20 ವರ್ಷಗಳ ಬಳಿಕ ಒಂದಾದ ಸೂರ್ಯ-ತ್ರಿಶಾ ಕೃಷ್ಣನ್; 'ಕರುಪ್ಪು' ಟೈಟಲ್.. ಹೈಲೈಟ್ಸ್ ಏನು?

ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯಗೆ ಯಾಕೋ ಅದೃಷ್ಟವೇ ಕೈ ಹಿಡಿಯುತ್ತಿಲ್ಲ. ಒಂದರ ಹಿಂದೊಂದು ಸೋಲುಗಳು ಅವರನ್ನು ಹಿಂಬಾಲಿಸುತ್ತಲೇ ಇವೆ. 'ಕಂಗುವ' ಅಂತ ಹೀನಾಯ ಸೋಲಿನ ಬಳಿಕ 'ರೆಟ್ರೋ' ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದರು. ಕಾರ್ತಿಕ್ ಸುಬ್ಬರಾಜು ನಿರ್ದೇಶಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದೇ ಗೆಲ್ಲುತ್ತೆ ಎಂಬ ಭರವಸೆ ಇತ್ತು. ಆದರೆ, ಬಾಕ್ಸಾಫೀಸ್‌ನಲ್ಲಿ ಅದೂ ಕೂಡ ಸೋಲುಂಡಿತ್ತು. ಈ ಬೆನ್ನಲ್ಲೇ ಮತ್ತೊಂದು ಸಿನಿಮಾ ಮಾಸ್ ಸಿನಿಮಾ ರೆಡಿಯಾಗುತ್ತಿದೆ. ಅದುವೇ 'ಕರುಪ್ಪು'.

ಸೂರ್ಯ ತಮಿಳು ಚಿತ್ರರಂಗದ ಅದ್ಭುತ ನಟ ಅನ್ನೋದರಲ್ಲಿ ಎರಡು ಮಾತಿಲ್ಲ. ಈ ಹಿಂದೆ ಅವರು ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಒಳ್ಳೊಳ್ಳೆಯ ದಾಖಲೆಯನ್ನು ಬರೆದಿವೆ. ಆದರೆ, ಇತ್ತೀಚೆಗೆ ಯಾಕೋ ಇವರ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. ಸ್ಟಾರ್ ನಿರ್ದೇಶಕರೇ ಇವರಿಗೆ ಯಶಸ್ಸು ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಈಗ 'ಕರುಪ್ಪು' ಸೂರ್ಯಗೆ ಒಂದೊಳ್ಳೆ ಉಡುಗೊರೆಯಾಗಬಹುದೇ? ಈ ಪ್ರಶ್ನೆಯಂತೂ ಅವರ ಅಭಿಮಾನಿಗಳನ್ನು ಕಾಡುತ್ತಲೇ ಇದೆ.

After 20 years Suriya and Trisha Krishnan reunited for Karuppu movie directed by RJ Balaji

'ಕರುಪ್ಪು' ಸಿನಿಮಾದ ಮತ್ತೊಂದು ಹೈಲೈಟ್ ಅಂದರೆ ಕಾಂಬಿನೇಷನ್. ಸೂರ್ಯ ಹಾಗೂ ತ್ರಿಶಾ ಕೃಷ್ಣನ್ ತಮಿಳಿನ ಹಿಟ್ ಜೋಡಿ. ಆದರೆ, ಕಳೆದ ಎರಡು ದಶಕಗಳಿಂದ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡಿರಲಿಲ್ಲ. ಈಗ ಬರೋಬ್ಬರಿ 20 ವರ್ಷಗಳ ಬಳಿಕ ಸೂರ್ಯ ಹಾಗೂ ತ್ರಿಶಾ ಕೃಷ್ಣನ್ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ 'ಕರುಪ್ಪು' ಸೂರ್ಯ ಪಾಲಿಗೆ ಸೂಪರ್ ಹಿಟ್ ಸಿನಿಮಾ ಅಂತ ಸಾಬೀತಾಗಬಹುದು.

ಸೂರ್ಯ ನಟಿಸುತ್ತಿರುವ ಈ ಸಿನಿಮಾವನ್ನು ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇದು ದಕ್ಷಿಣ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ. ಈ ಹಿಂದೆ 'ಧೀರನ್', 'ಅರುವಿ', 'ಎನ್‌ಜಿಕೆ', 'ರಾಕ್ಷಸಿ', 'ಖೈದಿ', 'ಭೋಲಾ' ಹೀಗೆ ಹತ್ತು ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಇದೇ ಸಂಸ್ಥೆ ನಿರ್ಮಾಣ ಮಾಡಿದೆ. ಇದೀಗ ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆ ಸೂರ್ಯ ನಟಿಸುತ್ತಿರುವ 'ಕರುಪ್ಪು' ಸಿನಿಮಾ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ. ಅಂದ್ಹಾಗೆ ಇದು ಕಾಲಿವುಡ್ ನಟ ಸೂರ್ಯ ಅವರ 45ನೇ ಸಿನಿಮಾ.

