ಅಜಿತ್ ಕುಮಾರ್ ನಟಿಸಿದ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾದಲ್ಲಿ ತ್ರಿಶಾ ಪಾತ್ರದ ಹೆಸರು ರಮ್ಯಾ!

ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಸಿನಿಮಾಗಳಿಗೆ ಅವರದ್ದೇ ಆದ ಅಭಿಮಾನಿಗಳು ಇದ್ದಾರೆ. ದಕ್ಷಿಣ ಭಾರತದ ಈ ಸ್ಟೈಲಿಶ್ ನಟ ಅಜಿತ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತವೆ. ಆದರೆ, ಇತ್ತೀಚೆಗೆ ತೆರೆಕಂಡ ಸಿನಿಮಾ 'ವಿಡಾಮುಯಾರ್ಚಿ' ಮೋಡಿ ಮಾಡಲಿಲ್ಲ. ನಿರೀಕ್ಷೆ ಮಾಡಿದ ಮಟ್ಟಕ್ಕೆ ಸಿನಿಮಾ ಗೆಲ್ಲಲಿಲ್ಲ. ಹಾಗಂತ ಅಭಿಮಾನಿಗಳು ನಿರಾಸೆ ಆಗೋದು ಬೇಕಿಲ್ಲ.

ಯಾಕಂದ್ರೆ, ಅಜಿತ್ ಕುಮಾರ್ ಮತ್ತೊಂದು ಸಿನಿಮಾ 'ಗುಡ್ ಬ್ಯಾಡ್ ಅಗ್ಲಿ' ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾ ದಕ್ಷಿಣ ಭಾರತದ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತೆ ಅಂತ ಅಭಿಮಾನಿಗಳು ಭವಿಷ್ಯ ನುಡಿಯುತ್ತಿದ್ದಾರೆ. ಈ ಸಿನಿಮಾದಲ್ಲಿ ಮತ್ತೊಮ್ಮೆ ಅಜಿತ್ ಕುಮಾರ್ ಹಾಗೂ ತ್ರಿಶಾ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. ಇತ್ತೀಚೆಗೆ ಪ್ಲಾಪ್ ಲಿಸ್ಟ್ ಸೇರಿರುವ 'ವಿಡಾಮುಯಾರ್ಚಿ' ಸಿನಿಮಾದಲ್ಲೂ ಅಜಿತ್-ತ್ರಿಶಾ ಒಟ್ಟಿಗೆ ನಟಿಸಿದ್ದರು.

Ajith Kumar film Good Bad Ugly Trisha role name is Ramya

ಅಜಿತ್ ಹಾಗೂ ತ್ರಿಶಾ ಕೃಷ್ಣನ್ ಜೋಡಿ ಇತ್ತೀಚೆಗೆ ಸಿನಿಮಾ ವಲಯದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದರು ಅವರ ಫ್ಯಾನ್ಸ್‌ಗಂತೂ ಕಿಕ್ ಕೊಟ್ಟಿದೆ. ಅದಕ್ಕೆ ಇನ್ನೊಂದಿಷ್ಟು ಕುತೂಹಲ ಕೆರಳಿಸಿದ್ದು 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್. ಅದೇನಂದ್ರೆ, ಈ ಸಿನಿಮಾದಲ್ಲಿ ತ್ರಿಶಾ ಪಾತ್ರದ ಹೆಸರು ರಮ್ಯಾ ಎಂದು ಅನೌನ್ಸ್ ಮಾಡಿದೆ.

ಅಜಿತ್ ಕುಮಾರ್ ಹಾಗೂ ರಮ್ಯಾ ಇಬ್ಬರೂ ಈ ಹಿಂದೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಮಂಕಥ', 'ಕಿರೀಟಂ', 'ಎನ್ನೈ ಅರಿಂದಾಲ್' ಸಿನಿಮಾದಲ್ಲಿ ನಟಿಸಿದ್ದರು. ಬರೋಬ್ಬರಿ ದಶಕದ ಬಳಿಕ ಅಜಿತ್ ಕುಮಾರ್ ಜೊತೆ ಮತ್ತೆ ತ್ರಿಶಾ 'ವಿಡಾಮುಯಾರ್ಚಿ'ಯಲ್ಲಿ ಸದ್ದು ಮಾಡಿದ್ದರು. ಈ ಸಿನಿಮಾ ರಿಲೀಸ್ ಆದ ಕೆಲವೇ ದಿನಗಳ ಬಳಿಕವೇ ಮತ್ತೊಂದು ಸಿನಿಮಾ 'ಗುಡ್ ಬ್ಯಾಕ್ ಅಗ್ಲಿ' ಬಿಡುಗಡೆಯಾಗುತ್ತಿದೆ. ನಿನ್ನೆಯಷ್ಟೇ (ಫೆಬ್ರವರಿ 22) ಈ ಸಿನಿಮಾದಲ್ಲಿ ರಮ್ಯಾ ಪಾತ್ರದಲ್ಲಿ ತ್ರಿಶಾ ಕೃಷ್ಣನ್ ನಟಿಸುತ್ತಿದ್ದಾರೆಂದು ನಿರ್ಮಾಣ ಸಂಸ್ಥೆ ರಿವೀಲ್ ಮಾಡಿದೆ.

