Trisha-Vijay: ಬ್ರೇಕಪ್‌ಗೆ ಬ್ರೇಕ್ ಹಾಕಿದ ನಟಿ.. ಕೇಕ್ ಮುಂದಿದ್ದ ವಿಜಯ್ ನೋಡುತ್ತಾ ಕಣ್ಣನ್ನೇ ಮಿಟುಕಿಸದೆ ನಿಂತ ತ್ರಿಶಾ

ತಮಿಳುನಾಡು ಸಿಎಂ ಜೋಸೆಫ್ ವಿಜಯ್ ರಾಜಕೀಯ ಪ್ರವೇಶ ಮಾಡಿದ ದಿನದಿಂದ ವೃತ್ತಿ ಹಾಗೂ ವೈಯಕ್ತಿಕ ವಿಚಾರಗಳಿಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸುತ್ತಿದ್ದಂತೆ ನಟಿ ತ್ರಿಶಾ ಹೆಸರು ತಳುಕು ಹಾಕಿಕೊಂಡಿತ್ತು. ಅಲ್ಲಿವರೆಗೂ ದಳಪತಿ ವಿಜಯ್ ಹಾಗೂ ತ್ರಿಶಾ ಇಬ್ಬರೂ ಚಿತ್ರರಂಗದಲ್ಲಿ ಆತ್ಮೀಯ ಗೆಳೆಯರು ಎಂದೇ ಭಾವಿಸಲಾಗಿತ್ತು. ಅದ್ಯಾವಾಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೋ ಅಲ್ಲಿಂದ ಇವರಿಬ್ಬರ ಬಗ್ಗೆ ಸುದ್ದಿಗಳು ಹರಿದಾಡುವುದಕ್ಕೆ ಶುರುವಾಗಿತ್ತು.

ಅದರಲ್ಲೂ ಕೆಲವು ಸಂದರ್ಭಗಳಲ್ಲಿ ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ಕಾಣಿಸಿಕೊಂಡಿದ್ದು ವದಂತಿಗಳಿಗೆ ಪುಷ್ಠಿ ನೀಡಿದ್ದವು. ಎಷ್ಟೇ ಟೀಕೆಗಳಿಗೆ ಗುರಿಯಾದರೂ ತ್ರಿಶಾ ಆಗಲಿ, ದಳಪತಿ ವಿಜಯ್ ಆಗಲಿ ತಮ್ಮ ಹಬ್ಬಿರುವ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಅದರಲ್ಲೂ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿ ಆದ ಮೇಲೂ ತ್ರಿಶಾ ಜೊತೆ ಕಾಣಿಸಿಕೊಂಡಿದ್ದರು.

Actress Trisha breaks the break up rumors on posting TN CM Vijay birthday photo

ತಮ್ಮ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವಾಗಲೇ ತನ್ನ ಇನ್‌ಸ್ಟಾಗ್ರಾಂ ಖಾತೆಯಿಂದ ವಿಜಯ್ ಅವರನ್ನು ಅನ್‌ಫಾಲೋ ಮಾಡಿದ್ದರು. ಅಲ್ಲದೇ ತ್ರಿಶಾ ಹುಟ್ಟುಹಬ್ಬಕ್ಕೆ ಬಹಿರಂಗವಾಗಿ ಶುಭಾಶಯವನ್ನೂ ಕೋರಿರಲಿಲ್ಲ. ಈ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇಬ್ಬರ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದರು. ವಿಜಯ್ ಹಾಗೂ ತ್ರಿಶಾ ಬ್ರೇಕಪ್ ಮಾಡಿಕೊಂಡಿದ್ದಾರೆಂಬ ಸುದ್ದಿ ವೈರಲ್ ಆಗಿತ್ತು. ಅದಕ್ಕೀಗ ವಿಜಯ್ ಹುಟ್ಟುಹಬ್ಬ ಆಚರಿಸಿದ ಫೋಟೊವನ್ನು ಹಂಚಿಕೊಂಡು ವದಂತಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.

Also Read
Vijay-Trisha: ಅಯ್ಯೋ ವಿಜಯ್ ಬರ್ತ್‌ಡೇಗೆ ವಿಶ್ ಮಾಡಿಲ್ಲ ತ್ರಿಶಾ? ನಟಿ ಮೌನದ ಹಿಂದೆ ಅಡಗಿದೆಯೇ ರಾಜತಾಂತ್ರಿಕ ನಡೆ?
Vijay-Trisha: ಅಯ್ಯೋ ವಿಜಯ್ ಬರ್ತ್‌ಡೇಗೆ ವಿಶ್ ಮಾಡಿಲ್ಲ ತ್ರಿಶಾ? ನಟಿ ಮೌನದ ಹಿಂದೆ ಅಡಗಿದೆಯೇ ರಾಜತಾಂತ್ರಿಕ ನಡೆ?