ಆರ್‌ ಜೆ ಬಾಲಾಜಿ ನಿರ್ದೇಶಿಸಿರುವ 'ಕರುಪ್ಪು' ಸಿನಿಮಾದ ಒಂದು ಪೋಸ್ಟರ್ ಅಷ್ಟೇ ರಿಲೀಸ್ ಆಗಿದೆ. ಸೂರ್ಯ ಅಭಿಮಾನಿಗಳು ಟೀಸರ್ ಬಿಡುವಂತೆ ನಿರ್ದೇಶಕರಿಗೆ ಒತ್ತಡ ಹಾಕಿದ್ದರು. ಇನ್ನು ಕೆಲವೇ ದಿನಗಳಲ್ಲಿ 'ಕರುಪ್ಪು' ಟೀಸರ್ ರಿಲೀಸ್ ಮಾಡುವ ಸೂಚನೆಯನ್ನು ನಿರ್ದೇಶಕರು ಕೊಟ್ಟಿದ್ದಾರೆ. ಮುಂದಿನ ತಿಂಗಳು ಅಂದರೆ, ಜುಲೈ 23ರಂದು ಸೂರ್ಯ 50ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆ ಸಂದರ್ಭದಲ್ಲಿ ಈ ಸಿನಿಮಾ ಟೀಸರ್ ರಿಲೀಸ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ.

After 20 years Suriya and Trisha Krishnan reunited for Karuppu movie directed by RJ Balaji

ಸೂರ್ಯ ನಟನೆಯ 'ಕುರುಪ್ಪು' ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ. ನಿರ್ದೇಶಕ ಆರ್‌ಜೆ ಬಾಲಾಜಿ ಹುಟ್ಟುಹಬ್ಬದಂದು ಟೈಟಲ್ ಜೊತೆ ಫಸ್ಟ್‌ ಲುಕ್ ಅನ್ನು ರಿಲೀಸ್ ಮಾಡಲಾಗಿತ್ತು. ಆ ಪೋಸ್ಟ್ ಇದೊಂದು ಪಕ್ಕಾ ಮಾಸ್ ಸಿನಿಮಾ ಎಂದು ಸಾರಿ ಹೇಳಿತ್ತು. ಇನ್ನು 'ಕರುಪ್ಪು'ಗೂ ಮುನ್ನ ಆರ್‌ ಜೆ ಬಾಲಾಜಿ 'ಮೂಕುತಿ ಅಮ್ಮನ್', 'ವೀಟ್ಲ ವಿಶೇಷಂ' ಅಂತಹ ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

'ಕುರುಪ್ಪು' ಸೂರ್ಯಾ, ತ್ರಿಶಾ ಜೊತೆಗೆ ಇಂದ್ರನ್ಸ್, ನಾಟಿ, ಸ್ವಸಿಕಾ, ಅನಘ ಮಾಯಾ ರವಿ, ಶಿವದಾ ಮತ್ತು ಸುಪ್ರೀತ್ ರೆಡ್ಡಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸಾಯಿ ಅಭ್ಯಂಕರ್ ಟ್ಯೂನ್ ಹಾಕುತ್ತಿದ್ದಾರೆ. ಜಿಕೆ ವಿಷ್ಣು ಕ್ಯಾಮೆರಾ, ಕಲೈವಾನನ್ ಸಂಕಲನವಿದೆ. ಇಡೀ ದೇಶವನ್ನು ಮೆಚ್ಚಿಸಿದ ಸಾಹಸ ಸಂಯೋಜಕರಾದ ಅನ್ಬರಿವ್ ಮತ್ತು ವಿಕ್ರಮ್ ಮೋರ್ ಜೋಡಿ, 'ಕರುಪ್ಪು' ಸಿನಿಮಾದಲ್ಲಿ ಹೈ-ಆಕ್ಟೇನ್ ಸಾಹಸ ಸನ್ನಿವೇಶಗಳನ್ನು ಶೂಟ್ ಮಾಡಿದ್ದಾರೆ.

More from Filmibeat

English summary
After 20 years Suriya and Trisha Krishnan reunited for Karuppu movie directed by RJ Balaji.
Read more about: suriya trisha kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X