ಎಂಜಿಆರ್ ಬಳಿಕ 'ಅಮ್ಮ'.. ವಿಜಯ್ ಬಳಿಕ 'ಮಾಮಿ'? ಜಯಲಲಿತಾಗೂ ತ್ರಿಶಾಗೂ ಇಷ್ಟೊಂದು ಹೋಲಿಕೆನಾ?
ತಮಿಳುನಾಡು ಚುನಾವಣೆ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ. ದಳಪತಿ ವಿಜಯ್ ಅವರ 'ಟಿವಿಕೆ' ಪಕ್ಷ ರಾಜಕೀಯ ಪಂಡಿತರ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. ಚುನಾವಣಾ ಸಮೀಕ್ಷೆಯಲ್ಲಿ ಕೇವಲ 8 ರಿಂದ 15 ಸೀಟುಗಳನ್ನು ನೀಡಿದ್ದವರಿಗೆ ಶಾಕ್ ಆಗಿದೆ. ಅಷ್ಟೇ ಯಾಕೆ ಡಿಎಂಕೆ, ಎಐಡಿಎಂಕೆ ಪಕ್ಷದ ಮುಖಂಡರ ಲೆಕ್ಕಾಚಾರಕ್ಕೂ ಸಿಗದಂತಹ ಫಲಿತಾಂಶ ಹೊರ ಬೀಳುತ್ತಿದೆ.
ತಮಿಳುನಾಡು ರಾಜಕೀಯದಲ್ಲಿ ಟಿವಿಕೆ ವಿಜಯ್ ಹೊಸ ಇತಿಹಾಸವನ್ನು ಬರೆದಿದ್ದಾರೆ. ವಿಜಯ್ ಬಹುತೇಕ ತಮಿಳು ನಾಡಿನ ಹೊಸ ಸಿಎಂ ಅನ್ನೋದು ಕನ್ಫರ್ಮ್ ಆಗಿದೆ. ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ವಿಜಯಕಾಂತ್ ಮಾಡಲು ಸಾಧ್ಯವಾದ ಸಾಧನೆಯನ್ನು ದಳಪತಿ ವಿಜಯ್ ಮಾಡಿದ್ದಾರೆ. ಚುನಾವಣೆ ಎದುರಿಸಿದ ಮೊದಲ ಪ್ರಯತ್ನದಲ್ಲಿಯೇ ಸಿಎಂ ಆದ ಕೆಲವೇ ಸ್ಟಾರ್ ನಟರ ಸಾಲಿಗೆ ವಿಜಯ್ ಸೇರಲಿದ್ದಾರೆ.

ದಳಪತಿ ವಿಜಯ್ ಬಗ್ಗೆ ಇಡೀ ತಮಿಳುನಾಡು ಕೊಂಡಾಡುತ್ತಿದ್ದರೆ, ಇನ್ನೊಂದು ಕಡೆ ನಟಿ ತ್ರಿಶಾ ಕೂಡ ಟ್ರೋಲ್ ಆಗುತ್ತಿದ್ದಾರೆ. ನೆಟ್ಟಿಗರು ಮಾಜಿ ಸಿಎಂ ಎಐಡಿಎಂಕೆಯ ಅಧಿನಾಯಕಿ ಆಗಿದ್ದ ಜಯಲಲಿತಾ ಅವರೊಂದಿಗೆ ನಟಿ ತ್ರಿಶಾ ಅವರನ್ನು ಹೋಲಿಕೆ ಮಾಡುತ್ತಿದ್ದಾರೆ. ಜಯಲಲಿತಾ ಜೊತೆ ಹೋಲಿಕೆ ಮಾಡಿದ ಹಲವು ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅದೇನು ಅಂತ ನೋಡುವುದಾರೇ,
ಅಂದು ಎಂಜಿಆರ್.. ಇಂದು ವಿಜಯ್
70ರ ದಶಕದಲ್ಲಿ ಎಂಜಿಆರ್ 'ಎಐಡಿಎಂಕೆ' ಅನ್ನೋ ಹೊಸ ಪಕ್ಷ ಕಟ್ಟಿ ಚುನಾವಣೆಗೆ ಇಳಿದಿದ್ದರು. ಈ ಪಕ್ಷ ಕಟ್ಟುವುದಕ್ಕೂ ಮುನ್ನ ಎಂಜಿಆರ್‌ಗೆ ರಾಜಕೀಯದ ಅನುಭವವಿತ್ತು. 50ರ ದಶಕದಿಂದಲೇ ರಾಜಕೀಯದಲ್ಲಿ ಇದ್ದರು. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ಡಿಎಂಕೆ ಪಕ್ಷ ಸೇರಿದ್ದ ಎಂಜಿಆರ್, ಅಲ್ಲಿ ಕರುಣಾನಿಧಿ ಜೊತೆಗಿನ ವೈ ಮನಸ್ಸಿನಿಂದ ಹೊರಬಂದು ಎಐಡಿಎಂಕೆ ಪಕ್ಷ ಕಟ್ಟಿ ತಮಿಳುನಾಡಿನ ಸಿಎಂ ಆದರು. ಆದರೆ, ವಿಜಯ್ ರಾಜಕೀಯ ಅನುಭವವಿಲ್ಲದ ಪಕ್ಷ ಕಟ್ಟಿ ಗೆದ್ದಿದ್ದಾರೆ. ಅಂದು ಎಂಜಿಆರ್‌ರನ್ನು ಗೆಲ್ಲಿಸಿದ್ದ ತಮಿಳಿಗರು, ಇಂದು ವಿಜಯ್‌ರನ್ನು ಗೆಲ್ಲಿಸಿ ಮೆರೆಸಿದ್ದಾರೆ.
