ಬೈಕ್ ಅಪಘಾತದ ಬಳಿಕ ಮೆಗಾ ಕುಟುಂಬದ ಹೀರೊಗೆ ಸಕ್ಸಸ್: ಒಂದೇ ವಾರದಲ್ಲಿ 'ವಿರೂಪಾಕ್ಷ' ದಾಖಲೆ ಕಲೆಕ್ಷನ್!

ಟಾಲಿವುಡ್‌ನಲ್ಲಿ ಮೆಗಾ ಕುಟುಂಬದ ಎಲ್ಲಾ ಹೀರೊಗಳಿಗೂ ಸಕ್ಸಸ್ ಸಿಕ್ಕಿಲ್ಲ. ರಾಮ್ ಚರಣ್, ಪವನ್ ಕಲ್ಯಾಣ್ ಬಿಟ್ಟರೆ, ಉಳಿದ ಹೀರೊಗಳು ಸೂಪರ್‌ ಸಕ್ಸಸ್‌ಗಾಗಿ ಪರದಾಡುತ್ತಲೇ ಇದ್ದಾರೆ. ಅಪರೂಪಕ್ಕೆ ಒಂದು ಸಕ್ಸಸ್ ಸಿಕ್ಕರೂ ಅದು ಸ್ಟಾರ್ ಪಟ್ಟಕ್ಕೆ ಕರೆದುಕೊಂಡು ಹೋಗಿಲ್ಲ.

ವೈಷ್ಣವ್ ತೇಜ್, ವರುಣ್ ತೇಜ್, ಸಾಯಿ ಧರಂ ತೇಜ್ ಈ ಮೂವರು ಹೀರೊಗಳೂ ಹಿಟ್ ಸಿನಿಮಾಗಳನ್ನು ನೀಡಿದ್ದರೂ, ಬ್ಲಾಕ್‌ ಬಸ್ಟರ್ ಸಿನಿಮಾ ಕೊಡುವುದಕ್ಕೆ ಸಾಧ್ಯವಾಗಿರಲಿಲ್ಲ. ಈಗ ಸಾಯಿ ಧರಂ ತೇಜ್ ಖಾತೆ ಬ್ಲಾಕ್‌ ಬಸ್ಟರ್ ಸಿನಿಮಾವೊಂದು ಸೇರಿಕೊಂಡಿದೆ.

After Bike Accident Sai Dharam Tej Movie Virupaksha Record Collection in Box Office

2021, ಸೆಪ್ಟೆಂಬರ್‌ನಲ್ಲಿ ಸಾಯಿ ಧರಂ ತೇಜ್ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮತ್ತೆ ನಟನೆಗೆ ಮರಳಿದ್ದಾರೆ. ವಿಶೇಷ ಅಂದ್ರೆ, ಅಪಘಾತದ ಬಳಿಕ ನಟಿಸಿದ 'ವಿರೂಪಾಕ್ಷ' ಸಿನಿಮಾ ಟಾಲಿವುಡ್‌ನಲ್ಲಿ ಬಾಕ್ಲಾಬಸ್ಟರ್ ಹಿಟ್ ಆಗಿದೆ.

'ವಿರೂಪಾಕ್ಷ' ಬ್ಲಾಕ್ ಬಸ್ಟರ್ ಹಿಟ್

ಸಾಯಿ ಧರಂ ತೇಜ್ ನಟಿಸಿದ 'ವಿರೂಪಾಕ್ಷ' ಏಪ್ರಿಲ್ 21 ರಂದು ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಒಂದು ವಾರದೊಳಗೆ ಈ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಅಂತ ಸಾಬೀತಾಗಿದೆ. ಅದರಲ್ಲೂ ವೀಕೆಂಡ್‌ನಲ್ಲಿ ಈ ಸಿನಿಮಾ ಅದ್ಭುತ ಗಳಿಕೆ ಕಂಡಿದೆ.

ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ವಿರೂಪಾಕ್ಷ' ಸಿನಿಮಾ ವಿಶ್ವದಾದ್ಯಂತ ಸುಮಾರು 31 ಕೋಟಿ ರೂ. ಕಲೆಕ್ಷನ್ ಮಾಡಿದೆ. ತೆಲುಗು ರಾಜ್ಯಗಳಲ್ಲಿ ಈ ಸಿನಿಮಾದಿಂದ ನಿರ್ಮಾಪಕರಿಗೆ 25 ಕೋಟಿ ರೂ. ಷೇರು ಬಂದಿದೆ. ಹಾಗೇ ಉಳಿದ ಏರಿಯಾಗಳಿಂದ 6 ಕೋಟಿ ರೂ. ಷೇರು ಬಂದಿದೆ ಎಂದು ವರದಿಯಾಗಿದೆ. ಅಲ್ಲದೆ, ಒಂದೇ ವಾರದಲ್ಲಿ ವಿಶ್ವದಾದ್ಯಂತ ಈ ಸಿನಿಮಾ 45ಯಿಂದ 50 ಕೋಟಿ ರೂ. ಕಲೆಕ್ಷನ್ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

After Bike Accident Sai Dharam Tej Movie Virupaksha Record Collection in Box Office

ಸಾಯಿ ಧರಂ ತೇಜ್‌ಗೆ ಒಲಿದ ಅದೃಷ್ಟ

ಸಾಯಿ ಧರಂ ತೇಜ್ ನಟಿಸಿದ ಮೊದಲ ಸಿನಿಮಾ 'ಪಿಲ್ಲ ನುವ್ವು ಲೆನಿ ಜೀವಿತಂ' ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಂಡಿತ್ತು. ಆದರೆ, ಆ ಬಳಿಕ ತೆರೆಕಂಡ ಸಿನಿಮಾಗಳು ಅಷ್ಟೊಂದು ಸದ್ದು ಮಾಡಲಿಲ್ಲ. ಅದರಲ್ಲಿ 2019ರಲ್ಲಿ ತೆರೆಕಂಡಿದ್ದ 'ಪ್ರತಿ ರೋಜು ಪಂಡಗೆ' ಸಿನಿಮಾ ಸೂಪರ್ ಸಕ್ಸಸ್ ಕೊಟ್ಟಿತ್ತು. ಈ ಸಿನಿಮಾ ಸುಮಾರು 33 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಆ ಬಳಿಕ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದವು. ಇತ್ತೀಚೆಗೆ ತೆರೆಕಂಡಿದ್ದ 'ವಿರೂಪಾಕ್ಷ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಕೇವಲ ಒಂದು ವಾರದಲ್ಲಿಯೇ 45 ರಿಂದ 50 ಕೋಟಿ ರೂ. ಕಲೆ ಹಾಕಿದೆ. ಹೀಗೆ ಮುಂದುವರೆದರೆ, ಸಿನಿಮಾ 100 ಕೋಟಿ ರೂ. ಕ್ಲಬ್ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.

'ವಿರೂಪಾಕ್ಷ' ಹಿಂದಿಯಲ್ಲೂ ರಿಲೀಸ್

'ವಿರೂಪಾಕ್ಷ' ಸಿನಿಮಾವನ್ನು ಬಿವಿಎಸ್‌ಎನ್ ಪ್ರಸಾದ್ ನಿರ್ಮಾಣ ಮಾಡಿದ್ದಾರೆ. ಸಿನಿಮಾ ರಿಲೀಸ್‌ಗೂ ಮುನ್ನ ಇದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡಲು ಚಿಂತನೆ ನಡೆಸಲಾಗಿತ್ತು. ತೆಲುಗು ಜೊತೆಗೆ ಹಿಂದಿ, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲು ಆಲೋಚಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಈ ನಿರ್ಧಾರದಿಂದ ಹೊರಬಂದಿದ್ದರು.

ಈಗ 'ವಿರೂಪಾಕ್ಷ' ಸಿನಿಮಾ ಬ್ಲಾಕ್‌ಬಸ್ಟರ್ ಲಿಸ್ಟ್‌ನ ಸೇರಿದ್ದರಿಂದ ಹಿಂದಿಯಲ್ಲಿ ರಿಲೀಸ್ ಮಾಡುವುಕ್ಕೆ ಸಜ್ಜಾಗಿದ್ದಾರೆ. ಇದೇ ಮೇ 5ರಂದು 'ವಿರೂಪಾಕ್ಷ' ಹಿಂದಿ ಅವತರಣಿಕೆಯನ್ನು ರಿಲೀಸ್ ಮಾಡಲು ಮುಂದಾಗಿದ್ದಾರೆ. ಸಾಯಿ ಧರಂ ತೇಜ್ ಹಾಗೂ ಸಂಯುಕ್ತ ಮೆನನ್ ಜೋಡಿ ತೆಲುಗಿನಲ್ಲಿ ಮೋಡಿ ಮಾಡಿದ್ದು, ಬಾಲಿವುಡ್‌ನಲ್ಲೂ ಜಾದು ಮಾಡುತ್ತಾ? ಅನ್ನೋದು ನೋಡಬೇಕಿದೆ.

More from Filmibeat

English summary
After Bike Accident Sai Dharam Tej Movie Virupaksha Record Collection in Box Office. It has collected around 35 crore share, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X