Shruti Haasan Marriage : ಮದುವೆ ಆಗೇ ಬಿಟ್ಟರು ಕಮಲ್ ಪುತ್ರಿ ಶ್ರುತಿ ಹಾಸನ್!

ಕಮಲ್​ ಹಾಸನ್ ಮಗಳು ನಟಿ ಶ್ರುತಿ ಹಾಸನ್ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ತಂದೆ ಹೆಸರಲ್ಲಿ ಅವಕಾಶ ಪಡೆದುಕೊಳ್ಳೋಕೆ ಅವರಿಗೆ ಇಷ್ಟವಿಲ್ಲ. ಹೀಗಾಗಿ, ಜೀವನದ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಸ್ವಂತವಾಗಿ ತೆಗೆದುಕೊಳ್ಳುತ್ತಾರೆ.

ಲಂಡನ್‌ ಮೂಲದ ಬಾಯ್‌ ಫ್ರೆಂಡ್ ಜೊತೆಗೆ ಬ್ರೇಕಪ್‌ ಆದ ಬಳಿಕ ಶೃತಿ ಹಾಸನ್ ಶಂತನು ಹಜಾರಿಕ ಜೊತೆಗೆ ಸುತ್ತಾಡುತ್ತಿರುವ ವಿಚಾರ ಹೊರ ಬಂದಿತ್ತು. ಬಳಿಕ ಶಾಂತನು ಶ್ರುತಿಯ ಹೊಸ ಬಾಯ್ ಫ್ರೆಂಡ್ ಎನ್ನುವುದು ಜಗತ್‌ಜಾಹೀರಾಗಿದೆ.

ಸೂಕ್ಷ್ಮವಾಗಿ ಈ ವಿಚಾರವನ್ನು ಶ್ರುತಿ ಹಲವು ಕಡೆಗಳಲ್ಲಿ ಹೇಳಿಕೊಂಡಿದ್ದಾರೆ. ಇಷ್ಟು ದಿನ ಒಟ್ಟಿಗೆ ಇದ್ದು ಸುತ್ತಾಡಿಕೊಂಡಿದ್ದ ಇವರಿಬ್ಬರು ಸೀಕ್ರೆಟ್ ಆಗಿ ಮದುವೆ ಆಗಿದ್ದಾರಂತೆ ಸ್ವತಃ ಈ ವಿಚಾರವನ್ನು ಶ್ರುತಿ ಹಾಸನ್ ಬಾಯ್‌ ಫ್ರೆಂಡ್ ಶಂತನು ಹೇಳಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಶ್ರುತಿ ಹಾಸನ್

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಶ್ರುತಿ ಹಾಸನ್

ನಟಿ ಶ್ರುತಿ ಹಾಸನ್ ಮೊದಲಿನಿಂದಲೂ ವಿಭಿನ್ನವಾಗೇ ಕಂಡವರು. ತನ್ನವರ ಸಂಘ ಬಿಟ್ಟು ಹೆಚ್ಚಿನ ಸ್ನೇಹಿತರು ಯಾರು ಇಲ್ಲ. ತನ್ನ ಸಹೋದರಿ ಅಕ್ಷರ ಹಾಸನ್ ಬಿಟ್ಟರೆ ಬಾಯ್‌ ಫ್ರೆಂಡ್ ಜೊತೆನೇ ಹೆಚ್ಚು ಕಾಣಿಸಿಕೊಂಡವರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಶ್ರುತಿ ಹಾಸನ್ ಪ್ರತಿ ದಿನವೂ ಬಾಯ್‌ ಫ್ರೆಂಡ್ ಶಂತನು ಜೊತೆ ಮಾಡುವ ತರ್ಲೆ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲ್ಲೇ ಇರುತ್ತಾರೆ. ಕಳೆದ ಕೆಲ ವರ್ಷಗಳಿಂದಲೂ ಜೊತೆಗೆ ಇರುವ ಇವರಿಬ್ಬರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮದೇ ಪ್ರಪಂಚದಲ್ಲಿ ಖುಷಿ ಖುಷಿ ಆಗಿದ್ದಾರೆ. ಇದೀಗ ಇವರಿಬ್ಬರು ಸೀಕ್ರೆಟ್ ಆಗಿ ಮದುವೆ ಆಗಿದ್ದಾರೆ ಅನ್ನುವ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆ.