ತ್ರಿಶಾ-ವಿಜಯ್ ಬ್ರೇಕಪ್ ಆಗಿಲ್ಲ

ತ್ರಿಶಾ ತನ್ನ ಇನ್‌ಸ್ಟಾಗ್ರಾಂ ಖಾತೆಯಿಂದ ವಿಜಯ್ ಅವರನ್ನು ಅನ್‌ಫಾಲೋ ಮಾಡಿದ್ದೇ ಇಷ್ಟೆಲ್ಲ ವದಂತಿಗೆ ಕಾರಣವಾಗಿತ್ತು. ವಿಜಯ್ ಹಾಗೂ ತ್ರಿಶಾ ಬೇರೆಯಾಗಿದ್ದಾರೆ. ಇಬ್ಬರ ನಡುವಿನ ಬಾಂಧವ್ಯದಲ್ಲಿ ಬಿರುಕು ಬಿಟ್ಟಿದೆ ಎಂಬ ಸುದ್ದಿ ಓಡಾಡುವುದಕ್ಕೆ ಶುರು ಮಾಡಿತ್ತು. ಇನ್ನೊಂದು ಕಡೆ ವಿಜಯ್ ಹಾಗೂ ಪತ್ನಿ ಸಂಗೀತಾ ಇಬ್ಬರೂ ಒಂದಾಗುತ್ತಿದ್ದಾರೆ. ಹೀಗಾಗಿ ಇವರಿಂದ ಅಂತರವನ್ನು ಕಾಯ್ದುಕೊಳ್ಳುವುದಕ್ಕೆ ತ್ರಿಶಾ ಈ ನಿರ್ಧಾರಕ್ಕೆ ಬಂದಿದ್ದಾರೆಂಬ ಸುದ್ದಿ ಓಡಾಡಿತ್ತು. ಆದರೆ, ವಿಜಯ್ ಹುಟ್ಟುಹಬ್ಬ ಆಚರಿಸಿದ್ದು, ಎಲ್ಲಾ ವದಂತಿಗಳಿಗೂ ಬ್ರೇಕ್ ಹಾಕಿದಂತಿದೆ.

ಮಧ್ಯರಾತ್ರಿ ವಿಜಯ್ ಹುಟ್ಟುಹಬ್ಬ

ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಹಾಗೂ ತ್ರಿಶಾ ಬ್ರೇಕಪ್ ಸುದ್ದಿಗಳು ಹರಿದಾಡುತ್ತಿದ್ದರೆ, ಇತ್ತ ತ್ರಿಶಾ ಸಿಎಂ ವಿಜಯ್ ಬರ್ತ್‌ಡೇ ಅನ್ನು ಆಚರಣೆ ಮಾಡಿದ್ದಾರೆ. ಈ ಸಂಭ್ರಮಾಚರಣೆಯ ಫೋಟೊವನ್ನು ನಟಿ ತ್ರಿಶಾ ಹಂಚಿಕೊಂಡಿದ್ದಾರೆ. ಇದರಲ್ಲಿ ಕೇಕ್ ಮುಂದೆ ಸಿಎಂ ವಿಜಯ್ ನಿಂತಿದ್ದು, ಅವರ ಪಕ್ಕದಲ್ಲಿಯೇ ತ್ರಿಶಾ ಫುಲ್ ಹ್ಯಾಪಿಯಾಗಿರುವುದು ಕಾಣಿಸುತ್ತಿದೆ. ಒಂದು ಫೋಟೊವನ್ನು ಶೇರ್ ಮಾಡುವ ಮೂಲಕ ತಮ್ಮ ಬ್ರೇಕಪ್ ವದಂತಿಗೆ ಬ್ರೇಕ್ ಹಾಕಿದ್ದಾರೆ.

ವಿಜಯ್ ಬಗ್ಗೆ ತ್ರಿಶಾ ಹೇಳಿದ್ದೇನು?

ತ್ರಿಶಾ ಒಂದೇ ಒಂದು ಫೋಟೊದಲ್ಲಿ ವದಂತಿಗಳಿಗೆ ಬ್ರೇಕ್ ಹಾಕಿದ್ದೇನೋ ನಿಜ. ಆದರೆ, ಇದರೊಂದಿಗೆ ವಿಜಯ್ ತನ್ನ ಲೈಫ್‌ಗೆ ಎಷ್ಟು ಮುಖ್ಯ ಅನ್ನೋದನ್ನು ಒಂದೇ ಒಂದು ಸಾಲಿನಲ್ಲಿ ಬರೆದುಕೊಂಡಿದ್ದಾರೆ. "ತನ್ನ ಜೀವನದಲ್ಲಿ ಎಲ್ಲದಕ್ಕೂ ಮೌಲ್ಯವನ್ನು ಸೇರಿಸುವ ವ್ಯಕ್ತಿ. ಹುಟ್ಟುಹಬ್ಬದ ಶುಭಾಶಯಗಳು" ಎಂದು ತ್ರಿಶಾ ಬರೆದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲದೇ "00.00" ಎಂದು ಉಲ್ಲೇಖ ಮಾಡುವ ಮೂಲಕ ಮಧ್ಯರಾತ್ರಿ 12 ಗಂಟೆಗೆ ಬರ್ತ್‌ಡೇ ಆಚರಣೆ ಆಗಿದೆ ಎಂಬ ಸುಳಿವನ್ನೂ ನೀಡಿದ್ದಾರೆ.

English summary
Actress Trisha breaks the break up rumors on posting Tamil Nadu CM Vijay birthday photo. Recently Trisha unfollowed Vijay when speculation started.
Read more about: trisha vijay breakup
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X