"ಸುಚಿ ಲೀಕ್ಸ್‌ನಲ್ಲಿ ಖಾಸಗಿ ಫೋಟೊ ಹಂಚಿಕೊಂಡಿದ್ದೇ ತ್ರಿಶಾ"; ಗಾಯಕಿ ಆರೋಪಕ್ಕೆ ನಟಿಯ ಮಾರ್ಮಿಕ ಪೋಸ್ಟ್

2016ರಲ್ಲಿ ತಮಿಳು ಚಿತ್ರರಂಗದಲ್ಲಿ ಸುಚಿ ಲೀಕ್ಸ್ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಗಾಯಕಿ ಸುಚಿತ್ರಾ ಅವರದ್ದೇ ಎನ್ನಲಾದ ಟ್ವಿಟರ್ ಖಾತೆಯಲ್ಲಿ ತಮಿಳು ಚಿತ್ರರಂಗದ ದಿಗ್ಗಜರಾದ ಧನುಷ್, ತ್ರಿಶಾ, ಆಂಡ್ರಿಯಾ, ಅನಿರುದ್ಧ್ ರವಿಚಂದರ್ ಅವರದ್ದು ಎನ್ನಲಾದ ಖಾಸಗಿ ಫೋಟೊ ಹಾಗೂ ವಿಡಿಯೋಗಳು ಲೀಕ್ ಆಗಿದ್ದವು. ಇದು ಎಂಟು ವರ್ಷಗಳ ಹಿಂದೆ ಹಲ್‌ಚಲ್ ಎಬ್ಬಿಸಿತ್ತು.

ಈ ವಿವಾದದ ಬಳಿಕ ಗಾಯಕಿ ಸುಚಿತ್ರಾ ಸೈಲೆಂಟ್ ಆಗಿದ್ದರು. ಅವರ ಮಾನಸಿಕ ಸ್ಥಿತಿ ಸರಿಯಿಲ್ಲ ಅಂತ ಮಾಜಿ ಪತಿ ಕಾರ್ತಿಕ್ ಕುಮಾರ್ ಅಂದೇ ಆರೋಪ ಮಾಡಿದ್ದರು. ಇತ್ತೀಚೆಗೆ ಮತ್ತೆ ಗಾಯಕಿ ಸುಚಿತ್ರಾ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದು, ಈ ವೇಳೆ ಧನುಷ್, ಪತಿ ಕಾರ್ತಿಕ್ ಕುಮಾರ್ ಹಾಗೂ ತ್ರಿಶಾ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

Actress Trisha s cryptic reaction to singer Suchitra s allegation is trending

ಸುಚಿ ಲೀಕ್ಸ್‌ನಲ್ಲಿ ಖಾಸಗಿ ವಿಡಿಯೋ ಹಾಗೂ ಫೋಟೊಗಳು ಹರಿದಾಡುವುದಕ್ಕೆ ಸ್ವತ: ತ್ರಿಶಾ ಅವರೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಸ್ನೇಹಿತರೆಲ್ಲ ಸೇರಿಕೊಂಡು ಒಂದು ರೂಮಿನಲ್ಲಿ ಇದ್ದಾಗ ತಮಾಷೆ ಮಾಡಲು ಹೋಗಿ ಮಾಡಿಕೊಂಡ ಪೋಸ್ಟ್‌ಗಳಿವು. ಈ ವೇಳೆ ಸ್ವತ: ನಟಿ ತ್ರಿಶಾನೇ ಖಾಸಗಿ ಪೋಟೊಗಳನ್ನು ಕೊಟ್ಟಿದ್ದರು ಎಂದು ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿ ತ್ರಿಶಾ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಗಾಯಕಿ ಸುಚಿತ್ರಾ ಇತ್ತೀಚೆಗೆ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ತ್ರಿಶಾ ಕೃಷ್ಣನ್ ವಿರುದ್ಧ ತಿರುಗಿಬಿದ್ದಿದ್ದರು. ಫೋಟೊ, ವಿಡಿಯೋಗಳನ್ನು ಅವರೇ ಕೊಟ್ಟು ಏನೂ ಆಗೇ ಇಲ್ಲ ಎನ್ನುವಂತೆ ಇದ್ದರು ಎಂದು ಆರೋಪಿಸಿದ್ದಾರೆ. "ಪೋಸ್ಟ್ ಆದಂತಹ ಫೋಟೊ, ವಿಡಿಯೋಗಳನ್ನು ಸ್ವತ: ತ್ರಿಶಾ ಅವರೇ ಕೊಟ್ಟಿದ್ದರು. ಆದರೆ, ತಮಗೇನು ಆಗೇ ಇಲ್ಲ ಎನ್ನುವಂತೆ ಇದ್ದಾರೆ. ಇದರಿಂದ ನನಗೆ ನೋವಾಗಿದೆ. ಹಾಗೆ ಹೀಗೆ ಅಂತೆಲ್ಲ ಪೋಸ್ಟ್ ಮಾಡಿ ಸುಮ್ಮನಾಗಿದ್ದಾರೆ. ಒಂದು ರೂಮಿನಲ್ಲಿ ಕೂತುಕೊಂಡು ನಕ್ಕೊಂಡು ನಕ್ಕೊಂಡು ಮಾಡಿದ ಕೆಲಸವಿದು. ಅದರಲ್ಲಿ ತ್ರಿಶಾ ಕೂಡ ಒಬ್ಬಳು." ಎಂದು ಗಾಯಕಿ ಸುಚಿತ್ರಾ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಆರೋಪ ಮಾಡಿದ್ದರು.

