"ಒಂದು ರಾತ್ರಿಗೆ 25 ಲಕ್ಷ" ನಟಿ ತ್ರಿಶಾ ವಿರುದ್ಧ ಹೇಳಿಕೆ; ಮಾಜಿ AIADMK ಮುಖಂಡನಿಗೆ ಮಾನಹಾನಿ ನೋಟಿಸ್
ದಕ್ಷಿಣ ಭಾರತದ ನಟಿ ತ್ರಿಶಾ ಇತ್ತೀಚೆಗೆ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಹಾಗಂತ ತ್ರಿಶಾ ಕಾಲು ಕೆರೆದುಕೊಂಡು ವಿವಾದವನ್ನು ಸೃಷ್ಟಿ ಮಾಡುತ್ತಿಲ್ಲ. ಬದಲಾಗಿ ತ್ರಿಶಾರನ್ನೇ ಕೆಲವರು ಕೆಣಕಿ ವಿವಾದಕ್ಕೆ ಸಿಕ್ಕಿಕೊಳ್ಳುತ್ತಿದ್ದಾರೆ. ತಮಿಳುನಾಡಿನ ಮಾಜಿ ಎಐಎಡಿಎಂಕೆ ಪಕ್ಷದ ನಾಯಕ ಎ ವಿ ರಾಜು ಇತ್ತೀಚೆಗೆ ತ್ರಿಶಾ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಾಜಿ ಎಐಎಡಿಎಂಕೆ ನಾಯಕ ಎವಿ ರಾಜು ಸೇಲಂ ಪಶ್ಚಿಮ ಕ್ಷೇತ್ರದ ಶಾಸಕ ವೆಂಕಟಾಚಲಂ ಅವರನ್ನು ಟೀಕಿಸುವ ಜೋಷ್‌ನಲ್ಲಿ ನಟಿ ತ್ರಿಶಾ ಹೆಸರು ಎಳೆದು ತಂದಿದ್ದರು. "ಶಾಸಕರೊಬ್ಬರು ನಟಿ ತ್ರಿಶಾ ಮೇಲೆ ಮೋಹಗೊಂಡು 25 ಲಕ್ಷ ರೂ. ಕೊಟ್ಟು ರೆಸಾರ್ಟ್‌ಗೆ ಕರೆಸಿಕೊಂಡಿದ್ದರು" ಎಂದು ಹೇಳಿದ್ದರು. ತ್ರಿಶಾ ಬಗ್ಗೆ ಕೊಟ್ಟ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ತನ್ನ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಕ್ಕೆ ತ್ರಿಶಾ ಎಐಡಿಎಂಕೆ ಪಕ್ಷದ ಮಾಜಿ ನಾಯಕನ ವಿರುದ್ಧ ಮಾನಹಾನಿ ನೋಟಿಸ್ ಕಳುಹಿಸಿದ್ದಾರೆ. ಈ ಪ್ರತಿಯನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ನೋಟಿಸ್‌ನಲ್ಲಿ ತ್ರಿಶಾ ಹಾಕಿರುವ ಷರತ್ತುಗಳು ಹೀಗಿವೆ.
ತ್ರಿಶಾ ಹಂಚಿಕೊಂಡಿರುವ ನೋಟಿಸ್‌ನ ಪ್ರತಿಯಲ್ಲಿ ಎ ವಿ ರಾಜು ತಮ್ಮ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ಪರಿಹಾರ ನೀಡುವಂತೆಯೂ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಎವಿ ರಾಜು ಕೊಟ್ಟಿರುವ ಹೇಳಿಕೆಗಳಿಂದ ನಟಿ ತ್ರಿಶಾ ಮಾನಸಿಕವಾಗಿ ನೊಂದಿರುವುದಾಗಿ ಹೇಳಿದ್ದಾರೆ. ಅಲ್ಲದೆ ಮಾಧ್ಯಮಗಳಲ್ಲಿ ಅವಹೇಳನಕಾರಿ ಕಮೆಂಟ್‌ಗಳನ್ನು ನೀಡದಂತೆಯೂ ತಿಳಿಸಿದ್ದಾರೆ.
ಇದರೊಂದಿಗೆ ಎ ವಿ ರಾಜು ಮಾಡಿದ ಕಮೆಂಟ್‌ಗಳನ್ನು ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾಗಳಿಂದ ಸಂಪೂರ್ಣ ಅಳಿಸಿ ಹಾಕಬೇಕು ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೆ ಈ ನೋಟಿಸ್ ಸ್ವೀಕರಿಸಿದ 24 ಗಂಟೆಗಳ ಒಳಗೆ ನಟಿ ತ್ರಿಶಾಗೆ ಎ ವಿ ರಾಜು ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದೆ ಹೋದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಕ್ರಮ ತೆಗೆದುಕೊಳ್ಳಲು ಸಿದ್ಧ ಎಂದು ತ್ರಿಶಾ ಎಚ್ಚರಿಸಿದ್ದಾರೆ.


Click it and Unblock the Notifications