ಅಂದು ಜಯಲಲಿತಾ.. ಇಂದು ತ್ರಿಶಾ
ಅಂದು ಎಂಜಿಆರ್ ಜೊತೆ ಜಯಲಲಿತಾ ಗುರುತಿಸಿಕೊಂಡಿದ್ದರು. ಎಐಡಿಎಂಕೆ ಪಕ್ಷ ಕಟ್ಟಿದ ಬಳಿಕ ಎಂಜಿಆರ್ ನಿಧನದ ಬಳಿಕ ಜಯಲಲಿತಾ ಪಕ್ಷವನ್ನು ಮುನ್ನಡೆಸಿದ್ದರು. ತನ್ನ ಎದುರಾಳಿ ಡಿಎಂಕೆಗೆ ಪ್ರಬಲ ಪೈಪೋಟಿ ನೀಡಿದ್ದರು. ಈಗ ವಿಜಯ್ ಜೊತೆ ತ್ರಿಶಾ ಹೆಸರು ತಳುಕು ಹಾಕಿಕೊಂಡಿದೆ. ಹೀಗಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ತ್ರಿಶಾ ಮುಂದಿನ ಜಯಲಲಿತಾ ಆಗಬಹುದೆಂದು ಊಹೆ ಮಾಡುತ್ತಿದ್ದಾರೆ.
ಜಯಲಲಿತಾಗೂ ತ್ರಿಶಾಗೂ ಇರುವ ಹೋಲಿಕೆ?
ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುತ್ತದ್ದಾರೆ. ಜಯಲಲಿತಾ ಹಾಗೂ ತ್ರಿಶಾ ಅವರ ಜಾತಿ, ವಿದ್ಯಾಭ್ಯಾಸ, ಅಫೇರ್‌ಯಿಂದ ಹಿಡಿದು ಅವರನ್ನು ಪ್ರೀತಿಯಿಂದ ಕರೆಯುವ ಹೆಸರನ್ನೂ ಇಟ್ಟುಕೊಂಡು ಹೋಲಿಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಸದ್ಯಕ್ಕೀಗ ಆ ಪೋಸ್ಟ್ ವೈರಲ್ ಆಗುತ್ತಿದೆ. ಅದರಲ್ಲಿ ಎನಿದೆ ಎಂದು ನೋಡುವುದಾರೇ..
| ಜಯಲಲಿತಾ | ತ್ರಿಶಾ |
| ಬ್ರಾಹ್ಮಣ | ಬ್ರಾಹ್ಮಣ |
| ಚರ್ಚ್ ಪಾರ್ಕ್ ಸ್ಕೂಲ್ | ಚರ್ಚ್ ಪಾರ್ಕ್ ಸ್ಕೂಲ್ |
| ನಟಿ | ನಟಿ |
| ಅವಿವಾಹಿತೆ | ಅವಿವಾಹಿತೆ |
| ಮಕ್ಕಳಿಲ್ಲ | ಮಕ್ಕಳಿಲ್ಲ |
| ಎಂಜಿಆರ್ ಜೊತೆ ನಂಟು | ವಿಜಯ್ ಜೊತೆ ನಂಟು |
| 'ಅಮ್ಮ' | 'ಮಾಮಿ' |
ವಿಜಯ್ ಬಳಿಕ ತ್ರಿಶಾ ಸಿಎಂ?
ದಳಪತಿ ವಿಜಯ್ ಈ ಬಾರಿ ಸಿಎಂ ಆಗೋದು ಕನ್ಫರ್ಮ್. ಅವರ ಪಕ್ಷಕ್ಕೆ ಬಹುಮತ ಬಾರದೇ ಹೋದರೂ, ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬರುತ್ತಾರೆ. ಹೀಗಾಗಿ ತಮಿಳುನಾಡಿನಲ್ಲಿ ವಿಜಯ್ ಬೆಂಬಲಿಗರ ಸಂಭ್ರಮ ಮನೆ ಮಾಡಿದೆ. ಆದರೆ, ಈ ಜನಪ್ರಿಯತೆ, ಗೆಲುವು ಎಲ್ಲಿವರೆಗೆ ಮುಂದುವರೆಯುತ್ತೆ? ಅನ್ನೋ ಪ್ರಶ್ನೆಯಂತೂ ಹುಟ್ಟಿಕೊಂಡಿದೆ. ವಿಜಯ್ ತನ್ನ ಜೊತೆ ತ್ರಿಶಾರನ್ನೂ ರಾಜಕೀಯಕ್ಕೆ ಕರೆದುಕೊಂಡು ಬರುತ್ತಾರಾ? ಅದಂತೂ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications
