ನಾಗ ಚೈತನ್ಯ-ಸಮಂತಾ, ಧನುಷ್-ಐಶ್ವರ್ಯಾ ಬಳಿಕ ಡಿವೋರ್ಸ್ ಬಗ್ಗೆ ಮತ್ತೊಬ್ಬ ನಟನ ಸುಳಿವು!
ದಕ್ಷಿಣ ಭಾರತದಲ್ಲಿ ಸ್ಟಾರ್‌ಗಳಿಗೆ ವಿಚ್ಛೇದನ ಅನ್ನೋದು ಕಾಮನ್ ಆಗಿ ಹೋಗಿದೆ. ಅದರಲ್ಲೂ ತಮಿಳು, ತೆಲುಗು ಚಿತ್ರರಂಗದಲ್ಲಿ ಡಿವೋರ್ಸ್ ಕೇಸ್‌ಗಳು ಹೆಚ್ಚಾಗುತ್ತಲೇ ಇವೆ. ಈಗ ದಕ್ಷಿಣ ಭಾರತದ ಮತ್ತೊಬ್ಬ ನಟ ವಿಚ್ಛೇದನದ ಬಗ್ಗೆ ಸುಳಿವು ನೀಡಿದ್ದಾರೆ.
ನಾಗ ಚೈತನ್ಯ ಹಾಗೂ ಸಮಂತಾ, ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಬಳಿಕ ಮತ್ತೊಬ್ಬ ತಮಿಳು ನಟ ವಿಚ್ಛೇದನದ ಬಗ್ಗೆ ಸುಳಿವು ನೀಡಿದ್ದಾರೆ. ತಮಿಳು ಚಿತ್ರರಂಗದ ಬಹುಮುಖ ಪ್ರತಿಭೆ ವಿಜಯ್ ಆಂಥೋನಿ ಡಿವೋರ್ಸ್ ಬಗ್ಗೆ ಸುಳಿವು ನೀಡಿದ್ದಾರೆ.

ವಿಜಯ್ ಆಂಥೋನಿ ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ಕೆಲಸ ಮಾಡಿದ್ದಾರೆ. ಆದರೆ, ಇವರ ಸಿನಿಮಾಗಳು ತಮಿಳಿನಿಂದ ತೆಲುಗಿಗೆ ಡಬ್ ಆಗಿವೆ. ಅಲ್ಲೂ ಸೂಪರ್ ಹಿಟ್ ಆಗಿವೆ. ಸದ್ದಿಲ್ಲದೆ ಸಿನಿಮಾ ಮುಗಿಸೋ ವಿಜಯ್ ಆಂಥೋನಿ ತಮಿಳು ಚಿತ್ರರಂಗದ ಪ್ರಮುಖ ಸ್ಟಾರ್ ನಟರಲ್ಲಿ ಒಬ್ಬರು.
ಇತ್ತೀಚೆಗೆ ತಮಿಳು ನಟ ವಿಜಯ್ ಆಂಥೋನಿ ಮದುವೆ ಬಗ್ಗೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಹಲವು ಪ್ರಶ್ನೆಗಳನ್ನು ಹುಟ್ಟಾಕಿದೆ. ಈ ಟ್ವೀಟ್ ಪ್ರಕಾರ, ವಿಜಯ್ ಆಂಥೋನಿ ತಮ್ಮ ಪತ್ನಿ ಫಾತಿಮಾಗೆ ಡಿವೋರ್ಸ್ ನೀಡುವ ಸುಳಿವು ನೀಡಿದ್ದಾರೆಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.
" ನಿಮ್ಮ ಕುಟುಂಬದಲ್ಲಿ ಏನೇ ಸಮಸ್ಯೆ ಇದ್ದರೂ, ಅದನ್ನು ನಿಮ್ಮಗಳ ನಡುವೆ ಪರಿಹಾರ ಮಾಡಿಕೊಳ್ಳಿ. ಅದು ಸಾಧ್ಯವಿಲ್ಲ ಅಂದರೆ ಬೇರೆಯಾಗಿ. ಇಬ್ಬರೂ ಕಾಲಿಗೆ ಬೀಳುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಿ. ಆದರೆ, ಮೂರನೇ ವ್ಯಕ್ತಿಯನ್ನು ನಿಮ್ಮ ಜೀವನದೊಳಗೆ ಪ್ರವೇಶ ಮಾಡಲು ಬಿಡಬೇಡಿ. ಆವರು ನಿಮ್ಮನ್ನು ಮುಗಿಸಿಬಿಡುತ್ತಾರೆ." ಎಂದು ವಿಜಯ್ ಆಂಥೋನಿ ಟ್ವೀಟ್ ಮಾಡಿದ್ದಾರೆ.

ಇದೇ ಟ್ವೀಟ್ ಈಗ ಮತ್ತೊಬ್ಬ ನಟ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಅನ್ನೋ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ವಿಜಯ್ ಆಂಥೋನಿ ತಮಿಳು ಚಿತ್ರರಂಗದ ಬಹುಮುಖ ಪ್ರತಿಭೆ. ಇವರು ಕೇವಲ ನಟ ಅಷ್ಟೇ ಅಲ್ಲ. ಸಂಗೀತ ನಿರ್ದೇಶಕ, ಗಾಯಕ, ಸಿನಿಮಾ ಎಡಿಟರ್, ಸಾಹಿತಿ, ಆಡಿಯೋ ಎಂಜಿನಿಯರ್, ಫಿಲ್ಮ್ ಪ್ರಡ್ಯೂಸರ್, ಡಬ್ಬಿಂಗ್ ಆರ್ಟಿಸ್ಟ್ ಕೂಡ ಹೌದು,


Click it and Unblock the Notifications











