ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಟಿವಿಕೆ ಪಕ್ಷ ಮೋಡಿ; ದಳಪತಿ ನಿವಾಸಕ್ಕೆ ನಟಿ ತ್ರಿಶಾ ಭೇಟಿ
2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಪಕ್ಷ ಟಿವಿಕೆ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ನಟ ವಿಜಯ್ ಇದೇ ಮೊದಲ ಬಾರಿಗೆ ವಿಧಾನ ಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಎಲ್ಲರ ಕಣ್ಣು ವಿಜಯ್ ಸ್ಟಾರ್‌ಡಮ್ ಚುನಾವಣೆ ಪ್ರಭಾವ ಬೀರುತ್ತಾ? ಟಿವಿಕೆ ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾ? ಹೊಸ ಯುಗ ಆರಂಭ ಆಗುತ್ತಾ? ಅನ್ನೋ ಪ್ರಶ್ನೆ ಎದ್ದಿದ್ದವು. ಅದಕ್ಕೆ ದಳಪತಿ ವಿಜಯ್ ಉತ್ತರ ಕೊಟ್ಟಿದ್ದಾರೆ.
ವಿಜಯ್ ಸ್ಥಾಪಿಸಿದ ತಮಿಳಗ ವೆಟ್ರೆ ಕಳಗಂ (ಟಿವಿಕೆ) ಪಕ್ಷ ತಮಿಳುನಾಡಿನ ಅಧಿಕಾರದ ಚುಕ್ಕಾಣಿ ಹಿಡಿಯುವ ಎಲ್ಲಾ ಸಾಧ್ಯತೆಯಿದೆ. ಅಧಿಕಾರ ಸ್ಥಾಪಿಸುವುದಕ್ಕೆ ಕೆಲವೇ ಸೀಟುಗಳು ಬೇಕಿದ್ದು, ಪ್ರಮುಖ ಪಕ್ಷಗಳಾದ ಎಐಡಿಎಂಕೆ, ಡಿಎಂಕೆ ಪಕ್ಷಗಳ ನೆರವು ಇಲ್ಲದೇನೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆ ಎದ್ದು ಕಾಣುತ್ತಿದೆ.

ಟಿವಿಕೆ ಬಹುಮತದತ್ತ ಸಾಗುತ್ತಿದ್ದರೆ, ಇತ್ತ ನಟಿ ತ್ರಿಶಾ ತಮ್ಮ ಕಾರಿನಲ್ಲಿ ವಿಜಯ್ ಮನೆಯ ಬಳಿ ದೌಡಾಯಿಸಿದ್ದಾರೆ. ವಿಜಯ್ ಮನೆ ಮುಂದೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಜಮಾಯಿಸಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಇದೆ. ಇದರ ನಡುವೆಯೇ ವಿಜಯ್ ಮನೆಗೆ ತ್ರಿಶಾ ಭೇಟಿ ಕೊಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ತಮಿಳುನಾಡು ರಾಜಕೀಯದಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ಹೊಸ ಸಂಚಲನವನ್ನೇ ಸೃಷ್ಟಿಸುತ್ತಿದೆ. ಇನ್ನೂ ಮತ ಎಣಿಕೆ ಪ್ರಕ್ರಿಯೆಯಲ್ಲಿ ಇದ್ದರೂ, ಟಿವಿಕೆ ಬಹುತೇಕ ಪ್ರಬಲ ರಾಜಕೀಯ ಪಕ್ಷವಾಗಿ ಮುನ್ನೆಲೆಗೆ ಬರುವ ಎಲ್ಲಾ ಸಾಧ್ಯತೆಯಿದೆ. ಹೀಗಾಗಿ ವಿಜಯ್ ಅವರ ಚೆನ್ನೈನ ನೀಲಂಕರೈ ನಿವಾಸದ ಮುಂದೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಜಮಾಯಿಸಿದ್ದಾರೆ. ಈ ವೇಳೆ ತ್ರಿಶಾ ಅವರ ಮನೆಗೆ ಭೇಟಿ ನೀಡಿದ್ದು ಅಚ್ಚರಿ ಮೂಡಿಸಿದೆ.
