TVK Vijay: ಸರ್ಕಾರ ರಚನೆಗೆ ಸರ್ಕಸ್ ಬೆನ್ನಲ್ಲೇ ವಿಜಯ್ 10ನೇ ತರಗತಿ ಅಂಕಪಟ್ಟಿ ವೈರಲ್; ಗಣಿತದಲ್ಲಿ ವೀಕ್.. ಆದರೆ..
ತಮಿಳುನಾಡಿನ ರಾಜಕೀಯ ದೇಶದ ಗಮನ ಸೆಳೆಯುತ್ತಿದೆ. ದಳಪತಿ ವಿಜಯ್ ಚೊಚ್ಚಲ ಪ್ರಯತ್ನದಲ್ಲಿಯೇ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ವಿಜಯ್ ಪಕ್ಷ ಟಿವಿಕೆ ವಿಕ್ಟರಿ ಬಾರಿಸಿದ ಬೆನ್ನಲ್ಲೇ ಬೆಳವಣಿಗೆಗಳು ಆಗುತ್ತಿವೆ. ವಿಜಯ್‌ಗೆ ಪಕ್ಷಕ್ಕೆ ಅತೀ ಹೆಚ್ಚು ಸ್ಥಾನಗಳನ್ನು ಪಡೆದಿದ್ದರೂ, ಬಹುಮತ ಬಾರದ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ಸರ್ಕಸ್ ಮಾಡುತ್ತಿದ್ದಾರೆ.
ವಿಜಯ್ ಪಕ್ಷ ಟಿವಿಕೆ 108 ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಆದರೆ, ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ 118 ಶಾಸಕರ ಬೆಂಬಲ ಬೇಕು. ಹೀಗಾಗಿ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಅಡೆತಡೆಗಳಾಗುತ್ತಿದೆ. ಇತ್ತ ಡಿಎಂಕೆ, ಎಐಡಿಎಂಕೆ ಪಕ್ಷಗಳಲ್ಲೂ ಸಾಕಷ್ಟು ಬೆಳವಣಿಗಳು ಆಗುತ್ತಿವೆ. ಇಡೀ ದೇಶವೇ ವಿಜಯ್ ಸಿಎಂ ಆಗುತ್ತಾರಾ? ಇಲ್ವಾ? ಅನ್ನೋದನ್ನು ಎದುರು ನೋಡುತ್ತಿರುವಾಗಲೇ, ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಅವರ 10ನೇ ತರಗತಿಯ ಅಂಕ ಪಟ್ಟಿ ವೈರಲ್ ಆಗುತ್ತಿವೆ.