ಖಾಸಗಿ ಮಾಧ್ಯಮಕ್ಕೆ ಶಾಂತನು ಮಾಹಿತಿ

ಖಾಸಗಿ ಮಾಧ್ಯಮಕ್ಕೆ ಶಾಂತನು ಮಾಹಿತಿ

ಸ್ವತಃ ಮದುವೆ ವಿಚಾರವನ್ನು ಶ್ರುತಿ ಬಾಯ್‌ ಫ್ರೆಂಡ್ ಶಂತನು ಮಾಹಿತಿ ಹಂಚಿಕೊಂಡಿದ್ದಾರೆ. ಖಾಸಗಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ತಾನು ಮತ್ತು ಶೃತಿ ಮದುವೆ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. "ಹಲವು ವರ್ಷಗಳಿಂದಲೂ ನಾವು ಒಟ್ಟಿಗೆ ಇದ್ದೇವೆ. ನಮ್ಮ ಬಾಂಡಿಂಗ್ ಕೂಡ ಉತ್ತಮವಾಗಿದೆ. ಮದುವೆ ಆದ ನಂತರದಿಂದ ನಮ್ಮ ಸಂಬಂಧ ಇನ್ನು ಗಟ್ಟಿಯಾಗಿದೆ ಹಾಗೂ ಉತ್ತಮವಾಗಿದೆ. ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಜೀವನ ನಡೆಸಲು ನಮ್ಮ ಮದುವೆ ನಮಗೆ ದಾರಿ ಮಾಡಿಕೊಟ್ಟಿದೆ. ಮುಂದೆಯೂ ಹೀಗೆ ಸಂತೋಷದಿಂದ ದಿನಗಳನ್ನು ಕಳೆಯಲು ತೀರ್ಮಾನಿಸಿದ್ದೇವೆ" ಎಂದಿದ್ದಾರೆ ಶಂತನು.

ಬ್ರೇಕ್ ಅಪ್ ನಂತರ ಖಿನ್ನತೆಗೆ ಜಾರಿದ್ದ ಶ್ರುತಿ

ಬ್ರೇಕ್ ಅಪ್ ನಂತರ ಖಿನ್ನತೆಗೆ ಜಾರಿದ್ದ ಶ್ರುತಿ

ಈ ಹಿಂದೆ ಶ್ರುತಿ ಹಾಸನ್, ಮೈಕಲ್ ಕೊರ್ಸೆಲ್ ಜೊತೆ ಡೇಟಿಂಗ್‌ನಲ್ಲಿ ಇದ್ದಿದ್ದು ಜಗತ್‌ಜಾಹೀರಾಗಿದೆ. ಇನ್ನೇನು ಮದುವೆ ಆಗ್ತಿದ್ದಾರೆ ಅನ್ನುವಷ್ಟರಲ್ಲಿ ಇವರಿಬ್ಬರ ಸಂಬಂಧ ಮುರಿದು ಬಿದ್ದಿತ್ತು. ಲಾಸ್ ಏಂಜಲೀಸ್ ಮೂಲದ ಮೈಕಲ್ ಕೊರ್ಸೆಲ್ ಮತ್ತು ಶ್ರುತಿ ಹಾಸನ್ ನಡುವೆ ಅಂತದ್ದೇನು ನಡೀತು ಅನ್ನೋದು ಯಾರಿಗೂ ಇಲ್ಲಿವರೆಗೂ ಗೊತ್ತಿಲ್ಲ. ಆದರೆ ಮೈಕಲ್ ಕೊರ್ಸೆಲ್ ಜೊತೆ ಬ್ರೇಕ್ ಅಪ್ ಆದ ಬಳಿಕ ಶ್ರುತಿ ಹಾಸನ್ ಖಿನ್ನತೆಗೆ ಹೋಗಿದ್ರು. ಶೂಟಿಂಗ್‌ಗೆ ಬ್ರೇಕ್ ಹಾಕಿ ಮನೆಯಲ್ಲೇ ಸಮಯ ಕಳೆಯುತ್ತಿದ್ದರು.

Recommended Video

Dhanush | ಧನುಷ್ ಸುತ್ತ ಕೇಳಿಬರುತ್ತಿದೆ ಅಫೇರ್‌ಗಳ ಗುಸು ಗುಸು!
ತಾವಿಬ್ಬರು ಮದುವೆ ಆಗಿರುವ ಬಗ್ಗೆ ತಿಳಿಸಿರುವ ಶಂತನು

ತಾವಿಬ್ಬರು ಮದುವೆ ಆಗಿರುವ ಬಗ್ಗೆ ತಿಳಿಸಿರುವ ಶಂತನು

ಹೀಗೇ ಇದ್ದ ಶ್ರುತಿ ಹಾಸನ್ ಬದುಕಿನಲ್ಲಿ ಮತ್ತೆ ಬೆಳಕು ತಂದಿದ್ದು ಶಂತನು. ಇದೀಗ ತಾವಿಬ್ಬರೂ ಮದುವೆ ಆಗಿರುವ ಬಗ್ಗೆ ತಿಳಿಸಿರುವ ಶಂತನು ಎಲ್ಲರ ತಲೆಗೂ ಹುಳ ಬಿಟ್ಟಿದ್ದಾರೆ. ಈ ಸುದ್ದಿ ತಿಳಿದು ಅಭಿಮಾನಿಗಳು ಕದ್ದು ಮುಚ್ಚಿ ಮದುವೆ ಆಗಿದ್ದು ಯಾಕೆ ಎಂಬ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಅದು ಏನೇ ಇದ್ದರೂ ಮದುವೆ ಬಗ್ಗೆ ಇಷ್ಟು ದಿನ ಮೌನ ತಾಳಿದ್ದ ಈ ಜೋಡಿ ಈಗ ಈ ಬಗ್ಗೆ ಬಾಯಿ ಬಿಟ್ಟಿದೆ. ಅಭಿಮಾನಿಗಳು ಈ ಸುದ್ದಿ ತಿಳಿದು ಶಾಕ್‌ಗೆ ಒಳಗಾಗಿದ್ದಾರೆ.

More from Filmibeat

English summary
Actress Shruti Haasan Boy friend Santanu Hazarika opens up about marriage. Know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X