ವಿಜಯ್ ವಿಚ್ಚೇದನ ಪ್ರಕರಣ ಬೆಳಕಿಗೆ ಬಂದ ಬಳಿಕ ತ್ರಿಶಾ ಹೆಸರು ತಳುಕು ಹಾಕಿಕೊಂಡಿತ್ತು. ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಂಡರು ನಟಿ ತ್ರಿಶಾ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಆ ವೇಳೆ ತ್ರಿಶಾ ಈ ಟೀಕೆಗಳಿಗೆ ಒಂದೇ ಒಂದು ಪ್ರತಿಕ್ರಿಯೆ ನೀಡಿರಲಿಲ್ಲ. ಪರೋಕ್ಷವಾಗಿ ತಮ್ಮದೇ ಸ್ಟೈಲ್‌ನಲ್ಲಿ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದರಂತೆ. ವಿಜಯ್ ಹಾಗೂ ತ್ರಿಶಾ ಅವರ ನಡುವಿನ ನಂಟಿನ ವಿವಾದ ಚುನಾವಣೆಗೂ ಮುನ್ನ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಆ ವೇಳೆ ಇದೇ ವಿಜಯ್ ರಾಜಕೀಯ ನಡೆಗೆ ಹಿನ್ನಡೆಯಾಗಬಹುದೆಂಬ ಮಾತುಗಳು ಕೇಳಿ ಬಂದಿದ್ದವು.
ಇನ್ನು ಇಂತಹ ಸಂದರ್ಭದಲ್ಲಿ ವಿಜಯ್ ಮನೆಗೆ ತ್ರಿಶಾ ಭೇಟಿ ಕೊಟ್ಟಿದ್ದೇಕೆ? ಅನ್ನೋ ಪ್ರಶ್ನೆ ಮೂಡುವುದು ಸಹಜ. ತಮಿಳು ಮಾಧ್ಯಮಗಳ ಪ್ರಕಾರ, ವಿಜಯ್ ಅವರ ಈ ಐತಿಹಾಸಿಕ ಗೆಲುವಿಗೆ ಅಭಿನಂದನೆ ಸಲ್ಲಿಸುವುದಕ್ಕೆ ನಟಿ ತ್ರಿಶಾ ಆಗಮಿಸಿದ್ದರಷ್ಟೇ ಎಂದು ವರದಿ ಮಾಡಿವೆ. ಇದಕ್ಕೆ ವಿಜಯ್ ಅಭಿಮಾನಿಗಳು "ಅತ್ತಿಗೆಗೆ ಅಭಿನಂದನೆಗಳು", "ಮಿಸಸ್ ಸಿಎಂ", "ಅಣ್ಣಾಂಗೆ ಅಭಿನಂದನೆಗಳನ್ನು ತಿಳಿಸಿ ಅಕ್ಕ" ಎಂದೆಲ್ಲ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಇಂದು (ಮೇ 4) ತ್ರಿಶಾಗೆ ವಿಶೇಷ ದಿನ. ಒಂದು ಕಡೆ 43ನೇ ವಸಂತಕ್ಕೆ ಕಾಲಿಟ್ಟಿದ್ದು, ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದೇ ಇನ್ನೊಂದು ಕಡೆ ವಿಜಯ್ ಪಕ್ಷ ಬಹುಮತ ಪಡೆಯುತ್ತ ಮುನ್ನುಗ್ಗುತ್ತಿದೆ. ಈಗಾಗಲೇ ತಿರುಪತಿಗೆ ಭೇಟಿ ನೀಡಿದ್ದ ತ್ರಿಶಾ ಇಂದು ಬೆಳಗ್ಗೆ ಚೆನ್ನೈಗೆ ಬಂದಿಳಿದಿದ್ದಾರೆ. ನೇರವಾಗಿ ತಿರುಪತಿ ಪ್ರಸಾದ ಪಡೆದು ವಿಜಯ್ ಕೊಡುವ ಸಲುವಾಗಿ ಆಗಮಿಸಿದ್ದರು " ಎಂದು ಕೆಲವು ವರದಿಗಳು ಹೇಳುತ್ತಿವೆ. ಅಸಲಿಗೆ ಈ ಭೇಟಿಯ ಹಿಂದೆ ಏನಾದರೂ ರಾಜಕೀಯ ಉದ್ದೇಶವಿದೆಯೇ? ಅನ್ನೋದು ಮುನ್ನ ಮುಂದಿನ ದಿನಗಳಲ್ಲಿ ಗೊತ್ತಾಗಬಹುದು.


Click it and Unblock the Notifications