'ಬೊಮ್ಮರಿಲ್ಲು' ಹೀರೊ ಜೊತೆ ಬಾಲಿವುಡ್ ನಟಿ ಡೇಟಿಂಗ್: ಕೊನೆಗೂ ಪ್ರತಿಕ್ರಿಯೆ ನೀಡಿದ ನಟಿ
'ಬಾಯ್ಸ್', 'ಬೊಮ್ಮರಿಲ್ಲು', 'ರಂಗ ದೇ ಬಸಂತಿ'ಯಂತಹ ಸಿನಿಮಾಗಳಲ್ಲಿ ನಟಿಸಿರೋ ಸೌತ್ ಹೀರೊ ಸಿದ್ಧಾರ್ಥ್. ಇತ್ತ ಸೌತ್ ಇಂಡಿಯನ್ ಆಗಿದ್ದರೂ, ಬಾಲಿವುಡ್ ಸಿನಿಮಾಗಳಿಂದಲೇ ಗುರುತಿಸಿಕೊಂಡಿರೋ ಅದಿತಿ ರಾವ್ ಹೈದರಿ. ಇವರಿಬ್ಬರ ನಡುವೆ ಏನೋ ನಡೀತಿದೆ ಅನ್ನೋ ಸುದ್ದು ಹಲವು ದಿನಗಳಿಂದ ಓಡಾಡುತ್ತಲೇ ಇದೆ.
ಇವರಿಬ್ಬರ ನಡುವೆ ಅದೆಷ್ಟೇ ಗಾಳಿಸುದ್ದಿಗಳು ಓಡಾಡುತ್ತಿದ್ದರೂ, ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಇಬ್ಬರೂ ತುಟಿಪಿಟಿಕ್ ಅಂದಿರಲಿಲ್ಲ. ಆದ್ರೀಗ ಇದೇ ಮೊದಲ ಬಾರಿಗೆ ಅದಿತಿ ರಾವ್ ಹೈದರಿ ತಮ್ಮ ಲವ್ ಸ್ಟೋರಿ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಅದಿತಿ ರಾವ್ ಹೈದರಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಹಲವು ದಿನಗಳಿಂದ ಹರಿದಾಡುತ್ತಿದ್ದ ಗಾಳಿಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಲಾಗಿತ್ತು. ಅದಕ್ಕೆ ಕ್ಯೂಟ್ ಆಗಿ, ಮುದ್ದು ಮುದ್ದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕೊನೆಗೂ ತಮ್ಮಿಬ್ಬರ ಡೇಟಿಂಗ್ ಬಗ್ಗೆ ನಟಿ ಅದಿತಿ ರಾವ್ ಹೈದರಿ ಹೇಳಿದ್ದೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಸಿದ್ದಾರ್ಥ್ ಜೊತೆಗಿನ ಡೇಟಿಂಗ್ ಬಗ್ಗೆ ಅದಿತಿ ಹೇಳಿದ್ದೇನು?
ದಕ್ಷಿಣ ಭಾರತದ ನಟ ಸಿದ್ಧಾರ್ಥ್ ಜೊತೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ಅದಿತಿ ರಾವ್ ಹೈದರಿ ನಾಚುತ್ತಲೆ ಪ್ರತಿಕ್ರಿಯಿಸಿದ್ದಾರೆ. ಅವರಿಬ್ಬರ ನಡುವಿನ ವದಂತಿಗಳ ಬಗ್ಗೆ ಕಾರ್ಯಕ್ರಮದಲ್ಲಿ ಪ್ರಶ್ನೆ ಮಾಡಲಾಗಿತ್ತು. ಆ ವೇಳೆ ಅದಿತಿ ರಾವ್ ಹೈದರಿ ನಾಚಿ ನೀರಾಗಿದ್ದಾರೆ.

