ ಹೊತ್ತು ಮಾತುಕಥೆ ನಡೆಸಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಜಯ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೇ ತಮಿಳುನಾಡು ಸಿಎಂ ವಿಜಯ್ ಅವರನ್ನು ಹೊಗಳಿ ಬರದುಕೊಂಡಿದ್ದಾರೆ. "ವಿಜಯ್ ಸರ್ ಕೇವಲ ತೆರೆಯ ಮೇಲಷ್ಟೇ ಹೀರೊ ಆಗಿ ಇರುವವರಲ್ಲ ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಅವರಲ್ಲಿರುವ ಎನರ್ಜಿ, ಅವರ ವ್ಯಕ್ತಿತ್ವ, ಹಾಗೇ ಜನರು ಅವರಿಗೆ ಸ್ಪಂದಿಸುವ ರೀತಿ ನೋಡಿದರೆ, ಇನ್ನೂ ಯಾವುದೋ ದೊಡ್ಡ ಸಾಧನೆಗಾಗಿ ಹುಟ್ಟಿದವರು ಎಂದು ಯಾವಾಗಲೂ ಅನಿಸುತ್ತಿತ್ತು" ಎಂದು ಸಮಂತಾ ಬರೆದುಕೊಂಡಿದ್ದಾರೆ.

ಸಮಂತಾ ಎರಡು ಭೇಟಿ ಎರಡು ಕಾರಣಕ್ಕೆ ಹೈಲೈಟ್ ಆಗಿದೆ. ಕೆಲವು ದಿನಗಳ ಹಿಂದಷ್ಟೇ ತೆಲುಗು ಮಾಧ್ಯಮಗಳಲ್ಲಿ ಸಿಎಂ ವಿಜಯ್ ಬಗ್ಗೆ ಮಾತಾಡಿದ್ದರು. ಅದಾದ ಒಂದೆರಡು ದಿನಗಳಲ್ಲೇ ಅವರನ್ನು ಭೇಟಿ ಮಾಡಿದ್ದಾರೆ. ವಿಜಯ್ ಭೇಟಿ ಮಾಡಿ ಅಡ್ವಾನ್ಸ್ ಆಗಿ ಹುಟ್ಟುಹಬ್ಬದ (ಜೂನ್ 22) ಶುಭಾಶಯಗಳನ್ನು ತಿಳಿಸಿದ್ದಾರೆ. ಹಾಗೇ ರಿಲೀಸ್‌ಗೆ ರೆಡಿಯಾಗಿರುವ ಅವರ ಸಿನಿಮಾಗೆ ಶುಭ ಹಾರೈಕೆಯನ್ನೂ ಪಡೆದಿದ್ದಾರೆ.
ನಿಮ್ಮಿಂದ ದೊಡ್ಡ ಬದಲಾವಣೆ ತರಲು ಸಾಧ್ಯವಿದೆ
ಸಿಎಂ ವಿಜಯ್ ಅವರನ್ನು ಭೇಟಿ ಮಾಡಿದ ಬಳಿಕ ಸಮಂತಾ ಫೋಟೋಗಳನ್ನು ಹಂಚಿಕೊಂಡಿದ್ದಷ್ಟೇ ಅಲ್ಲದೇ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ""ನಾನು ಇಂದು ಚೆನ್ನೈಗೆ ಬಂದಿಳಿದ ಕೂಡಲೇ ನನ್ನಲ್ಲಿ ಏನೋ ಒಂಥರ ಸಂತೋಷದ ಭಾವನೆ ಮೂಡಿತ್ತು. ಕಾರಣ ಏನಂದ್ರೆ, ನಾನು ನಮ್ಮ ಸಿಎಂ ಅನ್ನು ಭೇಟಿ ಮಾಡುವುದಕ್ಕೆ ಹೊರಟಿದ್ದೆ. ವಿಜಯ್ ಸರ್ ಕೇವಲ ಸಿನಿಮಾದಲ್ಲಷ್ಟೇ ಹೀರೊ ಆಗೋಕೆ ಸೀಮಿತವಾಗಿ ಇದ್ದವರಲ್ಲ ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಅವರ ಎನರ್ಜಿ, ಅವರ ವ್ಯಕ್ತಿತ್ವ, ಜನರು ಅವರಿಗೆ ಸ್ಪಂದಿಸುತ್ತಿದ್ದ ರೀತಿ ನೋಡಿ, ಇನ್ನೂ ಯಾವುದೋ ದೊಡ್ಡದಾದ ಸಾಧನೆಗಾಗಿಯೇ ಹುಟ್ಟಿದವರು ಎಂದು ಯಾವಾಗಲೂ ಅನಿಸುತ್ತಿತ್ತು.