ಚಿಕ್ಕದೊಂದು ವಿಡಿಯೋ ತುಣುಕನ್ನು ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಆಕ್ಟಿವ್ ಆಗಿತ್ತು. ರಮ್ಯಾ ಹೆಸರು ಚರ್ಚೆಯಾಗುವುದಕ್ಕೆ ಶುರುವಾಗಿತ್ತು. ಅದಕ್ಕೆ ಕಾರಣವೇನು ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ. ಈ ಹೆಸರನ್ನೇ ಯಾಕೆ ಇಟ್ಟರು ಅನ್ನೋದನ್ನು ಅಜಿತ್ ಕುಮಾರ್ ಅಭಿಮಾನಿಗಳು ತಲೆಗೆ ಹುಳವನ್ನು ಬಿಟ್ಟುಕೊಂಡಿದ್ದೂ ಇದೆ. ಹಾಗಂತ ಇದು ಮೋಹಕತಾರೆ ರಮ್ಯಾಗೂ ಈ ಪಾತ್ರಕ್ಕೂ ಏನೂ ಸಂಬಂಧವಿಲ್ಲ. ಸದ್ಯ ತ್ರಿಶಾ ಕೃಷ್ಣನ್ ಕ್ಯಾರೆಕ್ಟರ್ ರಿವೀಲ್ ಮಾಡಿದ್ದು ಅಜಿತ್ ಸಿನಿಮಾ ಪ್ರೇಮಿಗಳಿಗಂತೂ ಕಿಕ್ ಕೊಟ್ಟಿದೆ.

'ವಿಡಾಮುಯಾರ್ಚಿ' ಸೋಲಿನ ಸುಳಿಯಿಂದ ಕಂಗೆಟ್ಟಿರುವ ಅಜಿತ್ ಅಭಿಮಾನಿಗಳಿಗೆ 'ಗುಡ್ ಬ್ಯಾಡ್ ಅಗ್ಲಿ' ಮೇಲೆ ಹೋಪ್ ಇಟ್ಟುಕೊಂಡಿದ್ದಾರೆ. ಏಪ್ರಿಲ್ 10ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತೆ ಅನ್ನೋ ನಿರೀಕ್ಷೆಯಲ್ಲಿ ಇದ್ದಾರೆ. ಸದ್ಯ ಸಿನಿಮಾ ತಂಡ ಒಂದೊಂದೇ ಪಾತ್ರದ ಹೆಸರುಗಳನ್ನು ರಿವೀಲ್ ಮಾಡುತ್ತಿದೆ. ಅದರಲ್ಲಿ ತ್ರಿಶಾ ಪಾತ್ರ ಕೂಡ ಒಂದು. ಈ ಸಿನಿಮಾವನ್ನು ಅಧಿಕ್ ರವಿಚಂದ್ರನ್ ನಿರ್ದೇಶನ ಮಾಡಿದ್ದರೆ, 'ಪುಷ್ಪ 2' ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ.

ಇಲ್ಲಿ ಇನ್ನೊಂದು ವಿಶೇಷವಿದೆ. 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾಗೆ ಆಕ್ಷನ್ ಕಟ್ ಹೇಳಿರುವ ಅಧಿಕ್ ರವಿಚಂದ್ರನ್ ಕೂಡ ಅಜಿತ್ ಕುಮಾರ್ ಅವರ ಅತೀ ದೊಡ್ಡ ಅಭಿಮಾನಿ. ಇದೇ ಮೊದಲ ಬಾರಿಗೆ ಅಜಿತ್ ಕುಮಾರ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಅಜಿತ್, ತ್ರಿಶಾ ಜೊತೆಗೆ ಅರ್ಜುನ್ ದಾಸ್, ಪ್ರಸನ್ನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜಿವಿ ಪ್ರಕಾಶ್ ಈ ಸಿನಿಮಾಗೆ ಟ್ಯೂನ್‌ಗಳನ್ನು ಕಂಪೋಸ್ ಮಾಡಿದ್ದಾರೆ. ಈ ಸಿನಿಮಾ ಧನುಷ್ ನಿರ್ದೇಶಿಸಿ, ನಟಿಸಿರುವ 'ಇಡ್ಲಿ ವಡೈ' ಜೊತೆನೇ ರಿಲೀಸ್ ಆಗುತ್ತಿದ್ದು, ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಕ್ಲ್ಯಾಶ್ ಆಗುವ ಸಾಧ್ಯತೆಯಿದೆ.

More from Filmibeat

English summary
Ajith Kumar film Good Bad Ugly Trisha character name is Ramya
Read more about: ajith kumar trisha ramya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X