ಅದಿತಿ ರಾವ್ ಹೈದರಿ ತನಗೆ ಕೇಳಿದ ಪ್ರಶ್ನೆಗಳಿಗೆ ಬಾಯಿ ಬಿಡುವುದಿಲ್ಲ ಎಂದು ಕೈ ಸನ್ನೆ ಮೂಲಕ ತಿಳಿಸಿದ್ದಾರೆ. ಮೌನದ ಮೂಲಕವೇ ಇಬ್ಬರು ಡೇಟಿಂಗ್ ಮಾಡುತ್ತಿರುವ ವಿಷಯದ ಬಗ್ಗೆ ಸಮ್ಮಿಸಿದ್ದಾರೆ. ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
'ಮಹಾ ಸಮುದ್ರಂ' ವೇಳೆ ಪ್ರೇಮಾಂಕುರ
2021ರಲ್ಲಿ ತೆಲುಗಿನಲ್ಲಿ 'ಮಹಾ ಸಮುದ್ರಂ' ಅನ್ನೋ ಸಿನಿಮಾ ತೆರೆಕಂಡಿತ್ತು. ಆ ಸಿನಿಮಾದ ಶೂಟಿಂಗ್ ವೇಳೆ ಅದಿತಿ ರಾವ್ ಹೈದರಿ ಹಾಗೂ ಸಿದ್ಧಾರ್ಥ್ ನಡುವೆ ಪ್ರೀತಿ ಹುಟ್ಟಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಅಲ್ಲಿಂದ ಈ ಜೋಡಿಯ ಬಗ್ಗೆ ಒಂದಲ್ಲ ಒಂದು ಸುದ್ದಿ ಹರಿದಾಡುತ್ತಲೇ ಇದೆ.
ಅದಿತಿ ಹಾಗೂ ಸಿದ್ಧಾರ್ಥ್ ಡೇಟಿಂಗ್ ವಿಚಾರ ಹೊರಬೀಳುತ್ತಿದ್ದಂತೆ, ಈ ಜೋಡಿ ಬಹಿರಂಗವಾಗಿಯೇ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದ್ದರು. ಆಗಲೇ ಈ ಜೋಡಿ ಬಗ್ಗೆ ಎದ್ದಿರೋ ವದಂತಿಗಳು ಮತ್ತಷ್ಟು ಬಲವಾಗಿದ್ದವು. ಅಲ್ಲದೆ 5 ವಾರಗಳ ಹಿಂದಷ್ಟೇ ಸಿದ್ದಾರ್ಥ್ ಜೊತೆ ರಸ್ತೆಯೊಂದರಲ್ಲಿ ಹೆಜ್ಜೆ ಹಾಕುತ್ತಿರುವ ವಿಡಿಯೋ ಹಂಚಿಕೊಂಡು ಬರ್ತ್‌ಡೇ ವಿಶ್ ಮಾಡಿದ್ದರು.
ಶೀಘ್ರದಲ್ಲೇ ಮದುವೆ?
ಡೇಟಿಂಗ್ ಬಗ್ಗೆ ಕೇಳಿದಾಗ, ಅದಿತಿ ರಾವ್ ಹೈದರಿ ಜಾಣತನದ ಉತ್ತರ ನೀಡಿ ತಪ್ಪಿಸಿಕೊಂಡಿದ್ದಾರೆ. "ನಾನೀಗ ಯಾರೊಂದಿಗೆ ರಿಲೇಷನ್‌ಶಿಪ್‌ನಲ್ಲಿ ಇದ್ದೇನೆ ಅನ್ನೋದು ಮುಖ್ಯವಲ್ಲ. ನಾನೀಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ. ಒಪ್ಪಿಕೊಂಡಿರುವ ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸುತ್ತೇನೆ:" ಎಂದು ಅದಿತಿ ರಾವ್ ಹೈದರಿ ಹೇಳಿದ್ದಾರೆ.
ಅದಿತಿ ಸದ್ಯ ಸಂಜಯ್ ಲೀಲಾ ಬನ್ಸಾಲಿಯ ವೆಬ್ ಸರಣಿ 'ಹೀರಾಮಂಡಿ'ನಲ್ಲಿ ನಟಿಸುತ್ತಿದ್ದಾರೆ. ನೆಟ್‌ಫ್ಲಿಕ್ಸ್ ವೆಬ್ ಸೀರಿಸ್‌ಗೂ ಸೈ ಎಂದಿದ್ದಾರೆ. ಇದರಲ್ಲಿ ಅದಿತಿ ರಾವ್ ಹೈದರಿ, ಜೊತೆ ಬಾಲಿವುಡ್‌ನ ಟಾಪ್ ಹೀರೊಯಿನ್ಸ್ ಸೋನಾಕ್ಷಿ ಸಿನ್ಹಾ, ಮನೀಶಾ ಕೊಯಿರಾಲ, ರಿಚಾ ಚಡ್ಡಾ, ಶರ್ಮಿನ್ ಸೆಹಗಲ್ ಹಾಗೂ ಸಂಜೀದಾ ಶೇಖ್ ಮಹಾರಾಣಾ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











