ದಿಗ್ಗಜರೆಲ್ಲ ಉಗಿದರೂ ಡೋಂಟ್ ಕೇರ್: "ಮತ್ತೆ ತ್ರಿಶಾ ಜೊತೆ ನಟಿಸುತ್ತೇನೆ" ಎಂದ ಖಳನಟ ಮನ್ಸೂರ್ ಅಲಿ ಖಾನ್

ಕಳೆದ ಕೆಲವು ದಿನಗಳಿಂದ ನಟಿ ತ್ರಿಶಾ ಬಗ್ಗೆ ಖಳನಟ ಮನ್ಸೂರ್ ಅಲಿ ಖಾನ್ ಕೊಟ್ಟ ಹೇಳಿಕೆ ಚರ್ಚೆಯಾಗುತ್ತಿದೆ. ತಮಿಳು ಸಿನಿಮಾಗಳಲ್ಲಿ ಖಳ ನಟನಾಗಿ ನಟಿಸುತ್ತಿರುವ ಮನ್ಸೂರ್ ಅಲಿ ಖಾನ್ ಕೊಟ್ಟ ವಿವಾದಾತ್ಮಕ ಹೇಳಿಕೆ ದಕ್ಷಿಣ ಭಾರತದ ಸ್ಟಾರ್ ನಟರು ಕೆಂಡಾ ಮಂಡಲ ಆಗಿದ್ದಾರೆ.

ಮನ್ಸೂರ್ ಅಲಿ ಖಾನ್ ಇತ್ತೀಚೆಗೆ ದಳಪತಿ ವಿಜಯ್ ನಟಿಸಿದ 'ಲಿಯೋ' ಸಿನಿಮಾದಲ್ಲಿ ನಟಿಸಿದ್ದರು. ಈ ಸಂಬಂಧ ಇತ್ತೀಚೆಗೆ ತ್ರಿಶಾ ಬಗ್ಗೆ ಅಶ್ಲೀಲವಾಗಿ ಮಾತಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಮನ್ಸೂರ್ ಅಲಿ ಖಾನ್ ವಿರುದ್ಧ ತ್ರಿಶಾ ತಿರುಗಿಬಿದ್ದರು. ಮತ್ತೆಂದೂ ಈ ನಟನೊಂದಿಗೆ ನಟಿಸುವುದಿಲ್ಲ ಎಂದಿದ್ದರು.

After the controversial statement against Trisha Mansoor Ali Khan said he will act again

ತ್ರಿಶಾ ಆಕ್ರೋಶ ಹೊರ ಹಾಕುತ್ತಿದ್ದಂತೆ ತಮಿಳುನಾಡಿನ ತಾರೆಯರು ಅಖಾಡಕ್ಕೆ ಇಳಿದಿದ್ದರು. ಮನ್ಸೂರ್ ಅಲಿ ಖಾನ್ ಅನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೀಗಿದ್ದರೂ, ಮನ್ಸೂರ್ ಅಲಿ ಖಾನ್ ಮತ್ತೆ ತ್ರಿಶಾ ಜೊತೆ ನಟಿಸುವುದಾಗಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಬಗ್ಗೆನೂ ಮತ್ತೆ ಚರ್ಚೆ ಶುರುವಾಗಿದೆ.

ಮನ್ಸೂರ್ ಅಲಿ ಖಾನ್ 'ಲಿಯೋ' ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದರು. ಇದೇ ಸಿನಿಮಾದಲ್ಲಿ ತ್ರಿಶಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಮಾಧ್ಯಮದ ಜೊತೆ ಮಾತಾಡುವಾಗ " ಲಿಯೋ ಸಿನಿಮಾದಲ್ಲಿ ತ್ರಿಶಾ ನಟಿಸುತ್ತಾರೆ ಅಂತ ಗೊತ್ತಾದಾಗ ಬೆಡ್ ರೂಂ ಸೀನ್ ಇರುತ್ತೆ. ಅವರನ್ನು ಎತ್ತುಕೊಂಡು ಬೆಡ್‌ ರೂಂಗೆ ಹೋಗುವ ದೃಶ್ಯವಿರುತ್ತೆ ಅಂದುಕೊಂಡಿದ್ದೆ. ಆದರೆ, ಅವರನ್ನೂ ಮುಖ ತೋರಿಸಲಿಲ್ಲ" ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದರು.

