ವಿಚ್ಛೇದನದ ಬಳಿಕ ರಜನಿಕಾಂತ್ ಪುತ್ರಿ ಫುಲ್ ಬ್ಯುಸಿ: ನಿರ್ದೇಶನಕ್ಕಿಳಿದ್ರಾ ಐಶ್ವರ್ಯಾ?
ರಜನಿಕಾಂತ್ ಹಿರಿಯ ಪುತ್ರಿ ಐಶ್ವರ್ಯಾ ಹಾಗೂ ನಟ ಧನುಷ್ ಬೇರೆಯಾಗುವುದಾಗಿ ಘೋಷಿಸಿದ್ದಾರೆ. ಈ ವಿಚ್ಛೇದನದ ಸುದ್ದಿ ಅವರ ಅಭಿಮಾನಿ ವಲಯಗಳಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ಈ ಸಂದರ್ಭದಲ್ಲೇ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಐಶ್ವರ್ಯಾ ಹಾಗೂ ಧನುಷ್ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕಹಿ ಘಟನೆಯನ್ನು ಇಲ್ಲಿಗೆ ಮರೆತು ಮುಂದಿನ ಹೆಜ್ಜೆ ಇಡುತ್ತಿದ್ದಾರೆ.
Recommended Video
ವಿಚ್ಛೇದನ ಸುದ್ದಿ ಘೋಷಿಸಿದ ಬಳಿಕ ಸೂಪರ್‌ಸ್ಟಾರ್ ರಜನಿಕಾಂತ್ ಪುತ್ರಿ ಫುಲ್ ಬ್ಯುಸಿಯಾಗಿದ್ದಾರೆ. ಹೈದರಾಬಾದ್‌ನಲ್ಲಿ ಐಶ್ವರ್ಯಾ ಬೀಡುಬಿಟ್ಟಿದ್ದಾರೆ. ತಮ್ಮ ತಂಡದೊಂದಿಗೆ ಚರ್ಚೆ ಮಾಡುತ್ತಿರುವ ಫೋಟೊವೊಂದು ವೈರಲ್ ಆಗುತ್ತಿದ್ದು, ವಿಚ್ಛೇದನದ ಬಗ್ಗೆ ರಜನಿ ಪುತ್ರಿ ಐಶ್ವರ್ಯಾ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲವೆಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಹಾಗಿದ್ದರೆ, ಐಶ್ವರ್ಯಾ ರಜನಿಕಾಂತ್ ಕೈ ಹಾಕಿರುವ ಹೊಸ ಪ್ರಾಜೆಕ್ಟ್ ಏನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಸಿನಿಮಾ ನಿರ್ದೇಶಕನಕ್ಕೆ ಇಳಿದ್ರಾ ಐಶ್ವರ್ಯಾ ?
ಸೋಶಿಯಲ್ ಮೀಡಿಯಾದಲ್ಲಿ ಐಶ್ವರ್ಯಾ ರಜನಿಕಾಂತ್ ಅವರ ಒಂದು ಫೋಟೊ ಹರಿದಾಡುತ್ತಿದೆ. ಈ ಫೋಟೊದಲ್ಲಿ ಐಶ್ವರ್ಯಾ ತಮ್ಮ ತಂಡದೊಂದಿಗೆ ಚರ್ಚೆ ಮಾಡುತ್ತಿದ್ದಾರೆ. ಈ ಫೋಟೊವನ್ನು ಆಧಾರವಾಗಿಟ್ಟುಕೊಂಡು ಐಶ್ವರ್ಯಾ ರಜನಿಕಾಂತ್ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಹೈದರಾಬಾದ್‌ನಲ್ಲಿ ರಜನಿಕಾಂತ್ ಪುತ್ರಿ ಬೀಡು ಬಿಟ್ಟಿದ್ದು, ಸಿನಿಮಾ ನಿರ್ದೇಶನದ ಕೆಲಸ ಜೋರಾಗಿ ನಡೆಯುತ್ತಿದೆ ಎನ್ನಲಾಗಿದೆ.
ಹಾಡು ಸಿದ್ಧತೆಯಲ್ಲಿ ರಜನಿ ಪುತ್ರಿ ಐಶ್ವರ್ಯಾ
ಐಶ್ವರ್ಯಾ ರಜನಿಕಾಂತ್ ವಿಚ್ಛೇದನ ಬಳಿಕ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ತಮ್ಮ ನಿರ್ದೇಶನದ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ತಲೆಕೆಡಿಕೊಂಡಿದ್ದು, ಸದ್ಯ ತಮ್ಮ ತಂಡದೊಂದಿಗೆ ಹಾಡುಗಳ ಚರ್ಚೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೊದಲ್ಲೂ ಕೂಡ ಅದನ್ನೇ ನೋಡಬಹುದಾಗಿದೆ. ಟೇಬಲ್ ಕೊನೆಯಲ್ಲಿ ಕೂತಿರುವ ಐಶ್ವರ್ಯಾ ತಮ್ಮ ತಂಡದೊಂದಿಗೆ ಚರ್ಚೆ ಮಾಡುತ್ತಿದ್ದಾರೆ.

