Varalakshmi Sarathkumar:ಬಾಲ್ಯದಲ್ಲಿ 5 ರಿಂದ 6 ಜನರಿಂದ ಲೈಂಗಿಕ ಕಿರುಕುಳ; ಶೋನಲ್ಲಿ ಕಣ್ಣೀರಿಟ್ಟ ವರಲಕ್ಷ್ಮಿ

ದಕ್ಷಿಣ ಭಾರತದ ಜನಪ್ರಿಯ ನಟಿ ವರಲಕ್ಷ್ಮಿ ಶರತ್‌ಕುಮಾರ್. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ನಟಿಸಿದ ಸೂಪರ್‌ ಹಿಟ್ ಸಿನಿಮಾ 'ಮ್ಯಾಕ್ಸ್' ನಲ್ಲೂ ಅಭಿನಯಿಸಿದ್ದರು. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಖಡಕ್ ಲುಕ್ ಕೊಟ್ಟಿದ್ದರು. ಈಕೆ ಆಯ್ಕೆ ಮಾಡಿಕೊಳ್ಳುವ ಪಾತ್ರಗಳೆಲ್ಲವೂ ಅಷ್ಟೇ ಪವರ್‌ಫುಲ್ ಆಗಿರುತ್ತೆ. ಬಹುತೇಕ ಸಿನಿಮಾಗಳಲ್ಲಿ ರಫ್ ಅಂಡ್ ಟಪ್‌ ಆಗಿಯೇ ಕಾಣಿಸಿಕೊಂಡಿದ್ದಾರೆ. ಇವರ ವೃತ್ತಿ ಬದುಕಿನಲ್ಲಿ ಅಂತಹ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾಗಳಲ್ಲಿ ಖಡಕ್ ಆಗಿ ಕಾಣಿಸಿಕೊಳ್ಳುವ ವರಲಕ್ಷ್ಮಿ ಶರತ್‌ಕುಮಾರ್ ಜೀವನದಲ್ಲೂ ಒಂದು ಕರಾಳ ಘಟನೆ ನಡೆದಿದೆ. ಆ ಘಟನೆಯನ್ನು ನೆನಪಿಸಿಕೊಂಡು ವರಲಕ್ಷ್ಮಿ ಶರತ್‌ಕುಮಾರ್ ತಮಿಳಿ ರಿಯಾಲಿಟಿ ಶೋ ಒಂದರಲ್ಲಿ ಕಣ್ಣೀರು ಹಾಕಿದ್ದಾರೆ. ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಜನಪ್ರಿಯರ ಶೋ ಒಂದರಲ್ಲಿ ಇದೇ ಮೊದಲ ಬಾರಿಗೆ ಓಪನ್ ಆಗಿ ಹೇಳಿಕೊಂಡಿದ್ದಾರೆ.

Actress Varalakshmi Sarathkumar says she was harassed by 6 people in her childhood

ಇತ್ತೀಚೆಗೆ ಸಿನಿಮಾದ ಜನಪ್ರಿಯರ ನಟಿಯರು ತಮ್ಮ ಜೀವನದಲ್ಲಾದ ಕಹಿ ಘಟನೆಗಳನ್ನು ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾರೆ. ಯೂಟ್ಯೂಬ್ ಚಾನೆಲ್‌ಗಳಲ್ಲಿ ನೀಡುವ ಸಂದರ್ಶನಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಇನ್ನು ಮೀಟೂ ಸಂದರ್ಭದಲ್ಲೂ ನಟಿಯರು ಓಪನ್ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಮಾತಾಡುತ್ತಿದ್ದಾರೆ. ಹಾಗೇ, ವರಲಕ್ಷಿ ಶರತ್ ಕುಮಾರ್ ಕೂಡ ಬಾಲ್ಯದಲ್ಲಿ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ನೆನೆದು ಕಣ್ಣೀರು ಹಾಕಿದ್ದಾರೆ.