After the controversial statement against Trisha Mansoor Ali Khan said he will act again

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತ್ರಿಶಾ ಆಕ್ರೋಶ ಹೊರ ಹಾಕಿದ್ದರು. "ನನ್ನ ಬಗ್ಗೆ ಮನ್ಸೂರ್ ಅಲಿಖಾನ್ ಅಸಹ್ಯಕರವಾಗಿ ನೀಡಿರುವ ವಿಡಿಯೋ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಅವರ ಮಾತನ್ನು ತೀವ್ರವಾಗಿ ಖಂಡಿಸುತ್ತೇನೆ. ಅವರ ಮಾತುಗಳು ಅಗೌರವ ಹಾಗೂ ಸ್ತ್ರೀದ್ವೇಷವನ್ನು ಸಾರುತ್ತಿವೆ. ಮತ್ತೆಂದೂ ಆ ನಟನೊಂದಿಗೆ ನಟಿಸುವುದಿಲ್ಲ" ಎಂದು ಹೇಳಿಕೆ ನೀಡಿದ್ದರು.

ಇದಾಗ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮನ್ಸೂರ್ ಅಲಿ ಖಾನ್ ಮತ್ತೊಂದು ಹೇಳಿಕೆ ನೀಡಿದ್ದಾರೆ. "ನಾನೊಬ್ಬ ನಟನಾಗಿ ಆ ದೃಶ್ಯವನ್ನು ಸಾಂದರ್ಭಿಕವಾಗಿ ಹೇಳಿದ್ದೇನೆ ಅಷ್ಟೇ. ನಾನು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ತ್ರಿಶಾ ಒಬ್ಬ ಒಳ್ಳೆಯ ನಟಿ. ಏನೋ ಸಿಟ್ಟಿನಿಂದ ಮಾತನಾಡಿದ್ದಾರೆ. ಮುಂದಿನ ಸಿನಿಮಾದಲ್ಲಿ ಅವರೊಂದಿಗೆ ಒಟ್ಟಿಗೆ ನಟಿಸುತ್ತೇನೆ" ಎಂದು ಮನ್ಸೂರ್ ಅಲಿ ಖಾನ್ ಮತ್ತೊಂದು ಹೇಳಿಕೆ ಕೊಟ್ಟಿದ್ದಾರೆ.

ಮನ್ಸೂರ್ ಅಲಿ ಖಾನ್ ಈ ಹಿಂದೆ ತ್ರಿಶಾ ಬಗ್ಗೆ ನೀಡಿದ ಹೇಳಿಕೆಯನ್ನು ಮೆಗಾಸ್ಟಾರ್ ಚಿರಂಜೀವಿ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. "ತ್ರಿಶಾ ಬಗ್ಗೆ ನಟ ಮನ್ಸೂರ್ ಅಲಿ ಖಾನ್ ಮಾಡಿರುವ ಖಂಡನೀಯವಾದ ಕಾಮೆಂಟ್‌ಗಳು ನನ್ನ ಗಮನಕ್ಕೆ ಬಂದಿದೆ. ಈ ಕಮೆಂಟ್‌ಗಳು ಕೇವಲ ನಟಿಯರಿಗಷ್ಟೇ ಅಲ್ಲ. ಬದಲಿಗೆ ಪ್ರತಿಯೊಬ್ಬ ಮಹಿಳೆಗೂ ಅಗೌರವವನ್ನು ಸೂಚಿಸುತ್ತದೆ. ಇದನ್ನು ಖಾರದ ಪದಗಳಿಂದ ವಿರೋಧಿಸಬೇಕಿದೆ." ಎಂದು ಮೆಗಾಸ್ಟಾರ್ ಚಿರಂಜೀವಿ ಎಕ್ಸ್ (ಟ್ವಿಟರ್) ಮೂಲಕ ಖಡಕ್ ಸಂದೇಶ ರವಾನಿಸಿದ್ದಾರೆ.

ಹಾಗೇ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ತ್ರಿಶಾ ಬೆಂಬಲಕ್ಕೆ ನಿಂತಿದೆ. ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಜಿಪಿಗೆ ಆದೇಶ ನೀಡಿದೆ. ಇಷ್ಟೆಲ್ಲ ಆಗಿದ್ದರೂ ಮನ್ಸೂರ್ ಅಲಿ ಖಾನ್ ನಾನೇನು ತಪ್ಪು ಹೇಳಿಕೆ ನೀಡಿಲ್ಲ ಎಂದು ಹೇಳಿ ಮತ್ತೆ ವಿವಾದಕ್ಕೆ ಸಿಕ್ಕಿಕೊಂಡಿದ್ದರು.

More from Filmibeat

English summary
Mansoor Ali Khan says he will act again in with Trisha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X