ಒಂದೇ ಹೊಟೇಲ್‌ನಲ್ಲಿ ಧನುಷ್-ಐಶ್ವರ್ಯಾ
ವಿಚ್ಛೇದನದ ಬಳಿಕ ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಇಬ್ಬರು ಒಂದೇ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದಾರೆ. ಐಶ್ವರ್ಯಾ ಹಾಗೂ ಧನುಷ್ ಇಬ್ಬರೂ ರಾಮೋಜಿ ರಾವ್ ಸ್ಟುಡಿಯೋದಲ್ಲಿರುವ ಸಿತಾರಾ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದಾರೆ. ಅವರವರ ಸಿನಿಮಾಗಳಿಗಾಗಿ ಇಬ್ಬರೂ ಒಂದೇ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದಾರೆ. ತನ್ನ ನಿರ್ದೇಶನದ ಸಿನಿಮಾಗೆ ಸಂಬಂಧಿಸಿದ ಹಾಡುಗಳ ಬಗ್ಗೆ ಚರ್ಚೆ ಮಾಡಲು ಐಶ್ವರ್ಯಾ ಬಂದಿದ್ದರೆ, ಧನುಷ್ ತಮ್ಮ ಸಿನಿಮಾ ಶೂಟಿಂಗ್‌ಗೆ ಬಂದಿದ್ದಾರೆಂದು ಇ ಟೈಮ್ಸ್ ವರದಿ ಮಾಡಿದೆ.

ಆಮಿರ್ -ಕಿರಣ್ ಹಾದಿ ಹಿಡಿದ್ರಾ ಧನುಷ್-ಐಶ್ವರ್ಯಾ?
ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಹಾಗೂ ಕಿರಣ್ ರಾವ್ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಆದರೆ, ವಿಚ್ಛೇದನದ ಬಳಿಕ ಕಿರಣ್ ರಾವ್ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಸಿನಿಮಾಗೆ ಪತಿ ಆಮಿರ್ ಖಾನ್ ನಿರ್ಮಾಪಕರಾಗಿದ್ದಾರೆ. ಈಗ ಐಶ್ವರ್ಯಾ ಕೂಡ ನಿರ್ದೇಶನಕ್ಕೆ ಇಳಿದಿದ್ದು, ಐಶ್ವರ್ಯಾ ಹಾಗೂ ಧನುಷ್ ಇವರ ಹಾದಿಯನ್ನೇ ಅನುಸರಿಸುತ್ತಿದ್ದಾರಾ? ಅನ್ನುವ ಪ್ರಶ್ನೆ ಎದುರಾಗಿದೆ. ಐಶ್ವರ್ಯಾ ನಿರ್ದೇಶನದ ಸಿನಿಮಾಗೆ ಧನುಷ್ ಹಣ ಹೂಡಿದರೆ, ಈ ಮಾತು ನಿಜವಾದಂತೆ.


Click it and Unblock the Notifications