ತ್ರಿಶಾ ಮೇಲಿನ ಆರೋಪ ಸುಚಿ ಲೀಕ್ಸ್ ಖ್ಯಾತಿಯ ಗಾಯಕಿ ಸುಚಿತ್ರಾರದ್ದು ಇಲ್ಲಿಗೆ ನಿಂತಿಲ್ಲ. "ತನ್ನನ್ನು ಉದ್ದಾರ ಮಾಡಿಕೊಳ್ಳುವುದಕ್ಕೆ ಟ್ವೀಟ್‌ನಲ್ಲಿ ಅವರು ಹಾಕಿಕೊಂಡಿದ್ದಾರೆ. ಸುಚಿಯನ್ನು ದೇವರೇ ನೋಡಿಕೊಳ್ಳುತ್ತಾರೆ ಅಂತ ಪೋಸ್ಟ್‌ಗಳನ್ನು ಮಾಡಿಕೊಂಡಿದ್ದರು. ಅದೆಲ್ಲವೂ ನಿಮಗೆ ಆಗಬೇಕು ಅಂತ ಆಗ ನಾನು ಅಂದುಕೊಂಡಿದ್ದೆ. ನೀವೇ ಆ ರೀತಿ ಕೆಟ್ಟದ್ದು ಮಾಡುತ್ತೀರ. ಆ ಮೇಲೆ ನನಗೆ ನೀವು ಶಾಪ ಹಾಕುತ್ತೀರ. ಎಲ್ಲಾ ನೀವೇ ಮಾಡಿ ನನಗೆ ಶಾಪ ಹಾಕಿದರೆ ನನಗೆ ಎಷ್ಟು ಕೋಪ ಬರಬೇಡ." ಎಂದು ತ್ರಿಶಾ ವಿರುದ್ಧ ಗಾಯಕಿ ಸುಚಿತ್ರಾ ಕಿಡಿಕಾರಿದ್ದರು.

Actress Trisha s cryptic reaction to singer Suchitra s allegation is trending

ಸುಚಿ ಲೀಕ್ಸ್ ಖಾತೆಯಲ್ಲಿ ನೀವೇ ಫೋಟೊ, ವಿಡಿಯೋಗಳನ್ನು ಲೀಕ್ ಮಾಡುತ್ತೀರ. ನೀವೇ ಕ್ಷಮಿಸುತ್ತೀರ ಎಂದಿದ್ದರು. "ನೀವೇ ಫ್ರಾಂಕ್ ಮಾಡುವುದಕ್ಕೆ ಈ ರೀತಿ ಪೋಸ್ಟ್ ಮಾಡಿದ್ದೀರ. ನೀವೇ ಶಾಪ ಹಾಕುತ್ತೀರ.. ನೀವೇ ನನ್ನನ್ನು ಕ್ಷಮಿಸುತ್ತೀರ. ಹಾಗೇ ನಾವು ಸುಚಿ ಮೇಲೆ ಯಾವುದೇ ದೂರು ಕೊಡಲ್ಲ. ಯಾಕಂದ್ರೆ, ಮಾಜಿ ಗಂಡ ಕಾರ್ತಿಕ್ ಬೇಡಿಕೊಂಡ ಅಂತ ಹೇಳಿಕೊಳ್ಳುತ್ತೀರ. ಆದರೆ, ಕಾರ್ತಿಕ್ ಕೊನೆಗೆ ನನ್ನ ಹೆಂಡತಿ ಹುಚ್ಚಿ ಅಂತ ವಿಡಿಯೋ ಹಾಕುತ್ತಾನೆ." ಎಂದು ಗಾಯಕಿ ಸುಚಿತ್ರಾ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಗಾಯಕಿ ಸುಚಿತ್ರಾ ಮಾಡಿದ ಆರೋಪಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಈ ವೇಳೆ ನಟಿ ತ್ರಿಶಾ ತನ್ನ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಮಾರ್ಮಿಕವಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈಗ ಪೋಸ್ಟ್ ಈಗ ವೈರಲ್ ಆಗುತ್ತಿದೆ.

"ಪ್ರೇಕ್ಷಕರೇ, ನಾನು ಕನ್ನಡಕವನ್ನು ತೆಗೆದಾಗ; ನಾನೆಷ್ಟು ಬೆರಳುಗಳನ್ನು ಹೊಂದಿರುತ್ತೇನೆ?" ಎಂದು ಬರೆದು ಎರಡೂ ಫೋಟೊಗಳನ್ನು ಪೋಸ್ಟ್ ಮಾಡಿದ್ದರು. ಇದನ್ನು ನೋಡಿ ಗಾಯಕಿ ಸುಚಿತ್ರಾಗೆ ನಟಿ ತ್ರಿಶಾ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಈ ಮೂಲಕ ತಾನು ಸರಿಯಿದ್ದರೂ ಜಗತ್ತು ತನ್ನನ್ನು ದೂರುತ್ತೆ. ಸತ್ಯವನ್ನು ತಿರುಚುತ್ತೆ ಅನ್ನುವ ಅರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ.

More from Filmibeat

English summary
Trisha's cryptic reaction on Suchitra's allegation:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X