ತಮಿಳು ಜನರು ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವುದನ್ನು ಎದುರು ನೋಡುತ್ತಿದ್ದಾರೆ. ವಿಜಯ್ ಕೂಡ ಅದಕ್ಕೆ ಇನ್ನಿಲ್ಲದ ಕಸರತ್ತನ್ನು ಮಾಡುತ್ತಿದ್ದಾರೆ. ಈ ವೇಳೆನೇ ವಿಜಯ್ ಅವರ ವೈಯಕ್ತಿಕ ಜೀವನ, ಶಿಕ್ಷಣ ಹೀಗೆ ಹಲವು ವಿಷಯಗಳ ಬಗ್ಗೆ ಚರ್ಚೆಯಾಗುತ್ತಿದೆ. ಅದರಲ್ಲೀಗ 10ನೇ ತರಗತಿ ಅಂಕಪಟ್ಟಿ ದಿಢೀರನೇ ವೈರಲ್ ಆಗಿದೆ. ಅದರಲ್ಲಿ ವಿಜಯ್ ಗಣಿತ ವಿಷಯದಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದು, ಉಳಿದ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ ಎನ್ನಲಾಗಿದೆ.
ವಿಜಯ್ ಓದಿದ ಶಾಲೆ ಯಾವುದು?
ದಳಪತಿ ವಿಜಯ್ ಚೆನ್ನೈನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದಿದ್ದಾರೆ. ಅಲ್ಲಿನ ಫಾತಿಮಾ ಶಾಲೆ ಹಾಗೂ ಬಾಲಾಲೊಕ್ ಶಾಲೆಯಲ್ಲಿ ಶಿಕ್ಷಣವನ್ನು ಪಡೆದಿದ್ದಾರೆ. 10ನೇ ತರಗತಿಯಲ್ಲಿ 1100 ಅಂಕಗಳಿಗೆ 711 ಅಂಕಗಳನ್ನು ಪಡೆದುಕೊಂಡಿದ್ದು, ಪ್ರಥಮ ದರ್ಜೆಯಲ್ಲಿ ಅಂದರೆ, ಶೇ. 64.6ರಲ್ಲಿ ಪಾಸ್ ಆಗಿದ್ದಾರೆ. 10ನೇ ತರಗತಿ ಬಳಿಕ ಲೊಯೊಲಾ ಕಾಲೇಜ್‌ಗೆ ಸೇರಿಕೊಂಡರು. ಆದರೆ, ನಟನೆಯನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದರಿಂದ ಅರ್ಧದಲ್ಲಿಯೇ ಮೊಟಕು ಗೊಳಿಸಿದ್ದರು.
ಗಣಿತದಲ್ಲಿ ವೀಕ್.. ವಿಜ್ಞಾನದಲ್ಲಿ ಸೂಪರ್
ದಳಪತಿ ವಿಜಯ್ ಅಂಕ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿರುವ ಅಂಕಗಳ ಆಧಾರದಲ್ಲಿ ವಿಜಯ್ ಗಣಿತದಲ್ಲಿ ಕಡಿಮೆ ಅಂಕಗಳನ್ನು ಪಡೆದುಕೊಂಡಿದ್ದಾರೆ. 200ಕ್ಕೆ ಕೇವಲ 95 ಅಂಕಗಳನ್ನು ಪಡೆದುಕೊಂಡಿದ್ದಾರೆ. ಅದೇ ವಿಜ್ಞಾನದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. 300 ಅಂಕಗಳಿಗೆ 206 ಅಂಕ ಪಡೆದಿದ್ದಾರೆ.
ಯಾವ್ಯಾವ ವಿಷಯದಲ್ಲಿ ಎಷ್ಟೆಷ್ಟು ಅಂಕ?
ದಳಪತಿ ವಿಜಯ್ 10ನೇ ತರಗತಿಯಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾರೆ. 1100 ಅಂಗಳಿಗೆ 711 ಅಂಕಗಳನ್ನು ಪಡೆದುಕೊಂಡಿದ್ದಾರೆ. ತಮಿಳು, ಇಂಗ್ಲಿಷ್, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಸೇರಿದಂತೆ 5 ವಿಷಯಗಳಿದ್ದು, ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ಐದು ಭಾಷೆಗಳ ಅಂಕಗಳು ಹೀಗಿವೆ.
ವಿಜಯ್ 10ನೇ ತರಗತಿ ಅಂಕಗಳು
| ವಿಷಯ | ಪಡೆದ ಅಂಕಗಳು | ಗರಿಷ್ಠ ಅಂಕಗಳು |
| ತಮಿಳು | 155 | 200 |
| ಇಂಗ್ಲಿಷ್ | 133 | 200 |
| ಗಣಿತ | 095 | 200 |
| ವಿಜ್ಞಾನ | 206 | 300 |
| ಸಮಾಜ ವಿಜ್ಞಾನ | 122 | 200 |
| ಒಟ್ಟು | 711 | 1100 |

ದಳಪತಿ ವಿಜಯ್ ದರ್ಬಾರ್
ದಳಪತಿ ವಿಜಯ್ ಸಿನಿಮಾ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದ್ದಾರೆ. ಹಾಗೇ ರಾಜಕೀಯ ಕ್ಷೇತ್ರದಲ್ಲಿಯೂ ವಿಜಯ್‌ಗೆ ಯಶಸ್ಸು ಸಿಕ್ಕಿದೆ. 2026ರಿಂದ ವಿಜಯ್ ದರ್ಬಾರ್ ಶುರುವಾಗಿದೆ. ಚೊಚ್ಚಲ ಬಾರಿಗೆ ವಿಜಯ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರಾ? ಬಹುಮತ ಸಾಬೀತು ಮಾಡುತ್ತಾರಾ? ಅನ್ನೋದನ್ನು ತಮಿಳುನಾಡಿನ ಜನತೆ ಎದುರು ನೋಡುತ್ತಿದ್ದಾರೆ.


Click it and Unblock the Notifications