ತೆಲುಗು ಚಿತ್ರರಂಗದ ಹಿರಿಯ ನಟ ಶರತ್‌ ಕುಮಾರ್ ಅವರ ಮೊದಲ ಪತ್ನಿಯ ಪುತ್ರಿ ವರಲಕ್ಷ್ಮಿ. ಸಮಾಜದ ಪ್ರಭಾವಿ ವ್ಯಕ್ತಿ. ಇಂತಹವರ ಮಕ್ಕಳೇ ಲೈಂಗಿಕ ಕಿರುಕುಳವನ್ನು ಅನುಭವಿಸಿದ್ದಾರೆ ಅನ್ನೋದಾದರೆ, ಇನ್ನು ಉಳಿದವರ ಕಥೆಯೇನು? ಅನ್ನೋ ಪ್ರಶ್ನೆನೂ ಮೂಡುವುದು ಸಹಜ. ಅಸಲಿಗೆ ಜೀ ತಮಿಳಿನ ರಿಯಾಲಿಟಿ ಶೋನಲ್ಲಿ ವರಲಕ್ಷ್ಮಿ ಶರತ್ ಕುಮಾರ್ ಹಂಚಿಕೊಂಡ ಆ ಕಹಿ ಘಟನೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

Actress Varalakshmi Sarathkumar says she was harassed by 6 people in her childhood

ಜೀ ತಮಿಳಿನಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ಜೋಡಿ ಡ್ಯಾನ್ಸ್ ರಿಲೋಡೆಡ್ 3' ತೀರ್ಪುಗಾರರಾಗಿದ್ದಾರೆ. ವಿವಾಹದ ಬಳಿಕ ಸ್ವಲ್ಪ ರಿಲ್ಯಾಕ್ಸ್ ಮೂಡಿಗೆ ಜಾರಿರುವ ವರಲಕ್ಷ್ಮಿ ಶರತ್‌ಕುಮಾರ್ ಟಿವಿ ಶೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ವಾರ ಪ್ರಸಾರ ಆಗುತ್ತಿರುವ ಶೋನಲ್ಲಿ ಸ್ಪರ್ಧಿಯೊಬ್ಬರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಪರ್ಫಾಮೆನ್ಸ್ ನೀಡಿದ್ದರು. ವೇದಿಕೆ ಮೇಲೆ ಆ ಸ್ಪರ್ಧಿ ತಮಗಾದ ಲೈಂಗಿಕ ಕಿರುಕುಳದ ಅನುಭವವನ್ನು ಹೇಳಿಕೊಂಡಿದ್ದರು. ಆ ವೇಳೆ ವರಲಕ್ಷ್ಮಿ ಶರತ್‌ ಕುಮಾರ್ ಕೂಡ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ವೇದಿಕೆ ಮೇಲಿದ್ದ ಸ್ಪರ್ಧಿಯ ನೋವಿನ ಕತೆಯನ್ನು ಕೇಳಿದ ವರಲಕ್ಷ್ಮಿ ಶರತ್‌ಕುಮಾರ್ " ನಿಮ್ಮ ನೋವಿನ ಕಥೆ ನನಗೆ ಅರ್ಥ ಆಗುತ್ತೆ. ನನ್ನ ತಂದೆ ತಾಯಿ ಅವರ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಆಗ ನಾನಿನ್ನು ಮಗುವಾಗಿದ್ದೆ. ಹೀಗಾಗಿ ನನ್ನನ್ನು ಮನೆಯಲ್ಲಿ ನನ್ನನ್ನು ಬಿಟ್ಟು ಹೋಗುತ್ತಿದ್ದರು. ಇನ್ನು ಕೆಲವೊಮ್ಮೆ ನನ್ನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಈ ವೇಳೆ ಐದರಿಂದ ಆರು ಮಂದಿ ನನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು." ಎಂದು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

ಹಾಗೇ ಇಂದಿನ ಮಕ್ಕಳಿಗೆ ಪೋಷಕರು ಒಳ್ಳೆಯ ಸ್ಪರ್ಶ ಹಾಗೂ ಕೆಟ್ಟ ಸ್ಪರ್ಶದ ಬಗ್ಗೆ ಅರಿವು ಮೂಡಿಸಬೇಕು ಎಂದು ಈ ಶೋನಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ವರಲಕ್ಷ್ಮಿ ಶರತ್‌ಕುಮಾರ್ ಮನವಿಯನ್ನು ಜನರು ಕೂಡ ಬೆಂಬಲಿಸಿದ್ದಾರೆ. ನಟಿಯ ಒಳ್ಳೆಯ ಗುಣವನ್ನು ಮೆಚ್ಚಿಕೊಂಡಿದ್ದಾರೆ. ಸದ್ಯ ಈ ಶೋ ಇದೇ ವಾರ ಜೀ ತಮಿಳಿನಲ್ಲಿ ಪ್ರಸಾರ ಆಗುತ್ತಿದೆ. ಅದರಲ್ಲಿ ಸಂಪೂರ್ಣವಾಗಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ.

ಇನ್ನು ವರಲಕ್ಷ್ಮಿ ಶರತ್‌ ಕುಮಾರ್ ವೃತ್ತಿ ಬದುಕಿನ ಕಡೆಗೆ ಬರೋದಾರೇ, ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ನಟಿಸಿದ 'ಮ್ಯಾಕ್ಸ್' ಸಿನಿಮಾದಲ್ಲಿ ನೆಗೆಟಿವ್ ಶೇಡ್ ಇರುವ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ವಿವಾಹದ ಬಳಿಕ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಹಾಗೇ ಕಾಣುತ್ತಿದೆ. ಆದರೆ, ರಿಯಾಲಿಟಿ ಶೋಗಳಲ್ಲಿ ಸದಾ ಬ್ಯುಸಿಯಾಗಿದ್ದಾರೆ.

ಬೆಂಗಳೂರಿನಲ್ಲಿಯೇ ಜನಿಸಿರುವ ವರಲಕ್ಷ್ಮಿ ಶರತ್‌ಕುಮಾರ್ ಉನ್ನತ ಶಿಕ್ಷಣವನ್ನು ಚೆನ್ನೈನಲ್ಲಿಯೇ ಮುಗಿಸಿದ್ದರು. ತನ್ನ ಶಿಕ್ಷಣವನ್ನು ಮುಗಿಸುತ್ತಿದ್ದಂತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಶರತ್ ಕುಮಾರ್ ಅನ್ನುವ ಹೆಸರು ಅವರ ಹಿಂದಿದ್ದರೂ ಈ ನಟಿ ನಾಯಕಿಯಾಗಿ ಯಶಸ್ಸು ಕಾಣುವುದಕ್ಕೆ ಸಾಧ್ಯವಾಗಿಲ್ಲ. 2003ರಲ್ಲಿ ಪ್ಯಾನ್ ಇಂಡಿಯಾ ನಿರ್ದೇಶಕ ಶಂಕರ್ 'ಬಾಯ್ಸ್' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಆ ವೇಳೆ ಪ್ರಮುಖ ಪಾತ್ರಕ್ಕೆ ವರಲಕ್ಷ್ಮಿಗೆ ಅವಕಾಶ ನೀಡಿದ್ದರು. ಆದರೆ, ತಂದೆ ಶರತ್‌ಕುಮಾರ್ ಈ ಆಫರ್ ಒಪ್ಪಿಕೊಳ್ಳಲು ಬಿಟ್ಟಿರಲಿಲ್ಲ. ಹೀಗಿ ದೊಡ್ಡ ಅವಕಾಶವೊಂದು ಮಿಸ್ ಆಗಿತ್ತು.

2012ರಲ್ಲಿ ನಯನತಾರಾ ಪತಿ ವಿಘ್ನೇಶ್ ಶಿವನ್ ನಿರ್ದೇಶಿಸಿದ್ದ 'ಪೋಟಾ ಪೋಡಿ' ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾದಲ್ಲಿ ನಾಯಕಿಯಾಗಿ ವರಲಕ್ಷ್ಮಿ ಶರತ್‌ಕುಮಾರ್ ನಟಿಸಿದ್ದರು. ಸಿಂಬು ಜೊತೆ ನಾಯಕಿಯಾಗಿ ವರಲಕ್ಷ್ಮಿ ಶರತ್‌ಕುಮಾರ್ ನಾಯಕಿಯಾಗಿದ್ದರು. ಆನಂತರ 2014ರಲ್ಲಿ ಮತ್ತೊಂದು ಬಿಗ್ ಪ್ರಾಜೆಕ್ಟ್‌ನಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿತ್ತು. ಅದುವೇ 'ಮಾಣಿಕ್ಯ'.

ಕಿಚ್ಚ ಸುದೀಪ್ ನಟಿಸಿದ 'ಮಾಣಿಕ್ಯ' ಸಿನಿಮಾದಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ನಾಯಕಿಯಾಗಿ ನಟಿಸಿದ್ದರು. ಇದು ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿ ಸೇರಿತ್ತು. ಇಲ್ಲಿಂದ ವರಲಕ್ಷ್ಮಿ ವೃತ್ತಿ ಬದುಕು ಬದಲಾಗಿತ್ತು. ಆದರೆ, ಈ ಯಶಸ್ಸು ಹೆಚ್ಚು ದಿನ ಉಳಿಯಲಿಲ್ಲ. ಬಳಿಕ ಪ್ರಮುಖ ಪಾತ್ರದಲ್ಲಿಯೇ ನಟಿಸಿದ್ದರೂ, ಖಳನಾಯಕಿ ಹಾಗೂ ಪೋಷ ಪಾತ್ರಗಳಲ್ಲಿ ನಟಿಸಬೇಕಾಯ್ತು.

ಆದರೆ, ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಯಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ನಟಿಸಿ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದರು. ಖಳನಾಯಕಿಯಾಗಿ, ಪೋಷಕ ನಟಿಯಾಗಿ ಚಿತ್ರರಂಗದಲ್ಲಿ ಇಂದಿಗೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. 40ನೇ ವಯಸ್ಸಿನ ಹೊತ್ತಿನಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮುಂಬೈ ಮೂಲದ ಉದ್ಯಮಿ ನಿಕೊಲಯ್ ಸಚ್‌ದೇವ್ ಜೊತೆ 2024, ಜೂನ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಇನ್ನು ವಿವಾಹದ ಸಂದರ್ಭದಲ್ಲಿ ವರಲಕ್ಷ್ಮಿ ಪತಿ ನಿಕೊಲಾಯ್‌ ಸಚ್‌ದೇವ್ ಇನ್ಮುಂದೆ ತಮ್ಮ ಹೆಸರಿನ ಮುಂದೆ ವರಲಕ್ಷ್ಮಿ ಶರತ್‌ಕುಮಾರ್ ಹೆಸರನ್ನು ಸೇರಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದರು. ಇಷ್ಟೇ ಅಲ್ಲ ತಮ್ಮ ಮಗಳ ಹೆಸರಿನಲ್ಲೂ ವರಲಕ್ಷ್ಮಿ ಶರತ್‌ಕುಮಾರ್ ಹೆಸರನ್ನು ಸೇರಿಸುವುದಾಗಿ ಮಾತು ಕೊಟ್ಟಿದ್ದರು. ಅಷ್ಟಕ್ಕೂ ಸುಮ್ಮನೆ ವರಲಕ್ಷ್ಮಿ ಮೇಲಿನ ಪ್ರೀತಿಯಿಂದ ಈ ನಿರ್ಧಾರಕ್ಕೆ ಬಂದಿರಲಿಲ್ಲ. ಇದರ ಹಿಂದೊಂದು ಒಳ್ಳೆಯ ಉದ್ದೇಶವಿದೆ ಎಂದು ಹೇಳಿದ್ದರು.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಶರತ್‌ಕುಮಾರ್ ಅವರಿಗೆ ದೊಡ್ಡ ಹೆಸರಿದೆ. ಹಾಗೇ ಪುತ್ರಿ ವರಲಕ್ಷ್ಮಿ ಕೂಡ ಒಳ್ಳೆಯ ಹೆಸರನ್ನು ಪಡೆದಿದ್ದಾರೆ. ಹೀಗಾಗಿ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಪತಿ ನಿಕೊಲಾಯ್ ಈ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದರು. ಮದುವೆ ಬಳಿಕ ನಿಕೋಲಾಯ್ ಹೆಸರಿನ ಮುಂದೆ ವರಲಕ್ಷ್ಮಿ ಶರತ್‌ ಕುಮಾರ್ ಹೆಸರು ಸೇರಿಕೊಂಡಿದ್ದಾರಾ ಇಲ್ಲವೋ ಅನ್ನೋದು ಇನ್ನೂ ತಿಳಿಯಬೇಕಿದೆ ಅಷ್ಟೇ. ಸದ್ಯ ವರಲಕ್ಷ್ಮಿ ಲೈಂಗಿಕ ಕಿರುಕುಳದ ಬಗ್ಗೆ ಕೊಟ್ಟ ಹೇಳಿಕೆ ಈಗ ವೈರಲ್ ಆಗುತ್ತಿದೆ.

More from Filmibeat

English summary
Actress Varalakshmi Sarathkumar says she was harassed by 6 people in her childhood
Read more about: varalakshmi harassment actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X