ನನಗೆ ಎಲ್ಲಕ್ಕಿಂತ ಹೆಚ್ಚು ಸ್ಪೂರ್ತಿ ನೀಡೋದು ಏನಂದ್ರೆ, ಸಂಪೂರ್ಣ ಹೊಸ ಕ್ಷೇತ್ರಕ್ಕೆ ಕಾಲಿಡಲು ಬೇಕಿದ್ದ ಧೈರ್ಯ. ನೀವು ಈಗಾಗಲೇ ಯಾವುದರಲ್ಲಿ ಎಕ್ಸ್‌ಪರ್ಟ್ ಆಗಿದ್ದೀರೋ ಅದನ್ನು ಹಿಂದೆ ಬಿಟ್ಟು, ರಿಸ್ಕ್ ಹೆಚ್ಚಿರುವ ಸವಾಲಗಳನ್ನು ಸ್ವೀಕರಿಸುವುದು ಅಷ್ಟು ಸುಲಭ ಅಲ್ಲ. ಹಾಗಂತ ಅದೇ ಕಾರಣವಲ್ಲ. ಬದಲಿಗೆ ನಿಮ್ಮಿಂದ ದೊಡ್ಡ ಬದಲಾವಣೆ ತರಲು ಸಾಧ್ಯವಿದೆ ಎಂಬ ಅಚಲವಾದ ನಂಬಿಕೆಯಿಂದ.
ನಮ್ಮ ಜೀವನದ ಯಾವುದೋ ಒಂದು ಘಟ್ಟದಲ್ಲಿ ನಾವೆಲ್ಲರೂ ಇನ್ನೂ ಹೆಚ್ಚಿನದನ್ನು ಮಾಡಬೇಕೆಂಬ ಕರೆ ಬರುತ್ತದೆ ಎಂದು ನಾನು ಭಾವಿಸುತ್ತೇನೆ. ನಮ್ಮ ಸ್ವಾರ್ಥವನ್ನು ಮೀರಿ ಯೋಚಿಸಿ, ನಾವು ಸಮಾಜಕ್ಕೆ ಹೇಗೆ ಕೊಡುಗೆ ನೀಡಬಹುದು ಎಂದು ಕೇಳಿಕೊಳ್ಳಬೇಕು. ಆದರೆ ಕೆಲವೇ ಕೆಲವು ಜನರು ಮಾತ್ರ ಆ ಕರೆಗೆ ಓಗೊಡುತ್ತಾರೆ. ವಿಜಯ್ ಸರ್ ಅವರು ಈಗಾಗಲೇ ತಮ್ಮನ್ನು ನಂಬಿರುವ ಜನರಿಗೂ ದೊಡ್ಡ ಅಚ್ಚರಿ ಮೂಡಿಸಲಿದ್ದಾರೆ ಎಂಬ ನಂಬಿಕೆ ನನಗಿದೆ. ಅವರು ಹೊಂದಿರುವ ಅಧಿಕಾರದ ಹುದ್ದೆಯ ಕಾರಣಕ್ಕಲ್ಲ, ಬದಲಿಗೆ ಅವರು ಅದನ್ನು ನಿಭಾಯಿಸುತ್ತಿರುವ ಸದುದ್ದೇಶದ ಕಾರಣದಿಂದ. ಅವರಿಗೆ ಈ ಹಾದಿಯಲ್ಲಿ ಮುನ್ನಡೆಯಲು ಬೇಕಾದ ಶಕ್ತಿ, ಜ್ಞಾನ ಮತ್ತು ಧೈರ್ಯ ಸಿಗಲಿ ಎಂದು ಹಾರೈಸುತ್ತೇನೆ." ಎಂದು ಸಮಂತಾ ಬರೆದುಕೊಂಡಿದ್ದಾರೆ.
ದಳಪತಿ ವಿಜಯ್ ಹಾಗೂ ಸಮಂತಾ 'ಕತ್ತಿ', 'ತೆರಿ', 'ಮೆರ್ಸಲ್' ಅಂತಹ ಸೂಪರ್‌ಹಿಟ್ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಇದೀಗ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿರುವ ವಿಜಯ್ ಅವರನ್ನು ಹಳೆಯ ಸಹನಟಿ ಸಮಂತಾ ಭೇಟಿ ಮಾಡಿರುವುದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಸಮಂತಾ ತಮ್ಮ ಸಿನಿಮಾ 'ಎಂಗಳ್ ತಂಗಂ' ಸುದ್ದಿಗೋಷ್ಠಿಗಾಗಿ ಚೆನ್ನೈಗೆ ಬಂದಿದ್ದರು. ಇದೇ ವೇಳೆ ಸಮಂತಾ ಸಿಎಂ ವಿಜಯ್ ಅವರನ್ನು ಭೇಟಿ ಮಾಡಿದ್ದಾರೆ.


Click it and Unblock the Notifications